ಸೊಂಟ ಮತ್ತು ಹೊಟ್ಟೆಯ ಬೊಜ್ಜನ್ನು ಕರಗಿಸುವ ಆಸನಗಳು

ಹಿಂದಿನ ಸಂಚಿಕೆಗಳಲ್ಲಿ ಸೊಂಟ ಮತ್ತು ಪಕ್ಕೆಯ ಬೊಜ್ಜನ್ನು ಕರಗಿಸುವ ಆಸನಗಳನ್ನು ಕಲಿತಿದ್ದೇವೆ. ಈಗ ಸೊಂಟ ಮತ್ತು ಹೊಟ್ಟೆಯ ಬೊಜ್ಜನ್ನು ಕರಗಿಸುವ ಕೆಲವು ಆಸನಗಳು ಕಲಿಯೋಣ.

ಇವುಗಳು ದೇಹವನ್ನು ತಿರುಚಿ ಮಾಡುವ ಆಸನಗಳಾದ್ದರಿಂದ, ಮೊದಲನೆಯದಾಗಿ – ಈ ಎಲ್ಲ ಆಸನಗಳ ಅಭ್ಯಾಸದಲ್ಲಿ ಸ್ಥಿತಿಗೆ ಹೋಗುವಾಗ ಉಸಿರನ್ನು ಬಿಡುತ್ತಾ ಹೋಗಬೇಕು ಮತ್ತು ಸ್ಥಿತಿಗೆ ಮರಳುವಾಗ ಉಸಿರನ್ನು ತೆಗೆದುಕೊಳ್ಳುತ್ತಾ ಬರಬೇಕು. ಆಸನದ ಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸುವಾಗ ಉಸಿರನ್ನು ಬಿಡುತ್ತಾ ತಿದ್ದಿಕೊಳ್ಳಬೇಕು. ಎರಡನೆಯದಾಗಿ – ಈ ಎಲ್ಲ ಆಸನಗಳ ಅಭ್ಯಾಸದಲ್ಲಿ ಸೊಂಟ ಮತ್ತು ಹೊಟ್ಟೆಯ ಮಾಂಸಖಂಡಗಳನ್ನು ಚೆನ್ನಾಗಿ ಹಿಂಡುವುದಕ್ಕೆ ಪ್ರಯತ್ನಿಸಬೇಕು. ಇದರಿಂದ ಅಭ್ಯಾಸದ ಲಾಭ ಶೀಘ್ರವಾಗಿ ಲಭಿಸುತ್ತದೆ.

ಪರಿವೃತ ಸುಖಾಸನ – ಪ್ರಕಾರ ಒಂದು

1_1

  1. ಮೊದಲಿಗೆ ಜಮಖಾನದ ಮೇಲೆ ಬೆನ್ನು ನೇರವಾಗಿಸಿ, ಕಾಲುಗಳನ್ನು ಚಕ್ಕಂಬಟ್ಟಲಾಗಿ ಮಡಿಸಿ ಕುಳಿತುಕೊಳ್ಳಿ.
  2. ಅನಂತರ ಎಡಗೈಯನ್ನು ಬಲ ಮಂಡಿಯ ಮೇಲೆ ನೇರವಾಗಿ ಇರಿಸಿ, ಬಲಗೈಯನ್ನು ಬೆನ್ನೆಲುಬಿನ ನೇರಕ್ಕೆ ನೆಲದ ಮೇಲೆ ಒತ್ತಿ ಹಿಡಿಯಿರಿ.
  3. ಆಮೇಲೆ ಉಸಿರನ್ನು ಬಿಡುತ್ತಾ, ಸೊಂಟದ ಮಾಂಸಖಂಡಗಳನ್ನು ಚೆನ್ನಾಗಿ ಹಿಂಡುತ್ತಾ ಬಲಕ್ಕೆ ತಿರುಗಿ.
  4. ಆಸನದ ಈ ಸ್ಥಿತಿಯಲ್ಲಿ, ಸಹಜ ಉಸಿರಾಟ ನಡೆಸುತ್ತ ಸ್ವಲ್ಪಕಾಲ ನೆಲೆಸಿ, ಬಳಿಕ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಪೂರ್ವಸ್ಥಿತಿಗೆ ಬನ್ನಿ.
  5. ಇದೇ ರೀತಿಯಾಗಿ ಆಸನವನ್ನು ಎಡಕ್ಕೆ ತಿರುಗುತ್ತಾ ಮಾಡಿರಿ.

