
೨೦೧೫ರ ಜೂನ್ ೨೮. ಅಂತಾರಾಷ್ಟ್ರೀಯ ವ್ಯೋಮಕೇಂದ್ರಕ್ಕೆ ಸರಕು ತೆಗೆದುಕೊಂಡು ಹೊರಟಿದ್ದ ಸ್ಪೇಸ್ಎಕ್ಸ್ ಸಂಸ್ಥೆಯ `ಫಾಲ್ಕನ್ ೯’ ರಾಕೆಟ್ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡಿತು. ಈ ಸಂಸ್ಥೆಯ ಸ್ಥಾಪಕ, ವಿಶ್ವಖ್ಯಾತ ಅನ್ವೇಷಕ ಇಂಜಿನಿಯರ್ ಇಲಾನ್ ಮಸ್ಕ್ ತನ್ನ ಜನ್ಮದಿನದಂದೇ ಈ ದುರಂತ ಘಟಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆ ಕ್ಷಣ ಅವರು ಟ್ವೀಟ್ ಮಾಡಿದ್ದು ಹೀಗೆ: ನಿಜ, ಇಂಥ ಹುಟ್ಟುಹಬ್ಬವನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಈ ರಾಕೆಟ್ ಸ್ಫೋಟಗೊಂಡಿದ್ದು ಏಕೆ ಎಂಬುದಕ್ಕೆ ಸಾವಿರಾರು ಗಂಟೆಗಳ ಕಾಲದ ತನಿಖೆಯ ನಂತರವೂ ಕಾರಣ ಗೊತ್ತಾಗಿಲ್ಲ […]