ತವರಿನ ದೊಡ್ಡಸ್ತಿಕೆ

ಜೋಗಿ ಜಂಗಮರೆ ಹೋಗಿ ನನ್ನ ತವರೀಗೆ

ಸಣ್ಣಕ್ಕಿ ದಾನ ಕೊಡುತಾನ |

ಸಣ್ಣಕ್ಕಿ ದಾನ ಕೊಡುತಾನ | ಅಣ್ಣಯ್ಯ

ಹೊನ್ನಿನ ದಾನ ಕೊಡುತಾನ ||              1

ನೀರುಳ್ಳಿ ದಾನ ನೀರು ಮಜ್ಜಿಗೆ ದಾನ

ಮತ್ತೆ ಅಂಬಲಿ ದಾನ ಕೊಡುತಾನ |

ಮತ್ತೆ ಅಂಬಲಿ ದಾನ ಕೊಡುತಾನ| ಅಣ್ಣಯ್ಯ

ಅಂಬುಲದ ಮುದ್ದೆ ಕೊಡುತಾನ||          2

ಅತ್ತಿಗೆ ಬಸುರಿ ಮನೆ ಮುಂದೆ ಚಪ್ಪರ

ಅನ್ನ ಛತ್ರಾವ ಇಡಿಸ್ಯಾನ|

ಅನ್ನ ಛತ್ರಾವ ಇಡಿಸ್ಯಾನ| ಅಣ್ಣಯ್ಯ

ಮನೆ ಮುಂದೆ ಇಡಿಸ್ಯಾನ ಅರವಟಿಗೆ ||      3

ಹಾದೀಯೆ ಅರಮನೆ ಬೀದಿಯೆ ಪಡಸಾಲಿ

ಏಳು ಸುತ್ತಿನ ಕಲ್ ಬಾವೀ|

ಏಳು ಸುತ್ತಿನ ಕಲ್ ಬಾವೀ| ಕಟ್ಟಿಸ್ಯಾನ

ಇಡಿಸ್ಯಾನ ತಮ್ಮಯ್ಯ ಅರವಟಿಗೆ||           4

Facebook
X
WhatsApp
Print
Email