ಪರಿವೃತ ಸುಖಾಸನ – ಪ್ರಕಾರ ಎರಡು

2_1

  1. ಮೊದಲಿಗೆ ಜಮಖಾನದ ಮೇಲೆ ಬೆನ್ನು ನೇರವಾಗಿಸಿ, ಕಾಲುಗಳನ್ನು ಚಕ್ಕಂಬಟ್ಟಲಾಗಿಸಿ ಕುಳಿತುಕೊಳ್ಳಿ.
  2. ಅನಂತರ ಎಡಗೈಯನ್ನು ಬಲ ಮಂಡಿಯ ಮೇಲೆ ನೇರವಾಗಿ ಇರಿಸಿ, ಬಲಗೈಯನ್ನು ಬೆನ್ನೆಲುಬಿನಿಂದ ದೂರಕ್ಕೆ ನೆಲದ ಮೇಲೆ ಒತ್ತಿ ಹಿಡಿಯಿರಿ.
  3. ಆಮೇಲೆ ಉಸಿರನ್ನು ಬಿಡುತ್ತಾ, ಹೊಟ್ಟೆಯ ಮಾಂಸಖಂಡಗಳನ್ನು ಚೆನ್ನಾಗಿ ಹಿಂಡುತ್ತಾ ಬಲಕ್ಕೆ ತಿರುಗಿ.
  4. ಆಸನದ ಈ ಸ್ಥಿತಿಯಲ್ಲಿ, ಸಹಜ ಉಸಿರಾಟ ನಡೆಸುತ್ತ ಸ್ವಲ್ಪಕಾಲ ನೆಲೆಸಿ, ಬಳಿಕ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಪೂರ್ವಸ್ಥಿತಿಗೆ ಬನ್ನಿ.
  5. ಇದೇ ರೀತಿಯಾಗಿ ಆಸನವನ್ನು ಎಡಕ್ಕೆ ತಿರುಗುತ್ತಾ ಮಾಡಿರಿ.

ಪರಿವೃತ ಸುಖಾಸನ – ಪ್ರಕಾರ ೩

3

  1. ಮೊದಲಿಗೆ ಜಮಖಾನದ ಮೇಲೆ ಬೆನ್ನು ನೇರವಾಗಿಸಿ, ಕಾಲುಗಳನ್ನು ಚಕ್ಕಂಬಟ್ಟಲಾಗಿ ಮಡಿಸಿ ಕುಳಿತುಕೊಳ್ಳಿ.
  2. ಅನಂತರ ಎಡಗೈಯನ್ನು ಬಲ ಮಂಡಿಯ ಮೇಲೆ ನೇರವಾಗಿ ಇರಿಸಿ, ಬಲಗೈಯಿಂದ ಬೆನ್ನನ್ನು ಬಳಸಿ ಎಡತೊಡೆಯನ್ನು, ಅಥವಾ ಸಾಧ್ಯವಾದರೆ ಎಡ ಮೊಣಕಾಲನ್ನು, ಭದ್ರವಾಗಿ ಹಿಡಿದುಕೊಳ್ಳಿ.
  3. ಆಮೇಲೆ ಉಸಿರನ್ನು ಬಿಡುತ್ತಾ, ಸೊಂಟದ ಮಾಂಸಖಂಡಗಳನ್ನು ಚೆನ್ನಾಗಿ ಹಿಂಡುತ್ತಾ ಬಲಕ್ಕೆ ತಿರುಗಿ.
  4. ಆಸನದ ಈ ಸ್ಥಿತಿಯಲ್ಲಿ, ಸಹಜ ಉಸಿರಾಟ ನಡೆಸುತ್ತ ಸ್ವಲ್ಪಕಾಲ ನೆಲೆಸಿ, ಬಳಿಕ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಪೂರ್ವಸ್ಥಿತಿಗೆ ಬನ್ನಿ.
  5. ಇದೇ ರೀತಿಯಾಗಿ ಆಸನವನ್ನು ಎಡಕ್ಕೆ ತಿರುಗುತ್ತಾ ಮಾಡಿರಿ.

