ಬೆಂಗಳೂರು: ಉತ್ಥಾನ ಮಾಸಪತ್ರಿಕೆಯು ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ.
ಉತ್ಥಾನ ಮಾಸಪತ್ರಿಕೆಯು ಕಳೆದ ೪ ದಶಕಗಳಿಂದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿಯ 2022ನೇ ಸಾಲಿನ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ.
ಬಹುಮಾನಗಳು
ಮೊದಲನೆಯ ಬಹುಮಾನ ರೂ. ೧೫,೦೦೦
ಎರಡನೆಯ ಬಹುಮಾನ ರೂ. ೧೨,೦೦೦
ಮೂರನೆಯ ಬಹುಮಾನ ರೂ. ೧೦,೦೦೦
ಐದು ಮೆಚ್ಚುಗೆಯ ಬಹುಮಾನಗಳು ತಲಾ ರೂ. ೨,೦೦೦
ಸ್ಪರ್ಧೆಯ ನಿಯಮಗಳು:
- ಕಥೆಗಳು ಸ್ವತಂತ್ರವಾಗಿರಬೇಕು. ಭಾಷಾಂತರವಾಗಲಿ, ಅನುಕರಣೆಯಾಗಲಿ ಆಗಿರಕೂಡದು. ಎಲ್ಲೂ ಸ್ವೀಕೃತವಾಗಿರಬಾರದು; ಪರಿಶೀಲನೆಗಾಗಿಯೂ ಯಾವುದೇ ಅನ್ಯ ಪತ್ರಿಕೆ, ಸಂಸ್ಥೆಗೆ ಕಳುಹಿಸಿರಬಾರದು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟವಾಗಿರಬಾರದು.
- ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು.
- ಬಹುಮಾನಿತ ಕಥೆ ’ಉತ್ಥಾನ’ದಲ್ಲಿ ಪ್ರಕಟವಾಗುವವರೆಗೂ ಬೇರೆ ಎಲ್ಲೂ ಗ್ರಂಥರೂಪದಲ್ಲಾಗಲಿ, ಸಾಮಾಜಿಕ ಜಾಲತಾಣಗಳಲ್ಲಾಗಲಿ, ಪತ್ರಿಕೆ, ಆಕಾಶವಾಣಿ ಅಥವಾ ದೂರದರ್ಶನದಲ್ಲಾಗಲಿ ಪ್ರಕಟಣೆಗೆ, ಪ್ರಸಾರಕ್ಕೆ ಅವಕಾಶವಿಲ್ಲ.
- ಕಾಗದದ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ ಬರೆದಿರಬೇಕು ಅಥವಾ ವಿರಳವಾಗಿ ಬೆರಳಚ್ಚು ಮಾಡಿರಬೇಕು. ಕಾರ್ಬನ್/ಜೆರಾಕ್ಸ್ ಪ್ರತಿಗಳನ್ನು ಪರಿಶೀಲಿಸಲಾಗುವುದಿಲ್ಲ.
- ಕಥೆಯನ್ನು ನುಡಿ, ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ (ವರ್ಡ್ ಮತ್ತು ಪಿಡಿಎಫ್ ೨ ರೂಪದಲ್ಲಿ) ಇ-ಮೇಲ್ ಮೂಲಕವೂ ಕಳುಹಿಸಬಹುದು. ಇ-ಮೇಲ್ ವಿಳಾಸ: [email protected]
- ಕಥೆ ೩,೦೦೦ ಪದಗಳ ಮಿತಿಯಲ್ಲಿ ಇರಬೇಕು.
- ಹಸ್ತಪ್ರತಿಯನ್ನು ಹಿಂದಕ್ಕೆ ಕಳುಹಿಸುವ ಯಾವುದೇ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಲೇಖಕರು ಮೂಲಕಥೆಯ ಇನ್ನೊಂದು ಪ್ರತಿಯನ್ನು ತಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳುವುದು.
- ಲೇಖಕರು ತಮ್ಮ ಹೆಸರು, ವಿಳಾಸ, ಕಿರುಪರಿಚಯ ಮುಂತಾದ ವಿವರಗಳನ್ನು ಕಥೆಯ ಜೊತೆಯಲ್ಲಿ ಬರೆಯದೆ, ಪ್ರತ್ಯೇಕ ಪುಟದಲ್ಲಿ ಬರೆದು ಕಳುಹಿಸಬೇಕು. ಜೊತೆಗೆ ಲೇಖಕರ ಭಾವಚಿತ್ರವೂ ಇರಬೇಕು.
- ಬಹುಮಾನಿತ ಕಥೆಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಸಂಪೂರ್ಣ ಹಕ್ಕು ’ಉತ್ಥಾನ’ದ್ದು.
- ತೀರ್ಪುಗಾರರ ಮೌಲ್ಯನಿರ್ಣಯಾನಂತರ ಫಲಿತಾಂಶವನ್ನು ’ಉತ್ಥಾನ’ದಲ್ಲಿ ಪ್ರಕಟಿಸಲಾಗುವುದು. ವಿಜೇತರಿಗೆ ಮಾತ್ರ ಪತ್ರ ಬರೆದು ತಿಳಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರವ್ಯವಹಾರ ಸಾಧ್ಯವಾಗದು.
- ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.
ಕಥೆಗಳು ತಲಪಲು ಕೊನೆಯ ದಿನಾಂಕ: ಅಕ್ಟೋಬರ್ ೧೦, ೨೦೨೨
ಕಥೆಯನ್ನು ಕಳುಹಿಸಬೇಕಾದ ವಿಳಾಸ:
ವಿಳಾಸ: ಸಂಪಾದಕರು, ’ಉತ್ಥಾನ’ ವಾರ್ಷಿಕ ಕಥಾ ಸ್ಪರ್ಧೆ – ೨೦೨೨
’ಕೇಶವ ಶಿಲ್ಪ’, ಕೆಂಪೇಗೌಡನಗರ, ಬೆಂಗಳೂರು ೫೬೦ ೦೦೪
ದೂರವಾಣಿ: ೦೮೦ – ೨೬೬೦ ೪೬೭೩
[email protected]
Is there any age restrictions for writing?
What is minimum age for participation ?
ಯಾವುದೇ ವಯಸ್ಸಿನ ಮಿತಿ ಇಲ್ಲ. ಆದರೆ ಕಥೆಗಾರರು ಭಾಗವಹಿಸಬಹುದು.