ವಿಶ್ವ ಕುಟುಂಬ

ಇಪ್ಪತ್ತೆರಡು ದೇಶ ಓಡಾಡಿಕೊಂಡು ಇರೋ ನಮ್ಮ ಸಂಸಾರ ನಿಜಕ್ಕೂ ವಿಶ್ವಕುಟುಂಬ! ಸನಾ.. ಅಮ್ಮ ಬಂದಾಗ ನಾನೊಬ್ನೇ ಇದ್ದರೆ ಬಹಳ ಸಮಸ್ಯೆ. ಅದೂ.. ಅದೂ.. ಎಂದು ಅವನೂ ವಾಕ್ಯವನ್ನು ಪೂರ್ಣ ಮಾಡದಾದ. ಸಹನಾ ಹೇಳಿದಳು, ನೀನು ಈ ರಾಗ ತೆಗಿಬೇಡ.. ನನಗ್ಗೊತ್ತು, ನನ್ನ ಅಮ್ಮ ನಿನ್ನ ಅಮ್ಮ ಇಬ್ಬರೂ ಕೇಳೋದು ನಿಮಗೆ ಮಕ್ಕಳಾಗೋದು ಯಾವಾಗ? ಅಂತ.

ನಗರದಲ್ಲಿದ್ದರೂ ನಮಗೆ ಹಳ್ಳಿಯ ಸಂಬಂಧವಿದೆ ಎಂದು ಹೇಳಿಕೊಳ್ಳುವುದು ಎಲ್ಲರಿಗೂ ಇಷ್ಟ. ಹಾಗಾಗಿಯೇ ಇಪ್ಪತ್ತು-ಇಪ್ಪತ್ತೈದು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಿದರೂ ಅದಕ್ಕೆ ಸ್ಟಾರ್‌ವಿಲೇಜ್, ಬನಾನಾವಿಲೇಜ್, ಬಿಗ್‌ವಿಲೇಜ್ ಎಂದೆಲ್ಲ ಹೆಸರಿಟ್ಟುಕೊಳ್ಳುತ್ತಾರೆ. ಇನ್ನೂರು- ಮುನ್ನೂರು ಮನೆಗಳಿರುವ ಅಪಾರ್ಟ್‌ಮೆಂಟ್‌ನ ನೆಲಮಾಳಿಗೆಯೂ, ನೆಲಸ್ತರವೂ ಪಾರ್ಕಿಂಗ್ ಏರಿಯಾ ಆಗಿಬಿಡುತ್ತದೆ. ಪ್ರವೇಶಕ್ಕೂ ನಿರ್ಗಮನಕ್ಕೂ ಒಂದೇ ಗೇಟನ್ನು ಇಟ್ಟು ಅಲ್ಲಿ ಬಂದುಹೋಗುವವರನ್ನು ಗಮನಿಸುವ ಭದ್ರತೆಯ ವ್ಯವಸ್ಥೆಯೂ ಇರುತ್ತದೆ. ಪ್ರವೇಶದ್ವಾರದ ಪಕ್ಕದಲ್ಲಿ ಹೂವಿನ ಬಳ್ಳಿಯನ್ನೋ, ಹಸಿರಿನ ಗಿಡವನ್ನೋ ನೆಟ್ಟು ಪರಿಸರ ಪ್ರೀತಿಯ ಧ್ವಜ ಹಾರಿಸುತ್ತಾರೆ. ದ್ವಾರವನ್ನು ದಾಟಿ ಒಳ ಆವರಣಕ್ಕೆ ಬಂದರೆ ಎರಡಡಿ ಅಗಲದ ಉದ್ದ ಪಟ್ಟಿಯಲ್ಲಿ ಹೂವಿನ ಗಿಡಗಳನ್ನು ಬೆಳೆಸುತ್ತಾರೆ. ಮಳೆಗಾಲದ ಹೂಗಳು, ಚಳಿಗಾಲದ ಹೂಗಳು ಮತ್ತು ಬೇಸಿಗೆಯ ಹೂಗಳೆಂದು ವ?ದಲ್ಲಿ ಮೂರುಬಾರಿ ಬದಲಿಸಿ ಚೆನ್ನಾಗಿಯೇ ನಿರ್ವಹಣೆ ಮಾಡುತ್ತಾರೆ. ನೆಲಹಾಸಿನ ಯಾವ ಮೂಲೆಯಲ್ಲಾದರೂ ಚೌಕಾಕಾರದ, ಆಯತಾಕಾರದ ಸಣ್ಣ ಅವಕಾಶ ಸಿಕ್ಕಲ್ಲಿ ಹಸಿರು ಹುಲ್ಲಿನ ಅಂಕಣವನ್ನು ಸಿದ್ಧಗೊಳಿಸುತ್ತಾರೆ.

ಇನ್ನೂ ಹೆಚ್ಚು ಆಸಕ್ತಿ ಇರುವವರು ಅಪಾರ್ಟ್‌ಮೆಂಟ್‌ನ್ನು ಹೊತ್ತುನಿಂತ ಬೃಹತ್ ಸ್ತಂಭಗಳ ಬುಡದಲ್ಲಿ, ಮೆಟ್ಟಿಲಿನ ಎಡೆಯಲ್ಲಿ ನೆರಳಿಗೂ ಹೊಂದುವ ಗಿಡಗಳನ್ನು ಕುಂಡದಲ್ಲಿಟ್ಟು ಅಲಂಕರಿಸುತ್ತಾರೆ. ಮನೆಯೊಳಗಡೆ ಇರುವವರೂ ಬಾಲ್ಕನಿಯಲ್ಲಿ ಜೋಲುಜೋಳಿಗೆಯಂತಹ ಏಣಿಗಳನ್ನು ನಿಲ್ಲಿಸಿ ಕಿರುಕೈತೋಟವನ್ನು ನಿರ್ಮಿಸುತ್ತಾರೆ. ಕುಂಡದಲ್ಲಿ ತುಳಸೀ ಗಿಡ ಬೆಳೆಯುತ್ತಾರೆ. ಸೋಫಾ, ಕುರ್ಚಿಗಳ ನಡುವಿನ ಅಂತರವನ್ನೂ ನೆರಳನೆಮ್ಮದಿಯ ಗಿಡಗಳ ಕುಂಡದಿಂದ ಅಲಂಕರಿಸುತ್ತಾರೆ. ಹಸಿರಿನ ಪ್ರೀತಿ ನಮಗೂ ಇದೆ ಎಂದು ತಮಗೆ ತಾವೇ ಹೇಳಿಕೊಳ್ಳುತ್ತಾರೆ.

ಬೆಂಗಳೂರಿನ ವೈಟ್‌ಫೀಲ್ಡ್ ಪರಿಸರದಲ್ಲಿರುವ ಗ್ಲೋಬಲ್ ವಿಲೇಜ್ ಕೂಡಾ ಅಂತಹದೇ ಒಂದು ಅಪಾರ್ಟ್‌ಮೆಂಟ್. ಅದರ ಏಳನೇ ಅಂತಸ್ತಿನ ಎಂಟನೆಯ ಮನೆ ಅಂದರೆ ಮನೆ ನಂಬರ್-೭೦೮ ಸಹನಾ ಹೆಗಡೆ ಮತ್ತು ಮಹಾಬಲೇಶ್ವರ ಭಟ್ ದಂಪತಿಗಳದ್ದು. ಸಹನಾ ಮತ್ತು ಮಹಾಬಲೇಶ್ವರ ಇಬ್ಬರೂ ಟೆಕ್ಕಿಗಳು. ಸಹ್ಯಾದ್ರಿಯ ಸೆರಗಿನಿಂದ ಬೆಂಗಳೂರಿಗೆ ಬಂದ ಅವರಿಗೆ ಹಸಿರಿನ ಜ್ಞಾನ ಹೆಚ್ಚಾಗಿಯೇ ಇದೆ. ಕೈತೋಟದ ಗಿಡಗಳ ಆಹಾರ, ಔಷಧಗಳ ಜ್ಞಾನವೂ ಒಂದಷ್ಟಿದೆ. ಆದರೆ ದೇಶ-ವಿದೇಶಗಳನ್ನು ತಿರುಗುತ್ತಿರುವ ಅವರಿಗೆ ಬಾಲ್ಕನಿಯ ಗಿಡಗಳಿಗೆ ವಾರಕ್ಕೊಮ್ಮೆ ನೀರು ಕಾಣಿಸುವುದೂ ಸಾಧ್ಯವಿಲ್ಲದ ಮಾತು. ಮನೆ ಕೆಲಸದ ರಾಧೆ ಅವರಿಲ್ಲದಾಗಲೂ ಬಂದು ನೀರು ಹಾಕುತ್ತಾಳೆ. ಎಲ್ಲ ಗಿಡಗಳನ್ನೂ ಮಾತಾಡಿಸಿ ಆರೈಕೆ ಮಾಡುತ್ತಾಳೆ. ದಂಪತಿಗಳಿಬ್ಬರೂ ಮನೆಯಲ್ಲಿದ್ದಾಗ ಬಾಲ್ಕನಿಯ ಕೈತೋಟದ ಗಿಡಗಳ ಮೇಲೆ ಕೈಯಾಡಿಸಿ ಊರಿನ ಹಸಿರನ್ನು ನೆನೆಯುತ್ತಾರೆ. ಸಹನಾ ತನ್ನಮ್ಮನ ಕೈತೋಟದ ತರಕಾರಿಗಳ ಬಗ್ಗೆ ಹೇಳಿದರೆ, ಮಹಾಬಲೇಶ್ವರ ತನ್ನ ಅಮ್ಮನ ಹೂಗಳ ಪ್ರೀತಿಯನ್ನು ಬಣ್ಣಿಸುತ್ತಾನೆ. ಮನೆಯ ಕಸವನ್ನು ವಿಂಗಡಿಸುವಾಗ ಹಸಿಕಸ, ಒಣಕಸ ಎಂದು ಬೇರೆ ಮಾಡಬೇಕು. ಈಗೀಗ ಕಾರ್ಪೋರೇಶನ್ ಕೂಡ ಜಾಗೃತವಾಗಿದೆ. ಕಸ ವಿಲೇವಾರಿ ಸರಿಯಾಗಿ ಆಗುತ್ತಿದೆ ಎಂದು ಸಹನಾ ಹೇಳಿದಾಗ, ಊರಲ್ಲಿ ಕಸ ವಿಲೇವಾರಿ ಎಷ್ಟು ಸುಲಭ ಎಂದು ಮಹಾಬಲೇಶ್ವರ ವಿವರಿಸಿದ: ಪ್ಲಾಸ್ಟಿಕ್ ಎನ್ನುವ ಪದಾರ್ಥವೊಂದು ಬರದಿದ್ದರೆ ಊರಿನಲ್ಲಿ ಕಸ ಎನ್ನುವ ಪದಾರ್ಥವೇ ಇರುವುದಿಲ್ಲ. ಬಳಸಿ ಬಿಟ್ಟಿದ್ದೆಲ್ಲ ಗೊಬ್ಬರವಾಗುವ, ಬಿದ್ದ ಬೀಜವೆಲ್ಲ ಬೆಳೆಯಾಗುವ, ನೆಲಕ್ಕೆ ಬಿದ್ದುದೆಲ್ಲ ಮಣ್ಣಾಗುವ ಕ್ಷೇತ್ರಕ್ಕೆ ಹಳ್ಳಿ ಎಂದು ಹೆಸರು. ಅಷ್ಟೇ ಅಲ್ಲ ಹಳ್ಳಿಯ ಪರಿಸರವೆಂದರೆ ಪರಿಚಿತವಾದ ವಲಯವಾದ್ದರಿಂದ ಸಂಬಂಧಗಳೆಲ್ಲ ಸಂಸಾರವೇ ಆಗುತ್ತವೆ. ಅಲ್ಲಿನ ಮೌಲ್ಯ ವ್ಯವಸ್ಥೆಯೇ ಹಾಗಿದೆ. ಈ ಮಾತನ್ನು ಕೇಳುತ್ತಿರುವಾಗ ಅವರ ಅಪಾರ್ಟ್‌ಮೆಂಟ್‌ನ ಪರಿಚಿತ- ಅಪರಿಚಿತ ವ್ಯವಹಾರಗಳೆಲ್ಲ ಸಹನಾಳ ಕಣ್ಣಮುಂದೆ ಬಂದುಹೋದವು. ಹೌದಲ್ಲ, ಎದುರುಮನೆಗೆ ಇತ್ತೀಚೆಗೆ ಬಂದ ಜೋಡಿಯದು ಸಹವಾಸವೋ, ಸಂಸಾರವೋ ಗೊತ್ತಿಲ್ಲವಲ್ಲ! ಕೇಳುವುದು ನಗರದಲ್ಲಿ ಶಿಷ್ಟಾಚಾರವಲ್ಲ. ಪರಿಚಿತರಾದರೂ ಅಪರಿಚಿತರೇ! ಎನ್ನುವ ವಿಸ್ಮಯ ಅವಳನ್ನು ಕಾಡಿತು.

