ಅಂದು ಹಂಚಿ ತಿಂದ ಹುಳಿ ಮಾವು ಜೇನಿಗಿಂತ ಸವಿಯಾಗಿತ್ತು. ಹೊಳೆಯೊಳಗಿನ ಕಪ್ಪೆ, ನೀಲ ಮಣಿಯಂತೆ ಹೊಳೆದಿತ್ತು. ಮೆತ್ತಿದ ಮಣ್ಣು, ರೋಗವ ತರಲು ಮರೆತಿತ್ತು. ಕಪ್ಪು ಬಿಳುಪಿನ ಜಗದೊಳು ಸಪ್ತ ವರ್ಣಗಳು ಕಂಡಿತ್ತು. ದಿನದ ಕ್ಷಣಗಳ ಸವಿದ ದೇಹಕ್ಕೆ, ನಿದ್ದೆಯೊಡನೆ ಸ್ನೇಹವಿತ್ತು. ಬಹುಶಃ ಅಂದು… ಕೃತ್ರಿಮದ ಮುಸುಕಿನೊಳು ನಲುಗಿರಲಿಲ್ಲ – ನೈಜತೆ !
ಇಂದೇಕೆ ಹೀಗೆ?
Month : July-2020 Episode : Author : ಸರೋಜ ರೇವಣಕರ