ಕಳೆದ ಐದೂವರೆ ದಶಕಗಳಿಂದ ವಿಜಾಪುರದ ಜ್ಞಾನಯೋಗಾಶ್ರಮವನ್ನು ವಾಸ್ತವ್ಯವನ್ನಾಗಿಸಿಕೊಂಡಿದ್ದ ಸಿದ್ಧೇಶ್ವರಸ್ವಾಮಿಗಳು ತಮ್ಮ ಅಷ್ಟೂ ಸಮಯವನ್ನು ಧ್ಯಾನ, ಅಧ್ಯಯನ, ಚಿಂತನೆ, ಪ್ರವಚನಗಳಿಗೆ ವಿನಿಯೋಗಿಸುತ್ತಿದ್ದರು. ಸರಳಜೀವಿಯಾಗಿದ್ದ ಸ್ವಾಮಿಗಳು ಎಂದೂ ಯಾರಿಂದಲೂ ಏನನ್ನೂ ಸ್ವೀಕರಿಸದೆ ಸತತವೂ ಭಗವದ್ಭಾವದಲ್ಲಿ ಆತ್ಮಾರಾಮರಾಗಿರುತ್ತಿದ್ದುದು ಜನಜನಿತವೇ ಆಗಿತ್ತು. ಅವರಿಗಿದ್ದ ‘ಆಸ್ತಿ’ಯೆಂದರೆ ಅವರು ಸತತ ಅಧ್ಯಯನ–ಚಿಂತನೆಗಳಿಂದ ಗಳಿಸಿಕೊಂಡಿದ್ದ ಜ್ಞಾನರಾಶಿಯಷ್ಟೆ. “ಇಂಗ್ಲಿಷ್ ಬಾರದ ನಾನು ಹೆಚ್ಚು ಓದಿಕೊಳ್ಳಲಾಗಲಿಲ್ಲ. ನೀನಾದರೋ ಪ್ರತಿಭಾಶಾಲಿ. ಧಾರ್ಮಿಕತೆಯ ಸಂದೇಶವನ್ನು ನೀನು ಸಾಗರಗಳಾಚೆಗೂ ತಲಪಿಸಬೇಕು” ಎಂದಿದ್ದ ಗುರುಗಳಾದ ಶ್ರೀ ಮಲ್ಲಿಕಾರ್ಜುನಸ್ವಾಮಿಗಳ ಆದೇಶವನ್ನು ಸಿದ್ಧೇಶ್ವರಸ್ವಾಮಿಗಳು ಅನುಪಮವಾಗಿ ಈಡೇರಿಸಿದರು. ಅವರನ್ನು ‘ಶತಮಾನದ […]
ಶ್ರೀ ಸಿದ್ಧೇಶ್ವರಸ್ವಾಮಿಗಳು
Month : February-2023 Episode : Author : ಎಸ್.ಆರ್. ರಾಮಸ್ವಾಮಿ