ಕೈತುಂಬ ದುಡಿಯುವ ನಮಗೆ ಬೆಂಗಳೂರಿನ ಹತ್ತಿರ ಹೊಲ ಖರೀದಿಸಿ, ಅದರೊಳಗೊಂದು ತೋಟದಮನೆ (ಫಾರ್ಮ್‌ಹೌಸ್) ಕಟ್ಟುವ ಸಾಮರ್ಥ್ಯವಿಲ್ಲವೇ ಎಂದು ಅವರಿಬ್ಬರೂ ಕೆಲವು ಬಾರಿ ಆಲೋಚಿಸಿದ್ದಾರೆ. ಮುಂದಿನ ಹತ್ತು ವರ್ಷಗಳ ದುಡಿಮೆಯನ್ನು ಮನಸಿನಲ್ಲಿಯೇ ಎಣಿಸಿ ಕನಸಿನ ತೋಟದಮನೆಯನ್ನು ಕಲ್ಪಿಸಿದ್ದೂ ಇದೆ. ಮನೆಯಲ್ಲಿರುವುದಕ್ಕೇ ಸಮಯವಿಲ್ಲ ಇನ್ನು ತೋಟದ ಮನೆಯಲ್ಲಿರುವುದು ಯಾವಾಗ! ಎಂದು ನಕ್ಕು ಸುಮ್ಮನಾಗಿದ್ದಾರೆ. ಆಗೊಮ್ಮೆ ಹೊಲ- ಮನೆ ಮಾಡಿದರೂ ಮನೆಕೆಲಸದ ರಾಧೆಯಂತೆ ತೋಟದ ಕೆಲಸಕ್ಕೊಬ್ಬ ರಾಮನನ್ನು ಹುಡುಕಬೇಕಲ್ಲ! ಈಗ ಮನೆಗೆ ಪ್ರತಿದಿನ ಬರುವವಳು ರಾಧೆ, ನಾವು ತಿಂಗಳಲ್ಲಿ ಎಂಟು-ಹತ್ತು ದಿನ ಇರುವವರು. ಮನೆ ನಮ್ಮ ಹೆಸರಿಗಿದೆ ಆದರೆ ರಾಧೆಯ ಕಾಳಜಿಯಲ್ಲಿದೆ. ಮನೆ ಯಾರ ಸುಪರ್ದಿಯಲ್ಲಿದೆ ಎಂದು ಕೇಳಿದರೆ ಹೇಳುವುದೇ ಕ?! ಹೊಲದ ಕಥೆಯೂ ಅದೇ ಆಗುತ್ತದಲ್ಲ. ಆಸ್ತಿ ಎಂದರೆ ಹೊಲ ಮತ್ತು ಮನೆ ಎನ್ನುವುದು ಹಳ್ಳಿಯಲ್ಲಿ ಬೆಳೆದ ನಮಗೆ ಜೀನ್ಸ್‌ನಲ್ಲಿಯೇ ಬಂದಿದೆ ಎಂದು ನಕ್ಕು ಹಗುರಾಗಿದ್ದಾರೆ.

ಇಂದು ಅವರಿಬ್ಬರೂ ಮನೆಯಲ್ಲಿದ್ದಾರೆ. ಮೊಬೈಲ್‌ನಲ್ಲಿ ಆನ್‌ಲೈನ್ ಮೀಟಿಂಗ್‌ನಲ್ಲಿ ಭಾಗವಹಿಸುತ್ತಲೇ ಅಡುಗೆ ಮಾಡುತ್ತಿದ್ದಾಳೆ ಸಹನಾ. ಅಲ್ಲಿಯೇ ಪಕ್ಕದಲ್ಲಿ ಟೇಬಲ್ ಮೇಲೆ ಲ್ಯಾಪ್‌ಟಾಪ್‌ನಲ್ಲಿ ಮುಳುಗಿದ್ದಾನೆ, ಮಹಾಬಲೇಶ್ವರ. ಸಹನಾಳ ಕಿವಿಯಲ್ಲಿ ಈಯರ್ ಫೋನ್, ಮಹಾಬಲೇಶ್ವರನ ತಲೆಯ ಮೇಲೆ ಹೆಡ್‌ಫೋನ್. ಮೀಟಿಂಗ್ ಅಟೆಂಡ್ ಮಾಡುತ್ತಲೇ ಸಹನಾ ಅಡುಗೆಕಟ್ಟೆಯ ಮೇಲೆ ತರಕಾರಿ ಕೊಚ್ಚುತ್ತಿದ್ದಾಳೆ. ಮಧ್ಯೆಮಧ್ಯೆ ಯಸ್, ನೋ, ಡೆಫಿನೆಟ್ಲಿ, ಮೇಬಿ ಮುಂತಾದ ಶಬ್ದಗಳನ್ನು ಹೇಳುತ್ತಿದ್ದಾಳೆ. ಆನ್‌ಲೈನ್ ಮೀಟಿಂಗ್‌ನಲ್ಲಿ ಇದ್ದಾಗ ತನ್ನನ್ನು ಕರೆಯಬೇಡ, ದೊಡ್ಡದಾಗಿ ಮಾತಾಡಬೇಡ ಎಂದು ಸಹನಾ ಗಂಡನನ್ನು ಎಚ್ಚರಿಸಿದ್ದರೂ ಮಹಾಬಲೇಶ್ವರ ಅದನ್ನೆಲ್ಲ ಮರೆತು ಆಕೆಯನ್ನು ಕರೆದು, ಮಾತಾಡಿಸಿ ಬೈಸಿಕೊಳ್ಳುವುದು ಇದ್ದೇ ಇತ್ತು. ಇಂದೂ ಅದೇ ಆಯಿತು. ಆತ ಸಹನಾಳನ್ನು ಪ್ರೀತಿಯಿಂದ ಸನಾ ಎಂದು ಕರೆಯುತ್ತಾನೆ. ‘ಸನಾ, ಈ ವೀಕೆಂಡಲ್ಲಿ ಊರಿಗೆ ಹೋಗೋದು ಅಂತಾಗಿತ್ತು. ನೀನು ಫ್ರೀ ಇದ್ದೀಯಾ?’ ಮಾಬ್ಲು ದೊಡ್ಡದಾಗಿ ಕೇಳುತ್ತಾನೆ. ಒಂದು ನಿಮಿಷ ಸುಮ್ನಿರು ಅಂತ ಅವಳು ಸನ್ನೆ ಮಾಡುತ್ತಾಳೆ, ಮಹಾಬಲೇಶ್ವರ ಕುರ್ಚಿಯಿಂದೆದ್ದು ನೀರು ಕುಡಿಯುವುದಕ್ಕೆ ಹೋಗಿ ತಟ್ಟೆ ಕೆಡವಿ ಸದ್ದು ಮಾಡುತ್ತಾನೆ, ಆ ಸದ್ದಿಗೆ ಸಹನಾ ಸಿಟ್ಟಾಗಿ ಕಣ್ಣಿನಲ್ಲಿ ಗದರಿ, ಕೈ ಎತ್ತುತ್ತಾಳೆ, ಸಾರಿ ಕೇಳಿ ಆತ ಟೇಬಲ್‌ಗೆ ಬರುವುದರೊಳಗೆ ಅವಳ ಮೀಟಿಂಗ್ ಮುಗಿಯುತ್ತದೆ. ಈಗ ಸಹನಾಳ ಸಿಟ್ಟು ಬೈಗುಳವಾಗಿ ಅಭಿವ್ಯಕ್ತಿ ಪಡೆಯುತ್ತದೆ. ಅಂದಹಾಗೆ ಅವಳು ಮಹಾಬಲೇಶ್ವರನನ್ನು ಬ್ಲೂ ಎಂದು ಕರೆಯುತ್ತಾಳೆ. ‘ಬ್ಲೂ.. ನಿನಗೆ? ಸಾರೆ ಹೇಳಿದೇನೆ ನಾನು ಮೀಟಿಂಗ್‌ನಲ್ಲಿದ್ದಾಗ ನನಗೇನೂ ಕೇಳಬೇಡ ಅಂತ. ಅಲ್ಲದೇ ಆ ಹೆಡ್‌ಫೋನ್ ಹಾಕ್ಕೊಂಡಾಗ ಎಷ್ಟು ದೊಡ್ಡದಾಗಿ ಮಾತಾಡ್ತೀಯಾ. ನಿನ್ನ ಮಾತು ನಿನಗೆ ಕೇಳಬೇಕಲ್ಲ! ನೀನು ಸನಾ ಅಂತ ಕರೆಯೋ ಜೋರಿಗೆ ಎದುರಿನ ಮನೆಯವರು ಕಿಡಕಿ ತೆಗೆದು ನೋಡಿದರು. ಇದು ಬೆಂಗಳೂರು, ಅಪಾರ್ಟ್‌ಮೆಂಟ್ ಅನ್ನೋದು ನೆನಪಿರಬೇಕು.’

‘ಅವರು ಮೊನ್ನೆಮೊನ್ನೆ ಸುಮಾತ್ರಾದಿಂದ ಬಂದಿರೋ ಮುಸ್ಲಿಂ ಸಂಸಾರ. ಸನಾ ಅಂದಾಗ ನಾವೂ ಸಾಬ್ರೇ ಇರಬಹುದಾ ಅಂತ ಅಂದುಕೊಂಡರೋ ಏನೋ! ಮಹಾಬಲೇಶ್ವರ ಅಂತಿದ್ದ ನನ್ನ ಹೆಸರು ಮನೆಯಲ್ಲಿ ಮಾಬ್ಲು ಆಗಿತ್ತು, ನಿನ್ನ ಬಾಯಲ್ಲಿ ಬ್ಲೂ ಆಗಿದೆ. ಎಡಗಡೆ ಮನೆಯವರು ಸ್ಪೇನ್‌ನಿಂದ ಬಂದವರು, ಅವರು ಬ್ಲೂ ಅಂದಾಗ ನಾವೂ ಕ್ರಿಶ್ಚಿಯನ್ ಇರಬಹುದಾ ಅಂದಕೊಂಡಿರಬಹುದು’ ಎಂದು ಮಹಾಬಲ ದೊಡ್ಡದಾಗಿ ಮಾತಾಡಿ ಹಹಹಹ.. ನಗುತ್ತಾನೆ.

