ವಿವಿಧ ಪಕ್ಷಗಳಿಗೆ ತಮ್ಮ ಪ್ರತ್ಯೇಕ ಆಕಾಂಕ್ಷೆಗಳೇ ಪ್ರಧಾನವೆನಿಸಿದಾಗ ಅವುಗಳ ನಡುವೆ ಐಕ್ಯ ಹೇಗೆ ಮೂಡೀತು? ತಮ್ಮ ಸ್ವಂತ ಆಕಾಂಕ್ಷೆಗಳನ್ನು ಬದಿಗೊತ್ತಿ ‘ಐ.ಎನ್.ಡಿ.ಐ.ಎ.’ ಎಂಬ ದಿಕ್ಕೆಟ್ಟ ಪಲ್ಲಕ್ಕಿಯನ್ನು ಹೊರುವ ಬೋವಿಗಳಾಗಲು ಯಾವ ಪಕ್ಷಗಳವರು ಉತ್ಸಹಿಸಿಯಾರು? ಅವರಿಗೆ ಅದರ ಆವಶ್ಯಕತೆಯಾದರೂ ಏನಿದೆ? ತನ್ನ ಕುಟುಂಬ ವಾರಸಿಕೆಯಷ್ಟನ್ನೇ ಏಕೈಕ ಬಂಡವಾಳವಾಗಿಸಿಕೊಂಡ ಕಾಂಗ್ರೆಸಿಗಾದರೋ ಆ ಪ್ರತಿಷ್ಠೆ ಈಗ ಕಾಲಬಾಹ್ಯವಾಗಿದೆಯೆಂಬುದು ಕೂಡಾ ಇನ್ನೂ ಮನವರಿಕೆಯಾದಂತಿಲ್ಲ. ಆದರೂ ಈ ವಾರಸಿಕೆಯಿಂದ ಅಷ್ಟಿಷ್ಟು ಪ್ರಯೋಜನವಾದೀತೇನೊ ನೋಡೋಣ ಎಂಬುದು ಕೆಲವು ವಿಪಕ್ಷಗಳ ಅಂದಾಜು. ಇನ್ನು ದಕ್ಷಿಣಭಾರತದಲ್ಲಿ ಪ್ರಭಾವ ಸ್ಥಾಪಿಸಿಕೊಂಡಿರುವ ಡಿ.ಎಂ.ಕೆ. ಪಕ್ಷ ಹುಟ್ಟಿನಿಂದಲೇ ಕಾಂಗ್ರೆಸ್ವಿರೋಧಿ. ಆದರೂ ತನ್ನ ಎನ್.ಡಿ.ಎ. ವಿರೋಧಕ್ಕೆ ಸ್ವಲ್ಪ ಮದ್ದತು ಸಿಕ್ಕೀತೇನೊ ಎಂದು ಕಾಂಗ್ರೆಸ್ನ ಬಗೆಗೆ ಸದ್ಯಕ್ಕೆ ಸೌಮ್ಯಧೋರಣೆ ತಳೆದಿದೆ.
