ಎರಡು ವರ್ಷಗಳ ಹಿಂದೆ ೨೦೧೪ರ ಮೇ ತಿಂಗಳಿನ ಒಂದು ದಿನ ಗುಜರಾತಿನ ಭಾರತೀಯ ಜನತಾ ಪಕ್ಷದ ನಾಯಕ ನರೆಂದ್ರ ಭಾಯ್ ಮೋದಿ ಅವರು ದೇಶದ ಸಂಸದ್ಭವನವನ್ನು ಪ್ರವೇಶಿಸಿದ ಸಂದರ್ಭ ಭಾವನಾತ್ಮಕ ಕ್ಷಣಗಳನ್ನು ತಂದುಕೊಟ್ಟಿತ್ತು. ಸ್ವತಃ ಅವರು ಕೂಡ ಭಾವುಕರಾಗಿದ್ದರು. ಸಂಸದ್ಭವನದ ಮೆಟ್ಟಿಲಿನಲ್ಲಿ ತಲೆಬಾಗಿ ನಮಿಸಿ ಅವರು ಒಳಗೆ ಪ್ರವೇಶಿಸಿದರು. ಭಾವುಕತೆಗೆ ಮುಖ್ಯ ಕಾರಣ ಅವರು ಮೊದಲ ಬಾರಿಗೆ ದೇಶದ ಪ್ರಜಾಸತ್ತೆಯ ಆ ಪರಮ ಮಂದಿರವನ್ನು ಓರ್ವ ಸದಸ್ಯನಾಗಿ ಪ್ರವೇಶಿಸುತ್ತಿದ್ದರು; ಮತ್ತು ಆಗಲೇ ಅದರ ಪರಮೋಚ್ಚ ನಾಯಕ ಆಗುವವರಿದ್ದರು. ಸಂಸತ್ತನ್ನು ಪ್ರವೇಶಿಸುವಾಗಲೇ ಪ್ರಧಾನಿಯಾಗುವುದು ಸಣ್ಣ ಮಾತಲ್ಲ. ಅನನುಭವಿಗಳು ದೇಶದ ಅತ್ಯುನ್ನತ ಅಧಿಕಾರಸೂತ್ರ ಹಿಡಿದ ಮತ್ತು ಅದೇ ಕಾರಣದಿಂದ ಎಡವಿದ ಕೆಲವಾದರೂ ಸಂದರ್ಭಗಳನ್ನು ನಾವು ಕಂಡಿದ್ದೇವೆ.

ಆದರೆ ಮೋದಿ ಅವರ ಸಂದರ್ಭದಲ್ಲಿ ಹಾಗಾಗಲಿಲ್ಲ, ಏಕೆ? ಅವರದೇ ಮಾತುಗಳಲ್ಲಿ ಹೇಳುವುದಾದರೆ ಈಚೆಗೆ ಒಂದು ವಿದೇಶೀ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿರುವ ಈ ಮಾತುಗಳನ್ನು ಉದಾಹರಿಸಬಹುದು: ನಮ್ಮ ದೇಶದಲ್ಲಿ ಕೆಲವೇ ಪ್ರಧಾನಿಗಳು ಪ್ರಧಾನಿಯಾಗುವುದಕ್ಕೂ ಮುನ್ನ ಮುಖ್ಯಮಂತ್ರಿಯಾಗಿದ್ದರು. ಆದರೆ ನನ್ನ? ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದು ಅನಂತರ ಪ್ರಧಾನಿಯಾದವರು ಯಾರೂ ಇಲ್ಲ. ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರಸರ್ಕಾರದ ಬಹುತೇಕ ಯೋಜನೆಗಳು ರಾಜ್ಯದ ಮೂಲಕ ಜನರನ್ನು ತಲಪಬೇಕು. ಹಾಗಾಗಿ ಒಬ್ಬ ಮುಖ್ಯಮಂತ್ರಿಯಾಗಿ ನಾನು ಗಳಿಸಿದ ಅನುಭವವೇ ನನ್ನ ಅತಿ ದೊಡ್ಡ ಶಕ್ತಿ. ಈಗ ಎಲ್ಲ ರಾಜ್ಯಗಳನ್ನೂ ಜೊತೆಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ. ರಾಜಕೀಯವಾಗಿ ಮತ್ತು ಸಾರ್ವಜನಿಕ ಜೀವನದಲ್ಲಿ ಕೆಳಸ್ತರದಿಂದ ಹಂತಹಂತವಾಗಿ ಮೇಲೇರಿಬಂದು ಗಳಿಸಿದ ಅನುಭವ ಒಂದಾದರೆ ಮುಖ್ಯಮಂತ್ರಿಯಾಗಿ ಸುಮಾರು ೧೩ ವ?ಗಳ ಅನುಭವ ಅವರಲ್ಲಿ ನಾವಿಂದು ಕಾಣುವ ಪಕ್ವತೆ ಮತ್ತು ವಾಸ್ತವಿಕ ಪರಿಜ್ಞಾನಗಳಿಗೆ ಇನ್ನೊಂದು ಕಾರಣ ಎನ್ನಲಡ್ಡಿಯಿಲ್ಲ. ಅನುಭವದಿಂದ ಮಾತ್ರ ಬರಬಹುದಾದ ಪಕ್ವತೆಯನ್ನು ನಾವು ಅವರ ಕಾರ್ಯಶೈಲಿಯಲ್ಲೂ ಕಾಣುತ್ತೇವೆ.

ಕೇಂದ್ರ ಎನ್ಡಿಎ ಸರ್ಕಾರ ಕಳೆದ ಮೇ ೨೬ರಂದು ಅಧಿಕಾರದ ಎರಡು ವ?ಗಳನ್ನು ಆಚರಿಸುವಾಗ ಆಗತಾನೇ ಬಂದ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಸಂತೋ?ದ ಕಳೆಯನ್ನು ನೀಡಿತ್ತು. ತಮಿಳುನಾಡು, ಪುಟ್ಟರಾಜ್ಯ ಪಾಂಡಿಚೇರಿ ಮತ್ತು ಪಶ್ಚಿಮಬಂಗಾಳಗಳಲ್ಲಿ ಹೆಚ್ಚು ನಿರೀಕ್ಷಿಸುವಂತಿರಲಿಲ್ಲ. ಕೇರಳದಲ್ಲಿ ಪಕ್ಷವು ನಿರೀಕ್ಷೆಗೆ ಮೀರಿದ ಫಲವನ್ನು ಪಡೆದಿತ್ತು. ಇನ್ನು ಅಸ್ಸಾಂನಲ್ಲಿ ಉತ್ತಮ ಬಹುಮತದೊಂದಿಗೆ ಅಧಿಕಾರವನ್ನು ಗಳಿಸಿತ್ತು. ಅಸ್ಸಾಂ ಫಲಿತಾಂಶವು ಪಕ್ಷದ ಪ್ರತಿ?ಯ ವಿ?ಯವಾಗಿದ್ದು ಅದರಲ್ಲಿ ಗಳಿಸಿದ ಜಯ ಎರಡನೇ ವ?ಚರಣೆಗೆ ಸಂಭ್ರಮವನ್ನು ನೀಡಿತು.
