ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2024ರ ಫಲಿತಾಂಶ

ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆ 2024ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶಭಟ್ಟ ಕೊಪ್ಪಲತೋಟ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ.

ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ವಾರ್ಷಿಕ ಕಥಾಸ್ಪರ್ಧೆ ೨೦೨೪ರಲ್ಲಿ ಕನ್ನಡದ ಖ್ಯಾತ ಕಥೆಗಾರರೂ ಸೇರಿದಂತೆ ಒಟ್ಟು ೪೧೨ ಕಥೆಗಳು ಭಾಗವಹಿಸಿದ್ದವು. ಲೇಖಕ, ಪತ್ರಕರ್ತರಾದ ಪ್ರೊ|| ಎನ್.ಎಸ್. ಶ್ರೀಧರಮೂರ್ತಿ ಅವರು ತೀರ್ಪುಗಾರರಾಗಿ ಬಹುಮಾನಿತ ಕಥೆಗಳನ್ನು ಆಯ್ಕೆ ಮಾಡಿದರು.

ಮೊದಲನೆ ಬಹುಮಾನವನ್ನು (ರೂ. ೧೫,೦೦೦) ಶ್ರೀ ಗಣೇಶಭಟ್ಟ ಕೊಪ್ಪಲತೋಟ ಅವರ ’ತೀರ್ಪು’ ಎಂಬ ಕಥೆ ಪಡೆದಿದೆ. ಎರಡನೆಯ ಬಹುಮಾನವನ್ನು (ರೂ. ೧೨,೦೦೦) ಶಿವಮೊಗ್ಗದ ಶ್ರೀ ಮೃತ್ಯುಂಜಯ ಎಚ್. ಅವರ ’ಕಥೆಯ ಪಾತ್ರದ ಎದುರು’ ಕಥೆ ಪಡೆದಿದ್ದು, ಮೂರನೆಯ ಬಹುಮಾನವನ್ನು (ರೂ.೧೦,೦೦೦) ಶ್ರೀ ಸದಾಶಿವ ಸೊರಟೂರು ಅವರ ಮುರಿದ ಮರದ ಚಿಗುರು ಕಥೆ ಪಡೆದಿದೆ.

ಇನ್ನು ೫ ಕಥೆಗಳು ಮೆಚ್ಚುಗೆ ಬಹುಮಾನವನ್ನು (ತಲಾ ರೂ. ೨,೦೦೦) ಪಡೆದಿವೆ. ಶ್ರೀಮತಿ ಕಿರಣ್ ಪ್ರಸಾದ್ ರಾಜನಹಳ್ಳಿ ಅವರ ’ಸ್ಥಿತ್ಯಂತರ’, ಶ್ರೀ ವನರಾಗ ಶರ್ಮಾ ಅವರ ’ನೆತ್ತರ ಬೀದಿಗುಂಟ’, ಶ್ರೀಮತಿ ಭಾಗ್ಯರೇಖಾ ದೇಶಪಾಂಡೆ ಅವರ ’ನಿಷ್ಕ್ರಮಣ’. ಶ್ರೀ ಜಯರಾಮಚಾರಿ ಅವರ ’ಅನಿಕೇತನ’, ಶ್ರೀಮತಿ ಶ್ರೀಮತಿ ಶೈಲಜಾ ಗೊರನ್ಮನೆ, ಶಿರಸಿ ಅವರ ’ಸಾಂಗತ್ಯ’ – ಈ ಕಥೆಗಳು ತೀರ್ಪುಗಾರರ ಮೆಚ್ಚುಗೆ ಬಹುಮಾನಕ್ಕೆ ಪಾತ್ರವಾಗಿವೆ.

ಬಹುಮಾನ ವಿಜೇತರ ವಿವರ ಹೀಗಿದೆ:

ತೀರ್ಪುಗಾರರು: ಪ್ರೊ|| ಎನ್.ಎಸ್. ಶ್ರೀಧರಮೂರ್ತಿ, ಲೇಖಕರು, ಪತ್ರಕರ್ತರು

  ಕಥೆಯ ಶೀರ್ಷಿಕೆಕಥೆಗಾರರ ಹೆಸರು
೧ಪ್ರಥಮ ಬಹುಮಾನ    (ರೂ. 15,000)ತೀರ್ಪುಶ್ರೀ ಗಣೇಶ ಭಟ್ಟ ಕೊಪ್ಪಲತೋಟ, ಶಿರಸಿ ಉತ್ತರಕನ್ನಡ.
೨ಎರಡನೆಯ ಬಹುಮಾನ (ರೂ. 12,000)ಕಥೆಯ ಪಾತ್ರದ ಎದುರುಶ್ರೀ ಮೃತ್ಯುಂಜಯ ಹೊಸಮನೆ, ಸಾಗರ, ಶಿವಮೊಗ್ಗ
೩ಮೂರನೆಯ ಬಹುಮಾನ ರೂ. 10,000ಮುರಿದ ಮರದ ಚಿಗುರುಶ್ರೀ ಸದಾಶಿವ ಸೊರಟೂರು, ಹೊನ್ನಾಳಿ, ದಾವಣಗೆರೆ
೪ ಮೆಚ್ಚುಗೆ ಬಹುಮಾನ (ತಲಾ ರೂ. 2,000)  ಸ್ಥಿತ್ಯಂತರಶ್ರೀಮತಿ ಕಿರಣ್ ಪ್ರಸಾದ್ ರಾಜನಹಳ್ಳಿ, ಬೆಂಗಳೂರು.
೫ನೆತ್ತರ ಬೀದಿಗುಂಟಶ್ರೀ ವನರಾಗ ಶರ್ಮಾ, ಯಲ್ಲಾಪುರ, ಉತ್ತರಕನ್ನಡ
೬ನಿಷ್ಕ್ರಮಣಶ್ರೀಮತಿ ಭಾಗ್ಯರೇಖಾ ದೇಶಪಾಂಡೆ, ಬೆಂಗಳೂರು.
೭ಅನಿಕೇತನಶ್ರೀ ಜಯರಾಮಾಚಾರಿ, ಬೆಂಗಳೂರು.
೮ಸಾಂಗತ್ಯಶ್ರೀಮತಿ ಶೈಲಜಾ ಗೊರನ್ಮನೆ, ಶಿರಸಿ
Facebook
X
WhatsApp
Print
Email