ನರೇಂದ್ರ ಮೋದಿಯವರ ಬಗೆಗಿನ ದ್ವೇಷಾಸೂಯೆಗಳಷ್ಟೆ ತರಹೇವಾರಿ ಪಕ್ಷಗಳನ್ನು ಬೆಸೆಯಲು ಸಾಕಾಗದೆಂಬ ವಾಸ್ತವವು ಮತ್ತೊಮ್ಮೆ ‘ಐ.ಎನ್.ಡಿ.ಐ.ಎ.’ಯ ತ್ವಂಚಾಹಂಚಗಳಲ್ಲಿ ಸಾಬೀತಾಗಿದೆ. ನವಗ್ರಹ ಸಮೂಹವನ್ನು ನೆನೆಯುವುದಾದರೆ: ತಾನು ಸೂರ್ಯನ ಮಗನೆಂದು ಶನಿಯ ಹೆಗ್ಗಳಿಕೆಯ ಧೋರಣೆ; ಬುಧನ ಆವಾಸಸ್ಥಾನ ದಕ್ಷಿಣದಲ್ಲಾದರೆ ಶುಕ್ರನದು ಪಶ್ಚಿಮದಲ್ಲಿ. ಕ್ಷಯಪೀಡಿತ ಚಂದ್ರನು ಪೂರ್ವಾಭಿಮುಖನಾದರೆ ಗುರುವು ಉತ್ತರಾಭಿಮುಖ. ರಾಹುವಾದರೊ ಸೂರ್ಯನನ್ನು ಎದುರು ಹಾಕಿಕೊಂಡು ನೆರಳಿನಂತೆ ಕಾಲ ತಳ್ಳಬೇಕಾಗಿದೆ. ಅದರಂತೆ ವಿಪಕ್ಷಗಳಿಗೆಲ್ಲ ತಮ್ಮದೇ ಮಿತಿಗಳೂ ಸಮಸ್ಯೆಗಳೂ ಇವೆ. ‘ಲೂಸ್ ಷಂಟಿಂಗ್’ನಂತಿದ್ದ ಜೆ.ಡಿ.ಯು. ನೇತ ನಿತೀಶ್ಕುಮಾರರು ಈಗ ವಿಪಕ್ಷಕೂಟದಿಂದ ಪೂರ್ತಿ ೧೮೦ ಡಿಗ್ರಿ ಅಡ್ಡ ತಿರುಗಿದ್ದಾರೆ. ಮಮತಾ ಬ್ಯಾನರ್ಜಿಯಂತೂ ‘ಯೂಯಂ ಯೂಯಂ ವಯಂ ವಯಂ’ – ‘ನೀವು ನೀವೇ, ನಾವು ನಾವೇ’ ಎಂದುಬಿಟ್ಟಿದ್ದಾರೆ. ವಿವಿಧ ಪ್ರಾಂತೀಯ ಪಕ್ಷಗಳ ದೃಷ್ಟಿಯಲ್ಲಿ ಅವುಗಳ ಪ್ರಮುಖ ಪ್ರತಿಪಕ್ಷ ಎನ್.ಡಿ.ಎ. ಅಲ್ಲ, ಕಾಂಗ್ರೆಸ್ಸೇ. ಕಡಮೆ ಶಬ್ದಗಳಲ್ಲಿ ಹೇಳಬೇಕಾದರೆ: ಎನ್.ಡಿ.ಎ.ಗೆ ಪರ್ಯಾಯವಾದ ಆರ್ಥಿಕ-ಸಾಮಾಜಿಕ ಅಜೆಂಡಾವನ್ನು ರೂಪಿಸಿಕೊಳ್ಳಲೂ ಆಗದ ವೈಫಲ್ಯವೇ ವಿಪಕ್ಷಗಳಲ್ಲಿನ ದೊಡ್ಡ ಲೋಪ. ಇನ್ನು ತಮ್ಮ ಬಣವನ್ನು ಮುನ್ನಡೆಸಬಲ್ಲ ನಾಯಕರೊಬ್ಬರನ್ನು ಇದುವರೆಗೆ ಗುರುತಿಸಲಾಗದಿರುವ ಹಾಸ್ಯಾಸ್ಪದ ಸ್ಥಿತಿಯ ಬಗೆಗೆ ಹೇಳುವುದೇ ಬೇಡ. ನಾಲ್ಕು ತಿಂಗಳ ಅವಧಿಯಲ್ಲಿ ನಾಲ್ಕು ಸಮಾವೇಶಗಳನ್ನೇನೋ ನಡೆಸಿದ್ದಾಯಿತು. ಆದರೆ ಅವುಗಳ ಫಲಿತವಾಗಿ ಹೊಮ್ಮಬೇಕಾಗಿದ್ದ ಒಕ್ಕೊರಳ ಶಂಖಾರಾವ ಹೊರಡಲೇ ಇಲ್ಲ. ಡ್ಯಾಮೇಜ್ ಆದ ಬೇಕಲೈಟ್ ರೆಕಾರ್ಡುಗಳಂತಹ ಒಡಕುಸ್ವರಗಳಷ್ಟೆ ಕೇಳಬಂದವು.