ಚುನಾವಣೆ ಎಂದರೆ ಭರವಸೆಗಳು ಇದ್ದದ್ದೇ. ಎಲ್ಲ ಪಕ್ಷಗಳೂ ಅದನ್ನು ಮಾಡುತ್ತವೆ. ಅಂತೆಯೇ ಮೋದಿ ಮತ್ತವರ ಸಹೋದ್ಯೋಗಿಗಳು ತಾವು ’ಅಚ್ಛೇ ದಿನ್’ಗಳನ್ನು ತರುತ್ತೇವೆ; ದೇಶದ ಶ್ರೀಮಂತರು ತೆರಿಗೆ ತಪ್ಪಿಸಿ ವಿದೇಶೀ ಬ್ಯಾಂಕುಗಳ ರಹಸ್ಯಖಾತೆಗಳಲ್ಲಿ ಇಟ್ಟಿರುವ ಬಿಲಿಯಗಟ್ಟಲೆ ಡಾಲರ್ ಕಪ್ಪುಹಣವನ್ನು ನೂರುದಿನದೊಳಗೆ ವಾಪಸ್ಸು ತರುತ್ತೇವೆ ಮುಂತಾದ ಭರವಸೆಗಳನ್ನು ನೀಡಿದ್ದರು. ಅಲ್ಲಿ ಎ?ಂದು ಹಣ ಇದೆ ಎಂದರೆ ದೇಶದ ಎಲ್ಲ ಪ್ರಜೆಗಳ ಖಾತೆಗೆ ೧೫ ಲಕ್ಷ ರೂ. ಹಾಕಬಹುದು ಮುಂತಾದ ಮಾತುಗಳನ್ನಾಡಿದ್ದರು.
ಚುನಾವಣಾ ಪ್ರಣಾಳಿಕೆಯ ಭರವಸೆಗಳನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬಾರದೆನ್ನುವುದು ನಮ್ಮಲ್ಲಂತೂ ಎಲ್ಲರಿಗೂ ತಿಳಿದ ವಿಚಾರವೇ. ಆದರೆ ನಮ್ಮ ವಿರೋಧಪಕ್ಷದವರು ಅದನ್ನು ಎತ್ತದಿದ್ದರೆ ಅವರ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗುತ್ತದೆ; ಅರ್ಥವಿರಲಿ ಇಲ್ಲದಿರಲಿ, ಮಾತನ್ನಾಡುತ್ತಲೇ ಇರಬೇಕೆನ್ನುವುದು ಭಾರತದಲ್ಲಿ ವಿರೋಧಪಕ್ಷಗಳು ಪಡೆದುಕೊಂಡಿರುವ ಸ್ವರೂಪ. ಅದು ಎಲ್ಲ ಪಕ್ಷಗಳಿಗೂ ಅನ್ವಯಿಸುತ್ತದೆ. ಕೇಂದ್ರಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದವರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ವಕ್ತಾರರಾದ ಮೀನಾಕ್ಷಿ ಲೇಖಿ ಅವರು, ಎರಡು ವ?ಗಳ ಹಿಂದೆ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವಾಗ ದೇಶದ ಸಾಮಾಜಿಕ- ಆರ್ಥಿಕ ಪರಿಸ್ಥಿತಿ ತೀರಾ ಕುಸಿದಿತ್ತು. ಆಂತರಿಕ ಬಳಕೆಗೆ ದೊಡ್ಡ ಪ್ರಮಾಣದಲ್ಲಿ ಆಮದು ಮಾಡುತ್ತಾ ಬಂದ ಕಾರಣ ವಿದೇಶೀವಿನಿಮಯದ ಸಂಗ್ರಹ ಕರಗಿಹೋಗಿ ಚಾಲ್ತಿಖಾತೆಯಲ್ಲಿ ಅಗಾಧ ಕೊರತೆ ಉಂಟಾಗಿತ್ತು. ದೇಶೀಯ ಉತ್ಪಾದನೆಗೆ ಧಕ್ಕೆಯೊದಗಿತ್ತು. ಅದಕ್ಕಾಗಿ ಸರ್ಕಾರ ಆಮದನ್ನು ನಿಯಂತ್ರಿಸಿತು. ಆಗ ದೇಶೀಯ ಆರ್ಥಿಕ ಚಟುವಟಿಕೆಗಳು ಹೆಚ್ಚಿದವು. ಉದ್ಯೋಗಾವಕಾಶ ಹೆಚ್ಚಿತು; ವ್ಯವಹಾರ ಬೆಳೆಯಿತು. ಭ್ರ?ಚಾರಮುಕ್ತ, ದಕ್ಷ ಮತ್ತು ಅಭಿವೃದ್ಧಿಪರ ಆಡಳಿತಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಪ್ರತಿಕೂಲ ಪರಿಸ್ಥಿತಿ
ಸದ್ಯ ಅಂತಾರಾಷ್ಟ್ರೀಯ ಪರಿಸ್ಥಿತಿ ಕೂಡ ದೇಶದ ಆರ್ಥಿಕತೆಗೆ ಪ್ರತಿಕೂಲವಾಗಿಯೇ ಇದೆ. ೨೦೧೬-೧೭ನೇ ಸಾಲಿನ ಮುಂಗಡಪತ್ರದ ಮೇಲಿನ ಚರ್ಚೆಗೆ ಉತ್ತರಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಆರ್ಥಿಕತೆ ಇಂದು ಇಡೀ ಜಗತ್ತಿನಲ್ಲಿ ಕ?ದ ಪರಿಸ್ಥಿತಿಯಲ್ಲಿದೆ. ಇದು ಇನ್ನೂ ಹದಗೆಡಬಹುದು. ಜಾಗತಿಕ ಆರ್ಥಿಕ ಹಿಂಜರಿತ ಇನ್ನ? ಕಾಲ ಮುಂದುವರಿಯಬಹುದು. ಯಾವ ಕಡೆಗೆ ತಿರುಗಬಹುದೆಂದು ಯಾರೂ ಕೂಡಾ ಹೇಳಲಾರರು. ಅದರೂ ಈಗ ಜಗತ್ತಿನಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತದ್ದು. ಕಳೆದ ಸಾಲಿನಲ್ಲಿ ಮುಂಗಾರು ಮಳೆಯಲ್ಲಿ ಏರುಪೇರಾಗಿ ದೇಶದ ಹಲವು ಭಾಗದಲ್ಲಿ ಬರಪರಿಸ್ಥಿತಿ ಉಂಟಾದ ಕಾರಣ ಆರ್ಥಿಕತೆಗೆ ಸಾಕ? ಪೆಟ್ಟುಬಿತ್ತು. ಈ ವ? ಉತ್ತಮ ಮಳೆಯಾಗಿ ಪರಿಸ್ಥಿತಿ ಸುಧಾರಿಸಬಹುದು ಎಂದು ಹೇಳಿದರು. ಒಟ್ಟಾರೆ ಪರಿಸ್ಥಿತಿ ಪ್ರತಿಕೂಲವಿದ್ದರೂ ಜಾಗತಿಕವಾಗಿ ಆರ್ಥಿಕ ಹಿಂಜರಿತವಿದ್ದರೂ ಭಾರತ ತನ್ನ ಅಭಿವೃದ್ಧಿಯ ದರವನ್ನು ಕಾಪಾಡಿಕೊಳ್ಳಲಿದೆ ಮತ್ತು ಪ್ರಗತಿ ಸಾಧಿಸಲಿದೆ ಎಂಬ ಅವರ ಆತ್ಮವಿಶ್ವಾಸ ಗಮನಾರ್ಹ. ಇದು ಮೋದಿ ಸರ್ಕಾರದ ಪ್ರಮುಖ ಸಾಧನೆಯಾಗಿದೆ.
