‘ನಾಡೋಜ’ ಪುರಸ್ಕೃತ ಎಸ್.ಆರ್. ರಾಮಸ್ವಾಮಿ ಅವರಿಗೆ ರಾಷ್ಟ್ರೋತ್ಥಾನ ಪರಿಷತ್ “ಸ್ನೇಹಾಭಿವಂದನ” ಕಾರ್ಯಕ್ರಮವನ್ನು ಮಾರ್ಚ್ ೨೭ರಂದು ಆಯೋಜಿಸಲಾಯಿತು. ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಹಾಗೂ ನಿಘಂಟು ತಜ್ಞ ನಾಡೋಜ ಶತಾಯುಷಿ ಪ್ರೊ| ಜಿ.ವೆಂಕಟಸುಬ್ಬಯ್ಯ ಅವರು ಉಪಸ್ಥಿತರಿದ್ದು, ಶುಭಹಾರೈಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಮೈ.ಚ. ಜಯದೇವ್, ಸಂಸ್ಕೃತ ಪ್ರಾಧ್ಯಾಪಕರು ಹಾಗೂ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ|| ಎಂ.ಕೆ. ಶ್ರೀಧರ್, ವಿಜಯವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕರಾಗಿರುವ ಸೂರ್ಯಪ್ರಕಾಶ್ ಪಂಡಿತ್,ಬೆಂಗಳೂರಿನ ಹಿರಿಯ ವಕೀಲರು ಮತ್ತು ತೆರಿಗೆ ಸಲಹೆಗಾರರೂ ವಿಶ್ವ ಹಿಂದು ಪರಿಷತ್ ನ ಹಿರಿಯ ಕಾರ್ಯಕರ್ತರಾದ ವೈ.ಕೆ. ರಾಘವೇಂದ್ರರಾವ್ ಅವರು ಶುಭಾಸಂಶನೆ ಮಾಡಿದರು.
ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಆರೆಸ್ಸೆಸ್ನ ಅಖಿಲ ಭಾರತ ಹಾಗೂ ಕರ್ನಾಟಕದ ಅನೇಕ ಪ್ರಚಾರಕರು, ಕಾರ್ಯಕರ್ತರು ಹಾಗೂ ರಾಮಸ್ವಾಮಿಗಳ ಅಭಿಮಾನಿ ಬಳಗ ಉಪಸ್ಥಿತರಿದ್ದರು.