ಸೀತೆ ನೀನು ಸಾವಿತ್ರಿ ನೀನು
ಸಾಕ್ಷಾತ್ ನಾರಾಯಣಿ, ಶಕ್ತಿ ಸ್ವರೂಪಿಣಿ ನೀನು
ಹರಿಯುವ ನದಿ ನೀನು, ಭಾರಹೊತ್ತ ಭೂಮಿಯೂ ನೀನು,
ಭವ ಬಂಧವ ಕಳೆವ ವೈತರಣಿಯು ನೀನು
ಭವ್ಯ ಭಾರತವೇ ನೀನು
ಕಂಸನನ್ನು ನಡುಗಿಸಿದ ದುರ್ಗೆ ನೀನು
ದುಷ್ಟದಾನವರ ಸಂಹಾರಿಣಿಯು ನೀನು
ಕಲ್ಲಾಗಿ ತಪಗೈದ ಅಹಲ್ಯೆ ನೀನು
ಶಕ್ತಿಪೀಠಗಳಾಗಿ ಪ್ರಕಟಗೊಂಡೆ ನೀನು
ಅಗ್ನಿಕುಂಡದಿಂದೆದ್ದ ದ್ರೌಪದಿಯೂ ನೀನು
ಶಸ್ತçಶಾಸ್ತçಗಳ ಪಾರಂಗತಳು ನೀನು
ಸಂಸ್ಕೃತಿಯ ರಕ್ಷಕಳಾದ ಅಹಲ್ಯಾಬಾಯಿ ಹೋಳ್ಕರಳು ನೀನು
ಯುದ್ಧಭೂಮಿಯಲ್ಲಿ ರಣಚಂಡಿಯಾದ ಲಕ್ಷ್ಮಿ-ಚನ್ನಮ್ಮಳು ನೀನು,
ವೀರಗಚ್ಚೆಯ ಧರಿಸಿ ಹೋರಾಡಿದ ಓಬವ್ವ ನೀನು
ಮಾತೃತ್ವದ ಮೇರು ಶಿಖರ ದಾಸಿ ಪನ್ನಾಳು ನೀನು
ಹಿಂದು ಸ್ವರಾಜ್ಯದ ಪ್ರೇರಣೆಯಾದ ಜೀಜಾಮಾತೆಯು ನೀನು
ಧೀರ ರಾಣಾ ಪ್ರತಾಪನ ಹೆತ್ತ ಆದರ್ಶ ತಾಯಿ ನೀನು
ಮಾನರಕ್ಷಣೆಗಾಗಿ ಅಗ್ನಿಗಾಹುತಿಯಾದ ರಾಣಿ ಪದ್ಮಾವತಿ ನೀನು
ಸಂಘಟಿತ ಶಕ್ತಿಯ ಆದ್ಯ ಸಂಚಾಲಿಕೆಯು ನೀನು
ಸೇವಾಗಂಗೆಯಲಿ ಮಿಂದೆದ್ದ ಸೇವಿಕೆಯು ನೀನು
ಶ್ರೇಷ್ಠ ಭಾರತವಾಗಲು ಸಾಧನೆಗೈದವಳು ನೀನು
ದಿಟ್ಟ ರಾಜಕಾರಣಿಯು ನೀನು
ಧರ್ಮಪತ್ನಿಯು ನೀನು, ತಾಯಿ, ಮಗಳೂ ನೀನು,
ಸೋದರಿ, ಗೆಳತಿಯೂ ನೀನು.
ಇದೆಲ್ಲವನ್ನೂ ಸಾಧಿಸಿದವಳಲ್ಲವೇ ನೀನು
ಅನುದಿನವು ಹೆಮ್ಮೆಪಡುತಿರು ಹೆಣ್ಣು ನೀನು,
ಹೆಣ್ಣು ನೀನು…