ಅಭಿವೃದ್ಧಿಯ ಬಗ್ಗೆ ಎನ್ಡಿಎ ಸರ್ಕಾರ ಕೈಗೊಂಡ ಕ್ರಮಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದ್ದು ಪ್ರಮುಖವೆನಿಸುತ್ತದೆ. ಹಿಂದೆ ಬ್ಯಾಂಕಿಂಗ್ ಕ್ಷೇತ್ರ ನಕಲಿ ಬಂಡವಾಳಶಾಹಿಗಳು ಮತ್ತು ರಾಷ್ಟ್ರವಿರೋಧಿ ಶಕ್ತಿಗಳಿಗೆ ಲೂಟಿಯ ತಾಣವಾಗಿತ್ತೆಂದರೆ ತಪ್ಪಲ್ಲ. ತೆರಿಗೆದಾರರ ಹಣ ಅಲ್ಲಿ ಎಗ್ಗಿಲ್ಲದೆ ಪೋಲಾಗುತ್ತಿತ್ತು. ರೂ. ೧೦ ಲಕ್ಷ ಕೋಟಿಗೂ ಅಧಿಕ ಹಣ ವಸೂಲಾಗದ ಸಾಲವಾಗಿ ಇಡೀ ವ್ಯವಸ್ಥೆಗೆ ಕಳಂಕವಾಗಿತ್ತು. ಸಾಲ ಸಿಗುವುದು ಶ್ರೀಮಂತರಿಗೆ ಮಾತ್ರ ಎಂಬ ಸ್ಥಿತಿ; ಸಾವಿರಗಟ್ಟಲೆ ಕೋಟಿಯಲ್ಲಿ ವಂಚಿಸುವವರೂ ಅವರೇ. ಈಗ ಮೊದಲಬಾರಿಗೆ ಬ್ಯಾಂಕುಗಳನ್ನು ಅವರ ನಿರ್ವಹಣೆಗೆ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಉದ್ದೇಶಪೂರ್ವಕ ಸುಸ್ತಿದಾರರೂ ಭ್ರಷ್ಟಬ್ಯಾಂಕರುಗಳೂ ಇನ್ನು ಆರಾಮವಾಗಿ ಇರುವಂತಿಲ್ಲ. ಅಂಗೀಕಾರ ಪಡೆದು ಜಾರಿಗೊಳ್ಳುತ್ತಿರುವ ದಿವಾಳಿ ತಡೆ ಕಾಯ್ದೆಯಿಂದಾಗಿ ಸಾಲವಸೂಲಿ ವ್ಯವಸ್ಥೆ ಬಲಗೊಳ್ಳುತ್ತಿವೆ. ಬ್ಯಾಂಕಿನಲ್ಲಿರುವ ತೆರಿಗೆದಾರನ ಹಣದ ಸೂಕ್ತ ಬಳಕೆ ಸನ್ನಿಹಿತವಾಗಿದೆ. ವಸೂಲಾಗದಿರುವ ಸಾಲವಂತೂ (ಎನ್ಪಿಎ) ಚಿಂತೆಗೀಡು ಮಾಡುವ ಪ್ರಮಾಣಕ್ಕೆ ಬೆಳೆದಿದ್ದು, ಅದನ್ನು ಹೊರತರಲು ಮೋದಿ ಸರ್ಕಾರ ದೃಢ ನಿರ್ಧಾರ ಮಾಡಿದೆ ಎನ್ನುವುದು ದಿವಾಳಿ ತಡೆ ಮಸೂದೆಯಿಂದ ಸ್ಟಷ್ಟವಾಗಿದೆ.
ಎನ್ಡಿಎ ಸರ್ಕಾರದ ಎರಡು ವರುಷಗಳ ನಿರ್ವಹಣೆಯ ಬಗ್ಗೆ ಪ್ರತಿಕ್ರಯಿಸಿದ ಉತ್ತರಪ್ರದೇಶದ ಓರ್ವ ನಾಗರಿಕ, ಈ ಎರಡು ವ?ಗಳಲ್ಲಿ ದೇಶದ ಆರ್ಥಿಕತೆ ಸುಧಾರಣೆ ಆಗಿದ್ದು ನಿಜ. ಆದರೆ ಉದ್ಯೋಗಸೃಷ್ಟಿಯ ಕ್ಷೇತ್ರದಲ್ಲಿ ಕ್ರಮ ಅಗತ್ಯ. ಆ ನಿಟ್ಟಿನಲ್ಲಿ ’ಜನ್ಧನ್’ ಯೋಜನೆ ಮತ್ತು ’ಮುದ್ರಾ’ (ಮೈಕ್ರೋ ಯೂನಿಟ್ಸ್ ಡೆವಲಪ್ಮೆಂಟ್ ಆಂಡ್ ರೀಫೈನಾನ್ಸ್) ಬ್ಯಾಂಕ್ ಸ್ಥಾಪನೆಗಳು ಉತ್ತಮ ಆರಂಭ. ಇವು ದೇಶದ ಯುವಜನತೆ ಮತ್ತು ಗ್ರಾಮೀಣ ಕ್ಷೇತ್ರದ ಪ್ರಗತಿಗೆ ಪೂರಕ ಎಂದಿದ್ದಾರೆ.
