ರಸಪ್ರಶ್ನೆ

eng

  1.         `ಹಲಾಯುಧ’ ಎಂಬ ಹೆಸರಿನಿಂದಲೂ ಪ್ರಸಿದ್ಧನಾದ ಪೌರಾಣಿಕ ವ್ಯಕ್ತಿ ಯಾರು?
  2.          ಬುದ್ಧನ ಪೂರ್ವಜನ್ಮವೃತ್ತಾಂತಗಳನ್ನು ತಿಳಿಸುವ `ಜಾತಕಕಥೆಗಳು’ ಯಾವ ಭಾಷೆಯಲ್ಲಿ ರಚಿತವಾದವು?
  3.            ಪೂರ್ವಭಾರತದಲ್ಲಿ ಮೊಘಲ ರಾಜಧಾನಿಯಾಗಿ ಅಕ್ಬರನ ಸೇನಾಧಿಕಾರಿಗಳು ನಿರ್ಮಿಸಿದ ನೂತನ ನಗರ ಯಾವುದು?
  4.           ವಾಲಿಯ ಕಣ್ಣಿಗೆ ಬೀಳದಿರಲು ಸುಗ್ರೀವನು ಯಾವ ಋಷಿಗಳ ಆಶ್ರಮದಲ್ಲಿ ಆಸರೆ ಪಡೆದಿದ್ದ?
  5.           ಸುಲ್ತಾನ ಕುತುಬ್‌ಶಾಹನ ಪತ್ನಿ ಹೈದರ್‌ಬೇಗುಂಳ ಹುಟ್ಟುಹೆಸರು ಏನು?
  6.            ಜಿಲ್ಲಾ ಕಲೆಕ್ಟರ ಚಾರ್ಲ್ಸ್ ಕಿಂಗ್ಸ್‌ಫರ್ಡನ ಹತ್ಯೆಯ ಯತ್ನ ಮಾಡಿದ ಅಪರಾಧಕ್ಕಾಗಿ ಮರಣದಂಡನೆಗೊಳಗಾದ ೧೪ ವರ್ಷದ ಶಾಲಾಬಾಲಕ ಯಾರು?
  7.           ಮೃಣಾಲ್ ಸೇನ್ ನಿರ್ದೇಶಿತ `ಒಕ ಊರಿ ಕಥಾ’ ಚಿತ್ರ ಯಾರು ಬರೆದ ಕಥೆಯನ್ನು ಆಧರಿಸಿತ್ತು?
  8.           ಫಾಲ್ಕೆ ಪ್ರಶಸ್ತಿ ವಿಜೇತ ಗುಲ್ಜಾರ್ ಅವರ ಮೂಲ ಹೆಸರು ಏನು?
  9.            ವಿಶ್ವಕಪ್ ಕ್ರಿಕೆಟ್‌ನಲ್ಲಿ `ಪಂದ್ಯದ ವ್ಯಕ್ತಿ’ ಪ್ರಶಸ್ತಿ ಗಳಿಸಿದ ಮೊದಲ ಭಾರತೀಯ ಆಟಗಾರ ಯಾರು?
  10.       ಕ್ರಿಕೆಟಿಗನಾಗಿಯೂ ಪ್ರಸಿದ್ಧನಾಗಿದ್ದ ಇಂಗ್ಲೆಂಡಿನ ಏಕೈಕ ಪ್ರಧಾನಿ ಯಾರು?

 

 

 

  1.            ಬಲರಾಮ (`ನೇಗಿಲನ್ನು ಆಯುಧವಾಗಿ ಉಳ್ಳವನು’).
  2.          ಪಾಲಿ.
  3.           ಢಾಕಾ(ಬಂಗ್ಲಾದೇಶ).
  4.            ಮತಂಗ ಮಹರ್ಷಿಗಳು.
  5.            ಭಾಗಮತಿ.
  6.            ಖುದಿರಾಮ ಬೋಸ್.
  7.           ಮುನ್ಶಿ ಪ್ರೇಮಚಂದ್.
  8.            ಸಂಪೂರಣ್‌ಸಿಂಗ್.
  9.           ಫರೂಖ್ ಇಂಜಿನಿಯರ್ (೧೯೭೫).
  10.         ಆಲೆಕ್ ಡಗ್ಲಸ್ ಹೋಮ್.

 

 

 

 

 

 

 

 

 

 

 

 

Facebook
X
WhatsApp
Print
Email