ರಸಪ್ರಶ್ನೆ

e-m-forster

 

  1. ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಹುಟ್ಟುಹೆಸರು ಏನು?
  2. ‘ಮಿಯಾಂ ಕೀ-‘ ಎಂಬ ಪರ್ವಪದವನ್ನುಳ್ಳ ಹಿಂದೂಸ್ತಾನಿ ರಾಗಗಳ ಆವಿಷ್ಕರ್ತ ಯಾರು?
  3. ಬ್ರಿಟಿಶ್ ಸರ್ಕಾರದ ‘ದೇಶೀಯ ಭಾಷಾ ಪತ್ರಿಕೆಗಳ ನಿಯಂತ್ರಣ’ ಕಾಯ್ದೆಯ ನಿರ್ಬಂಧದಿಂದ ತಪ್ಪಿಸಿಕೊಳ್ಳಲು ೧೮೭೮ರಲ್ಲಿ ಇಂಗ್ಲಿಷಿನಲ್ಲಿ ಪ್ರಕಟಗೊಳ್ಳತೊಡಗಿದ ಪತ್ರಿಕೆ ಯಾವುದು?
  4. ಅಂಟಾರ್ಟಿಕಾದಲ್ಲಿ ಭಾರತ ಮೊದಲು ಸ್ಥಾಪಿಸಿದ ಕೇಂದ್ರದ ಹೆಸರು ಏನು?
  5. ವಿಶ್ವನಾಥನ್ ಆನಂದ್‌ರವರ ನಂತರ ಚದುರಂಗದಲ್ಲಿ ಗ್ರ್ಯಾಂಡ್‌ಮಾಸ್ಟರ್ ಪದವಿ ಪಡೆದ ಎರಡನೆಯ ಆಟಗಾರ ಯಾರು?
  6. ಕಂಪಟರಿನ ‘ಮೌಸ್’ ಉಪಕರಣವನ್ನು ೧೯೬೦ರಲ್ಲಿ ಆವಿಷ್ಕರಿಸಿದ ಕಂಪೆನಿ ಯಾವುದು?
  7. ಹಿಂದೆ ದೇವಾಸ್ ಮಹಾರಾಜರಿಗೆ ಕಾರ್ಯದರ್ಶಿಯಾಗಿದ್ದ ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ಯಾರು?
  8. ಪಿಂಗಾಣಿಗೆ ಪೆರ್ತುಗೀಸರು ಬಳಸಿದ ‘ಪೋರ್ಸಲೈನ್’ ಇಟಾಲಿಯನ್ ಪದದ ಅರ್ಥ ಏನು?
  9. ‘ಸಾರಿ, ನೋ ರೂಮ್’ ಎಂಬ ಕಾದಂಬರಿ ಬರೆದ ಖ್ಯಾತ ವ್ಯಂಗ್ಯಚಿತ್ರಕಾರ ಯಾರು?
  10. ‘ರೋಬೋಟಿಕ್ಸ್’ ಎಂಬ ಈಗ ಜನಜನಿತವಾಗಿರುವ ಪದವನ್ನು ಸೃಷ್ಟಿಸಿದ್ದು ಯಾರು?
  1. ಮಣಿಕರ್ಣಿಕಾ.
  2. ತಾನ್‌ಸೇನ್.
  3. ‘ಅಮೃತ ಬಾಜಾರ್ ಪತ್ರಿಕಾ’
  4. ದಕ್ಷಿಣಗಂಗೋತ್ರಿ.
  5. ದಿಬ್ಯೇಂದು ಬರುವಾ.
  6. ಜೆರಾಕ್ಸ್.
  7. ಇ.ಎಂ. ಫೋರ್‌ಸ್ಟರ್.
  8. ‘ಚಿಕ್ಕಹಂದಿ’
  9. ಆರ್.ಕೆ. ಲಕ್ಷ್ಮಣ್ (ಅನಂತರ ‘ಹೊಟೇಲ್ ರಿವೇರಾ’ ಎಂಬ ಹೆಸರಿನಲ್ಲಿ ಪನರ್ಮುದ್ರಿತವಾಗಿದೆ).
  10. ವಿಜ್ಞಾನಿ-ಲೇಖಕ ಐಸಾಕ್ ಆಸಿಮೊವ್.

 

 

Facebook
X
WhatsApp
Print
Email