’ಜನ್ಧನ್’ ಯೋಜನೆ
ಜನ್ಧನ್ ಯೋಜನೆ ಮೋದಿ ಸರ್ಕಾರದ ಯಶಸ್ವಿ ಯೋಜನೆಗಳಲ್ಲೊಂದು. ಅದರಂತೆ ದೇಶದಲ್ಲಿ ೨೦ ಕೋಟಿಗೂ ಅಧಿಕ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಒಂದೇ ದಿನ ಒಂದೂವರೆ ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದು ದೇಶದ ಆರ್ಥಿಕ ಇತಿಹಾಸದಲ್ಲೇ ಅಪೂರ್ವ ಘಟನೆ. ಸಿಎಂಎಸ್ ಸಮೀಕ್ಷೆ ಪ್ರಕಾರ ಅದು ಮೋದಿ ಸಕಾರದ ಸಾಧನೆಗಳಲ್ಲಿ ಮೊದಲ ಸ್ಥಾನದಲ್ಲಿದೆ. ಶೇ. ೩೬ರಷ್ಟು ಜನ ಅದು ಪ್ರಧಾನಿ ಮೋದಿಯವರ ಅತ್ಯುತ್ತಮ ಕೆಲಸ ಎಂದಿದ್ದಾರೆ. ಕಡಮೆ ಅವಧಿಯಲ್ಲಿ ಗರಿಷ್ಟ ಖಾತೆಯನ್ನು ತೆರೆಯುವ ಮೂಲಕ ಇದು ಗಿನ್ನೆಸ್ ದಾಖಲೆಗೂ ಸೇರಿತು.

ಹಣಕಾಸು ವ್ಯವಸ್ಥೆಯಲ್ಲಿ ಎಲ್ಲರನ್ನೂ ಸೇರಿಸಿಕೊಳ್ಳಬೇಕು (sಸಮಗ್ರತೆ) ಎನ್ನುವ ಮಾತು ದೇಶದಲ್ಲಿ ಹಿಂದಿನಿಂದಲೂ ಇತ್ತು. ಆದರೆ ಅದನ್ನು ಈ ಸರ್ಕಾರದ? ಯಾರೂ ಕೂಡ ಅನುಷ್ಠಾನಗೊಳಿಸಿದ್ದಿಲ್ಲ. ಶೂನ್ಯ ಬ್ಯಾಲೆನ್ಸ್ ಖಾತೆಗಳು ಇ?ಂದು ದೊಡ್ಡಪ್ರಮಾಣದಲ್ಲಿ ಇರುವುದರಿಂದ ಅವು ನಿಷ್ಕ್ರಿಯವಾಗಬಹುದು ಅಥವಾ ಅದು ಕಾರ್ಯಸಾಧ್ಯವಲ್ಲ ಎಂದು ಬ್ಯಾಂಕುಗಳು ತಿಳಿಯಬಹುದೆಂದು ಹಿಂದೆ ಜನ, ಸರ್ಕಾರ ಎಲ್ಲರೂ ಹಣವೇ ಇಲ್ಲದಾಗ ಖಾತೆ ಏಕೆ, ಎಂದು ಕೇಳಿದ್ದರು, ಭಾವಿಸಿದ್ದರು. ಆದರೆ ಮೋದಿ ಅದನ್ನು ಅಲ್ಲಗಳೆದು, ಬಡವರು ಹಾಗೆ ಅವಕಾಶವಂಚಿತರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಜೋಡಿಸುವುದು ತೀರಾ ಅಗತ್ಯ; ಅದರ ಮೂಲಕ ಸಬ್ಸಿಡಿಗಳನ್ನು ಫಲಾನುಭವಿಗಳಿಗೆ ನೇರವಾಗಿ ತಲಪಿಸಬಹುದು ಎಂದು ವಾದಿಸಿದರು. ಒಟ್ಟು ಸುಮಾರು ೨೨ ಕೋಟಿ ಜನ್ಧನ್ ಯೋಜನೆಗಳನ್ನು ತೆರೆಯಲಾಗಿದ್ದು, ಅಲ್ಲಿ ೩೩ ಸಾವಿರ ಕೋಟಿ ರೂ. ಗಳ? ದೊಡ್ಡ ಮೊತ್ತ ಸಂಗ್ರಹವಾಗಿದೆ. ತಾನಿಟ್ಟ ವಿಶ್ವಾಸ ನಿಜವಾಯಿತು ಎಂದು ಮೋದಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಜನ್ಧನ್ ಪ್ರಕಾರ ತೆರೆದ ಖಾತೆಗೆ ಒಂದು ಲಕ್ಷ ರೂ. ಗಳ ಜೀವವಿಮೆ (ಲೈಫ್ ಕವರ್), ೩೦ ಸಾವಿರ ರೂ.ಗಳ ಅಪಘಾತ ವಿಮೆ ಮತ್ತು ೫,೦೦೦ ರೂ.ಗಳ ಓವರ್ಡ್ರಾಫ್ಟ್ ಸೌಲಭ್ಯವಿದೆ. ಆರಂಭದಲ್ಲಿ ಜನ ಬ್ಯಾಂಕುಗಳಿಗೆ ಧಾವಿಸಿ ಖಾತೆ ತೆರೆದುದನ್ನು ಕಂಡ ಕೆಲವರು, ಸರ್ಕಾರ ವಿದೇಶದಿಂದ ಕಪ್ಪುಹಣ ತಂದು ತಮ್ಮ ಖಾತೆಗೆ ೧ ಲಕ್ಷ ರೂ. ಹಾಕುತ್ತದೆಂದು ಜನ ಭಾವಿಸಿದ್ದಾರೆಂದು ತಮಾ? ಮಾಡಿದ್ದಿತ್ತು. ಅದೇನೇ ಇರಲಿ, ಸಬ್ಸಿಡಿ ವಿತರಣೆಗೆ ಈ ಜನ್ಧನ್ ಖಾತೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಸರ್ಕಾರ ಅದನ್ನು ಆಧಾರ್ ಮತ್ತು ಮೊಬೈಲ್ ಜೊತೆ ವಿಲೀನ ಮಾಡುವ ಬಗ್ಗೆ ಪರಿಶೀಲಿಸುತ್ತಿದೆ. ಬ್ಯಾಂಕುಗಳಿಗೆ ಇದರಿಂದ ಹೆಚ್ಚಿನ ಕೆಲಸದ ಹೊರೆ ಬಿದ್ದಿದೆ; ಸಿಬ್ಬಂದಿ ಕೊರತೆ ಇರುವ ಹಿನ್ನೆಲೆಯಲ್ಲಿ ಅದರ ನಿರ್ವಹಣೆ ಕ?ವೇ ಆಗಿದೆ ಎನ್ನುವ ಮಾತಿದೆ. ಸರ್ಕಾರ ಆ ಕಡೆಗೂ ಗಮನ ಹರಿಸಬೇಕು. ಹಿಂದೆ ಬ್ಯಾಂಕ್ ಖಾತೆ ತೆರೆಯಲು ತುಂಬ ಕ?ವಾಗುತ್ತಿತ್ತು. ಈಗ ಕೇವಲ ಆಧಾರ್ ಕಾರ್ಡ್ ಸಾಕಾಯಿತು ಎಂದು ಜನ ಸಂತೋ? ವ್ಯಕ್ತಪಡಿಸಿದ್ದಾರೆ; ಈಗ ದೇಶದ ಬ್ಯಾಂಕ್ ಖಾತೆಗಳಲ್ಲಿ ಶೇ. ೮ರ? ಇದೇ ಆಗಿದೆ. ಬ್ಯಾಂಕ್ ಖಾತೆ ಇಲ್ಲದ ಬಡವರಿಗೆ ಇದು ವರದಾನವಾಗಿದ್ದು, ವಿಮೆಯಿಂದ ಗ್ಯಾಸ್ಬುಕ್ಕಿಂಗ್ವರೆಗೆ ಇದರ ಮೂಲಕ ಮಾಡಬಹುದು. ಈತನಕ ನನ್ನ ಹಣ ಮಾಲೀಕರ ಖಾತೆಯಲ್ಲಿ ಇರುತ್ತಿತ್ತು. ಇನ್ನು ಅದು ಬೇಕಿಲ್ಲ ಎಂದ ಓರ್ವ ಮನೆಗೆಲಸದ ಮಹಿಳೆ, ಇದನ್ನು ನಾನು ಪತಿಗೂ ಹೇಳಿಲ್ಲ ಎಂದು ಕಣ್ಣುಮಿಟುಕಿಸಿದ್ದಿದೆ. ಇದರಿಂದ ನಗರಪ್ರದೇಶದ ಬಡವರಿಗೂ ಅನುಕೂಲವಾಗಿದೆ. ಖಾತೆ ಇಲ್ಲದ ಕಾರಣ ಉಳಿತಾಯವೂ ಇರಲಿಲ್ಲ; ಈಗ ಇದ್ದುದರಲ್ಲೇ ಸ್ವಲ್ಪ ಉಳಿತಾಯ ಮಾಡುತ್ತೇನೆ ವವರು ಬಹಳ? ಜನ. ಸಬ್ಸಿಡಿ ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗುವ ಕಾರಣ ಸರ್ಕಾರೀ ಹಣದ ಸೋರಿಕೆಯನ್ನು ವ್ಯಾಪಕವಾಗಿ ತಡೆಯಲು ಸಾಧ್ಯವಾಗಿದೆ.