ಸಹನಾ ಅವನ ಹೆಡ್‌ಫೋನ್ ಕಳಚಿಟ್ಟು, ಈಗ ಮಾತಾಡು. ನೀನು ಮಾತಾಡಿದ್ದು ಇಡೀ ಅಪಾರ್ಟ್‌ಮೆಂಟಗೇ ಕೇಳ್ತದೆ. ಈ ಕಡೆ ಮುಸ್ಲಿಮರು, ಈ ಕಡೆ ಕ್ರಿಶ್ಚಿಯನ್ನರು. ನಾವು ಹಿಂದುಗಳು. ಈ ಅಪಾರ್ಟಮೆಂಟ್‌ನಲ್ಲಿ ಅದೆ? ದೇಶದ ಜನ ಇದ್ದಾರೋ ಏನೋ! ಈ ಅಪಾರ್ಟ್‌ಮೆಂಟೇ ಒಂದು ಜಗತ್ತು. ಆದರೆ, ಪ್ರತಿ ಹೆಸರೂ ಕೂಡ ಒಂದು ಧರ್ಮವನ್ನು ಹೇಳೋದಿದೆಯಲ್ಲ ಇದು ಆಶ್ಚರ್ಯ! ಎನ್ನುತ್ತಿದ್ದಾಗ ಮಾಬ್ಲೂ, ಗಡಬಡೆಯಲ್ಲಿ ಹೋಲ್ಡಾಲ್ ತೆಗೆದು ಬಟ್ಟೆಗಳನ್ನೆಲ್ಲ ಲೆಕ್ಕ ಹಾಕಲು ಆರಂಭಿಸುತ್ತಾನೆ. “ನಾನು ನಾಡಿದ್ದು ಸಂಜೆ ಫ್ಲೈಟಿಗೆ ಹೂಸ್ಟನ್‌ಗೆ ಹೋಗಬೇಕು…” ಸಂಗಡ ಮಾತು ಮುಂದುವರಿಯುತ್ತದೆ. “ಅಷ್ಟೇ ಅಲ್ಲ, ಸ್ಪೇನ್‌ನಲ್ಲಿ ನೂರರಲ್ಲಿ ಮೂವತ್ತು ಜನ ನಾವು ನಾಸ್ತಿಕರು ನಮಗೆ ಚರ್ಚು ಮಸೀದಿ ಏನೂ ಬೇಡ ಅಂತ ಹೇಳ್ತಿದ್ದಾರಂತೆ. ಅವರಿಗೆ ಅಂತ ಹೊಸ ಹೆಸರು ಹುಡುಕೋಕಾಗತ್ತ? ಹಳೆ ಹೆಸರನಲ್ಲೇ ಒಂದನ್ನ ಇಟ್ಕೋಬೇಕು. ಮತ-ಧರ್ಮದ ಸಹವಾಸನೇ ಬೇಡ ಅಂತ ಟೇಬಲ್ ಕುರ್ಚಿ ಸೊಯ್ಲ್ ಏರ್ ಅಂತೆಲ್ಲ ಹೆಸರಿಡಲಿಕ್ಕೆ ಆಗ್ತದೆಯೇ!” ಎಂದು ಕಿಚಾಯಿಸಿದ. ಗಂಭೀರ ವಿಷಯವನ್ನು ಹಾಸ್ಯ ಮಾಡಿದನಲ್ಲ ಎನ್ನುವ ಸಣ್ಣ ಅಸಮಾಧಾನ ಸಹನಾ ಮುಖದಲ್ಲಿ ಮೂಡಿ ಮಾಯವಾಯಿತು. ತನ್ನ ಕೆಲಸವನ್ನು ಬಿಟ್ಟರೆ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದ ಗಂಡನ ಸ್ವಭಾವ ಗೊತ್ತಿರುವ ಅವಳು ಮರುಕ್ಷಣದಲ್ಲಿಯೇ ಸುಧಾರಿಸಿಕೊಂಡು ಹೇಳಿದಳು: “ನನ್ನ ಸಮಸ್ಯೆ ಅದಲ್ಲ ಬ್ಲೂ, ಸೆಕೆಂಡ್ ಫ್ಲೋರ್‌ನಲ್ಲಿ ಒಬ್ಬ ಡಾಕ್ಟರ್ ಇದ್ನಲ್ಲ, ಅವನ ಹೆಸರು ಅಕ್ರಮ್, ಅರ್ಫಾನ್ ಎಂತದೋ, ಅವನ್ನ ಪೊಲೀಸರು ಹಿಡಕೊಂಡು ಹೋಗಿದಾರೆ. ಅವನಿಗೆ ಅದಾವುದೋ ಭಯೋತ್ಪಾದಕ ಸಂಘಟನೆ ಸಂಗಡ ಸಂಬಂಧ ಇದೆಯಂತೆ. ಜಗತ್ತೇ ಒಂದು ಮನೆ, ಗ್ಲೋಬಲ್ ವಿಲೇಜ್ ಅಂತ ಕರೆಯೋದು ಸುಲಭ ಆದರೆ ವ್ಯವಹಾರದಲ್ಲಿ ಎಚ್ಚರಿಕೆ ಬೇಕಲ್ಲ! ನಾಳೆ ನಮ್ಮನ್ನೆಲ್ಲ ಕರೆದು ವಿಚಾರಣೆ ಶುರುಮಾಡಿದರೆ?” ಈಗಲೂ ಮಹಾಬಲ ತನ್ನ ಮಾಮೂಲಿ ಶೈಲಿಯಲ್ಲಿ “ಭಯೋತ್ಪಾದನೆ ಎನ್ನುವುದು ಜಾಗತಿಕ ಉದ್ಯಮ. ಇಡೀ ಜಗತ್ತನ್ನು ಒಂದೇ ರಿಲಿಜನ್ ಅಡಿಯಲ್ಲಿ ತರಬೇಕು ಅನ್ನೋ ಪ್ರಯತ್ನ” ಅಂದ. ಅಷ್ಟರಲ್ಲಿ ಪಕ್ಕದ ಮನೆಯಿಂದ ಮಕ್ಕಳ ಗದ್ದಲ, ಸಣ್ಣ ಶಿಶು ಅತ್ತ ಧ್ವನಿ ಕೇಳಿ ಬಂತು. “ಓಹೋ ಅವರ ಮನೆಯಲ್ಲಿ ಗದ್ದಲ ಮಾಡ್ತಾ ಇದ್ದಾರೆ. ಯಾರೋ ಗೆಸ್ಟ್ ಬಂದಿರಬೇಕು, ಅಲ್ಲಾ ಫಂಕ್ಶನ್…” ಅಂತ ತಲೆ ಕೆರೆದುಕೊಂಡ. ಮನೆಯಲ್ಲಿ ಇಬ್ಬರೇ ಇರುವುದು, ಅನೇಕ ದಿನ ಒಬ್ಬರೇ ಇರುವುದು ರೂಢಿಯಾಗಿದ್ದರಿಂದ ಸಣ್ಣ ಗದ್ದಲವೂ ಅವರನ್ನು ಕಾಡುತ್ತಿತ್ತು. “ಗೆಸ್ಟೂ ಇಲ್ಲ, ಫಂಕ್ಶನ್ನೂ ಇಲ್ಲ. ಆ ಮನೇಲಿ ಮೂರುಜನ ಮಕ್ಕಳಿದ್ದಾರೆ. ಗಂಡ ನೋಡಿದರೆ ಐಟಿ. ಹೆಂಡತಿನೂ ಪೋಸ್ಟ್ ಗ್ರಾಜ್ಯೂಯೇಟ್ ಅಂತೆ. ಮದುವೆ ಆದಮೇಲೆ ಮನೇಲೇ ಇದ್ದು ಮೂರು ಹಡದಿದಾಳೆ. ಗದ್ದಲ ಆಗದೇ ಇರತ್ತ! ಈಗ ನಾಲ್ಕನೇದ್ದು ತಯಾರಿ ನಡೆದಿರಬಹುದು” ಎಂದು ಅರ್ಧ ಹಾಸ್ಯದಲ್ಲಿ ಇನ್ನರ್ಧ ಬೇಸರದಲ್ಲಿ ಹೇಳಿದಳು.

ಮೊಬೈಲ್‌ನಲ್ಲಿ ಆಫೀಸಿನ ನಂಬರ್ ರಿಂಗಣಿಸಿದಾಗ ತಕ್ಷಣ ಉತ್ತರಿಸಿದ ಸಹನಾ ಎತ್ತರದ ಧ್ವನಿಯಲ್ಲಿ “ಬ್ಲೂ.. ನಾನು ಮೂಂದಿನವಾರ ಮ್ಯೂನಿಚ್‌ಗೆ ಹೋಗಬೇಕಂತೆ. ಕಂಪೆನಿ ಮೀಟಿಂಗ್ ಅಟೆಂಡ್ ಮಾಡಬೇಕು. ಅಮ್ಮ ನಮ್ಮನೆಗೆ ಬರ್ತೇನೆ ಹೇಳಿದ್ಲು ಅವಳಿಗೆ ಬೇಡ ಅನ್ನಬೇಕು. ಹೇಗೆ ಹೇಳಲಿ? ನೀನು ಅಷ್ಟರೊಳಗೆ ಬಂದಿರ್ತಿಯಾ? ಪ್ಲೀಸ್…” ಎಂದು ಕೇಳುತ್ತ, ಒಂದು ಬಟ್ಟಲಿನಲ್ಲಿ ಹೆಚ್ಚಿದ ಸವತೆಕಾಯಿ ಹಾಕಿಕೊಂಡು ಅವನ ಟೇಬಲ್‌ಗೆ ಬಂದು ಕುಳಿತಳು. ಮಹಾಬಲ ಸುಮ್ಮನೆ ಗಮನಿಸುತ್ತಿದ್ದ. ಅವನಿಗೆ ಸೌತೆಕಾಯಿಯ ಚಕ್ರಾಕಾರದ ಹೋಳುಗಳನ್ನು ಕಂಡಾಗಲೆಲ್ಲ ಹೈಸ್ಕೂಲಿನ ಗುರುಗಳಾಗಿದ್ದ ಸುಬ್ರಾಯಭಟ್ಟರ ಮಾತು ಮತ್ತೆಮತ್ತೆ ನೆನಪಾಗುತ್ತದೆ. ‘ಈ ಜೀವನಚಕ್ರ ಇದ್ದ ಹಾಗೆ, ಎಲ್ಲಿಂದ ಹೊರಟಿದೆಯೋ ಅಲ್ಲಿಗೇ ಬಂದು ತಲಪುತ್ತದೆ. ಒಮ್ಮೆ ಸುಖ ಇನ್ನೊಮ್ಮೆ ದುಃಖ ಬರುತ್ತಲೇ ಇರುತ್ತದೆ.’ ಗಂಡ ತನ್ನದೇ ಆಲೋಚನೆಯಲ್ಲಿ ಕಳೆದುಹೋಗಿದ್ದಾನೆ ಎಂದುಕೊಂಡು ಸಹನಾ ಬ್ಲೂ… ಏನು ಯೋಚನೆ ಮಾಡ್ತಾ ಇದ್ದೀಯಾ? ಸೌತೆಕಾಯಿ ತಿನ್ನಲಿಕ್ಕೇ ಇಟ್ಟಿದ್ದು. ನನಗೆ ಇವತ್ತು ಅಡುಗೆ ಬೇಯಿಸಲಿಕ್ಕೆ ಟೈಮ್ ಇಲ್ಲ, ರೊಟ್ಟಿ ಪಲ್ಲೆ ಕಟ್ಟಿಸಿಕೊಂಡು ಬಾ ಅಂತ ಕೆಲಸಕ್ಕೆ ಬರ್ತಾಳಲ್ಲ ರಾಧೆ ಅವಳಿಗೆ ಹೇಳಿದ್ದೆ. ಅವಳ ಪತ್ತೆನೇ ಇಲ್ಲ! ನಮಗೆ ಒತ್ತಡ ಇದ್ದಾಗಲೇ ಅವರಿಗೂ ಸಮಸ್ಯೆ. ಬ್ಲೂ. ಅಮ್ಮ ಬಂದಾಗ… ಎಂದು ರಾಗ ಎಳೆದಳು. ತಕ್ಷಣ ಎಚ್ಚರಗೊಂಡ ಮಹಾಬಲ ಇಪ್ಪತ್ತೆರಡು ದೇಶ ಓಡಾಡಿಕೊಂಡು ಇರೋ ನಮ್ಮ ಸಂಸಾರ ನಿಜಕ್ಕೂ ವಿಶ್ವಕುಟುಂಬ! ಸನಾ.. ಅಮ್ಮ ಬಂದಾಗ ನಾನೊಬ್ನೇ ಇದ್ದರೆ ಬಹಳ ಸಮಸ್ಯೆ. ಅದೂ.. ಅದೂ.. ಎಂದು ಅವನೂ ವಾಕ್ಯವನ್ನು ಪೂರ್ಣ ಮಾಡದಾದ. ಸಹನಾ ಹೇಳಿದಳು, ನೀನು ಈ ರಾಗ ತೆಗಿಬೇಡ.. ನನಗ್ಗೊತ್ತು, ನನ್ನ ಅಮ್ಮ ನಿನ್ನ ಅಮ್ಮ ಇಬ್ಬರೂ ಕೇಳೋದು “ನಿಮಗೆ ಮಕ್ಕಳಾಗೋದು ಯಾವಾಗ?” ಅಂತ.

