ನ ಗೆ ಹ ನಿ ಗ ಳು

ಅದೇನು ಮಹಾ

ರಾಮು: ನಮ್ಮ ತಂದೆಗೆ ಒಂದು ಸಣ್ಣ ವಿಷಯ ಸಿಕ್ಕಿದರೂ ಸಾಕು, ಗಂಟೆಗಟ್ಟಲೆ ಮಾತನಾಡುತ್ತಾರೆ.

ವೆಂಕಿ: ಅದೇನು ಮಹಾ? ನಮ್ಮ ತಾಯಿ ವಿಷಯವಿಲ್ಲದಿದ್ದರೂ ದಿನವೆಲ್ಲಾ ಮಾತನಾಡುತ್ತಾರೆ.

 

ಕತ್ತೆಗೆ ಕ್ಷೌರ

ಗುಂಡ: ಏನಯ್ಯಾ, ನೀನು ಎಂದಾದರೂ ಕತ್ತೆಗೆ ಕ್ಷೌರ ಮಾಡಿದ್ದೀಯಾ?

ಕ್ಷೌರಿಕ: ಇಲ್ಲಾ ಸ್ವಾಮಿ. ಕುಳಿತುಕೊಳ್ಳಿ, ಮಾಡುತ್ತೇನೆ.

 

ಯಾವುದಕ್ಕೂ ಮೊದಲು

ಉಪಾಧ್ಯಾಯರು: ವಿದ್ಯಾರ್ಥಿಗಳೇ, ನಮ್ಮ ಶಾಲೆಯಲ್ಲಿ ಈಗ ಸಿ.ಸಿ. ಕ್ಯಾಮರಾ ಅಳವಡಿಸಿದ್ದಾರೆ. ನಿಮಗೆ ಗೊತ್ತಾ?

ಗುಂಡ: ಯಾವುದಕ್ಕು ಮೊದಲು ನೀವು ಹುಷಾರಾಗಿರಿ ಸಾರ್.

 

ಕತ್ತೆಗೆ ಕೇಳಿದರೆ

ಟೀಚರ್: ಕತ್ತೆಗಳೇಕೆ ಕಾಡಿನಲ್ಲಿ ವಾಸಿಸುವುದಿಲ್ಲ?

ಗುಂಡ: ಈ ಪ್ರಶ್ನೇನ ಯಾವುದಾದರೂ ಕತ್ತೆಗೆ ಕೇಳಿದರೆ ಒಳ್ಳೆಯದು.

ಟೀಚರ್: ಅದಕ್ಕೆ ನಿನಗೆ ಕೇಳಿದ್ದು.

 

ಪೇಪರಿನಲ್ಲಿ

ಹೆಂಡತಿ: ಆ ಸಿನೆಮಾ ನಟಿಗೆ ಗಂಡು ಮಗು ಆಯ್ತುಂತೆ. ಇಲ್ಲಿ ನೋಡಿ ಪೇಪರ್‌ನಲ್ಲಿ ಹಾಕಿದ್ದಾರೆ.

ಗುಂಡ: ಈಡಿಯೆಟ್ಸ್! ಮಗುವನ್ನು ತೊಟ್ಟಿಲಲ್ಲಿ ಹಾಕುವುದನ್ನು ಬಿಟ್ಟು ಪೇಪರ್‌ನಲ್ಲಿ ಯಾಕೆ ಹಾಕಿದ್ದಾರೆ?

 

ಪುಣ್ಯಾತ್ಮ

ಮಹಿಳೆ: ನನ್ನ ಗಂಡ ನನ್ನನ್ನು ಮದುವೆಯಾದ ಒಂದು ವರ್ಷದೊಳಗೆ ತೀರಿಹೋದರು.

ವೈದ್ಯ: ಪುಣ್ಯಾತ್ಮ! ಹೆಚ್ಚು ಕಾಲ ನರಳಲಿಲ್ಲ.

 

ನಿಮ್ಮ ನೆರಳಲ್ಲೇ

ಪ್ರಿಯತಮೆ: ರೀ… ನಾನು ಜೀವಮಾನವೆಲ್ಲಾ ನಿಮ್ಮ ನೆರಳಲ್ಲೇ ಬದುಕಬೇಕೆಂದುಕೊಂಡಿದ್ದೇನೆ.

ಪ್ರಿಯತಮ: ಏನೇ ಹಾಗೆಂದರೆ? ನನ್ನನ್ನು ಬಿಸಿಲಲ್ಲೇ ಸಾಯಿಸಬೇಕೆಂದುಕೊಂಡಿರುವೆಯಾ?.

 

ಸುಟ್ಟಿದ್ದು ಹೇಗೆ?

ಗುಂಡನಿಗೆ ವಿಪರೀತ ಮರೆವು. ಅವನ ಎರಡು ಕಿವಿಗಳೂ ಸುಟ್ಟು ಕರಕಲಾಗಿ ಹೋಗಿದ್ದವು. ಅವನು ಕೂಡಲೇ ವೈದ್ಯರ ಬಳಿಗೆ ಓಡಿದ.

ವೈದ್ಯರು: ಇದೆಲ್ಲ ಹೇಗಾಯಿತು?

ಗುಂಡ: ನನ್ನ ಬಟ್ಟೆಗಳನ್ನು ಐರನ್ ಮಾಡ್ತಾ ಇದ್ದೆ ಡಾಕ್ಟ್ರೇ! ಆಗ ಫೋನ್ ಬಂತು. ರಿಸೀವರ್ ಕಿವಿಗೆ ಇಟ್ಟುಕೊಳ್ಳುವ ಬದಲು ಐರನ್ ಬಾಕ್ಸ್ ಇಟ್ಟುಕೊಂಡು ಬಿಟ್ಟೆ.

ವೈದ್ಯರು: (ಅನುಕಂಪದಿಂದ) ಛೇ! ಎಂಥ ಕೆಲಸ ಮಾಡಿಕೊಂಡಿದ್ದೀರಾ. ಅದೇನೋ ಸರಿ, ಆದರೆ ಇನ್ನೊಂದು ಕಿವಿ ಸುಟ್ಟಿದ್ದಾದರು ಹೇಗೆ?

ಗುಂಡ: ಅಯ್ಯೋ, ಆ ಅಯೋಗ್ಯ ಮತ್ತೊಮ್ಮೆ ಫೋನ್ ಮಾಡಿದ ಡಾಕ್ಟ್ರೇ.

 

ಮುಂದೆ ನಿಲ್ಲಿಸಲು ಹೇಳಿ

ಕಂಡಕ್ಟರ್: ಮಾವಿನಕೆರೆ ಬಂದಿದೆ. ಇಳಿಯುವವರು ಬೇಗ ಇಳಿಯಿರಿ.

ಪ್ರಯಾಣಿಕ: ಕಂಡಕ್ಟ್ರೇ, ಬಸ್ಸನ್ನು ಸ್ವಲ್ಪ ಮುಂದೆ ನಿಲ್ಲಿಸಲು ಹೇಳಿ. ನನಗೆ ಈಜು ಬರುವುದಿಲ್ಲ.

Facebook
X
WhatsApp
Print
Email