ಶ್ರೀವಿವೇಕಾನಂದ ಮತ್ತೊಮ್ಮೆ ಬರೆ ಚೆಂದ

swami-vivekanandaಭಾರತಿಯ ಸಿರಿಕಂದ ಶ್ರೀವಿವೇಕಾನಂದ

ಧಾರುಣಿಗೆ ಮತ್ತೊಮ್ಮೆ ನೀವಿಳಿದು ಬರೆ ಚೆಂದ   ||ಪ||

 

ನರರೆಲ್ಲರೊಳಿತಿಗಾಗಿಯೆ ಬಾಳ್ವ ಪಥ ಬೆಸಸೆ

ದುರಿತ ಮಾರ್ಗವನುಳಿದು ಸರಿಮಾರ್ಗದೊಳು ನಡೆಸೆ

ಧರೆಯ ಸೊಗಕಾಗನವರತ ದುಡಿಯಲಿಕೆ ಕಲಿಸೆ

ಪರಮಾರ್ಥ ಗಳಿಸಲಿಕೆ ಸನ್ಮಾರ್ಗವನು ತಿಳಿಸೆ   ||೧||

 

ವಿಜ್ಞಾನದಲಿ ಮಾತ್ರ ಮುಳುಗಿಹರನೆಚ್ಚರಿಸೆ

ತಜ್ಞರಿಲ್ಲೆಮಗಿಂತಲೆಂಬವರ ಮದವಿಳಿಸೆ

ಅಜ್ಞಾನದಲಿ ಬಿದ್ದು ಕೊಳೆವವರ ಸಂಸ್ಕರಿಸೆ

ಸುಜ್ಞಾನವಿತ್ತವರ ಬಹುಬೇಗನುದ್ಧರಿಸೆ   ||೨||

 

ನಾನು ನನ್ನದುಯೆಂದು ಬೀಗುವರ ಹದಗೊಳಿಸೆ

ದಾನವರವೋಲ್ನಡೆವ ದುಷ್ಟತನವನು ಬಿಡಿಸೆ

ಮಾನವರು ಮೊದಲಾಗಿರೆಂದವರ ಸರಿಪಡಿಸೆ

ಸಾನುರಾಗದಿ ಬಾಳ್ವ ಸದ್ಬುದ್ಧಿಯನು ಹರಸೆ   ||೩||

 

ನಾಶಗೊಳಿಪಂಥ ಜಾತಿಮತಭೇದವನಳಿಸೆ

ಲೇಶನೀಯ್ವಂಥುಪನಿಷನ್ಮಾರ್ಗವನ್ನುಳಿಸೆ

ಈಶನೊಡವೆರೆವ ನಿಜಪಥದತ್ತ ಮನ ಬೆಳೆಸೆ

ದೇಶಭಕ್ತಿಯ ತುಂಬುತದರೇಳ್ಗೆಯನ್ನೆಳೆಸೆ   ||೪||

 

ಶಿವ ನಮ್ಮ ಬೆನ್ನಹಿಂದಿರಲು ಭಯವೇಕೆನಿಸೆ

ಭುವನದಿ ಸಮರಿರದೋಲ್ಬಾಳಲ್ಕನುಗ್ರಹಿಸೆ

ಯುವಶಕ್ತಿಯಂ ಬಡಿದು ಮೇಲೇಳಿಸನುಗೊಳಿಸೆ

ತವೆದುಡಿದು ದೇಶಕೀರ್ತಿಧ್ವಜವ ಮೇಲ್ನಿಲಿಸೆ   ||೫||

 

—  ಕುಮಾರನಿಜಗುಣ

Facebook
X
WhatsApp
Print
Email