‘ಹಿಂದೂ’ ಸಿಂಧುವಿನ ಬಿಂದುಗಳು ನಾವು

ಹಿಂದು ಸಿಂಧುವಿನ ಬಿಂದುಗಳುಜಗದುದ್ದಗಲದಿ ಬೆಳಗುತಲಿಹುದು ಸ-

ನಾತನ ಹಿಂದೂ ಧರ್ಮ |

ಸತ್ಯ ಅಹಿಂಸೆಯೆ, ಸಮತೆಯೆ ಮಮತೆಯೆ

ಜನಹಿತ ಸೇವೆಯೆ ಮರ್ಮ || ಪ ||

ಹಿಂದೂ ಶಕ್ತಿಯ ಸಿಂಧುವಿನಲ್ಲಿ

ನಾವುಗಳೆಲ್ಲರು ಬಿಂದುಗಳು |

ಅಖಂಡ ಭಾರತ ಬಾಂದಳದಲ್ಲಿ

ನಗೆ ಚೆಲ್ಲುವ ಚೆಲು ತಾರೆಗಳು || ಅ. ಪ. ||

ಕೇಶವ ಮಾಧವರನು ಧ್ಯಾನಿಸುತಲಿ ವಂದನೆ ಸಲಿಸುವೆವು

ಸಾರ್ಥಕ ದಾರಿಯ ನಡೆದ ಮಹಾತ್ಮರ ಅನುದಿನ ನೆನೆಯುವೆವು |

ಬುದ್ಧಿ ವಿಕಾಸಕೆ, ಶಿಕ್ಷಣ, ಸ್ವಾಸ್ಥ್ಯಕೆ, ಜನಜಾಗೃತಿಗೆಂದು

ವಿಧ ವಿಧ ರೂಪದಿ ಶ್ರಮಿಸುವೆವಿಂದು – ನಾವೆಲ್ಲರು ಒಂದು ||

|| ಹಿಂದೂ ಶಕ್ತಿಯ ||

ಪ್ರಕೃತಿ ವಿಕೋಪದಿ ಅವಿರತ ದುಡಿದಿದೆ ಹಿಂದೂ ಸಂಘಟನೆ

ಸಾವಿರ ಸಾವಿರ ಮನೆಗಳ ನೀಡಿದೆ, ಮಾಡದೆ ಕ್ಷಣಗಣನೆ |

ನಿಲ್ಲಿಸಬೇಕಿದೆ ದೇಶದಿ ಗೋವಧೆ, ಸಲ್ಲದ ಭ್ರಷ್ಟಾಚಾರ

ತಡೆಯಲು ಬೇಕಿದೆ ತುಚ್ಛ ಮತಾಂತರ, ಉಗ್ರರ ಹಿಂಸಾಚಾರ ||

|| ಹಿಂದೂ ಶಕ್ತಿಯ ||

ಬುದ್ಧಿಯ, ಶಕ್ತಿಯ ಸದ್ವಿನಿಯೋಗದಿ ಸದೃಢರಾಗೋಣ

ಸಮೃದ್ಧ ರಾಷ್ಟ್ರವ ನಿರ್ಮಿಸಿ ಜಗದಲಿ ಸುಭದ್ರಗೊಳಿಸೋಣ |

‘ಹಿಂದೂ’ನಾದಕೆ ಎದೆ ಎದೆಯಲ್ಲೂ ಪುಟಿ ಪುಟಿಯಲಿ ಪುಲಕ

ಭಾರತಿ ದೇವಿಗೆ ಶೋಭೆಯ ನೀಡಲಿ ಕೇಸರಿ ಕುಂಕುಮ ತಿಲಕ ||

|| ಹಿಂದೂ ಶಕ್ತಿಯ ||

Facebook
X
WhatsApp
Print
Email