ಹನಿಗವನ

ನನ್ನೊಳಗಿನ

ಖಾಲಿತನಕೆ

ಕಡ

ತರಬಹುದು

ಬತ್ತಿ, ಎಣ್ಣೆ…

ದೀಪ ಹಚ್ಚಬೇಕು

ನಾನೇ…

-ಅಮೃತಾ ಮೆಹೆಂದಳೆ

 

ಸಾಕಿನ್ನು

ಕಣ್ಣೀರು..

ಬರೀ

ಉಪ್ಪುಪ್ಪು

ಸಮುದ್ರದ

ನೀರು…

-ಅಮೃತಾ ಮೆಹೆಂದಳೆ

ಮೋಹಕ ಕ್ಷಣಗಳು

ನಿನ್ನೆ ಕಡಿದ
ಬಾಳೆಕಂದು
ಇಂದು ಚಿಗುರಿದೆ!
**
ಮಳೆಹನಿಗಳ
ಮುತ್ತಿಗೆ
ಮುಟ್ಟಿದರೆಮುನಿ
ನಾಚಿದೆ!
**
ನಾಳೆ ಫಲಿಸಲು
ಇಂದು
ಹೂವಿನ ನಿರೀಕ್ಷೆ!
**
ಬಾನಿಂದ ಭುವಿಗೆ
ಆಲಿಕಲ್ಲುಗಳ
ಪುಷ್ಪವೃಷ್ಟಿ!
**
ತಾವರೆಯನರಳಿಸಲು
ಬುಡದ ನೀರು ಸೋತಿತು;
ದೂರ ಆಗಸದ ಅರುಣ
ಗೆದ್ದ!

_ ಅರುಣ ಹರೂರು

Facebook
X
WhatsApp
Print
Email