ಮುದ್ರಾ ಬ್ಯಾಂಕ್
ಕಾರ್ಪೊರೇಟ್ ಅಲ್ಲದ ಕೃಷಿಯೇತರ ಕ್ಷೇತ್ರದ ಆದಾಯವೃದ್ಧಿಗಾಗಿ ಸ್ಥಾಪಿಸಿದ್ದು ಮುದ್ರಾ ಬ್ಯಾಂಕ್. ಈವರೆಗೂ ಅದು ಒಂದು ಲಕ್ಷ ಕೋಟಿಗೂ ಅಧಿಕ ಸಾಲವನ್ನು ವಿತರಿಸಿದೆ. ಸಾಲ ಪಡೆದವರಲ್ಲಿ ಶೇ. ೭೭ ಜನ ಮಹಿಳೆಯರು. ಶೇ. ೨೨ರ? ಜನ ಪರಿಶಿ? ಜಾತಿ ಮತ್ತು ಪಂಗಡದವರು. ಸಣ್ಣ ಮತ್ತು ಮಧ್ಯಮಗಾತ್ರದ ಉದ್ಯಮಿಗಳನ್ನು ಗಮನದಲ್ಲಿರಿಸಿಕೊಂಡು ೨೦೧೫ರ ಮುಂಗಡಪತ್ರದಂತೆ ಇದನ್ನು ಸ್ಥಾಪಿಸಲಾಯಿತು. ಪ್ರಸ್ತುತ ಸಂಸ್ಥೆಯ ನೆರವು ಪಡೆದು ಬಟ್ಟೆಯಂತಹ ವಸ್ತುಗಳ ಉತ್ಪಾದನೆಗೆ ತೊಡಗುವವರಿಗೆ ಚೀನಾದ ವಸ್ತುಗಳ ಸ್ಪರ್ಧೆ ಒಂದು ಸಮಸ್ಯೆಯಾದರೆ ಸಣ್ಣ ಕೈಗಾರಿಕೆಯವರು ಉತ್ಪಾದಿಸಿದ ವಸ್ತುಗಳನ್ನು ಖರೀದಿಸುವ ಸರ್ಕಾರೀ ಹಾಗೂ ಖಾಸಗಿ ದೊಡ್ಡ ಉದ್ಯಮಿಗಳು ಬೇಗ ಹಣ ಕೊಡದಿರುವುದು ಒಂದು ಸಮಸ್ಯೆಯಾಗಿದೆ.
ಮೇಕ್ ಇನ್ ಇಂಡಿಯಾ (ಭಾರತದಲ್ಲೇ ಉತ್ಪಾದಿಸಿ) ವಿದೇಶೀ ಬಂಡವಾಳ ಹೂಡಿಕೆಯ ಆಕ?ಣೆ ಮತ್ತು ಉದ್ಯೋಗಸೃಷ್ಟಿಗಾಗಿ ಮೋದಿ ಸರ್ಕಾರ ರೂಪಿಸಿದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಬಂಡವಾಳ ಬರಲು ಮತ್ತು ಉತ್ಪಾದಿಸಿದ ವಸ್ತುವಿಗೆ ಮಾರುಕಟ್ಟೆ ಒದಗಿಸಲು ಹೀಗೆ ಎರಡೂ ರೀತಿಯಲ್ಲಿ ಕ?ವಾಗಿದೆ. ಇದರ ಉದ್ದೇಶ ಭಾರತವನ್ನು ಜಾಗತಿಕ ಉತ್ಪಾದನಾ ಪವರ್ಹೌಸ್ ಮಾಡುವುದಾಗಿತ್ತು. ಇದರಿಂದಾಗಿ ವಿದೇಶೀ ನೇರಹೂಡಿಕೆ(ಎಫ್ಡಿಐ)ಯಲ್ಲಿ ಶೇ. ೧೮ರ? ಏರಿಕೆಯಾಗಿ ೨೦೧೫ರ ಜನವರಿ-ಸೆಪ್ಟೆಂಬರ್ ಅವಧಿಯಲ್ಲಿ ೨,೬೫೧ ಕೋಟಿ ರೂ. ಆಯಿತು. ೨೦೧೩ರಲ್ಲಿ ೨,೨೦೦ ಕೋಟಿ ರೂ. ಇದ್ದುದು ಮುಂದಿನ ವ? ೨,೮೭೮ ಕೋಟಿಯಾಗಿತ್ತು. ೨೦೧೬ರಲ್ಲಿ ಶೇ. ೪೦-೪೫ರ? ಏರಿಕೆಯಾಗುವ ನಿರೀಕ್ಷೆಯಿದೆ. ಇದು ನಿಜವಾಗಿಯೂ ಭಾರತದ ಆರ್ಥಿಕತೆಯ ಸ್ವಾಸ್ಥ್ಯದ ಸೂಚಕವಾಗಿದ್ದು, ಜಾಗತಿಕ ಕುಸಿತದ ನಡುವೆಯೂ ಭಾರತ ಮಿನುಗುವ ನಕ್ಷತ್ರವಾಗಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳು ಶ್ಲಾಘಿಸಿವೆ.