ಮಾಬ್ಲೂ: ಅವರು ಕೇಳೋದೂ ತಪ್ಪಲ್ಲ. ಆದರೆ ನಮ್ಮತ್ರ ಸರಿ ಉತ್ತರ ಇರಬೇಕು ಅ?..

ಸಹನಾ: ಅಂದರೆ, ನೀನು ಹೇಳೋದು ನಾನು ಮನಸ್ಸು ಮಾಡಬೇಕು ಅಂತ. ನನಗ್ಗೊತ್ತು ನಿಮಗೆ ಗಂಡಸರಿಗೆ ಹೆಣ್ಣು ಇರೋದೇ ಮಕ್ಕಳನ್ನು ಹೆರಲಿಕ್ಕೇ ಅಂತ ಇದೆ. ನಾನು ಈ ವ? ಚೆನ್ನಾಗಿ ಪರ್‌ಫಾರ್ಮೆನ್ಸ್ ತೋರಿಸಿದರೆ ಮುಂದಿನ ವ? ಎಂ.ಡಿ. ಆಗಬಹುದು. ಈಗ ನಾನು ಮಕ್ಕಳು ಬೇಕು ಅಂತಂದರೆ ಮೂರು ನಾಲ್ಕು ವ? ಮನೇಲಿರಬೇಕು. ನನ್ನ ಕರಿಯರ್ ಮುಗಿದ ಹಾಗೇನೇ.

“ಎಂ.ಡಿ. ಆದಮೇಲೆ ನಿನಗೆ ಟೈಮ್ ಸಿಗಬಹುದಾ..!” ಎಂದು ಕೇಳಿದ ಗಂಡನ ವ್ಯಂಗ್ಯಕ್ಕೆ ಕೆರಳಿದ ಸಹನಾ ಎತ್ತರದ ಧ್ವನಿಯಲ್ಲಿ; “ಬ್ಲೂ, ಇಟ್ ಈಸ್ ಟೂಮಚ್. ನೀನು ಇ? ಕ್ರೂರಿ ಆಗ್ತಿಯಾ ಅಂದುಕೊಂಡಿರಲಿಲ್ಲ. ನೀನು ಎಲ್ಲ ದೇಶ ಓಡಾಡಿಕೊಂಡು ಆರಾಮಾಗಿರು. ನಾನು ತೊಟ್ಟಿಲು ತೂಗತಾ ಮನೇಲಿರಬೇಕು! ಮಕ್ಕಳನ್ನು ಯಾರೂ ಹಡಿಬಹುದು. ನನಗೆ ಒಂದು ಕರಿಯರ್ ಇದೆ. ನಾನು ಗ್ಲೋಬಲ್ ವಿಲೇಜ್ ಕಂಪೆನಿಯ ಎಂ.ಡಿ. ಆಗೋದು ಸಣ್ಣ ಸಂಗತಿ ಅಲ್ಲ.”

ಮಾಬ್ಲೂ: “ಕೂಲ್ ಕೂಲ್.. ಜಗತ್ತೇ ನಮ್ಮ ಮನೆ, ನಮಗೆ ಮನೆಯೇ ಜಗತ್ತಲ್ಲ. ಎಲ್ಲ ಹೆಸರಿನ ಹಿಂದೂ ಒಂದು ಮತ-ಧರ್ಮ ಇರೋದು ಆಶ್ಚರ್ಯ ಅಂದೆಯಲ್ಲ.. ಮೊಹಮ್ಮದನ ಹೆಂಡತಿ ಹಡೆಯೋದಕ್ಕೆ, ಮಾಬ್ಲೂನ ಹೆಂಡತಿ ದುಡಿಯೋದಕ್ಕೆ ಅಂತ ಆಗಬಾರದಲ್ಲ..!”

ಸಹನಾ: “ನೀನು ‘ಸನಾ’ ಅಂತ ನನ್ನನ್ನ ಕರೆಯೋದು ಇದಕ್ಕೇನಾ? ನಮ್ಮ ಮನೆಯಲ್ಲಿ ಮಕ್ಕಳಿಲ್ಲ ಅಂದರೆ ಈ ಜಗತ್ತಿಗೆ ಜನ ಕಡಮೆಯಾಗಿದಾರೆ ಅಂತಲ್ಲ. ಸಿಟ್ಟಿನಲ್ಲಿ ಕೈಯಲ್ಲಿರೋ ಬಟ್ಟಲನ್ನ ಒಗೆದು, ನೆಲ ಒದ್ದು ಮಾತನ್ನು ಮುಂದುವರಿಸಿದಳು. ನಿಮಗೆಲ್ಲ ನಾನು ದುಡಿಯೋದೇ ಇ? ಇಲ್ಲ. ನಾನು ಹೆಣ್ಣು ಅನ್ನೋದನ್ನ ಹಡದೇ ತೋರಿಸಬೇಕಿಲ್ಲ. ನೀನು ಗಂಡಸು ಅಂತ ಜಗತ್ತಿಗೆ ಹೇಳಬೇಕಾಗಿದೆಯಾ ನಿನಗೆ! ನೀವೆಲ್ಲ ಏನು ಬೇಕಾದರೂ ಮಾಡಿಕೊಳ್ಳಿ. ನಾನು ಮ್ಯೂನಿಚ್‌ಗೆ ಹೋದವಳು ಅಲ್ಲೇ ಉಳಿತೇನೆ.” ತನ್ನ ಸಿಟ್ಟಿಗೆ ತಾನೇ ಕರಗಿ ಕುರ್ಚಿಯಲ್ಲಿ ಒರಗಿ ಕುಳಿತಳು. ತನ್ನ ಮೇಲೇ ತಾನು ಸಿಟ್ಟು ಮಾಡುತ್ತಿರುವುದು ಎಂದು ಅವಳಿಗೆ ಗೊತ್ತು. ಮದುವೆಯಲ್ಲಿ ಹೆಣ್ಣೊಪ್ಪಿಸುವ ಸಂದರ್ಭದಲ್ಲಿ ‘ಸತ್ಸಂತಾನವೇ ದಾಂಪತ್ಯದ ಫಲ’ ಎಂದು ಒತ್ತಿ ಹೇಳಿದ ಪಂಡಿತರ ಮಾತು ಅವಳಿಗೆ ನೆನಪಿದೆ. ಆದರೆ ‘ಮಗಾ, ಹಳ್ಳಿಲಿದ್ದರೆ ಅಡುಗೆ ಮಾಡದು, ಗಂಡ-ಮಕ್ಕಳನ್ನ ಸಾಕದು ಇದರಲ್ಲೇ ಬದುಕು ಕಳದೋಗ್ತು. ನೀ ಚೊಲೋ ಕಲಿ, ನೌಕರಿ ಮಾಡು. ಎಂಗಳ ಕತೆ ನೋಡು, ಐದು ರೂಪಾಯಿ ಬೇಕು ಅಂದರೂ ಗಂಡನೆದುರಿಗೆ ಕೈ ಒಡ್ಡವು. ಹೆಂಗಸರಿಗೆ ಹಗಲೂ ರಾತ್ರಿ ಕೆಲಸಾಗ್ತು. ಆದರೆ ನಾವು ದುಡಿಯವಲ್ಲ ಹೇಳೇ ಹೇಳ್ತ’ – ಎಂದ ಅಮ್ಮನ ಮಾತು ಕಿವಿಯಲ್ಲಿಯೇ ಇತ್ತು. ಅದೇ ಹಠದಿಂದ ಇಂಜನಿಯರಿಂಗ್ ಕಲಿತು ನೌಕರಿ ಹಿಡಿದಿದ್ದಾಳೆ. ಈಗ ನೌಕರಿಯೇ ತನ್ನ ವ್ಯಕ್ತಿತ್ವ ಅನ್ನಿಸಿದೆ. ಬಹುರಾಷ್ಟ್ರೀಯ ಕಂಪೆನಿಯ ಎಂ.ಡಿ. ಆಗಬೇಕೆಂದರೆ ದೈಹಿಕ ಸಾಮರ್ಥ್ಯವನ್ನೂ ಮೈಯ ಮಾಟವನ್ನೂ ಚೆನ್ನಾಗಿಯೇ ಇಟ್ಟುಕೊಳ್ಳಬೇಕೆಂಬ ಸೂಕ್ಷ್ಮವೂ ಅವಳಿಗೆ ಗೊತ್ತಿದೆ. ಹೆಣ್ಣೊಬ್ಬಳು ಯಾವ ಸ್ಥಾನದಲ್ಲಿದ್ದರೂ ಅವಳು ನೋಡುವವರ ಕಣ್ಣಿಗೆ ಹಿತವಾಗಿರಬೇಕೆಂಬ ಕಟುಸತ್ಯ ಅವಳಿಗೆ ನಿತ್ಯ ಅನುಭವದ ಮಾತು. ಮನದ ತಾಕಲಾಟವನ್ನು ತಡೆಯಲಾಗದೆ ಗಂಡನಿಗೆ ಹೇಳಿದಳು “ಬ್ಲೂ ನನಗೂ ತಾಯಿಯಾಗಬೇಕು ಅಂತಿದೆ, ಹೇಗೆ ಸಾಧ್ಯ ಹೇಳು! ನನ್ನನ್ನ ಅರ್ಥ ಮಾಡಿಕೊಳ್ಳೋರೂ ಯಾರೂ ಇಲ್ಲ” ಎಂದು ಅಳುವುದಕ್ಕೆ ಶುರುಮಾಡಿದಳು. ಅಷ್ಟೊತ್ತಿಗೆ ಕೆಲಸದ ರಾಧೆ ಜೋರಾಗಿ ಬಾಗಿಲ ಬಡಿದು ಅಮ್ಮಾ ಅಮ್ಮಾ ಅಂತ ಕೂಗಿದಳು. ಸದ್ಯ ಬಚಾವಾದೆ ಅನ್ನುವ ಮುಖಭಾವ ಮಾಬ್ಲೂನಿಗೆ. ಅವನು ಬಾಗಿಲು ತೆಗೆಯೋದಕ್ಕೆ ಮುಂದಾಗುತ್ತಾನೆ. ಆದರೆ ಸಹನಾ ತಡೆದು, ಬಟ್ಟಲನ್ನು ಮೇಲಿಟ್ಟು, ಕಣ್ಣೀರೊರೆಸಿಕೊಂಡು, ಏನೂ ಆಗಿಲ್ಲವೆಂಬಂತೆ ತಾನೇ ಬಾಗಿಲು ತೆರೆಯುತ್ತಾಳೆ. ವಿಚಾರಣೆಯ ಧಾಟಿಯಲ್ಲಿ “ಈಗ ನೆನಪಯ್ತಾ?” ಎಂದು ರಾಧೆಯನ್ನು ಕೇಳುತ್ತಾಳೆ.

