ರಾಮ ಬರುವನು

ರಾಮ ಬರುವನು

ಎನ್ನ ರಾಮ ಬರುವನು ||

ಕ್ಲೇಶ ಕಳೆವನು

   ಮನಕೆ ಹರುಷ ತರುವನು ||

ಸುಪ್ರಜಾ ಪಾಲಕ

      ಜಗದ ಹಿತದಾಯಕ ||

ಅಸುರ ಕುಲ ನಾಶಕ

       ಪಿತೃವಾಕ್ಯ ಪರಿಪಾಲಕ ||

ಜಾನಕಿಯ ಪ್ರಾಣಕಾಂತ

         ಇವನ ಭಕ್ತ ಹನುಮಂತ ||

ಸರಳ ಸುಂದರ ವಿನಯವಂತ

           ಭಕ್ತಿಗೊಲಿವ ಭಗವಂತ ||

ಗುಹನ ಆತಿಥ್ಯ ಪಡೆದವನು

        ಶಬರಿ ಭಕ್ತಿಗೊಲಿದವನು ||

ಸುಪ್ತ ಪ್ರಜ್ಞೆಯಾಗಿರುವವನು

      ಸರ್ವಾಭೀಷ್ಟ ಪ್ರದಾಯಕನು ||

Facebook
X
WhatsApp
Print
Email