ಭಾರತೀಯ ಭಾಷೆಗಳ ಅನುವಾದಿತ ಕಥೆಗಳು – ವಿಶೇಷ ಪುರವಣಿ
ಮುಖಪುಟ ಲೇಖನ ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ರಾಜಕಾರಣವನ್ನು ಕಟ್ಟುವ ಹಲವು ಪ್ರಯೋಗಗಳಾಗಿವೆ. ಆದರೆ ಅವುಗಳ ಪೈಕಿ ಸೋತಿದ್ದೇ ಹೆಚ್ಚು. ಏಕೆಂದರೆ, ಅವು ಒಂದಿಲ್ಲೊಂದು ರೂಪದಲ್ಲಿ ಕಾಂಗ್ರೆಸ್ ಹೇಳಿದ್ದನ್ನೇ ಹೇಳುತ್ತಿದ್ದವು. ಆದರೆ, ಈ ವಿಚಾರದಲ್ಲಿ ನಿಜವಾದ ಅರ್ಥದಲ್ಲಿ ಯಶಸ್ಸನ್ನು ಕಂಡಿದ್ದು ಭಾರತೀಯ ಜನತಾ ಪಕ್ಷ ಮಾತ್ರ. ಭಾರತ ದೇಶ ಮತ್ತು ವಿರಾಟ್ ಹಿಂದೂ ಸಮಾಜದ ಹಿತದೃಷ್ಟಿಯಿಂದ ಹಾಗೂ ಮುಸಲ್ಮಾನರಲ್ಲಿ ತಾವೂ ಈ ದೇಶದ ಮುಖ್ಯವಾಹಿನಿಗೆ ಸೇರಿದವರೆಂಬ ತಿಳಿವಳಿಕೆ ಬರಲು ಅಗತ್ಯವಾಗಿದ್ದ ವಿಚಾರಗಳನ್ನು ಮುನ್ನೆಲೆಗೆ ತಂದು, ಅವುಗಳನ್ನು ಜನರ ಮುಂದಿಟ್ಟು, ಜನಮಾನಸವನ್ನು ಬಡಿದೆಬ್ಬಿಸಿದ ಕೀರ್ತಿ ಲಾಲಕೃಷ್ಣ ಆಡ್ವಾಣಿ ಅವರಿಗೆ ಸಲ್ಲಬೇಕು. ಇಂಥ ಧೀಮಂತ ನಾಯಕರಾದ ಅವರು ಇತ್ತೀಚೆಗೆ ೧೦೦ನೇ ವಸಂತಕ್ಕೆ, ಅಂದರೆ ಜನ್ಮ ಶತಮಾನೋತ್ಸವಕ್ಕೆ ಕಾಲಿಟ್ಟರು (ಜನನ: 8 ನವೆಂಬರ್ 1927, ಕರಾಚಿ). ಈ ನಿಮಿತ್ತ ವಿಶೇಷ ಲೇಖನ – “ಲಾಲಕೃಷ್ಣ ಆಡ್ವಾಣಿ: ರಾಷ್ಟ್ರವಾದಿ ರಾಜಕಾರಣದ ಮಹಾಶಿಲ್ಪಿ”
ಜೊತೆಗೆ, 70ರ ಹೊಸ್ತಿಲಲ್ಲಿ ನಿಂತಿರುವ ದುಂಡಿರಾಜ್ ಮತ್ತು ಎಂಬತ್ತನೇ ವಸಂತಕ್ಕೆ ಪಾದಾರ್ಪಣೆ ಮಾಡಿರುವ ಬಿ.ಆರ್. ಲಕ್ಷ್ಮಣರಾವ್ ಅವರ ಜೊತೆಗಿನ ಒಂದು ಹರಟೆ – “ಹನಿಗವಿ-ತುಂಟಕವಿಯ ರಸಪಯಣ”.
ಮುಖಪುಟ ಲೇಖನಗಳ ಜೊತೆಗೆ ಭಾರತೀಯ ಭಾಷೆಗಳ ಅನುವಾದಿತ 10 ಕಥೆಗಳಿರುವ ವಿಶೇಷ ಸಂಚಿಕೆ.
ಎಂದಿನಂತೆ ಪರಕಾಯ ಪ್ರವೇಶ, ಮನೆಮಾನಿನಿ, ಬೊಗಸೆ ಇತ್ಯಾದಿ ಲೇಖನಗಳಿರುವ ಸಂಚಿಕೆ.
ಓದಿ ಅಭಿಪ್ರಾಯ ತಿಳಿಸಿ: utthana@rashtrotthana.org







