ಒಬ್ಬ ವ್ಯಕ್ತಿಯ ಅಕಾಲಿಕ ಮರಣ ಇಡೀ ರಾಜ್ಯವನ್ನೇ ಕ್ಷುಬ್ಧಗೊಳಿಸುವುದು ವಿರಳ. ಐ.ಎ.ಎಸ್. ಅಧಿಕಾರಿ ಡಿ.ಕೆ. ರವಿ ಅವರ ಅಸಹಜ ಸಾವು ಎಷ್ಟು ವ್ಯಾಪಕ ಸಂಚಲನವನ್ನು ಸೃಷ್ಟಿಸಿದೆಯೆಂಬುದು ಈ ದಿನಗಳಲ್ಲಿ ಪ್ರಾಮಾಣಿಕತೆಯೂ ದಕ್ಷತೆಯೂ ಆಡಳಿತಯಂತ್ರದಲ್ಲಿ ಎಷ್ಟು ವಿರಳವಾಗಿವೆಯೆಂಬುದನ್ನು ಎತ್ತಿತೋರಿಸಿದೆ.ಪ್ರಚಲಿತ ಪರಿಸರದ ಕಾರಣದಿಂದಾಗಿ ಹೆಚ್ಚು ಸಮಯ ಜಡರಾಗಿರುವಂತೆ ತೋರುವ ಜನತೆಯು ಆಡಳಿತಶಾಹಿಯಲ್ಲಿ ಪ್ರಾಮಾಣಿಕತೆಯೂ ಜನಾಭಿಮುಖವರ್ತನೆಯೂ ಕಂಡಾಗ ಎಷ್ಟು ಪ್ರಖರವಾಗಿ ಹೃದಯದಾಳದಿಂದ ಸ್ಪಂದಿಸುತ್ತಾರೆಂಬುದನ್ನು ಈ ಪ್ರಕರಣ ನಿದರ್ಶನಪಡಿಸಿದೆ. ರವಿ ಅವರ ದಿಟ್ಟತನವೂ ನಿರ್ಭೀತಿಯೂ ಜನಹಿತಚಿಂತನೆಯೂ ಪ್ರಕಾಶಗೊಂಡಿದ್ದ ಕೋಲಾರ ಜಿಲ್ಲೆ ಮಾತ್ರವಲ್ಲದೆ ದೂರದ […]
ಈ ದುರ್ಘಟನೆ ಆಗಬಾರದಿತ್ತು
Month : April-2015 Episode : Author :