ಶ್ರೀನಿವಾಸ ರಾಮಾನುಜರವರು ಇಂಗ್ಲೆಂಡ್ ದೇಶದಲ್ಲಿದ್ದದ್ದು ಐದು ವರ್ಷಗಳ ಕಾಲ (1914-1919). ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿ.ಎಚ್. ಹಾರ್ಡಿ(G.H. Hardy)ಯವರ ಕೋರಿಕೆಯನ್ನನುಸರಿಸಿ ಮದ್ರಾಸ್ ವಿಶ್ವವಿದ್ಯಾನಿಲಯ ರಾಮಾನುಜರವರಿಗೆ ಸಂಶೋಧನವೇತನ ನೀಡಿತ್ತು. ರಾಮಾನುಜರ ಪರಿಶೋಧನೆಗಳಲ್ಲಿ ಕೆಲವು ಆ ಕಾಲದಲ್ಲಿ ಪ್ರಕಟಗೊಂಡವು; ಕೆಲವು ಪ್ರಕಟನೆಗಳು ಹಾರ್ಡಿಯವರೊಡನೆ ಕಲೆತು ಮಾಡಿದವು. ಈ ಪ್ರಕಟನೆಗಳ ಸಂಕಲನಗ್ರಂಥವು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ 1927ರಲ್ಲಿ ಪ್ರಚುರಗೊಂಡಿತು. ಇದು ಅವರ ಸಂಶೋಧನೆಗಳ ಅತ್ಯಲ್ಪ ಭಾಗ ಮಾತ್ರವಾಗಿತ್ತು. ಶ್ರೀನಿವಾಸ ರಾಮಾನುಜರಿಗೆ ಭಾರತದಲ್ಲಿದ್ದಾಗಲೇ ಕ್ಷಯರೋಗದ ಲಕ್ಷಣಗಳಿದ್ದುವು. ಇಂಗ್ಲೆಂಡ್ ದೇಶದ ಶೀತ ವಾತಾವರಣದಲ್ಲಿ ಅದು ಉಲ್ಬಣಗೊಂಡಿತು. […]
ವಿಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಕೊನೆಯ ದಿನಗಳು
Month : May-2020 Episode : Author : ಕೆ. ವೆಂಕಟಾಚಲಯ್ಯಂಗಾರ್