ಹೈಕೋರ್ಟ್ ಪೀಠದ ಮೂವರು ನ್ಯಾಯಮೂರ್ತಿಗಳು ಪ್ರತ್ಯೇಕ ತೀರ್ಪುಗಳನ್ನು ನೀಡಿದರು. ಹಿಂದುಗಳು, ನಿರ್ಮೋಹಿ ಅಖಾಡಾ ಮತ್ತು ಮುಸ್ಲಿಮರು – ಹೀಗೆ ಎಲ್ಲ ಮೂರು ಪಾರ್ಟಿಗಳಿಗೆ ಸಮಾನವಾಗಿ ಜಾಗದ ೧/೩ ಭಾಗವನ್ನು ನೀಡಬಹುದೆಂದು ಎಸ್.ಯು. ಖಾನ್ ಮತ್ತು ಅಗರ್ವಾಲ್ ಇಬ್ಬರೂ ಹೇಳಿದರು. ನ್ಯಾ. ಖಾನ್ ಅವರು, “ತಲಾ ೧/೩ ಭಾಗ ನೀಡಿದಾಗ ಸಂಬಂಧಪಟ್ಟವರು ಅದರಂತೆ ಪೂಜೆಗೆ ಬಳಸಬಹುದು. ವಿಗ್ರಹ ಇಟ್ಟಿರುವ ಮಧ್ಯದ ಗುಮ್ಮಟದ ಕೆಳಗಿನ ಜಾಗವನ್ನು ಹಿಂದುಗಳಿಗೆ ಕೊಡಬಹುದು. ನಿರ್ಮೋಹಿ ಅಖಾಡಾಕ್ಕೆ ರಾಮ್ಚಬೂತ್ರ ಮತ್ತು ಸೀತಾರಸೋಯಿ ಇದ್ದ ಜಾಗವನ್ನು ಕೊಡಬಹುದು. […]
ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪು ಶತಮಾನಗಳ ವಿವಾದಕ್ಕೆ ಪರಿಹಾರ
Month : January-2024 Episode : ಸಾಕಾರಗೊಂಡ ರಾಮಮಂದಿರ ವಿಶೇಷಾಂಕ] Author : ಎಚ್ ಮಂಜುನಾಥ ಭಟ್