ಮಾಯಾಚೀಲ

IMG_0778ಇತ್ತು ಬಸ್ಸು ಕಾರು ರೈಲು ಇಲ್ಲದೆ ಒಂದು ಕಾಲ |

ಎಲ್ಲಾ ಇದ್ದರೂ ಆರೋಗ್ಯ ಇಲ್ಲ, ಇದು ಎಂಥ ಕಲಿಗಾಲ ||

ದೂರದ ಉರಿನ ನೆಂಟರು ಬಂದರೆ ಕಾಯುತಲಿದ್ದರು ಆಗ |

ಪತ್ರ ಬರೆದು ಉತ್ತರ ಪಡೆದು ಆಗಮಿಸುವರು ಬೇಗ ||

ಅಜ್ಜಿ-ತಾತ, ಅತ್ತೆ-ಮಾವ, ಅಕ್ಕ-ಭಾವ ಬಂದರೆ |

ಉಳಿದುಕೊಂಡರೆ ವಾರಗಟ್ಟಲೆ ಯಾರಿಗೂ ಇಲ್ಲ ತೊಂದರೆ ||

ಚಿಣ್ಣರ ದಂಡು ಓಡಿ ಬರುತ್ತಿತ್ತು ಮಾತನಾಡಿಸಲು ಆಗ |

ಒಡನೆಯೇ ದೃಷ್ಟಿ ಬೀಳುತಲಿತ್ತು ನೋಡಿ ಕೈಯಲಿ ಬ್ಯಾಗ ||

ವಾರಗಟ್ಟಲೆ ಮಾಡಿದ ತಿನಿಸು ತುಂಬಿರುತಿತ್ತು ಚೀಲ |

ತೋಟದಿ ಬೆಳೆದ ತಾಜಾ ತರಕಾರಿ ಕಡುರುಚಿ ಹಣ್ಣು ಹಂಪಲ ||

ಒಂದೇ ಎರಡೇ ಹತ್ತಾರು ತರಹ ಚೀಲದಲ್ಲಿರುವವು ಹಣ್ಣು |

ಚೀಲವ ಬಿಚ್ಚಿ ಕೊಡಲು ಕುಳಿತಾಗ ಅರಳಿತು ಚಿಣ್ಣರ ಕಣ್ಣು ||

ಚೀಲದ ಸುತ್ತ ಸುತ್ತಿದ ಮಕ್ಕಳ ಸೆಳೆಯುವ ಮಾಯಾಚೀಲ |

ಎಲ್ಲಾ ವಿಟಮಿನ್ ಅಲ್ಲಿಯೇ ಇತ್ತು ಅದುವೇ ಒಳ್ಳೆಯ ಕಾಲ ||

ಜಂಕ್‌ಫಡ್, ಫಾಸ್ಟ್‌ಫಡ್ ಬೇಡವೇ ಬೇಡ ಅನ್ನುವ ಮಾತ ಹೇಳು |

ಹಿಮ್ಮಡಿ ತೊಳ್ಕ, ಹಿಂದಿನದ್ದು ನೆನ್ಕ ಅನ್ನುವ ಮಾತು ಕೇಳು ||

– ಬಿ. ಪರಮೇಶ್

 

Facebook
X
WhatsApp
Print
Email