ರಸಪ್ರಶ್ನೆ

rasa

  1.          ರಾಮಾಯಣದಲ್ಲಿ ರಾಮನ ಮೊದಲ ಭೇಟಿಯಾದಾಗ ಸುಗ್ರೀವನೂ ಹನುಮಂತನೂ ಯಾವ ಪರ್ವತದಲ್ಲಿದ್ದರು?
  2.          ೧೮೫೭ರ ಮಹಾಸಂಗ್ರಾಮದ ಸಂದರ್ಭದಲ್ಲಿ `ವಿದ್ರೋಹ’ಕ್ಕಾಗಿ ಮಂಗಳ ಪಾಂಡೆಯೊಡನೆ ಮರಣದಂಡನೆಗೆ  ಗುರಿಯಾದ ಇನ್ನೊಬ್ಬ ವೀರ       ಯಾರು?
  3.       ತಾತ್ಯಾಟೋಪೆಯ ಹುಟ್ಟುಹೆಸರು ಏನು?
  4.           ಹೈದರಾಬಾದಿನ ಹಿಮಾಯತ್‌ಸಾಗರ ಮತ್ತು ಉಸ್ಮಾನ್‌ಸಾಗರ ಸರೋವರಗಳನ್ನು ವಿನ್ಯಾಸಗೊಳಿಸಿದವರು ಯಾರು?
  5.            ಬೌದ್ಧಮತವು ಹೀನಯಾನ ಮಹಾಯಾನಗಳೆಂದು ವಿಭಜನೆಗೊಂಡ ನಾಲ್ಕನೇ ಬೌದ್ಧಸಮ್ಮೇಳನ ಯಾರ ಅಧ್ಯಕ್ಷತೆಯಲ್ಲಿ ನಡೆಯಿತು?
  6.            ಶಿಲ್ಪಶಾಸ್ತ್ರ ನಿಯಮಗಳಿಗೆ ಅನುಸಾರವಾಗಿ ವಿದ್ಯಾಧರ ಚಕ್ರವರ್ತಿಯಿಂದ ವಿನ್ಯಾಸಗೊಳಿಸಲ್ಪಟ್ಟ ನಗರ ಯಾವುದು?
  7.           ಬಂಗ್ಲಾದೇಶದ ಮೊದಲ `ರಾಷ್ಟ್ರಕವಿ’ ಯಾರು?
  8.           ಭಾರತೀಯರ ಸರಾಸರಿ ಆದಾಯವನ್ನು ಮೊತ್ತಮೊದಲು ಸಂಖ್ಯಾಶಾಸ್ತ್ರಾನುಗುಣವಾಗಿ ಅಂದಾಜು ಮಾಡಿದ ತಜ್ಞರು ಯಾರು?
  9.           ಸ್ವತಂತ್ರ ಭಾರತದ ಮೊದಲ ಹಣಕಾಸು ಖಾತೆಯ ಸಚಿವ ಯಾರು?
  10.         `ಕೀನೋಟ್ ಎಂಬುದು ಯಾವ ಪ್ರಸಿದ್ಧ ಉದ್ಯಮಿಯ ಭಾಷಣಗಳ ಸಂಕಲನ?

 

 

    1. ಋಷ್ಯಮೂಕ
    2. ಈಶ್ವರ ಪಾಂಡೆ
    3. ರಾಮಚಂದ್ರ ಪಾಂಡುರಂಗ
    4. ಮೋಕ್ಷಗುಂಡಂ ವಿಶ್ವೇಶ್ವರಯ್ಯ
    5. > ಕುಶಾನ ದೊರೆ ಕನಿಷ್ಕ
    6. ರಾಜಸ್ಥಾನದ ಜೈಪುರ

ಕಾಜಿ ನಜರುಲ್ ಇಸ್ಲಾಂ

  1. ದಾದಾಭಾಯಿ ನವರೋಜಿ
  2. ಜಾನ್ ಮಥಾಯ್
  3. ಜೆ.ಆರ್.ಡಿ. ಟಾಟಾ

 

Facebook
X
WhatsApp
Print
Email