ಕೇಳಿಕೊಂಡು
ಕಾರ್ಯದರ್ಶಿ: ಸರ್, ‘ಮಾತನಾಡುವ ಸ್ವಾತಂತ್ರ್ಯ ಪ್ರತಿಯೊಬ್ಬರ ಹಕ್ಕು’ – ಎಂಬುದರ ಬಗ್ಗೆ ನೀವು ಒಂದು ಭಾಷಣ ಮಾಡಬೇಕು.
ರಾಜಕಾರಣಿ: ಒಂದು ನಿಮಿಷ ಕೂತಿರಿ! ಹಾಗೆ ಭಾಷಣ ಮಾಡಬಹುದೋ ಬೇಡವೋ ಎಂಬುದನ್ನು ಒಳಗೆ ಹೋಗಿ ನನ್ನ ಹೆಂಡತಿಯನ್ನು ಕೇಳಿಕೊಂಡು ಬಂದುಬಿಡುತ್ತೇನೆ.
***
ರಾಣಿ ತರಹ
ಹೆಂಡತಿ : ರೀ, ನಿಮಗೆ ರಾಣಿ ಅನ್ನೋ ಮೊದಲನೇ ಹೆಂಡತಿ ಇರುವ ವಿಷಯ ನಮ್ಮ ಮದುವೆಗೆ ಮುಂಚೆ ನನಗ್ಯಾಕೆ ಹೇಳ್ಲಿಲ್ಲ?
ಗುಂಡ : ಹೇಳಿದ್ನಲ್ಲ ಚಿನ್ನ….
ಹೆಂಡತಿ : ರೀ ಸುಳ್ಳು ಹೇಳಬೇಡಿ, ಯಾವಾಗ ಹೇಳಿದ್ರಿ?
ಗುಂಡ : ನಿನ್ನ ರಾಣಿ ತರಹ ನೋಡ್ಕೋತೀನಿ
ಅಂತ ಹೇಳಿದ್ನಲ್ಲ?
***
ಒಳ್ಳೆಯ ಹೆಣ್ಣು
ರಾಯರು : ನನ್ನ ಮಗಳಿಗೆ ಒಬ್ಬ ಒಳ್ಳೆಯ ಗಂಡು ನೋಡು ಎಂದು ಹೇಳಿದ್ದೆನಲ್ಲ; ನೋಡಿದೆಯಾ?
ಗುಂಡ : ಒಳ್ಳೆಯ ಗಂಡುಗಳಿಗೇನು ಕಡಮೆ? ಬೇಕಾದಷ್ಟು
ಇದ್ದಾರೆ.
ರಾಯರು : ಮತ್ತೆ ಯಾಕೆ ಕರೆದುಕೊಂಡು ಬಂದಿಲ್ಲ?
ಗುಂಡ : ಅವರೆಲ್ಲ ಒಳ್ಳೆಯ ಹೆಣ್ಣು ಬೇಕೂಂತ ಇದ್ದಾರೆ!
Comments are closed.