“ಅಮ್ಮಾ, ಅಮ್ಮಾ.. ಅದು ಏನಾಯ್ತು ಅಂದರೆ ಹಾದಿಯಲ್ಲಿ ಜನ ಸೇರಿದ್ರು. ನೋಡಿದರೆ ಯಾರೋ ಆಗ? ಹುಟ್ಟಿದ

 ಮಗೂನ ಕಸದಬುಟ್ಟಿಯಲ್ಲಿ ಇಟ್ಟು ಹೋಗಿದಾರೆ. ಎಷ್ಟು ಮುದ್ದಾಗಿದೆ ಮಗು ಅಮ್ಮ. ಯಾರೋ ಪೊಲೀಸರಿಗೆ ಫೋನ್ ಮಾಡಿದರು. ೧೦೮ರ ವ್ಯಾನ್ ಬಂದು ಆಸ್ಪತ್ರೆಗೆ ತಗೊಂಡು ಹೋದ್ರು. ಹೋಗೋ ಮುಂದೆ ಪೊಲೀಸರು ಕೇಳಿದರು; ನೀವ್ಯಾರಾದ್ರೂ ಈ ಮಗೂನ ಸಾಕ್ತೀರ ಅಂತ. ಎಷ್ಟು ಆಸೆ ಆಯ್ತು ಅಮ್ಮ ನನಗೆ. ಆದರೆ ನನ್ನ ಬಡತನದಲ್ಲಿ ಹೇಗೆ ಸಾಧ್ಯ ಹೇಳಿ. ಸುಮ್ಮನೆ ಬಂದೆ. ಆದರೆ ಸಾಕಲಿಕ್ಕಾಗದವರು ಯಾಕೆ ಹಡಿತಾರೆ! ಅದೇ ತಿಳಿಯದಿಲ್ಲ..” ಸಹನಾ ಮಾಬ್ಲೂ ಪರಸ್ಪರ ಮುಖ ನೋಡಿಕೊಂಡು ಮೌನವಾಗಿ ನಿಲ್ಲುತ್ತಾರೆ. “ಯಾಕೆ ನೀವೇನೂ ಮಾತಾಡ್ತಾ ಇಲ್ಲವಲ್ಲ.. ಏನಾಯ್ತಮ್ಮ? ನೀವು ಚಿಂತೆ ಮಾಡಬೇಡಿ ಆ ಮಗುವನ್ನ ಯಾರೂ ಒಯ್ಯದೆ ಇದ್ದರೆ ಆ ಚರ್ಚಿನವರು ತಗೊಂಡ್ಹೋಗಿ ಅನಾಥಾಶ್ರಾಮದಲ್ಲಿ ಬೆಳಸ್ತಾರೆ. ಹುಟ್ಟಿದ ಮಗು ತಾಯಿಗೆ ಬೇಡ ಅಂದರೂ ಭೂಮಿಗೆ ಭಾರ ಆಗೋದಿಲ್ಲ. ಭೂಮಿ ಎಲ್ಲರಿಗೂ ತಾಯಿ ಅಲ್ವ?” ಎಂದು ದಿನದ ರೂಢಿಯಂತೆ ಕಸಬರಿಗೆಗೆ ಕೈ ಹಾಕುತ್ತಾಳೆ.

ಸೇವೆ ಮಾಡುವವರ ಮನಸ್ಸು ಬಹಳ ಸೂಕ್ಷ್ಮ. ಇಂದು ಇವರ ನಡುವೆ ಏನೋ ಆಗಿದೆ ಎನ್ನುವುದು ರಾಧೆಯ ಗಮನಕ್ಕೆ ಬರುತ್ತದೆ. ಕಸ ಗುಡಿಸುತ್ತಲೇ ಇಬ್ಬರನ್ನೂ ಗಮನಿಸುತ್ತಾಳೆ. ಸಹನಾ ಮಾಬ್ಲೂ ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ತೊಡಗುವ ಯತ್ನ ಮಾಡಿದರೂ ಇಬ್ಬರೂ ಮತ್ತೆಮತ್ತೆ ನೋಡಿಕೊಳ್ಳುತ್ತಾರೆ. “ಯಾಕೆ ಅಮ್ಮ, ನಾನು ಬರೋದು ತಡಾ ಆಯ್ತು ಅಂತ ಇ? ಕೋಪಾನಾ! ಸ್ಸಾರಿ. ಆದರೂ ಆ ಮಗುನ ಮುಖಾನೇ ಕಣ್ಣೆದುರಿಗೆ ಬರ್ತದೆ. ಮತ್ತೆ, ನೀವು ರೊಟ್ಟಿ ಪಲ್ಲೆ ತರಲಿಕ್ಕೆ ಹೇಳಿದ್ರಿ, ಆ ಮಗೂನ ಗದ್ದಲದಲ್ಲಿ ಮರತೇಬಿಟ್ಟೆ. ಸ್ವಾರಿ. ಬೇಗ ಒಂದು ಅನ್ನ ಸಾರು ಮಾಡ್ತೇನೆ. ಬೇಜಾರು ಮಾಡಬೇಡಿ. ಫ್ರಿಜ್‌ಲ್ಲಿ ತರಕಾರಿ ಫ್ರೆಶ್ ಆಗಿದೆ. ಟೊಮೆಟೋ ಸಾರು ಮಾಡಲಿಕ್ಕೆ ಹತ್ತು ನಿಮಿಷ ಸಾಕು. ಸರ್‌ಗಂತೂ ಅದು ಇಷ್ಟ. ನಿಮಗೂ ಆಗತ್ತಲ್ಲ ಅಮ್ಮ” ಅಂತ ವಿನಂತಿಯ ಧ್ವನಿಯಲ್ಲಿ ರಾಧೆ ಕೇಳುತ್ತಿದ್ದರೆ, ದಂಪತಿಗಳಿಬ್ಬರೂ ಕಾಣದ ಮಗುವಿನ ಕುರಿತೇ ಆಲೋಚಿಸುತ್ತಿದ್ದರು. “ರಾಧಾ, ಆ ಮಗೂ ಚೆಂದ ಇದೆ ಅಂದೆ, ಬಣ್ಣ ಹೇಗಿದೆ?” ಎಂದು ಅಕ್ಕರೆಯಿಂದ ವಿಚಾರಿಸಿದಳು ಸಹನಾ. ಮಾಬ್ಲೂನ ಮುಖದಲ್ಲಿ ಅಚ್ಚರಿ!

“ಈಗಷ್ಟೇ ಹುಟ್ಟಿದ ಮುದ್ದೆ ಅದು. ಅತ್ತರೆ ಮುಖ ಕೆಂಪಗಾಗ್ತದೆ. ಮೈಯೆಲ್ಲ ಬೆಳ್ಳಗಿದೆ. ನಿಮ್ಮ ಕೈಯಲ್ಲಿದ್ದರೆ ನಿಮ್ಮದೇ ಮಗು ಅನ್ನೋ ಹಾಗಿದೆ ರಾಧೆ ತನಗರಿವಿಲ್ಲದೆ ಈ ಮಾತನ್ನು ಹೇಳಿಬಿಟ್ಟಳು. ನಂತರ ಹೇಳಿದ್ದು ಹೆಚ್ಚಾಯಿತೆಂದು ಹಳಹಳಿಸಿದಳು. ತನಗೆ ಮಕ್ಕಳಿಲ್ಲವೆಂದು ಕೆಲಸದವಳೂ ಹೇಳುವುದನ್ನು ಸಹಿಸುವವಳಲ್ಲ ಸಹನಾ, ಈಗ ಸಿಟ್ಟಿನಲ್ಲಿ ಬೈಯುತ್ತಾಳೆ ಎಂದೇ ನಿರೀಕ್ಷಿಸಿದಳು. ಮಹಾಬಲನೂ ಸ್ವಲ್ಪ ಆತಂಕಕ್ಕೊಳಗಾದ. ಸಮಾಧಾನ ಮಾಡುವ ರೀತಿಯಲ್ಲಿ ರಾಧೆ ಹೇಳಿದ್ದು ಮಗು ನಮ್ಮ ಹಾಗೇ ಬೆಳ್ಳಗಿದೆ ಎಂದ? ಎಂದು ತಿದ್ದಲು ಮೊದಲಾದ. ಆಶ್ಚರ್ಯವೆಂದರೆ ಸಹನಾ ಇದಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಅವಳದೇ ಆಲೋಚನೆಯಲ್ಲಿದ್ದಳು. ರಾಧಾ, ಆ ಮಗೂನ ಸಾಕೋದಿದ್ರೆ ಎ? ಖರ್ಚು ಬರಬಹುದು? ಎಂದು ಹೆಣ್ಣಿನ ಮುಗ್ಧತೆಯಲ್ಲಿ ಕೇಳಿದಳು. ಇವರಿಬ್ಬರ ಮಾತಿನ ಲಹರಿಯನ್ನು ಗಮನಿಸುತ್ತಿದ್ದ ಮಹಾಬಲ ತಟ್ಟೆಯಲ್ಲಿದ್ದ ಸೌತೆಕಾಯಿ ಹೋಳುಗಳನ್ನು ಒಂದೊಂದಾಗಿ ತಿಂದು ಮುಗಿಸಿದ್ದ. ಬೈಗುಳ ತಪ್ಪಿದ ಸಂತೋಷದಲ್ಲಿ ರಾಧೆ ಮಗೂನ ಸಾಕಲಿಕ್ಕೆ ಇಷ್ಟು ಖರ್ಚು ಅಂತಿದೆಯಾ? ನಮ್ಮ ಮನೇಲಿ ನಮ್ಮ ದುಡಿಮೇಲಿ ಸಾಕ್ತೇವೆ, ನಿಮ್ಮ ಮನೇಲಿ ನಿಮ್ಮ ದುಡಿಮೇಲಿ ಸಾಕ್ತೀರಾ ಎಂದಳು.

ಸಹನಾ: “ನಿನಗೆ ಈಗಾಗಲೇ ಇಬ್ಬರು ಮಕ್ಕಳಿದಾರೆ, ಆದರೂ ಮೂರನೇದನ್ನ ಸಾಕೋ ಆಸೆ ಇದೆಯಲ್ಲ..!”