ಭರದ್ವಾಜಾಸನ – ಪ್ರಕಾರ ೧

4_1

  1. ಮೊದಲಿಗೆ ಜಮಖಾನದ ಮೇಲೆ ಬೆನ್ನು ನೇರವಾಗಿಸಿ, ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಿ.
  2. ಬಳಿಕ ಎರಡೂ ಕಾಲುಗಳನ್ನು ಮಡಿಸಿ, ಬಲಪಾದದ ಮೇಲೆ ಎಡಪಾದ ಬರುವಂತೆ ಎಡ ಪಾರ್ಶ್ವದಲ್ಲಿರಿಸಿ.
  3. ಅನಂತರ ಎಡಗೈಯನ್ನು ಬಲ ಮಂಡಿಯ ಮೇಲೆ ನೇರವಾಗಿ ಇರಿಸಿ, ಬಲಗೈಯನ್ನು ಬೆನ್ನೆಲುಬಿನ ನೇರಕ್ಕೆ ನೆಲದ ಮೇಲೆ ಒತ್ತಿಹಿಡಿಯಿರಿ.
  4. ಆಮೇಲೆ ಉಸಿರನ್ನು ಬಿಡುತ್ತಾ, ಸೊಂಟದ ಮಾಂಸಖಂಡ ಗಳನ್ನು ಚೆನ್ನಾಗಿ ಹಿಂಡುತ್ತಾ ಬಲಕ್ಕೆ ತಿರುಗಿ.
  5. ಆಸನದ ಈ ಸ್ಥಿತಿಯಲ್ಲಿ, ಸಹಜ ಉಸಿರಾಟ ನಡೆಸುತ್ತ ಸ್ವಲ್ಪಕಾಲ ನೆಲೆಸಿ, ಬಳಿಕ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಪೂರ್ವಸ್ಥಿತಿಗೆ ಬನ್ನಿ.
  6. ಇದೇ ರೀತಿಯಾಗಿ ಆಸನವನ್ನು ಎಡಕ್ಕೆ ತಿರುಗುತ್ತಾ ಮಾಡಿರಿ.

ಭರದ್ವಾಜಾಸನ – ಪ್ರಕಾರ ೨

5

  1. ಮೊದಲಿಗೆ ಜಮಖಾನದ ಮೇಲೆ ಬೆನ್ನು ನೇರವಾಗಿಸಿ, ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಿ.
  2. ಬಳಿಕ ಬಲಗಾಲನ್ನು ಮಡಿಸಿ, ಬಲಪಾದವನ್ನು ಎಡ ತೊಡೆಯ ಮೇಲೆ ಇರಿಸಿ, ಎಡಗಾನ್ನು ಮಡಿಸಿ ಎಡ ಪಾರ್ಶ್ವದಲ್ಲಿರಿಸಿ.
  3. ಅನಂತರ ಎಡಗೈಯನ್ನು ಬಲ ಮಂಡಿಯ ಕೆಳಗೆ ನೆಲದ ಮೇಲೆ ನೇರವಾಗಿ ಇರಿಸಿ, ಬಲಗೈಯಿಂದ ಬೆನ್ನನ್ನು ಬಳಸಿ ಬಲಪಾದವನ್ನು ಭದ್ರವಾಗಿ ಹಿಡಿದುಕೊಳ್ಳಿ.
  4. ಆಮೇಲೆ ಉಸಿರನ್ನು ಬಿಡುತ್ತಾ, ಸೊಂಟದ ಮಾಂಸಖಂಡ ಗಳನ್ನು ಚೆನ್ನಾಗಿ ಹಿಂಡುತ್ತಾ ಬಲಕ್ಕೆ ತಿರುಗಿ.
  5. ಆಸನದ ಈ ಸ್ಥಿತಿಯಲ್ಲಿ, ಸಹಜ ಉಸಿರಾಟ ನಡೆಸುತ್ತ ಸ್ವಲ್ಪಕಾಲ ನೆಲೆಸಿ, ಬಳಿಕ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಪೂರ್ವಸ್ಥಿತಿಗೆ ಬನ್ನಿ.
  6. ಇದೇ ರೀತಿಯಾಗಿ ಆಸನವನ್ನು ಎಡಕ್ಕೆ ತಿರುಗುತ್ತಾ ಮಾಡಿರಿ.
Facebook
X
WhatsApp
Print
Email