ವಿವಿಧ ಪಕ್ಷಗಳಿಗೆ ತಮ್ಮ ಪ್ರತ್ಯೇಕ ಆಕಾಂಕ್ಷೆಗಳೇ ಪ್ರಧಾನವೆನಿಸಿದಾಗ ಅವುಗಳ ನಡುವೆ ಐಕ್ಯ ಹೇಗೆ ಮೂಡೀತು? ತಮ್ಮ ಸ್ವಂತ ಆಕಾಂಕ್ಷೆಗಳನ್ನು ಬದಿಗೊತ್ತಿ ‘ಐ.ಎನ್.ಡಿ.ಐ.ಎ.’ ಎಂಬ ದಿಕ್ಕೆಟ್ಟ ಪಲ್ಲಕ್ಕಿಯನ್ನು ಹೊರುವ ಬೋವಿಗಳಾಗಲು ಯಾವ ಪಕ್ಷಗಳವರು ಉತ್ಸಹಿಸಿಯಾರು? ಅವರಿಗೆ ಅದರ ಆವಶ್ಯಕತೆಯಾದರೂ ಏನಿದೆ? ತನ್ನ ಕುಟುಂಬ ವಾರಸಿಕೆಯಷ್ಟನ್ನೇ ಏಕೈಕ ಬಂಡವಾಳವಾಗಿಸಿಕೊಂಡ ಕಾಂಗ್ರೆಸಿಗರಿಗಾದರೋ ಆ ಪ್ರತಿಷ್ಠೆ ಈಗ ಕಾಲಬಾಹ್ಯವಾಗಿದೆಯೆಂಬುದು ಕೂಡಾ ಇನ್ನೂ ಮನವರಿಕೆಯಾದಂತಿಲ್ಲ. ಆದರೂ ಈ ವಾರಸಿಕೆಯಿಂದ ಅಷ್ಟಿಷ್ಟು ಪ್ರಯೋಜನವಾದೀತೇನೊ ನೋಡೋಣ ಎಂಬುದು ಕೆಲವು ವಿಪಕ್ಷಗಳ ಅಂದಾಜು. ಇನ್ನು ದಕ್ಷಿಣಭಾರತದಲ್ಲಿ ಪ್ರಭಾವ ಸ್ಥಾಪಿಸಿಕೊಂಡಿರುವ ಡಿ.ಎಂ.ಕೆ. ಪಕ್ಷ ಹುಟ್ಟಿನಿಂದಲೇ ಕಾಂಗ್ರೆಸ್ವಿರೋಧಿ. ಆದರೂ ತನ್ನ ಎನ್.ಡಿ.ಎ. ವಿರೋಧಕ್ಕೆ ಸ್ವಲ್ಪ ಮದ್ದಂತು ಸಿಕ್ಕೀತೇನೊ ಎಂದು ಕಾಂಗ್ರೆಸ್ನ ಬಗೆಗೆ ಸದ್ಯಕ್ಕೆ ಸೌಮ್ಯಧೋರಣೆ ತಳೆದಿದೆ.
