“ಅಮ್ಮಾ….. ನನ್ನ ಎಕ್ಸಾಮ್ ರಿಸಲ್ಟ್ ಬಂತು, ಡಿಸ್ಟಿಂಕ್ಷನ್ ಬಂದಿದೆ….” ಅಂದ್ಬಿಟ್ಟು ಕಂಪ್ಯೂಟರಲ್ಲಿ ಮುಖ ಹುದುಗಿಸಿದ ಮಗಳು. “ಹಾಗಿದ್ರೆ ಫೇಸ್ಬುಕ್ಕಲ್ಲಿ ಹಾಕ್ಬಿಡೂ, ನಾನು ಲೈಕ್ ಕುಟ್ತೇನೆ…..” “ನಿನ್ನ ಫೇಸ್ಬುಕ್ಕೂ ಏನೂ ಬ್ಯಾಡ, ಸುಮ್ನಿರು.” “ಆಯ್ತೂ, ಪಾಯಸ ಮಾಡಿ ಕುಡಿಯೋಣ” ಅನ್ನುತ್ತಾ ಅಡುಗೆಮನೆಗೆ ನನ್ನ ಪಾದ ಎಳೆಯಿತು. ಪಾಯಸ ಮಾಡಲು ಬೇಕಾದ ಶಾವಿಗೆ, ಗೋಡಂಬಿ, ದ್ರಾಕ್ಷಿ ಎಲ್ಲ ಇದ್ದರೂ ಮುಖ್ಯವಾಗಿ ಅವಳಿಗೇ ಪಾಯಸ ಇಷ್ಟವಿಲ್ಲ. ಒಂದು ಚಿಕ್ಕ ತಟ್ಟೆಯಲ್ಲಿ ತಿನ್ನೋ ಸಂಭ್ರಮಕ್ಕೆ ನಾನ್ಯಾಕೆ ಒದ್ದಾಡಲಿ…. ನಾಳೆ ಮುಂಜಾನೆಯ ತಿಂಡಿಯನ್ನೇ ವಿಶೇಷವಾಗಿಸೋಣ. […]
ಬಿಸಿ ಬಿಸಿ ಬನ್ಸು
Month : December-2015 Episode : Author : ಸುಭಾಷಿಣಿ ಹಿರಣ್ಯ