2015ರ ಜೂನ್ 5ರಂದು ಭಾರತೀಯ ಸೇನೆಯ ಡೋಗ್ರಾ ರೆಜಿಮೆಂಟಿಗೆ ಸೇರಿದ ಸೇನಾ ತುಕಡಿಯೊಂದು ಮಣಿಪುರ ರಾಜ್ಯದ ತೆಂಗ್ನೌಪಾಲ್-ಸಮ್ತಾಲ್ ರಸ್ತೆಯಲ್ಲಿ ದಿನಚರಿಯಂತೆ ಬೆಳಗಿನ ಸಮಯದ ಪಹರೆ ನಡೆಸುತ್ತಿತ್ತು. ಬೆಳಗಿನ ಸುಮಾರು 6:00 ಗಂಟೆಯ ಹೊತ್ತಿಗೆ ಐದು ವಾಹನಗಳಲ್ಲಿದ್ದ 29 ಸೈನಿಕರ ತುಕಡಿಯು ಪಾರಾಲಾಂಗ್ ಮತ್ತು ಚರಾಂಗ್ ಗ್ರಾಮಗಳ ಸಮೀಪವಿದ್ದಾಗ ಉಗ್ರಗಾಮಿಗಳು ದಾಳಿ ನಡೆಸಿದರು. ಮೊದಲಿಗೆ ರಾಕೆಟ್ ಲಾಂಚರ್ ಮೂಲಕ ವಾಹನಗಳ ಮೇಲೆ ಗ್ರೆನೇಡ್ಗಳನ್ನು ಎಸೆದು ಸಿಡಿಸಿದ ಉಗ್ರರು, ಅನಂತರ ಆಟೋಮ್ಯಾಟಿಕ್ ಗನ್ಗಳ ಮೂಲಕ ಸತತ ಗುಂಡಿನ ದಾಳಿಯನ್ನು ನಡೆಸಿದರು. […]
ಎನ್.ಎಸ್.ಸಿ.ಎನ್. ಉಗ್ರರ ಹುಟ್ಟಡಗಿಸಿದ ‘ಮ್ಯಾನ್ಮಾರ್ ಸರ್ಜಿಕಲ್ ಸ್ಟ್ರೈಕ್’
Month : December-2020 Episode : ಯೋಧರ ವೀರಗಾಥೆಗಳು -2 Author : ಎಸ್. ಎಸ್. ನರೇಂದ್ರಕುಮಾರ್