ದೆಹಲಿ ಸಮಾವೇಶದಲ್ಲಿ ನಿತೀಶ್ಕುಮಾರ್ ಹಿಂದಿಯಲ್ಲಿ ಮಾತನಾಡತೊಡಗಿದಾಗ ದಕ್ಷಿಣದವರು ‘ಅವರು ಏನು ಮಾತನಾಡುತ್ತಿದ್ದಾರೋ ನಮಗಾರಿಗೂ ಅರ್ಥವಾಗುತ್ತಿಲ್ಲ’ ಎಂದು ಗುಲ್ಲೆಬ್ಬಿಸಿ ರಾದ್ಧಾಂತವೇ ಆಯಿತು. ಎತ್ತು ಏರಿಗೆ, ಕೋಣ ನೀರಿಗೆ. ಹೀಗೆ ಅನುದ್ದಿಷ್ಟವಾಗಿ ಹೊಮ್ಮಿದ ಉತ್ತರ-ದಕ್ಷಿಣ ಧ್ರುವೀಕರಣ ‘ಐ.ಎನ್.ಡಿ.ಐ.ಎ.’ಯ ಐಕ್ಯಪ್ರಯಾಸಕ್ಕೆ ಮತ್ತೊಂದು ಪ್ರತಿಬಂಧಕವಾಯಿತು. ಇನ್ನು ಒಕ್ಕೂಟ ನಾಯಕತ್ವ ಕುರಿತು ಮಮತಾ ಬ್ಯಾನರ್ಜಿ ಎಸೆದ ಬಾಣವನ್ನೂ ಅದಕ್ಕೆ ಇತರ ಹಲವರು ನೀಡಿದ ಬೆಂಬಲವನ್ನೂ ಕಾಂಗ್ರೆಸ್ ಬಣಕ್ಕೆ ಜೀರ್ಣಿಸಿಕೊಳ್ಳಲೇ ಆಗಲಿಲ್ಲ. ನೆಹರು ಮನೆತನದವರಾರೂ ಒಕ್ಕೂಟ ನಾಯಕತ್ವಕ್ಕೆ ಅಂಗೀಕಾರ್ಯರಲ್ಲವೆಂದು ಮಮತಾ ಬ್ಯಾನರ್ಜಿ ಘೋಷಿಸಿದಾಗ ಮಲ್ಲಿಕಾರ್ಜುನ ಖರ್ಗೆ ಅಸಹಾಯರಾದರು. ಉತ್ತರಪ್ರದೇಶ ಬಿಹಾರ ಮೊದಲಾದ ದೊಡ್ಡ ರಾಜ್ಯಗಳಲ್ಲಂತೂ ಕಾಂಗ್ರೆಸಿಗೆ ಉಸಿರಾಡಲೂ ಆಸ್ಪದವಿಲ್ಲ.
ಹೀಗೆ ಚುನಾವಣೆಗೆ ಎರಡೇ ತಿಂಗಳು ಬಾಕಿ ಇರುವಾಗಲೂ ವಿಪಕ್ಷಗಳ ಅತಂತ್ರ ಸ್ಥಿತಿ ನಿವಾರಣೆಯಾಗಿಲ್ಲ. ೪೦ ಲೋಕಸಭಾ ಸ್ಥಾನಗಳಿರುವಷ್ಟು ದೊಡ್ಡದಾದ ಬಿಹಾರ ರಾಜ್ಯವು ಸಂಭಾವ್ಯ ವಿಪಕ್ಷ ಒಕ್ಕೂಟದಿಂದ ಹೊರಹೋಗಲು ಕಾಂಗ್ರೆಸ್ಸಿನ ಧೋರಣೆಯೇ ಕಾರಣವೆಂದು ನಿತೀಶ್ಕುಮಾರ್ ಸಂದೇಹಾತೀತವಾಗಿ ಹೇಳಿದ್ದಾಗಿದೆ. ಪಂಜಾಬ್ ಮುಖ್ಯಮಂತ್ರಿಗಳೂ ತಮಗೆ ಕಾಂಗ್ರೆಸಿನ ಸಂಗಡಿಕೆ ಸ್ವೀಕರ್ಯವಲ್ಲವೆಂದಿದ್ದಾರೆ. ಹೀಗೆ “ಐ.ಎನ್.ಡಿ.ಐ.ಎ.’ ಎಂಬುದೀಗ ‘ಬಂಡ್ವಾಳ್ವಿಲ್ಲದ್ಬಡಾಯಿ’ ಅಷ್ಟೆ ಆಗಿದೆ.