ರಾಧೆ: “ಹೆಂಗರಳು ಅಮ್ಮ. ಯಾರಿಗೂ ತಾಯಿ ಇಲ್ಲ ಅಂತಾಗಬಾರದಲ್ಲ. ತಾಯಿ ಆಗೋದು ಅಂದರೆ ದೇವರಾಗೋದು…” ಎನ್ನುತ್ತ ಎದೆ ಭಾರವಾದ ತಾಯಿಯಂತೆ ತೇಲುಗಣ್ಣಿನಲ್ಲಿ ಸೂರನ್ನು ನೋಡಿದಳು. ಅವಳ ವಿವಶತೆಯನ್ನು ಕಂಡು ಸಹನಾಗೆ ಒಂದು ಕ್ಷಣ ಅಸೂಯೆ ಕಾಡಿತು. ತನಗೆ ಅಂತಹ ಅನುಭವವೇ ಇಲ್ಲವಲ್ಲ ಎಂದು. ಆದರೆ ಮುಂದಿನ ವಾರದ ಮ್ಯೂನಿಚ್ ಪ್ರವಾಸ ನೆನಪಾಗಿ ದೊಡ್ಡ ನಿಟ್ಟುಸಿರನ್ನು ಬಿಟ್ಟಳು. ಇದೇ ಸರಿಯಾದ ಸಮಯ, ಮಾತನ್ನು ಮುಂದುವರಿಸುವುದಕ್ಕೆ ಎಂದು ತಿಳಿದು ಮಹಾಬಲ ಕೇಳಿದ, “ಅದು, ಅದೂ.. ಎಷ್ಟು ಖರ್ಚು ಬರ್ತದೆ?” “ನೀವೂ ಅದೇ ಪ್ರಶ್ನೆ ಕೇಳ್ತೀರಲ್ಲ!” ರಾಧೆ ಆಶ್ಚರ್ಯಪಟ್ಟಳು. ಅವನ ಮಾತನ್ನು ಮುಂದುವರಿಸುವವಳಂತೆ ಸಹನಾ ಹೇಳಿದಳು “ರಾಧಾ, ನಮಗೆ ಒಂದು ಮಗು ಬೇಕು, ಖರ್ಚು ಕೊಡಬಹುದು ಆದರೆ ಸಾಕಲಿಕ್ಕೆ ಆಗೋದಿಲ್ಲ. ನಿನಗೇ ಗೊತ್ತಲ್ಲ, ನಾವು ತಿಂಗಳದಲ್ಲಿ ಮೂರು ವಾರ ತಿರಗ್ತಾ ಇರ್ತೇವೆ” ಎನ್ನುತ್ತಲೇ ರಾಧೆಯನು ತೋಳಿನಲ್ಲಿ ಬಳಸಿ ಹಿಡಿದುಕೊಂಡು, ಈಗ ಸಿಕ್ಕ ಮಗುವನ್ನು ನಾವೇ ತಗೋಬಹುದು. ಆದರೆ ಬೆಳಸೋ ಹೊಣೆ ನಿಂದು, ಒಪ್ಪತೀಯಾ.. ಪ್ಲೀಸ್” ರಾಧೆಯ ಮುಖದಲ್ಲಿ ಆನಂದದ ಭಾವ, ಮಾಬ್ಲೂ ಏನು ಹೇಳಬಹುದೆಂದು ಅವನತ್ತ ನೋಡುತ್ತಾಳೆ. ಮಹಾಬಲ ಎತ್ತಲೋ ನೋಡುತ್ತ, ಸ್ವಲ್ಪ ಹಿಂಜರಿಕೆಯಿಂದ “ಆ ಮಗು ಯಾವ ಜಾತಿದೋ ಏನೋ! ನಮ್ಮ ಅಪ್ಪ-ಅಮ್ಮ ಒಪ್ತಾರಾ ಒಮ್ಮೆ ಕೇಳಬೇಕಲ್ವ. ಒಂದೇ ಸಾರೆ ತೀರ್ಮಾನಕ್ಕೆ ಬಂದರೆ ಹೇಗೆ?” ಎಂಬ ಪ್ರಶ್ನೆ ಎತ್ತಿದ.

ಸಹನಾ: “ಈಗ್ಯಾಕೆ ಅದೆಲ್ಲ? ನಮಗೆ ಮಗು ಬೇಕು, ಅದು ಬೆಳೆದರೆ ನಮ್ಮದೇ ಮಗು ಆಗ್ತದೆ. ಅಲ್ವಾ ರಾಧೆ?”

ರಾಧೆ: “ಆ ಮಗೂನ ಮುಖ ನೋಡಿದರೆ ನಿಮಗೆ ಜಾತಿ, ಪಾತಿ ಯಾವುದು ನೆನಪಾಗೋದಿಲ್ಲ. ನಾನು ಸಾಕಬಹುದು ಆದರೆ ನಿಮ್ಮ ಮನೆಯಲ್ಲಿ ಸಾಕೋದು ಆಗೋದಿಲ್ಲ. ನನ್ನ ಮಕ್ಕಳ ಸಂಗಡನೇ ಬೆಳಿಬೇಕಲ್ಲ!”

ಸಹನಾ: “ಸ್ವಲ್ಪ ಜಾಸ್ತೀನೇ ಕೊಡ್ತೀನಿ. ನಮ್ಮ ಮಗು ಅಂತಲೇ ಬೆಳಸು. ಆಗಬಹುದಾ. “

ಮಾಬ್ಲೂ: “ಹೌದು ನಮ್ಮ ಮಗೂಗೆ ಏನು ಕೊಡಸ್ತಿಯೋ ಅದನ್ನ ನಿನ್ನ ಮಕ್ಕಳಿಗೂ ಕೊಡಸು. ಅಷ್ಟು ಕೊಡ್ತೇವೆ. ಆಗಬಹುದಲ್ವ?”

ರಾಧೆ: “ಅಮ್ಮ, ತಪ್ಪು ತಿಳಿಬೇಡಿ, ನೀವೆ? ಕೊಟ್ಟರೂ ನನ್ನ ಮಕ್ಕಳ ಹಾಂಗೇ ಅದನ್ನ ಬೆಳಸಬಹುದು, ನಿಮ್ಮ ಮಗುವಿನ ಹಾಂಗೆ ಅನ್ನಲಿಕ್ಕೆ ನಿಮಗೆ ಮಗೂನೇ ಇಲ್ಲವಲ್ಲ. ಒಂದು ಕೆಲಸ ಮಾಡಿ, ಒಂದು ವ? ನೀವು ಮನೆಲಿದ್ದು ಮಗೂನ ನೋಡಿಕೊಳ್ಳಿ. ಅದಕ್ಕೆ ನೀವೇ ಅಪ್ಪ ಅಮ್ಮ ಅಂತ ಅನ್ನಸಿದ ಮೇಲೆ ನಾನು ಬೆಳಸ್ತೇನೆ.” ಸಹನಾ ತಲೆಗೆ ಕೈಕೊಟ್ಟು ಕೂಡುತ್ತಾಳೆ- ಮಾಬ್ಲೂ ಆಕಡೆ ಈಕಡೆ ಓಡಾಡುತ್ತ ಗೊಂದಲದಲ್ಲಿ ನಿಧಾನ ಸನಾಳ ಹತ್ತಿರ ಹೋಗಿ ಅವಳ ಬೆನ್ನಮೇಲೆ ಕೈಯಿಟ್ಟು; “ಜಗತ್ತೇ ಒಂದು ಕುಟುಂಬ ಅಂದರೂ ನಮ್ಮ ಮನೆಯಲ್ಲಿ ಒಂದು ಮಗು ಇಲ್ಲದಿದ್ರೆ ನಾವು ಜಗತ್ತಿಗೆ ಸಲ್ಲೋದು ಹೇಗೆ!” ಪೇಚಾಡಿಕೊಳ್ಳುತ್ತಾನೆ. ಏನೋ ಒಂದು ನಿರ್ಧಾರಕ್ಕೆ ಬಂದವನಂತೆ; ಒಂದು ಕೆಲಸ ಮಾಡೋಣ. ನೀನು ನಿನ್ನ ಜಾಬ್ ಬಿಡೋದು ಬೇಡ. ನಾನೇ ಅಡಜಸ್ಟ್ ಆಗ್ತೇನೆ. ನನಗೆ ಪ್ರಮೋಶನ್ ಬೇಡ, “ವರ್ಕ್ ಫ್ರಂ ಹೋಂ ಮಾಡ್ತೇನೆ. ಎಷ್ಟು ಕೊಡ್ತಾರೋ ಕೊಡ್ಲಿ. ನಾನು ರಾಧೆ ಹೆಲ್ಪ್ ತಗೊಂಡು ಮಗೂನ ಬೆಳಸ್ತೇನೆ. ಆಗಬಹುದಾ?” ಎಂದು ಒಂದೇ ಉಸುರಿಗೆ ಹೇಳಿ ನಿಂತ.

“ಯಜಮಾನ್ರೆ, ನೀವು ಮನುಷ್ಯರಲ್ಲ, ದೇವರು” ಎಂದು ರಾಧೆ ಕಣ್ಣೊರೆಸಿಕೊಂಡಳು.

ಸಹನಾ: “ಬ್ಲೂ.. ಎಷ್ಟು ಆಸೆ ನಿನಗೆ ಮಕ್ಕಳ ಬಗ್ಗೆ, ಒಂದಿನಾನು ಹೇಳಲಿಲ್ಲ ನನ್ನತ್ರ! ನನಗೂ ಆಸೆ ಇದೆ ಆದರೆ..”

ಮಾಬ್ಲು: “ಸನಾ.. ಈಗ ನಾನೇನಾದರೂ ಅಂದರೆ ಮತ್ತೆ ಗಂಡಸರು ಅಂತ ಶುರುಮಾಡ್ತೀಯಾ.. ಅದೆಲ್ಲ ಬೇಡ. ನೀನು ಎಂ.ಡಿ. ಆಗೂ. ನಾನೂ ಎಂ.ಡಿ. ಆಗ್ತೀನಿ.”

ಸಹನಾ: “ಏನು ಹಂಗಂದರೆ?”

ಮಾಬ್ಲೂ: “ಹಂಗಂದರೆ, ಮದರ‍್ಲೀ ಡ್ಯಾಡ್.”

ಸಹನಾಗೆ ಒಂದು ಕ್ಷಣ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿತೆಂಬಷ್ಟು ಖುಷಿಯಾಯಿತು. ಮರುಕ್ಷಣವೇ ಮಗು ಮನೆಯಲ್ಲಾಡಿದ ಚಿತ್ರ, ಆ ಮಗುವನ್ನು ಮಾಬ್ಲೂ ಸಂತೈಸುವ ರೀತಿ, ರಾಧೆಯ ನೆರವು.. ಎಲ್ಲವನ್ನೂ ಕಲ್ಪಿಸಿಕೊಂಡು ಸಣ್ಣಗೆ ಬೆವರಿದಳು.

