
ಬಾಹ್ಯಾಕಾಶಕ್ಕೆ ಹಾಗೆ ಹೋಗಿ ಹೀಗೆ ವಾಪಸ್ ಬಂದರೆ ಅದೆಂಥ ಪ್ರವಾಸ ಎಂದು ಮೂಗುಮುರಿಯುವವರಿಗೂ ವಿಭಿನ್ನ ಆಯ್ಕೆಗಳು ರೂಪುಗೊಳ್ಳುತ್ತಿವೆ. ಇದೆಲ್ಲ ಏನಿದ್ದರೂ ದುಡ್ಡಿದ್ದವರ ಹುಚ್ಚಾಟ, ಅಂತರಿಕ್ಷಕ್ಕೆ ಪ್ರವಾಸ ಹೋಗಿಬಂದರೆ ಏನು ಸಾಧಿಸಿದಂತಾಯಿತು ಎಂದು ಕೇಳುವವರಿಗೂ ವಿಜ್ಞಾನಿಗಳ ಬಳಿ ಉತ್ತರವಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಪಟ್ಟ ಘಟನೆಗಳು ಸಾಕಷ್ಟು ಸುದ್ದಿಮಾಡಿವೆ. ಮೊದಲ ಯತ್ನದಲ್ಲೇ ಯಶಸ್ಸು ಪಡೆದ ಮಂಗಳಯಾನ, ಚಂದಿರನ ಭೇಟಿ ಮುಗಿಸಿ ಮರಳಿದ ಚೀನಾದ ಆಕಾಶನೌಕೆ, ಧೂಮಕೇತುವಿನ ಮೇಲಿಳಿದ ಯೂರೋಪಿನ `ಫೈಲಿ’, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೊರಡುವಷ್ಟರಲ್ಲೇ ಸುಟ್ಟುಹೋದ […]