‘ದೇಶ ನೋಡು, ಕೋಶ ಓದು’ ಎಂದು ಒಂದು ಗಾದೆ ಹೇಳಿದರೆ, ಇನ್ನೊಂದು ‘ಸ್ವಾನುಭವವೇ ಸರ್ವೊತ್ತಮ ಗುರು’ ಎನ್ನುತ್ತದೆ. ’ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ’ ಎಂಬ ಮಾತು ಕೂಡ ಅನುಭವಕ್ಕಿರುವ ಉನ್ನತ ಸ್ಥಾನವನ್ನು ತಿಳಿಸುತ್ತದೆ. ಒಬ್ಬ ವ್ಯಕ್ತಿ ಸುಮಾರು ಐದು ವರ್ಷಗಳ ಕಾಲ, ಇಡೀ ದೇಶದ ಯಾವುದೇ ಪ್ರಾಂತವನ್ನು ಬಿಡದೆ, 27 ಸಾವಿರ ಕಿ.ಮೀ.ಗಳಷ್ಟು ಪಾದಯಾತ್ರೆ ನಡೆಸಿ ಬಂದರೆಂದರೆ ನಂಬುತ್ತೀರಾ? ಅವರೇ ರಾ.ಸ್ವ. ಸಂಘದ ಸೇವಾಪ್ರಮುಖರಾಗಿದ್ದ ಸೀತಾರಾಮ ಕೆದಿಲಾಯರು. ತಮ್ಮ ಪಾದಯಾತ್ರೆಯ ಅವಧಿಯಲ್ಲಿ ಅವರು ಭೇಟಿ ಮಾಡಿದ ಜನ, ನಡೆಸಿದ ಮಾತುಕತೆ, ಸಭೆ, ಚರ್ಚಾಕೂಟ – ಎಲ್ಲವೂ ದಾಖಲೆಯೇ. ಅಪಾರ ಅನುಭವದೊಂದಿಗೆ ಕಳೆದ ವರ್ಷ ಪಾದಯಾತ್ರೆಯನ್ನು ಮುಗಿಸಿದ ಕೆದಿಲಾಯರು ದೇಶದ ಗ್ರಾಮೀಣ ಜನಜೀವನದ ಬಗೆಗೆ ಸ್ವಾನುಭವದಿಂದ ಮಾತನಾಡಬಲ್ಲರು.
ದೇಶದ ರೈತರ ಸಮಸ್ಯೆಯ ನಿಜಸ್ವರೂಪದ ಮೇಲೆ ಬೆಳಕುಚೆಲ್ಲುವ ಪ್ರಯತ್ನವಾಗಿ ’ಉತ್ಥಾನ’ದ ಈ ಸಂಚಿಕೆಯಲ್ಲಿ ಕೆಲವು ಬರಹಗಳನ್ನು ಪ್ರಸ್ತುತ ಪಡಿಸಲಾಗಿದೆ. ಜೊತೆಜೊತೆಗೆ, ಸಾಂದರ್ಭಿಕವಾಗಿ ಸೀತಾರಾಮ ಕೆದಿಲಾಯರ ಸಂದರ್ಶನವನ್ನೂ ಮಾಡಲಾಯಿತು. ಗ್ರಾಮೀಣ ಭಾರತದಲ್ಲಿ ಸಂಚರಿಸಿದಾಗ ತಮಗಾದ ಅನುಭವದ ಕೆಲವು ಸೆಳಕುಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.
ಪೂರ್ಣ ಓದಿಗಾಗಿ: https://utthana.in/?p=5204