ರಾಗಮಾಲಾ ಚಿತ್ರಸರಣಿಯೂ ಸಂಗೀತಪ್ರಧಾನವಾಗಿ ಅದರಲ್ಲೂ ಸಾಹಿತ್ಯವನ್ನು ಪ್ರಧಾನವಾಗಿರಿಸಿಕೊಂಡು ಅಭಿವ್ಯಕ್ತಗೊಳ್ಳುತ್ತದೆ. ಅಂದಿನ ಜನರ ಗುಡ್ಡಗಾಡು ಪರಿಸರ, ಋತುಮಾನಗಳ ಪ್ರಕೃತಿ ಹಾಗೂ ಜೀವನವನ್ನು ತಮ್ಮೊಳಗೆ ತುಂಬಿಸಿಟ್ಟುಕೊಂಡು ಅನುಭೂತಿಗಳನ್ನು, ವಿಸ್ಮಯ ಹಾಗೂ ಕಲಾತ್ಮಕ ಮನಸ್ಸುಗಳ ಚಿಂತನೆಗಳ ಭಾವವನ್ನು ದೃಶ್ಯರೂಪದಲ್ಲಿ ತೆರೆದಿಟ್ಟ ಸಾಕ್ಷಿಗಳು ಇವು. ಭಾರತೀಯ ಇತಿಹಾಸದಲ್ಲಿ ರಾಗಮಾಲಾ ಚಿತ್ರಕಲೆಗೊಂದು ವಿಶೇಷ ಸ್ಥಾನವಿದೆ. ಹಿಂದೂಸ್ತಾನಿ ರಾಗಗಳನ್ನು ಅಸ್ವಾದಿಸುವ, ಅದರಲ್ಲೂ ’ಶೃಂಗಾರರಸ’ದ ದೃಶ್ಯನಿರೂಪಕ ಚಿತ್ರಗಳು ಭಾರತೀಯ ಕಲಾಪ್ರಕಾರದಲ್ಲಿ ಮಹತ್ತ್ವದ ಸ್ಥಾನ ಪಡೆದುಕೊಂಡಿವೆ. ಕಾಗದದ ಮೇಲೆ ಜಲವರ್ಣದಲ್ಲಿ ರೇಖಾ ಪ್ರಧಾನವಾಗಿ ಚಿತ್ರಿಸಲ್ಪಟ್ಟಿರುವ ಇವು ಆರಂಭವಾದ ಕಾಲವನ್ನು […]
ರಾಗಗಳಿಗೆ ವರಮಾಲೆ – ರಾಗಮಾಲಾ ಚಿತ್ರಕಲೆ
Month : October-2016 Episode : ಚಿತ್ರಕಲಾ ಸಂಚಯ Author : ಮಹೇಂದ್ರ ಡಿ.