ಉದ್ಯೋಗಸೃಷ್ಟಿಯು ಎನ್ಡಿಎ ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದ್ದು, ಆ ಬಗ್ಗೆ ಸರ್ಕಾರ ಎರಡು ಕ್ರಮಗಳನ್ನು ಕೈಗೊಂಡಿತು. ಕಂಪೆನಿಗಳು ತಮ್ಮ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಿದರೆ ಅವುಗಳ ತೆರಿಗೆಯಲ್ಲಿ ಶೇ. ೩೦ರ? ಕಡಿತ ಮಾಡುವುದು ಒಂದು; ಇದು ೨೫ ಸಾವಿರ ರೂ.ವರೆಗಿನ ಸಂಬಳದ ಕೆಲಸಗಳಿಗೆ ಅನ್ವಯವಾಗುತ್ತದೆ. ೧೫ ಸಾವಿರ ರೂ. ವರೆಗಿನ ಮೂರು ವ? ಪಿಂಚಣಿ ನೀಡುವುದು ಇನ್ನೊಂದು. ಇದರಿಂದ ಲಕ್ಷಾಂತರ ಉದ್ಯೋಗಗಳು ಸೃಷ್ಟಿ ಆಗಬಹುದೆಂದು ಪ್ರಧಾನಿ ಮೋದಿ ನಿರೀಕ್ಷಿಸಿದ್ದಾರೆ.
ವಿದೇಶಾಂಗ ನೀತಿಯು ಮೋದಿ ಸರ್ಕಾರದ ಅತ್ಯಂತ ಯಶಸ್ವಿ ಕ್ಷೇತ್ರಗಳಲ್ಲೊಂದು. ತಮ್ಮ ಪ್ರಮಾಣವಚನ ಸಮಾರಂಭಕ್ಕೇ ಪಾಕಿಸ್ತಾನ ಸೇರಿದಂತೆ ಸಾರ್ಕ್ದೇಶಗಳ ಎಲ್ಲ ಪ್ರಮುಖರನ್ನೂ ಆಮಂತ್ರಿಸುವ ಮೂಲಕ, ನರೆಂದ್ರ ಮೋದಿ ಅವರು ಹಲವರ ಹುಬ್ಬೇರುವಂತೆ ಮಾಡಿದರು. ನಿರಂತರವಾಗಿ ಎರಡು ವ? ಅವರ ಸಾಧನೆ ಅದೇ ಹಾದಿಯಲ್ಲಿ ಮುಂದುವರಿಯಿತು. ಪರಿಣಾಮವಾಗಿ ಇಡೀ ಜಗತ್ತಿನಲ್ಲಿ ಭಾರತದ ಕೀರ್ತಿ-ಘನತೆಗಳು ಹೆಚ್ಚುತ್ತಾ ಬಂದಿವೆ. ವಿಶ್ವಸಂಸ್ಥೆಯಲ್ಲಿ ತನ್ನ ಅಭಿಪ್ರಾಯವನ್ನು ಮಂಡಿಸುವಲ್ಲಿ ಮೋದಿ ಸಫಲರಾಗಿದ್ದಾರೆ. ಸುಧಾರಣಾ ಸಮಿತಿಯು ತಯಾರಿಸಿದ ಪಾಠ್ಯದ ಆಧಾರದಲ್ಲಿ ಸುಧಾರಣೆಯನ್ನು ತರಬೇಕೆಂಬ ಅವರ ವಾದವನ್ನು ಎಲ್ಲ ದೇಶಗಳು ಒಪ್ಪಿವೆ. ಜೂನ್ ೨೧ನ್ನು ಅಂತಾರಾಷ್ಟ್ರೀಯ ಯೋಗದಿನವಾಗಿ ಆಚರಿಸಲು ಸಾಧ್ಯವಾದುದಂತೂ ಸ್ವತಃ ಮೋದಿಯವರ ವೈಯಕ್ತಿಕ ಸಾಧನೆ ಎಂದರೂ ತಪ್ಪಲ್ಲ. ಮೋದಿ ಅವರು ಮುಂದಿಟ್ಟ ಪ್ರಸ್ತಾವವನ್ನು ಬಹುತೇಕ ಎಲ್ಲ ಸದಸ್ಯರಾ?ಗಳು ಒಪ್ಪಿಕೊಂಡು ಅದಕ್ಕೆ ವಿಶ್ವಸಂಸ್ಥೆಯ ಅಂಕಿತವೂ ಬಿದ್ದು ಕಳೆದ ವ? ಇಡೀ ಜಗತ್ತಿನಲ್ಲಿ ಯೋಗ ದಿನಾಚರಣೆ ಜರಗಿತು; ಎರಡನೆಯ ಅಂತಾರಾಷ್ಟ್ರೀಯ ಯೋಗದಿನವೂ ಇದೀಗ ನಡೆದಿದೆ.
ಸಬ್ ಕಾ ಸಾಥ್
’ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಪ್ರಧಾನಿ ಅವರಿಗೆ ಪ್ರಿಯವಾದ ಒಂದು ಘೋ?ಣೆ. ಒಟ್ಟಾಗಿ ಮುಂದುವರಿದು ಎಲ್ಲರ ಅಭಿವೃದ್ಧಿ ಸಾಧಿಸಬೇಕೆಂಬುದು ಅವರ ಆಶಯ. ಈ ಸರ್ಕಾರದ ಮತ್ತು ನಾಯಕರ ಪ್ರಾಮಾಣಿಕ ಆಶಯದ ಬಗ್ಗೆ ಜನರು ವಿಶ್ವಾಸವನ್ನು ಹೊಂದಿದ್ದಾರೆ. ’ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಕಾರ್ಯಕ್ರಮದ ಬದ್ಧತೆ ಅವರಿಗೆ ಮನವರಿಕೆಯಾಗಿದೆ. ಸಾಮಾಜಿಕ-ಆರ್ಥಿಕ ಪ್ರಜಾಪ್ರಭುತ್ವವನ್ನು ಆಳಗೊಳಿಸಿದ್ದು, ಆರ್ಥಿಕ ಪ್ರಗತಿಯ ಮುಂದುವರಿಕೆ, ಜಾಗತಿಕ ರಾಜಕೀಯದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿಕೊಂಡದ್ದು, ನಿ?ಳಂಕ ಆಡಳಿತ, ಮತ್ತು ಪರಿಣಾಮಕ್ಕೆ ಒತ್ತು ನೀಡುವ ಮೂಲಕ ಹೊಸ ಆಡಳಿತ ಸಂಸ್ಕೃತಿಯನ್ನು ತಂದದ್ದು ಈ ಸರ್ಕಾರದ ಪ್ರಮುಖ ಸಾಧನೆಗಳು ಎಂದು ಬಿಜೆಪಿ ಉಪಾಧ್ಯಕ್ಷ ವಿನಯ್ ಸಹಸ್ರಬುದ್ಧೆ ಹೇಳಿದ್ದಾರೆ.

