ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ನಾಡೋಜ ಎಸ್.ಆರ್. ರಾಮಸ್ವಾಮಿ ಅವರಿಗೆ ಸ್ನೇಹಾಭಿವಂದನ

‘ನಾಡೋಜ’ ಪುರಸ್ಕೃತ ಎಸ್.ಆರ್. ರಾಮಸ್ವಾಮಿ ಅವರಿಗೆ ರಾಷ್ಟ್ರೋತ್ಥಾನ ಪರಿಷತ್ “ಸ್ನೇಹಾಭಿವಂದನ” ಕಾರ್ಯಕ್ರಮವನ್ನು  ಮಾರ್ಚ್ ೨೭ರಂದು ಆಯೋಜಿಸಲಾಯಿತು. ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಹಾಗೂ ನಿಘಂಟು ತಜ್ಞ ನಾಡೋಜ ಶತಾಯುಷಿ ಪ್ರೊ| ಜಿ.ವೆಂಕಟಸುಬ್ಬಯ್ಯ ಅವರು ಉಪಸ್ಥಿತರಿದ್ದು, ಶುಭಹಾರೈಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಮೈ.ಚ. ಜಯದೇವ್, ಸಂಸ್ಕೃತ ಪ್ರಾಧ್ಯಾಪಕರು ಹಾಗೂ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ|| ಎಂ.ಕೆ. ಶ್ರೀಧರ್, ವಿಜಯವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕರಾಗಿರುವ ಸೂರ್ಯಪ್ರಕಾಶ್ ಪಂಡಿತ್,ಬೆಂಗಳೂರಿನ ಹಿರಿಯ ವಕೀಲರು ಮತ್ತು ತೆರಿಗೆ ಸಲಹೆಗಾರರೂ ವಿಶ್ವ ಹಿಂದು ಪರಿಷತ್ ನ ಹಿರಿಯ ಕಾರ್ಯಕರ್ತರಾದ ವೈ.ಕೆ. ರಾಘವೇಂದ್ರರಾವ್ ಅವರು ಶುಭಾಸಂಶನೆ ಮಾಡಿದರು.

ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಆರೆಸ್ಸೆಸ್‌ನ ಅಖಿಲ ಭಾರತ ಹಾಗೂ ಕರ್ನಾಟಕದ ಅನೇಕ ಪ್ರಚಾರಕರು, ಕಾರ್ಯಕರ್ತರು ಹಾಗೂ ರಾಮಸ್ವಾಮಿಗಳ ಅಭಿಮಾನಿ ಬಳಗ ಉಪಸ್ಥಿತರಿದ್ದರು.

Facebook
X
WhatsApp
Print
Email