ಉತ್ಥಾನ ಮಾಸಪತ್ರಿಕೆಯು ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆ 2021

ಬೆಂಗಳೂರು, ಆಗಸ್ಟ್ ೩೦, ೨೦೨೧: ಉತ್ಥಾನ ಮಾಸಪತ್ರಿಕೆಯು ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ.

  1. ಕಥಾ ಸ್ಪರ್ಧೆಯು ಕನ್ನಡದಲ್ಲಿ ಇರುತ್ತದೆ.
  2. ಕಥೆ 3,000 ಪದಗಳ ಮಿತಿಯಲ್ಲಿ ಇರಬೇಕು.
  3. ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು.
  4. ಕಥೆಗಳು ಸ್ವತಂತ್ರವಾಗಿರಬೇಕು. ಭಾಷಾಂತರವಾಗಲಿ, ಅನುಕರಣೆಯಾಗಲಿ ಆಗಿರಕೂಡದು. ಎಲ್ಲೂ ಸ್ವೀಕೃತವಾಗಿರಬಾರದು; ಪರಿಶೀಲನೆಗಾಗಿಯೂ ಯಾವುದೇ ಅನ್ಯ ಪತ್ರಿಕೆ, ಸಂಸ್ಥೆಗೆ ಕಳುಹಿಸಿರಬಾರದು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟವಾಗಿರಬಾರದು.
  5. ಕಾಗದದ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ ಬರೆದು ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಅಥವಾ ನುಡಿ, ಬರಹ, ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ ಇ-ಮೇಲ್ ಮೂಲಕ ಕಳುಹಿಸಬಹುದು. ಇಮೇಲ್ ವಿಳಾಸ : utthanakathaspardhe@gmail.com
  6. ಬಹುಮಾನ

ಮೊದಲನೆಯ ಬಹುಮಾನ ರೂ. 15,000

ಎರಡನೆಯ ಬಹುಮಾನ ರೂ. 12,000

ಮೂರನೆಯ ಬಹುಮಾನ ರೂ. 10,000

ಐದು ಮೆಚ್ಚುಗೆಯ ಬಹುಮಾನಗಳು ತಲಾ ರೂ. 2,000

  • ಕಥೆಗಳು ನಮಗೆ ತಲಪಲು ಕೊನೆಯ ದಿನಾಂಕ: ಅಕ್ಟೋಬರ್ 31, 2021
  • ಕಥೆಯನ್ನು ಕಳುಹಿಸಬೇಕಾದ ವಿಳಾಸ:

ಸಂಪಾದಕರು,

’ಉತ್ಥಾನ’ ವಾರ್ಷಿಕ ಕಥಾ ಸ್ಪರ್ಧೆ – ೨೦೨೧

‘ಕೇಶವ ಶಿಲ್ಪ , ಕೆಂಪೇಗೌಡನಗರ, ಬೆಂಗಳೂರು ೫೬೦ ೦೦೪

ದೂರವಾಣಿ: ೦೮೦ – ೨೬೬೦ ೪೬೭೩

utthanakathaspardhe@gmail.com

Facebook
X
WhatsApp
Print
Email