ಸಂಶೋಧನೆ ಮತ್ತು ಹೊಸ ಚಿಂತನೆಗಳು ಎನ್ಡಿಎ ಸರ್ಕಾರದ ಆಡಳಿತದ ಅಡಿಗಲ್ಲಾಗಿದೆ. ಅವುಗಳಲ್ಲಿ ವಿಶ್ವಾಸದೊಂದಿಗೆ ಅನು?ನಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ. ಆ ಮೂಲಕ ಮೋದಿ ಪರಿವರ್ತನೆಯನ್ನು ತರುತ್ತಿದ್ದಾರೆ. ಯೂರಿಯಾ ಹರಳುಗಳ ಮೇಲೆ ಬೇವಿನೆಣ್ಣೆ ಆವರಣ (ನೀಮ್ ಕೋಟೆಡ್ ಯೂರಿಯಾ) ಅಂತಹ ಒಂದು ಚಿಂತನೆ. ಅದನ್ನು ಕೃಷಿಯಲ್ಲದೆ ಬೇರೆ ಯಾವುದಕ್ಕೂ ಬಳಸುವಂತಿಲ್ಲ. ಕೃಷಿ ವಿಜ್ಞಾನಿಗಳೊಂದಿಗೆ ಅವರು ಹಲವು ಸಭೆ ನಡೆಸಿದ್ದು ಒಮ್ಮೆ ಈ ಪ್ರಸ್ತಾಪ ಬಂದಾಗ ಮೋದಿ ಅದನ್ನೇ ಗಟ್ಟಿಯಾಗಿ ಹಿಡಿದುಕೊಂಡರು. ಹಿಂದೆ ಬಹಳ? ಯೂರಿಯಾ ಕೃಷಿಯೇತರ ಉದ್ದೇಶಕ್ಕೆ ಹೋಗಿ ಕೃಷಿಗೆ ಕೊರತೆಯಾಗುತ್ತಿತ್ತು; ರೈತರು ಪ್ರತಿಭಟಿಸುತ್ತಿದ್ದರು. ತಮಗೆ ಹೆಚ್ಚು ಯೂರಿಯಾ ಕೊಡಿಸಿ ಎಂದು ಮುಖ್ಯಮಂತ್ರಿಗಳು ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದರು. ಪ್ರಸ್ತುತ ಬೇವಿನ ಪ್ರಯೋಗ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಿತು.
ಕೃಷಿಯ ನೀರಾವರಿ ರಾಜ್ಯಸರ್ಕಾರದ ವಿ?ಯ. ಈ ಸಮಸ್ಯೆ ಶೀಘ್ರದಲ್ಲಿ ಪರಿಹಾರ ಆಗುವಂಥದ್ದಲ್ಲ. ಅದಕ್ಕಾಗಿ ಕೇಂದ್ರಸರ್ಕಾರ ಬೆಳೆವಿಮೆಗೆ ಒತ್ತುನೀಡುವ ಉದ್ದೇಶದೊಂದಿಗೆ ’ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ’ಯನ್ನು ಜಾರಿಗೆ ತಂದಿದೆ. ಪ್ರತಿ ಸೀಸನ್ನಿಗೆ ಒಂದು ಪ್ರೀಮಿಯಮ್. ಖಾರಿಫ್ಗೆ ಶೇ. ೨, ರಾಬಿಗೆ ಶೇ. ೧.೫, ಉಳಿದ ಆರ್ಥಿಕ ಹೊರೆಯನ್ನು ಸರ್ಕಾರ ಹೊರುತ್ತದೆ.
’ಐಡಿಯಾಗಳ ಕಾರಂಜಿ’
’ಪ್ರಧಾನಿಯವರು ಐಡಿಯಾಗಳ ಕಾರಂಜಿ’ ಎನ್ನುತ್ತಾರೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಜಿ.ವಿ.ಎಲ್. ನರಸಿಂಹರಾವ್ ಅವರು. ಮಾಡುವ ಯಾವುದೇ ಕೆಲಸವನ್ನು ಇನ್ನೆ? ಚೆನ್ನಾಗಿ ಹೇಗೆ ಮಾಡಬಹುದು ಎಂದವರು ಕೇಳುತ್ತಾರೆ. ಅವರಲ್ಲಿ ಐಡಿಯಾಗಳು ತುಂಬಿತುಳುಕುತ್ತಾ ಇರುತ್ತವೆ ಮತ್ತು ಇತರರ ಐಡಿಯಾಗಳನ್ನು ಅವರು ಸ್ವಾಗತಿಸುತ್ತಾರೆ. ಪೂರ್ತಿ ಹೊಸತೇ ಆಗಬೇಕೆಂದೇನಿಲ್ಲ; ಆದರೆ ಅವರು ಬದಲಾವಣೆಯನ್ನು ಬಯಸುತ್ತಾರೆ. ಐಡಿಯಾಗಳು ಅವರಿಗೆ ಕೈಕೊಡುವುದಿಲ್ಲ ಎಂದು ನರಸಿಂಹರಾವ್ ವಿವರಿಸುತ್ತಾರೆ. ’ಪ್ರಗತಿ’ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ಮೋದಿ ಎಲ್ಲ ರಾಜ್ಯಗಳ ಮುಖ್ಯಕಾರ್ಯದರ್ಶಿಗಳನ್ನು ಸಂಪರ್ಕಿಸಿ ೧೫ ದಿನಗಳಿಗೊಮ್ಮೆ ಕೇಂದ್ರದಲ್ಲಿ ಬಾಕಿ ಇರುವ ಆಯಾ ರಾಜ್ಯದ ಯೋಜನೆಗಳ ಬಗ್ಗೆ ಚರ್ಚಿಸುತ್ತಾರೆ. ಸುಮಾರು ೧೫ರಿಂದ ೫೦ ಯೋಜನೆಗಳ ಕುರಿತು ಚರ್ಚಿಸಿ ಅವುಗಳನ್ನು ತ್ವರಿತಗೊಳಿಸುತ್ತಾರೆ. ಯುಪಿಎ ಸರ್ಕಾರದ ವೇಳೆ ದಿನಕ್ಕೆ ಸರಾಸರಿ ೨ ಕಿ.ಮೀ. ಹೆದ್ದಾರಿ ನಿರ್ಮಾಣವಾದರೆ ಈಗ ಅದು ೨೨ ಕಿ.ಮೀ.ಗೇರಿದೆ. ೨೦೧೮ರ ಹೊತ್ತಿಗೆ ನಿರಂತರ ವಿದ್ಯುತ್ ಪೂರೈಕೆ, ದೇಶದ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಮುಂತಾದವು ಕೇಂದ್ರಸರ್ಕಾರದ ಕಾಲಬದ್ಧ ಯೋಜನೆಗಳಲ್ಲಿ ಒಂದು.
