
ಆಶ್ರಮದ ಆವಾರದ ಹೊರಗೆ ಎರಡು ರಥಗಳು ಒಂದರ ಹಿಂದೆ ಒಂದೊಂದು ನಿಂತಿದ್ದವು. ರಭಸವಾಗಿ ಬಂದ ಕಾರಣ ರಥಚಕ್ರಗಳು ಎಬ್ಬಿಸಿದ ಧೂಳಿನ ಪರದೆ ನಿಧಾನವಾಗಿ ನೆಲಕ್ಕಿಳಿಯುತ್ತಿತ್ತು. ಅದರ ಹಿಂದೆ ಅಸ್ಪಷ್ಟವಾದ ಮೂರು ಮತ್ತೊಂದು ಆಕೃತಿಗಳು ಗೋಚರಿಸುತ್ತಿದ್ದವು. ಧೂಳು ಸರಿದು ನಿಚ್ಚಳವಾದಾಗ ಭೀಮಾರ್ಜುನ ಕೃಷ್ಣರು ನಾವಿದ್ದ ಕಡೆಗೆ ನಡೆದು ಬರುತ್ತಿದ್ದರು. ಅವರ ಹಿಂದೆ ಯುಧಿಷ್ಠಿರನೂ ಕಾಣಿಸಿದ. ಕೃಷ್ಣನ ಮುಖದಲ್ಲಿ ಎಂದಿನ ತಿಳಿಯಾದ ನಗು. ಆದರೆ ಸಾಯುಧರಾಗಿದ್ದ ಭೀಮಾರ್ಜುನರಿಬ್ಬರ ಮುಖಗಳು ನಿಗಿನಿಗಿ ಕೆಂಡಗಳಂತೆ ಉರಿಯುತ್ತಿದ್ದವು. ಬಹುಶಃ ನಾನು ಮಾಡಿದ ಅನಾಹುತ ತಿಳಿದು […]