ವಿಷಯ: ವಂದೇ ಮಾತರಂ-೧೫೦:
ರಾಷ್ಟ್ರೀಯ ಅಸ್ಮಿತೆಗೆ ಸ್ಫೂರ್ತಿ, ಐತಿಹಾಸಿಕ ಮಹತ್ತ್ವ-ಪ್ರಭಾವ ಮತ್ತು ಸಮಕಾಲೀನ ಪ್ರಸ್ತುತತೆ.
ದ್ರಷ್ಟಾರ ಬಂಕಿಂಚಂದ್ರ ಚಟರ್ಜಿ ಅವರು ’ವಂದೇ ಮಾತರಂ’ – ಎಂಬ ಮಹಾಮಂತ್ರವನ್ನು ರಚಿಸಿದ್ದು ನವೆಂಬರ್ 7, 1875ರಲ್ಲಿ. ಈ ವರ್ಷ ’ವಂದೇ ಮಾತರಂ’ ಗೀತೆಯ 15೦ನೆಯ ವಾರ್ಷಿಕೋತ್ಸವ.
ವಂದೇಮಾತರಂ! (ತಾಯೇ ವಂದಿಸುವೆ) – ಮಾತೃಭೂಮಿಯೊಡನೆ ಅವಿಚ್ಛಿನ್ನ ಭಕ್ತಿ ನಿಷ್ಠೆಗಳನ್ನು ವ್ಯಕ್ತಗೊಳಿಸುವ ರಾಷ್ಟ್ರಮಂತ್ರ! ಸ್ವದೇಶೀ ಎಂದರೆ ’ವಂದೇ ಮಾತರಂ’ನ ಕಾರ್ಯರೂಪ ಎಂಬ ವ್ಯಾಖ್ಯಾನವೂ ಇದೆ. ಭಾರತದ ಸ್ವಾತಂತ್ರ್ಯಸಂಗ್ರಾಮದ ಕಾಲದಲ್ಲಿ ’ವಂದೇ ಮಾತರಂ’ ಅದ್ಭುತ ಸಾಹಸಗಳಿಗೆ, ಸಹಸ್ರಾರು ತ್ಯಾಗ ಬಲಿದಾನಗಳಿಗೆ ಪ್ರೇರಣೆ ನೀಡಿತು; ಮುಂದೆಯೂ ನೀಡುತ್ತಲೇ ಇದೆ. ಬರಿಯ ದಾಸ್ಯ-ಸಂಘರ್ಷಗಳ ಸಮಯದಲ್ಲಿ ಮಾತ್ರವಲ್ಲ, ಶಾಂತಿ-ಸ್ವಾತಂತ್ರ್ಯಗಳ ಸಮಯದಲ್ಲೂ ಅದರ ಪಾತ್ರ ಮಹತ್ತರವಾದುದು. ಅದರ ಶಬ್ದ ಶಬ್ದವೂ ನಮ್ಮ ರಾಷ್ಟ್ರಜೀವನದ ವಿವಿಧ ಮುಖಗಳ ಪ್ರತೀಕ. ನಮ್ಮ ಸಂಸ್ಕೃತಿಯ ಸೌರಭ ಹೊರಸೂಸುವ ನುಡಿಸುಮ. ಈ ನೆಲದ ಸಂತಾನದ ವಿದ್ಯಾಬುದ್ಧಿಗಳ, ಸಂಪತ್ತು-ಸಮೃದ್ಧಿಗಳ ಸಾಧನೆ-ಸಿದ್ಧಿಗಳಿಗೆ ಆವಾಹನೆ ನೀಡುವ ಚಿರಂತನ ಸ್ಫೂರ್ತಿಮಂತ್ರ – ವಂದೇ ಮಾತರಂ.
ಈ ಮೇಲಿನ ವಿಷಯದ ಕುರಿತಾಗಿ ಕನ್ನಡದಲ್ಲಿ ಕನಿಷ್ಠ ೧೩೦೦ ರಿಂದ ಗರಿಷ್ಠ ೧೫೦೦ ಪದಮಿತಿಯಲ್ಲಿ ಪ್ರಬಂಧವನ್ನು ಬರೆದು ಈ ಕೆಳಗಿನ ವಿಳಾಸಕ್ಕೆ ಇಮೇಲ್ ಅಥವಾ ಅಂಚೆ ಮೂಲಕ ಕಳುಹಿಸಿ.
ಮೊದಲ ಬಹುಮಾನ: ರೂ. 15,೦೦೦/-
ಎರಡನೆಯ ಬಹುಮಾನ: ರೂ. 12,೦೦೦/-
ಮೂರನೆಯ ಬಹುಮಾನ: ರೂ. 10,೦೦೦/-
ಹತ್ತು ಮೆಚ್ಚುಗೆಯ ಬಹುಮಾನಗಳು: ತಲಾ ರೂ. 2,೦೦೦/-
ಪ್ರಬಂಧ ನಮಗೆ ತಲಪಲು ಕೊನೆಯ ದಿನಾಂಕ: ನವೆಂಬರ್ 1, 2026

ಸ್ಪರ್ಧೆಯ ನಿಯಮಗಳು:
ಈ ಸ್ಪರ್ಧೆಯಲ್ಲಿ ಪದವಿ, ಯಾ ತತ್ಸಮಾನ ಮತ್ತು ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು.
