ಕಾಳಿದಾಸನ ದಂತಕಥೆಗಳು ಲೇಖನಮಾಲೆ

ಕಾಳಿದಾಸ – ಸಂಸ್ಕೃತದ ಕವಿಗಳಲ್ಲಿ ಅಗ್ರಗಣ್ಯ. ಕೇವಲ ಸಂಸ್ಕೃತದ ಕವಿಗಳಷ್ಟೆ ಅಲ್ಲದೆ, ಉಳಿದ ಭಾಷೆಗಳ ಕವಿಗಳೂ ಕಾಳಿದಾಸನನ್ನು ’ಕವಿಕುಲಗುರು’ ಎಂದು ಕರೆದು, ಬಗೆಬಗೆಯಾಗಿ ಅವನನ್ನು ಸ್ತುತಿಸಿದ್ದಾರೆ. ಮತ್ತೆ ಯಾವ ಕವಿಯನ್ನು ಕುರಿತೂ ಇಲ್ಲದಷ್ಟು ಕಥೆಗಳು ಕಾಳಿದಾಸನನ್ನು ಕುರಿತು ಹುಟ್ಟಿಕೊಂಡಿವೆ. ಇದು ಅವನ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಸಾವಿರಾರು ವರ್ಷಗಳಿಂದ ಅಸಂಖ್ಯ ವಿದ್ವಾಂಸರು ಕಾಳಿದಾಸನ ಕೃತಿಗಳನ್ನು ಅಧ್ಯಯನ ಮಾಡುತ್ತ, ಅವನ ಕಾವ್ಯಸ್ವಾರಸ್ಯವನ್ನು ಕಂಡುಕೊಳ್ಳುತ್ತ ಬಂದಿದ್ದರೂ ಇವತ್ತಿಗೂ ಅವನ ಕಾವ್ಯ ಹೊಸತನವನ್ನು ತಳೆಯುತ್ತ, ಹೊಸ ಹೊಸ ಹೊಳಹನ್ನು ತೋರಿಸುತ್ತಲೇ ಇರುವುದು ವಿಶೇಷ. ಇಂತಹ ವರಕವಿಯ ಮೇಲಿನ ಅಭಿಮಾನದಿಂದ ಪಂಡಿತರಷ್ಟೆ ಅಲ್ಲದೆ ಪಾಮರರೂ ’ಈ ಕವಿ ನಮ್ಮವನು, ನಮ್ಮ ಊರಿನವನು, ನಮ್ಮ ಭಾಷೆಯವನು’ ಎಂದು ತಮ್ಮ ಕಲ್ಪನೆಗೆ ಎಟುಕಿದಂತೆ ಕಥೆಗಳನ್ನು ಸೃಷ್ಟಿಸಿಕೊಂಡು ತಮ್ಮದೇ ಆದ ಮಟ್ಟದಲ್ಲಿ ಆಸ್ವಾದಿಸಿಕೊಂಡು ಬಂದಿದ್ದಾರೆ. ಇಂತಹ ಅನೇಕ ಜಾನಪದ ಕಥೆಗಳು ಕಾಳಿದಾಸನನ್ನು ಕುರಿತು ಲಭ್ಯವಾಗಿವೆ.
ಕಾಳಿದಾಸನ ಕುರಿತ ಆಯ್ದ ದಂತಕತೆಗಳನ್ನು ಉತ್ಥಾನದಲ್ಲಿ ಕಳೆದ 2025ರ ಅಕ್ಟೋಬರ್ ಸಂಚಿಕೆಯಿಂದ ಸರಣಿ ಲೇಖನಗಳ ರೂಪದಲ್ಲಿ ಪ್ರಕಟಿಸಲಾಗಿದೆ. ಓದಿ ಅಭಿಪ್ರಾಯ ತಿಳಿಸಿ.

Facebook
X
WhatsApp
Print
Email