ರಾಧೆ ಹದಿನೆಂಟಕ್ಕೇ ಮದುವೆಯಾಗಿ, ಇಪ್ಪತ್ತೈದರೊಳಗೇ ಎರಡು ಮಕ್ಕಳನ್ನು ಹಡೆದವಳು. ಈಗ ಮೂವತ್ತಾದರೂ ವಯಸ್ಸು ಕಾಣದ ಮೈಮಾಟ. ಉಡುಗೆ ತೊಡುಗೆಗಳಲ್ಲಿ ಸರಳವಾದರೂ ಆಕರ್ಷಕ ನಿಲವು. ಹಿತವಾದ ಮಾತಿನ ಧಾಟಿ, ನಡೆ- ನುಡಿಯಲ್ಲಿ ವಿನಯ, ವ್ಯವಹಾರದಲ್ಲಿ ಜಾಣೆ. ಯಾರ ಮನೆಯ ಸುದ್ದಿಯನ್ನೂ ಮತ್ತೊಂದು ಮನೆಯಲ್ಲಿ ಹೇಳುವವಳಲ್ಲ. ಅಂದರೆ, ಸುದ್ದಿಯನ್ನು ಮುಚ್ಚಿಡಲೂ ಬಲ್ಲಳು! ಅವಳು ಒಳ್ಳೆಯವಳೇ ಹೌದು. ಆದರೆ ಬ್ಲೂ ಮನೆಯಲ್ಲೇ ಇರುತ್ತಾನೆ. ಮಗುವನ್ನು ಬೆಳೆಸಲು ರಾಧೆ ಆತನ ಸಂಗಡ ಇರುತ್ತಾಳೆ. ಜಗತ್ತಿನ ಬೇರೆ ಬೇರೆ ದೇಶಗಳನ್ನೆಲ್ಲ ಓಡಾಡಿಕೊಂಡಿರುವ ಗಂಡನ ಕುರಿತು ಒಂದು ದಿನವೂ ಆತಂಕಕ್ಕೊಳಗಾದವಳಲ್ಲ. ಅವನೂ ಅಷ್ಟೇ ಎರಡು-ಮೂರು ವಾರಗಳ ಕಾಲ ಒಬ್ಬರನ್ನೊಬ್ಬರು ಭೇಟಿಯಿಲ್ಲದೆ ತಿರುಗುತ್ತಿರುವಾಗಲೂ ಒಂದೇ ಒಂದು ಸಣ್ಣ ಮಾತನ್ನೂ ಆಡಿದವನಲ್ಲ. ಒಟ್ಟಿಗಿದ್ದಾಗ ಆನಂದಪಡಬೇಕು, ಉಳಿದಂತೆ ಕತ್ತೆ ಚಾಕರಿ ಇದ್ದದ್ದೇ ಎಂದುಕೊಂಡವನು. ಆದರೂ ಈಗ ಅವಳು ಕಲ್ಪಿಸಿಕೊಂಡ ಮನೆಯ ಚಿತ್ರ ಯಾಕೋ ಅವಳ ಚಿತ್ತಸ್ಥೈರ್ಯವನ್ನು ಅಲುಗಾಡಿಸುತ್ತಿದೆ. ಅಪ್ಪ ಆಗೀಗ ಹೇಳುತ್ತಿದ್ದ ‘ಹತ್ತಿರ ಇದ್ದರೇ ಹೆಂಡತಿ, ದೂರ ಇದ್ದರೇ ನೆಂಟರು’ ಎಂಬ ಗಾದೆ ಮಾತು ಯಾಕೋ ನೆನಪಾಗುತ್ತಿದೆ. ಆರು ವರ್ಷಗಳ ದಾಂಪತ್ಯದಲ್ಲಿ ಮೊದಲ ಬಾರಿ ಅವಳ ಅಂತರಂಗ ಕಲಕಿಹೋಗಿದೆ. ಗಂಡ, ಅತ್ತೆ, ಅತ್ತೆ, ಅಮ್ಮ ಯಾರು ಹೇಳಿದರೂ ಮಕ್ಕಳನ್ನು ಹೆರಲು ಒಪ್ಪದ ಅವಳಿಗೆ ಈಗ ರಾಧೆ ಪ್ರತಿಸ್ಪರ್ಧಿಯಾಗಿ ಕಾಣುತ್ತಿದ್ದಾಳೆ. ಆದರೆ ತನ್ನ ಉದ್ಯೋಗದ ಪದೋನ್ನತಿಯನ್ನು ಬಿಟ್ಟು ‘ವರ್ಕ್ ಫ್ರಂ ಹೋಂ’ ಮಾಡಲು ಮನಸು ಒಪ್ಪುತ್ತಿಲ್ಲ. ಕಲ್ಪಿತ ಸಂಶಯದ ಸುಳಿಯಲ್ಲಿ ಸಿಲುಕಿಕೊಂಡು ತನ್ನ ಮಹತ್ತ್ವಾಕಾಂಕ್ಷೆಯನ್ನು ಬಿಟ್ಟುಕೊಡಬೇಕಾಗಿಲ್ಲ. ತನ್ನ ಗಂಡನಿಗೆ ತಾಯಿಯಾಗಲು ಸಾಧ್ಯವಾದರೆ ತಾನೇಕೆ ತಂದೆಯಾಗಬಾರದು? ಎಂದುಕೊಂಡಳು. ತಕ್ಷಣಕ್ಕೆ ಹೇಗೆ ಪ್ರತಿಕ್ರಿಯಿಸಲಿ ಎಂದೇ ಅವಳಿಗೆ ತಿಳಿಯುತ್ತಿಲ್ಲ. ಮಹಾಬಲ ಮತ್ತು ರಾಧೆ ಇವಳ ಪ್ರತಿಸ್ಪಂದನೆಗಾಗಿ ಕಾಯುತ್ತಿದ್ದಾರೆ. ರಾಧೆ ಕಸಗುಡಿಸುವುದನ್ನು ಮುಗಿಸಿ, ಕುಕ್ಕರ್‌ನಲ್ಲಿ ಅನ್ನ ಬೇಯಿಸುವುದಕ್ಕಿಟ್ಟು, ಟೊಮೆಟೋ ಸಾರಿಗೆ ಸಿದ್ಧತೆ ಮಾಡುತ್ತಿದ್ದಳು.

ಸಹನಾ ಕೊರಳ ಬೆವರೊರೆಸುತ್ತ ಒಂದು ಲೋಟ ನೀರು ಕುಡಿದಳು. ನಂತರ ಧ್ವನಿಗೆ ಒತ್ತಾಯದ ಉತ್ಸಾಹ ತಂದುಕೊAಡು ಮಾತಾಡಲು ಮುಂದಾದಳು.

“ರಾಧಾ, ಆ ಮಗು ನಮ್ಮದೇ ಆಗಲಿ. ಆದರೆ ಅದು ನಿಮ್ಮ ಮನೆಯಲ್ಲಿಯೇ ಬೆಳೆಯಲಿ. ನಿನ್ನ ದೊಡ್ಡ ಮಗಳಿಗೆ ಈಗ ಹತ್ತೋ ಹನ್ನೊಂದೋ ವರ್ಷ, ಎರಡನೆಯವಳಿಗೆ ಎಂಟು ವರ್ಷ. ಅಂದರೆ ಅವರೂ ಈ ಮಗುವನ್ನು ಬೆಳೆಸಲಿಕ್ಕೆ ಸಹಾಯ ಮಾಡುತ್ತಾರೆ. ನಾವು ಮನೆಯಲ್ಲಿದ್ದಾಗ ಮಗುವನ್ನು ಮನೆಗೆ ಕರೆದುಕೊಂಡು ಬಾ. ಇನ್ನುಳಿದ ದಿನ ನಿಮ್ಮ ಮನೆಯಲ್ಲಿಯೇ ಬೆಳೆಯಲಿ. ಹೌದು, ಆ ಮಗು ಗಂಡೋ ಹೆಣ್ಣೋ ಹೇಳಲೇ ಇಲ್ಲ!” ಎಂದಳು. “ಅದು ಗಂಡು ಮಗು” ಎಂದು ರಾಧೆ ಹೇಳಿದ ಧಾಟಿ ಹೇಗಿತ್ತೆಂದರೆ ಗಂಡು ಮಕ್ಕಳು ಮಾತ್ರ ಮಕ್ಕಳು ಎನ್ನುವಂತಿತ್ತು. “ಅಮ್ಮ, ನಾನು ಮೂರು ಮನೆಯ ಚಾಕರಿ ಮಾಡಿಕೊಂಡು ಬದುಕುತ್ತಿದ್ದೇನೆ. ಹಗಲಿನಲ್ಲಿ ಮಕ್ಕಳು ಶಾಲೆಗೆ ಹೋಗುತ್ತಾರೆ. ಮಗುವನ್ನು ಆಗ ಹೇಗೆ ಸಾಕೋದು..?” ಎಂದು ರಾಗವೆಳೆದಳು. ಅದಕ್ಯಾಕೆ ಚಿಂತೆ, ನಿನ್ನ ಒಟ್ಟು ದುಡಿಮೆಯ ಮೊತ್ತವನ್ನು ನಾನೇ ಕೊಡುತ್ತೇನೆ. ಮಗುವನ್ನು ಚೆನ್ನಾಗಿ ನೋಡಿಕೋ. ಅಂದ ಹಾಗೆ ಮಗುವನ್ನು ಸಾಕಲು ಮತ್ತಿಷ್ಟನ್ನು ಕೊಡಬೇಕಲ್ಲ, ಎಷ್ಟಾಗಬಹುದು ಎಂದು ಅಂದಾಜು ಮೊತ್ತವನ್ನಾದರೂ ಹೇಳು” ಎಂದು ಸಹನಾ ವ್ಯವಹಾರಸ್ತೆಯಂತೆ ಮಾತಾಡಿದಳು.

ಮಹಾಬಲನಿಗೆ ತನ್ನ ಕಿವಿಗಳನ್ನೇ ನಂಬಲಾಗುತ್ತಿಲ್ಲ. ಸಹನಾ ಜಿಪುಣೆಯಲ್ಲದಿದ್ದರೂ ಸಣ್ಣ ಖರ್ಚಿಗೂ ಲೆಕ್ಕ ಇಟ್ಟು ಇಬ್ಬರದೂ ಸಮಪಾಲು ಇರುವಂತೆ ನೋಡಿಕೊಳ್ಳುತ್ತಾಳೆ. ಇಂದು ನಾವು ಕೊಡುತ್ತೇವೆ ಎನ್ನುವ ಬದಲು ನಾನು ಕೊಡುತ್ತೇನೆ ಎಂದು ಹೇಳಿದಳಲ್ಲ! ಕಾಣದ ಮಗುವಿನ ಕುರಿತಾದ ಪ್ರೀತಿಯಿಂದ ಹೇಳಿದಳು ಎಂದು ಒಪ್ಪಿಕೊಳ್ಳುವಷ್ಟು ಮುಗ್ಧತೆ ಮಹಾಬಲನದಲ್ಲ. ಏನೇ ಇರಲಿ ಈಗ ತಾನು ಅಡ್ಡ ಮಾತಾಡುವುದಲ್ಲ ಎಂದು ಸಹಮತದ ನಗೆಯಾಡಿದ. ರಾಧೆ ಒಂದು ಕ್ಷಣ ದಿಗ್ಮೂಢಳಾಗಿ ನಿಂತಿದ್ದಳು. ಕುಕ್ಕರ್ ಐದಾರು ಸೀಟಿ ಹೊಡೆದರೂ ಅವಳ ಗಮನಕ್ಕಿಲ್ಲ. ಸಹನಾ ಒಲೆಯ ಉರಿಯನ್ನು ಆರಿಸಿ, ರಾಧೆಯ ಹೆಗಲ ಮೇಲೆ ಕೈಯಿಟ್ಟು “ನೀನು ಮಾಡುತ್ತಿರುವ ಉಪಕಾರ ಬಹಳ ದೊಡ್ಡದು” ಎಂದಳು. ವಾಸ್ತವಕ್ಕೆ ಮರಳಿದ ರಾಧೆ ಹೇಳಿದಳು: “ಆ ಮಗೂನ ಅದೃಷ್ಟ ನೋಡಿ! ಯಾವ ಕುಂತಿ ಹಡದ್ಲೋ ಏನೋ! ಈ ರಾಧೆ ಆಸೆಪಟ್ಲು. ನೀವು ಅದರ ಮುಖನೇ ನೋಡ್ದೆ ಅಪ್ಪ ಅಮ್ಮ ಆದರಲ್ಲ. ನಿನ್ನೆವರೆಗೂ ನಮಗೆ ಮಕ್ಕಳು ಯಾಕೆ ಬೇಕು, ಜಗತ್ತೇ ನಮ್ಮ ಕುಟುಂಬ ಅಂತಿದ್ದವರಿಗೆ ಮಕ್ಕಳ ಮೇಲೆ ಎಷ್ಟು ಆಸೆ!”