ಸ್ಪರ್ಧೆಯು ಕನ್ನಡದಲ್ಲಿ ಇರುತ್ತದೆ.
ಸ್ಪರ್ಧೆಗೆ ಕಳುಹಿಸುವ ಪ್ರಬಂಧ ವಿದ್ಯಾರ್ಥಿಯ ಸ್ವಂತ ರಚನೆಯಾಗಿರಬೇಕು. ಈವರೆಗೆ ಎಲ್ಲಿಯೂ ಯಾವ ರೀತಿಯಲ್ಲೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಪ್ರಬಂಧವನ್ನು ಕೈಬರೆಹವನ್ನು ಅಂಚೆ(ಪೋಸ್ಟ್) ಮೂಲಕ ಅಥವಾ ಟೈಪ್ ಮಾಡಿ ಇಮೇಲ್ ಮೂಲಕ ಕಳುಹಿಸಬಹುದು. ಪೋಟೋ ತೆಗೆದು ಕಳುಹಿಸುವಂತಿಲ್ಲ.
ಸ್ಪರ್ಧಿಗಳು ತಮ್ಮ ಹೆಸರು, ಪರಿಚಯ, ಮೊಬೈಲ್ ನಂಬರ್, ಕಾಲೇಜಿನ ಹೆಸರು, ವಿಳಾಸ ಇತ್ಯಾದಿಗಳನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಜೊತೆಗೆ ಭಾವಚಿತ್ರವೂ ಇರಬೇಕು.
ಪೋಸ್ಟ್ ಮೂಲಕ ಕಳುಹಿಸುವವರು – ಪ್ರಬಂಧವನ್ನು ಹಾಳೆಯ ಒಂದೆ ಮಗ್ಗುಲಲ್ಲಿ ಸ್ಫುಟವಾಗಿ ಬರೆದಿರಬೇಕು. ಹಾಳೆಗಳನ್ನು ಚಿತ್ರಗಳಿಂದ, ಬಣ್ಣಗಳಿಂದ ಅಲಂಕರಿಸುವುದು ಬೇಡ.
ಇಮೇಲ್ ಮೂಲಕ ಕಳುಹಿಸುವವರು – ಪ್ರಬಂಧವನ್ನು ನುಡಿ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ (ಪಿಡಿಎಫ್ ಮತ್ತು ತಿoಡಿಜ ಜಿiಟe – ಎರಡನ್ನೂ) utthanacompetition@gmail.com– ಈ ಇ-ಮೇಲ್‌ಗೆ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಪ್ರಬಂಧವನ್ನು ತೀರ್ಪು ಪ್ರಕಟವಾಗುವವರೆಗೆ ಬೇರೆಲ್ಲಿಯೂ ಯಾವುದೇ ರೂಪದಲ್ಲಿ ಪ್ರಕಟಿಸಬಾರದು.
ಕಳುಹಿಸುವ ಪ್ರಬಂಧವನ್ನು ಕಾಲೇಜು/ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಬೇಕು.
ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಬಂಧವನ್ನು ಹಿಂದಿರುಗಿಸುವ ವ್ಯವಸ್ಥೆ ಇರುವುದಿಲ್ಲ.
ಬಹುಮಾನಿತ ಪ್ರಬಂಧಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸಿಕೊಳ್ಳುವ ಹಕ್ಕನ್ನು ’ಉತ್ಥಾನ’ವು ಕಾಯ್ದಿರಿಸಿಕೊಂಡಿದೆ.
ತೀರ್ಪುಗಾರರ ಮೌಲ್ಯನಿರ್ಣಯದ ನಂತರ ಫಲಿತಾಂಶವನ್ನು ’ಉತ್ಥಾನ’ದಲ್ಲಿ ಪ್ರಕಟಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರವ್ಯವಹಾರ ಸಾಧ್ಯವಾಗದು.
ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.
ಪ್ರಬಂಧವನ್ನು ಕಳುಹಿಸಬೇಕಾದ ವಿಳಾಸ:
ಸಂಪಾದಕರು
’ಉತ್ಥಾನ’ ವಾರ್ಷಿಕ ಪ್ರಬಂಧ ಸ್ಪರ್ಧೆ – ೨೦೨೬
’ಕೇಶವ ಶಿಲ್ಪ’, ಕೆಂಪೇಗೌಡನಗರ ಮುಖ್ಯರಸ್ತೆ,
ಕೆಂಪೇಗೌಡನಗರ, ಬೆಂಗಳೂರು – ೫೬೦ ೦೦೪
email: utthanacompetition@gmail.com / ಮೊಬೈಲ್: ೭೭೯೫೪ ೪೧೮೯೪






