ಬೆಳಗು ಬಾ ಬೆಳಕೆ ಜಗವ ಬೆಳಗುವ ಬೆಳಕೆ ಅಳಿಯದಂತೆದೆಯೊಲವು ಬಗೆಯ ಬೆಳಗಿ ಬೆಳಗು ಬಾ; ಬೆಳಗು ಬಾ ವಿಶ್ವ ವಿಸ್ಮಯ ಆಳ ಕತ್ತಲ ಪಥ ಕರಾಳ ಅಶ್ವಸಪ್ತಕದ ಗತಿ ಹಗಲು ಇರುಳು ವಿಶ್ವಭುಗ್ವಿಭು ನಿನ್ನ ತೇಜ ತುಂಬಿರೆ ತುಳುಕಿ ವಿಶ್ವಾಸದಾಶ್ವಾಸ ಅದುವೆ ಹಗಲು ನರಕ ಕತ್ತಲು ತೊಲಗಿ ಬಾಳ ಬೆಳಕದು ಬೆಳಗೆ ಹರಕೆ ಹಾರೈಕೆ ಸಾರ್ಥಕವು ಸಿದ್ಧಿ ಅರಗಿನರಮನೆ ಸುಡಲು ಸ್ವಾತಂತ್ರ÷್ಯವದೆ ಬಯಲು ಸರಿಯುತಿರೆ ತಮದಿಂದ ಜ್ಯೋತಿಯಡೆಗೆ ಕಾಳ ಕತ್ತಲನೋಡಿಸುವುದೊಂದು ದೀಪ ಕುಡಿ ಬಾಳು ಇರುವುದೆ ಬೆಳಗಿ […]