ಈಗಲೇ ಆಸ್ಪತ್ರೆಗೆ ಹೋಗಬೇಕು. ಪೊಲೀಸ್ ಸ್ಟೇಷನ್‌ಗೆ ಹೋಗಿ ಮಾತಾಡಬೇಕು. ವಕೀಲರನ್ನು ಕಂಡು ಕಾನೂನಿನ ಅಗತ್ಯಗಳನ್ನು ಹೇಗೆ ಪೂರೈಸೋದು ಅಂತ ತಿಳಕೋಬೇಕು ಅಂತೆಲ್ಲ ಮಹಾಬಲ ಪರಿಚಿತರ ಫೋನ್ ನಂಬರ್ ಹುಡುಕುತ್ತಿದ್ದರೆ, ತನಗೆ ಅನಿರೀಕ್ಷಿತವಾಗಿ ಆರೋಗ್ಯದ ಸಮಸ್ಯೆಯಾಗಿದೆ ಮುಂದಿನ ವಾರ ಮ್ಯೂನಿಚ್‌ಗೆ ಹೋಗಲಾಗುತ್ತಿಲ್ಲ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಸಹನಾ ಆಫೀಸ್‌ಗೆ ಫೋನ್ ಮಾಡಿದಳು. “ಅಷ್ಟೆಲ್ಲ ಯಾಕೆ ಚಿಂತೆ ಮಾಡ್ತೀರಿ, ಸರಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿಯೇ ಎಲ್ಲ ಮಾಹಿತಿ ಸಿಗುತ್ತದೆ ಮತ್ತು ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಡುತ್ತಾರೆ. ಇಂತಹ ಎರಡು ಮಕ್ಕಳನ್ನು ದತ್ತು ತೆಗೆದುಕೊಂಡವರನ್ನು ತಾನು ಬಲ್ಲೆ” ಎಂದು ರಾಧೆ ಹೇಳಿದಳು. ಅಷ್ಟರಲ್ಲಿ ಅನ್ನ ಸಾರು ಎರಡೂ ಸಿದ್ಧವಾಗಿತ್ತು. ಅಂದು ತಮ್ಮೊಡನೆ ಊಟ ಮಾಡಲು ರಾಧೆಯನ್ನೂ ಊಟದ ಟೇಬಲ್‌ಗೆ ಕರೆದಳು ಸಹನಾ. ರಾಧೆ ಹಿಂಜರಿದಳು. ಆದರೆ ಸಹನಾಳ ಒತ್ತಾಯವನ್ನು ತಿರಸ್ಕರಿಸಲಾಗದೆ ಕುರ್ಚಿಯ ತುದಿಯಲ್ಲಿ ಕುಳಿತು ಅನ್ನವನ್ನು ಕಲಸಿದಳು. ಮಗು ತಮಗೇ ಸಿಗುತ್ತದೆ ಎನ್ನುವ ಭರವಸೆಯಲ್ಲಿ ಅದಕ್ಕೆ ಏನು ಹೆಸರಿಡುವುದು, ಅದಕ್ಕೆ ಬೇಬಿ ಫುಡ್ ಕೊಡೋದು ಹೇಗೆ ಎಂದೆಲ್ಲ ಸಹನಾ ಮಹಾಬಲ ಮಾತಾಡುತ್ತ ಊಟ ಮಾಡಿದರು. ಸಹನಾ ಮರೆಯದೇ ಹೇಳಿದಳು, “ಬ್ಲೂ ನೀನು ‘ವರ್ಕ್ ಫ್ರಂ ಹೋಂ’ ಮಾಡಬೇಕಿಲ್ಲ. ರಾಧೆ ಎಲ್ಲ ನೋಡಿಕೊಳ್ಳುತ್ತಾಳೆ. ಅಲ್ಲದೆ ನಾವು ಮನೆಯಲ್ಲಿಲ್ಲದಾಗ ಆಕೆ ಇಲ್ಲಿಗೆ ಬರಬೇಕಾಗಿಲ್ಲ, ಮನೆಯಲ್ಲಿಯೇ ಮಗುವನ್ನು ನೋಡಿಕೊಳ್ಳಲಿ.”

“ನಾನು ಪ್ರತಿದಿನ ಬರಲಿಲ್ಲ ಎಂದರೆ ಬಾಲ್ಕನಿಯ ಗಿಡಗಳಿಗೆ ನೀರು ಕಾಣಿಸುವವರು ಯಾರು?” ಎಂದು ರಾಧೆ ಕೇಳಿದಳು. “ಮಗುವೇ ಬೆಳೆಯುತ್ತಿರುವಾಗ ಬಾಲ್ಕನಿಯ ಗಿಡದ ಚಿಂತೆ ಯಾಕೆ? ಬಾಲ್ಕನಿಯೂ ಮಗುವನ್ನು ಆಡಿಸಲು ಬೇಕಲ್ಲ” ಎಂದು ಸಹನಾ ಸಮಜಾಯಿಷಿ ಕೊಟ್ಟಳು. ಇದು ತಾಯ್ತನದ ಮಾತಲ್ಲ ಎನ್ನಿಸಿತು ರಾಧೆಗೆ.

‘ಮಗು, ಪಾಲಿಸುವವರ ಪ್ರೀತಿಯಿಂದ ಬದುಕುತ್ತದೆ ಅಂಗಡಿಯ ಆಹಾರದಿಂದಲ್ಲ’ ಎಂದು ಈ ದಂಪತಿಗಳಿಗೆ ಹೇಗೆ ಹೇಳುವುದು ಎನ್ನುವ ಆಲೋಚನೆಯಲ್ಲಿಯೇ ಊಟ ಮುಗಿಸಿದಳು. ಯಾರದೋ ಮಗುವನ್ನು ಇವರಿಗಾಗಿ ನಾನು ಸಾಕುತ್ತೇನೆ ಎಂಬ ಕಾರಣಕ್ಕೆ ನನಗೆ ಅವರ ಸಂಗಡ ಊಟಕ್ಕೆ ಕೂರಿಸಿಕೊಂಡಿದ್ದಾರೆ, ಮನುಷ್ಯರು ಅರ್ಥವಾಗುವುದೇ ಕಷ್ಟ ಎಂದುಕೊAಡಳು. ಮೂರು ತಾಸಿನ ಹಿಂದೆ ಕಂಡ ಮಗುವಿನ ಅಳು ಅವಳ ಕಿವಿಗೆ ಈಗಲೂ ಕೇಳುತ್ತಿತ್ತು.

ಮೂರೂ ಜನ ಮಹಾಬಲನ ಕಾರಿನಲ್ಲಿ ಆಸ್ಪತ್ರೆಗೆ ಹೋದರು, ಮಗುವನ್ನು ನೋಡಿದರು. ಮಗುವಿನ ಮುದ್ದಾದ ಮುಖ ನೋಡಿ ಸಹನಾ ತಾನೂ ತಾಯಿಯಾಗಬೇಕಿತ್ತು ಅಂದುಕೊಂಡಳು. ತಕ್ಷಣ ಮತ್ತೆ ಎಚ್ಚೆತ್ತುಕೊಂಡಳು. ಎಲ್ಲ ವಿವರ ಕೇಳಿದ ಆಸ್ಪತ್ರೆ ಅಧಿಕಾರಿಗಳು ಅಗತ್ಯ ದಾಖಲೆಗಳೊಂದಿಗೆ ಮರುದಿನ ಬರುವಂತೆ ಹೇಳಿದರು. ಮಗುವನ್ನು ಎತ್ತಿಕೊಂಡು ಬಂದುಬಿಡುವ ಆತುರದಲ್ಲಿದ್ದವರಿಗೆ ನಿರಾಸೆಯಾದರೂ ಕಾಯುವುದು ಅನಿವಾರ್ಯವಾಗಿತ್ತು. ತನ್ನಮ್ಮ ಬೆಂಗಳೂರಿಗೆ ಬರುವುದರೊಳಗೆ ದತ್ತಕದ ವಿಚಾರ ಮುಗಿಯಬೇಕು ಎನ್ನುವ ಆತುರ ಸಹನಾಳಿಗೆ. ಮಹಾಬಲನಿಗೆ ಇನ್ನೂ ಅದು ಹೊಳೆದಿಲ್ಲ. ‘ಬೇರೆಯವರ ಮಗುವನ್ನು ಸಾಕುವ ಮನಸು ಮಾಡಿದ್ದೀರಿ ಬಹಳ ಸಂತೋಷ, ನಿಮಗೆ ಮಕ್ಕಳಾಗಲಿಲ್ಲವೇ? ಪರೀಕ್ಷೆ ಮಾಡಿಸಿದ್ದೀರಾ?’ ಎಂದೆಲ್ಲ ಆಸ್ಪತ್ರೆಯ ಹಿರಿಯ ನರ್ಸ್ ವಿಚಾರಿಸಿದಾಗ, ತನ್ನ ವೈಯಕ್ತಿಕ ವಿಷಯ ಇವಳಿಗ್ಯಾಕೆ ಎಂದು ಸಹನಾ ಅಂದುಕೊಂಡಳು. ಆದರದು ಸಹಜವಾದದ್ದು ಎಂದು ಮಹಾಬಲ ಸುಮ್ಮನಿರಿಸಿದ. ಒಂದು ದಿನದ ಅವಕಾಶ ಸಿಕ್ಕಿದ್ದು ರಾಧೆಗೆ ಅನುಕೂಲ ಎನಿಸಿತು. ಕೆಲಸದ ಮನೆಗಳಿಗೆ ಹೇಳಿಬರಬೇಕಲ್ಲ. ಅಷ್ಟೇ ಅಲ್ಲ ಆ ಮನೆಗಳಿಗೆ ಯೋಗ್ಯ ಜನರನ್ನು ಕೆಲಸಕ್ಕೆ ಹೊಂದಿಸುವ ಹೊಣೆಯೂ ಅವಳಿಗಿದೆ. ಎಲ್ಲರೂ ವಿಶ್ವಾಸದಿಂದ ನಡೆದುಕೊಳ್ಳುವವರೇ.

ಮರುದಿನ ಎಲ್ಲ ಔಪಚಾರಿಕ ಕ್ರಮಗಳನ್ನು ಮುಗಿಸಿ ಮಗುವನ್ನು ಸಹನಾಳ ಕೈಗೆ ಕೊಟ್ಟರು. ಸಹನಾ ರಾಧೆಯ ಕೈಗಿತ್ತಳು. ಎಲ್ಲರೂ ಗ್ಲೋಬಲ್ ವಿಲೇಜ್‌ನ ಮನೆಗೆ ಮಗುವನ್ನು ಕರೆತಂದು ತಿರುಗಿ ರಾಧೆಯ ಮನೆಗೆ ಬಿಟ್ಟುಬಂದರು. ಮರುದಿನ ಮಗುವಿನ ಸುದ್ದಿ ಹೇಳುತ್ತಲೇ ಸಹನಾ ಆಫಿಸ್‌ಗೆ ಹೋದಳು. ಮಹಾಬಲ ಮಂಕಾಗಿ ಮನೆಯಲ್ಲೇ ಕೂತಿದ್ದ. ನಾವೆಷ್ಟೇ ದುಡ್ಡು ಕೊಟ್ಟರೂ ಆ ಮಗು ನಮ್ಮದಾಗುತ್ತದೆಯೇ! ಸಂಬಂಧವೂ ಸಂತಾನವೂ ಕೊಳ್ಳಬಹುದಾದ ಸರಕಾದರೆ ದುಡ್ಡು ದೇವರಿಗಿಂತ ದೊಡ್ಡದಾಗುತ್ತದೆ ಎಂದು ತಳಮಳಗೊಂಡ. ವಿಶ್ವಕುಟುಂಬಿಯಾಗುವುದೆಂದರೆ ಹಡೆಯದೇ ತಾಯಿಯಾಗುವುದು ಎಂದರ್ಥವೇ? ಎನ್ನುವ ಪ್ರಶ್ನೆ ಅವನ ಸ್ವಭಾವಕ್ಕೆ ಹೊಂದಿ ಅವನನ್ನು ಕಾಡಿತು. ಮಗುವನ್ನು ನೋಡಲು ರಾಧೆಯ ಮನೆಗೆ ಹೋಗಬೇಕೆಂದು ಬಯಸಿದ. ಆದರೆ ಸಹನಾಳ ಕಾಳಜಿ ನೆನಪಾಯಿತು. ಹೋಲ್ಡಾಲ್ ಎಳೆದುಕೊಂಡು ವಿಮಾನನಿಲ್ದಾಣಕ್ಕೆ ಹೊರಟ, ಹೂಸ್ಟನ್‌ಗೆ ಹೋಗಬೇಕಲ್ಲ!

***

Facebook
X
WhatsApp
Print
Email
Leave A Reply