ಬೆಂಗಳೂರಿನ ಉದಯೋನ್ಮುಖ ಚಿತ್ರಕಲಾವಿದೆ. ಚಿತ್ರಕಲಾ ಪರಿಷತ್ನಿಂದ ಚಿತ್ರಕಲೆಯಲ್ಲಿ ಪದವಿ.
ತಂದೆ – ಗಣ್ಯ ಸಿತಾರ್ ಕಲಾವಿದ ಎಂ.ಆರ್. ರಾಜಶೇಖರ್. ಗುರು – ಖ್ಯಾತ ಚಿತ್ರಕಲಾವಿದ ಎಂ.ಕೆ. ಸುಂಕದ್.
ಚಿತ್ರಕಲೆಯಲ್ಲಿ ತಂಜಾವೂರು ಶೈಲಿಯಲ್ಲಿ ವಿಶೇಷ ಪರಿಶ್ರಮವುಳ್ಳವರು. ಅಮೂರ್ತ (abstract) ಶೈಲಿಯಲ್ಲೂ ಚಿತ್ತಾಕರ್ಷಕ
ಚಿತ್ರಗಳನ್ನು ರಚಿಸುವರು. ಅವರೇ ಹೇಳಿಕೊಳ್ಳುವಂತೆ ಕಲಾವತಿ – ಸುಪ್ರಸಿದ್ಧ ಚಿತ್ರಕಲಾವಿದರಾದ ಅಮೃತಾ ಶೇರ್ಗಿಲ್ ಹಾಗೂ
ಡಾ. ಬಿ.ಕೆ.ಎಸ್. ವರ್ಮಾರ ಅಭಿಮಾನಿ.