ಬೆಟ್ಟದೇವರನ್ನೊಮ್ಮೆ ಮುಟ್ಟಿ ಬರುವೆ

ಬೆಟ್ಟದೇವರನ್ನೊಮ್ಮೆ
ಮುಟ್ಟಿ ಬರಬೇಕೆಂದು
ಮೆಟ್ಟುಕಲ್ಲಿನ ಮೇಲೆ ಕಾಲನಿರಿಸಿ
ದಿಟ್ಟಿಯನು ಕಲಶದಲಿ
ಇಟ್ಟು ಬಗೆಯನು ಕಟ್ಟಿ
ಹೆಜ್ಜೆ ಹತ್ತುತಲಿಹುದು ಮೆಟ್ಟನ್ನೊತ್ತಿ.

ಹೊತ್ತು ಸಾಗುತಿಹ
ಕಾಲು ಪಾದಗಳಲ್ಲಿ
ಕ್ಷಣಕ್ಷಣಕು ಇಣುಕುತಿದೆ ಸೋತ ಭಾವ
ನೆತ್ತಿಯಲ್ಲದೆ ದೇಹ
ಹೊತ್ತ ಕಾಲುಗಳೂ
ಸುಡುಸುಡುತ ಸಹಿಸುತಿವೆ ಬಿಸಿಲ ಕಾವ.

ಹತ್ತಲಾರೆನು ಇನ್ನು
ಹೊತ್ತು ಈ ಮೈಯನ್ನು
ಸತ್ತು ಹೋಗುವೆನೇನೊ ಇನ್ನು ಏರಿದರೆ
ಶಿಲೆಯ ಪಲ್ಲಂಗದಲಿ ಮೈ ಚಾಚಿ ಮಲಗುತ್ತ
ಮನದ ಭಾವದಲವನ ಮುಟ್ಟಿ ಬರುವೆ
ಬೆಟ್ಟದೇವರನೊಮ್ಮೆ ಮುಟ್ಟಿ ಬರುವೆ.

Facebook
X
WhatsApp
Print
Email