ಜೋಗಿ ಜಂಗಮರೆ ಹೋಗಿ ನನ್ನ ತವರೀಗೆ
ಸಣ್ಣಕ್ಕಿ ದಾನ ಕೊಡುತಾನ |
ಸಣ್ಣಕ್ಕಿ ದಾನ ಕೊಡುತಾನ | ಅಣ್ಣಯ್ಯ
ಹೊನ್ನಿನ ದಾನ ಕೊಡುತಾನ || 1
ನೀರುಳ್ಳಿ ದಾನ ನೀರು ಮಜ್ಜಿಗೆ ದಾನ
ಮತ್ತೆ ಅಂಬಲಿ ದಾನ ಕೊಡುತಾನ |
ಮತ್ತೆ ಅಂಬಲಿ ದಾನ ಕೊಡುತಾನ| ಅಣ್ಣಯ್ಯ
ಅಂಬುಲದ ಮುದ್ದೆ ಕೊಡುತಾನ|| 2
ಅತ್ತಿಗೆ ಬಸುರಿ ಮನೆ ಮುಂದೆ ಚಪ್ಪರ
ಅನ್ನ ಛತ್ರಾವ ಇಡಿಸ್ಯಾನ|
ಅನ್ನ ಛತ್ರಾವ ಇಡಿಸ್ಯಾನ| ಅಣ್ಣಯ್ಯ
ಮನೆ ಮುಂದೆ ಇಡಿಸ್ಯಾನ ಅರವಟಿಗೆ || 3
ಹಾದೀಯೆ ಅರಮನೆ ಬೀದಿಯೆ ಪಡಸಾಲಿ
ಏಳು ಸುತ್ತಿನ ಕಲ್ ಬಾವೀ|
ಏಳು ಸುತ್ತಿನ ಕಲ್ ಬಾವೀ| ಕಟ್ಟಿಸ್ಯಾನ
ಇಡಿಸ್ಯಾನ ತಮ್ಮಯ್ಯ ಅರವಟಿಗೆ|| 4