ಅಬ್ಸರ್ವರ್ ರೀಸರ್ಚ್ ಫೌಂಡೇಶನ್ನ ಸುಧೀಂದ್ರ ಕುಲಕರ್ಣಿ ಅವರ ಪ್ರಕಾರ ಮೋದಿ ಸರ್ಕಾರ ಕೈಗೊಂಡ ಕೆಲವು ಕ್ರಮಗಳ ಪರಿಣಾಮ ಕಾಣಲು ವ?ಗಳೇ ಬೇಕಾಗಬಹುದು. ಆದರೆ ಮಂತ್ರಿ ಹಾಗೂ ಮೇಲ್ಮಟ್ಟ ಅಧಿಕಾರಿಗಳ ಭ್ರ?ಚಾರ ಇಳಿದಿದೆ. ಹೊಸ ಯೋಜನೆಗಳಾದ ’ಸ್ವಚ್ಛ ಭಾರತ್,’ ’ಮೇಕ್ ಇನ್ ಇಂಡಿಯಾ’ಗಳಲ್ಲಿ ಪ್ರಗತಿ ಇದೆ. ರಸ್ತೆ ಹಾಗೂ ಬಂದರು ನಿರ್ಮಾಣ, ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ ಆಗಿದೆ. ವಿದೇಶಾಂಗ ನೀತಿಯಲ್ಲಿ ಮೋದಿ ಚಾಲಕಶಕ್ತಿ ತಂದಿದ್ದಾರೆ ಎನ್ನುವ ಕುಲಕರ್ಣಿ, ಆರ್ಥಿಕತೆಯ ಪ್ರಗತಿ ಮತ್ತು ಉದ್ಯೋಗಸೃಷ್ಟಿಗಳ ವೇಗ ಹೆಚ್ಚಬೇಕು; ಕೇಂದ್ರ-ರಾಜ್ಯಗಳ ಸಂಬಂಧದಲ್ಲಿ ರಾಜಕೀಯದ ಪ್ರವೇಶ ಆಗಬಾರದೆಂಬ ಸಲಹೆ ನೀಡಿದ್ದಾರೆ.
ಭಾರತೀಯ ಮಜ್ದೂರ್ ಸಂಘ (ಬಿಎಂಎಸ್)ದ ಪ್ರಧಾನ ಕಾರ್ಯದರ್ಶಿ ವ್ರಜೇಶ್ ಉಪಾಧ್ಯಾಯ ಅವರು, ಎನ್ಡಿಎ ಸರ್ಕಾರದಿಂದ ಪ್ರಗತಿಯ ದಿಕ್ಕು ಬದಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವು ಉಪಕ್ರಮಗಳು ಪ್ರಗತಿಪರವಾಗಿವೆ. ಸಾಮಾಜಿಕ ಭದ್ರತೆ, ಮುದ್ರಾಬ್ಯಾಂಕ್ ಸ್ಥಾಪನೆಗಳು ಗುಣಾತ್ಮಕ ಅಂಶಗಳು ಎಂದ ಅವರು, ಸರ್ಕಾರ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂಬ ಸಲಹೆ ನೀಡಿದ್ದಾರೆ.
ಭಾರತ ಕೂಡಾ ಅಭಿವೃದ್ಧಿ ಹೊಂದಬಲ್ಲದೆಂಬ ವಿಶ್ವಾಸವನ್ನು ಮೂಡಿಸಿದ್ದೇವೆ. ಶಿಕ್ಷಣ, ವಿದ್ಯುತ್ ಉತ್ಪಾದನೆ ಮತ್ತು ಉದ್ಯೋಗಸೃಷ್ಟಿಯ ಕ್ಷೇತ್ರಗಳಲ್ಲಿ ದೇಶದ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂಬ ಭಾವನೆ ಇತ್ತು. ಮೋದಿ ಅವರ ನೇತೃತ್ವದಲ್ಲಿ ನಾವದನ್ನು ಸಂಪೂರ್ಣ ಬದಲಾಯಿಸಿದ್ದೇವೆ ಎನ್ನುತ್ತಾರೆ ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರು. ಎಫ್ಡಿಐಗೆ ಮುಚ್ಚಿದ ಬಾಗಿಲು ತೆರೆದಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ಶೇ. ೪೯, ಬಹುಬ್ರಾಂಡಿನ ಚಿಲ್ಲರೆ ವ್ಯಾಪಾರದಲ್ಲಿ ಶೇ. ೧೦೦ ವಿದೇಶೀ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದ್ದೇವೆ ಎನ್ನುವ ಸಿನ್ಹಾ ಮುಂದುವರಿದು, ಆತಂಕ ಬೇಡ. ಇಂದಿಗೂ ದೇಶದ ಬಹುತೇಕ ಕೈಗಾರಿಕೆಗಳು ಭಾರತೀಯರ ಕೈಯಲ್ಲೇ ಇವೆ. ರಕ್ಷಣಾ ಕ್ಷೇತ್ರದಲ್ಲಿ ಶೇ. ೪೯ರ? ವಿದೇಶೀ ಹೂಡಿಕೆ ಇದ್ದರೂ ಆಡಳಿತದ ನಿಯಂತ್ರಣ ನಮ್ಮ ಕೈಯಲ್ಲೇ ಇರಬೇಕೆಂದು ನಿರ್ಬಂಧ ವಿಧಿಸಿದ್ದೇವೆ ಎಂದು ಸ್ಪ?ಪಡಿಸಿದ್ದಾರೆ.
ಕಪ್ಪುಹಣ ಹೊರಕ್ಕೆ
ಕಪ್ಪುಹಣದ ನಿಯಂತ್ರಣಕ್ಕೆ ಹಿಂದೆ ಯಾರೂ ನಮ್ಮ? ಪ್ರಯತ್ನ ಮಾಡಿರಲಿಲ್ಲ. ವಿದೇಶದಲ್ಲಿರುವ ಹಣವನ್ನು ತರುವ ಪ್ರಯತ್ನದ ಜೊತೆಗೆ ಹಣ ಹೊಸದಾಗಿ ಹೊರಗೆ ಹೋಗದಂತೆ ಲಗಾಮು ಹಾಕಲಾಗುತ್ತಿದೆ. ವಿದೇಶೀ ಕಪ್ಪುಹಣದ ಬಗ್ಗೆ ಕಾಯ್ದೆ ಮಾಡಲಾಗುತ್ತಿದೆ. ಈಚೆಗೆ ಪನಾಮಾ ಪೇಪರ್ಸ್ನಲ್ಲಿ ಬಂದ (ಖಾತೆದಾರರ) ಹೆಸರುಗಳ ಕುರಿತು ತನಿಖೆ ಮತ್ತು ಕ್ರಮ ಆಗಲಿದೆ. ಜೂನ್ ಒಂದರಿಂದ ಸೆಪ್ಟೆಂಬರ್ ಕೊನೆಯ ತನಕ ಅಘೋಷಿತ ಸಂಪತ್ತಿನ ಘೋ?ಣೆಗೆ ಅವಕಾಶ ಕಲ್ಪಿಸಿದ್ದು, ಘೋಷಿಸಿದ ಸಂಪತ್ತನ್ನು ದಂಡ ವಿಧಿಸಿ ಸಕ್ರಮಗೊಳಿಸಲಾಗುವುದು. ಕಪ್ಪುಹಣ ಸೃಷ್ಟಿಗೆ ತಡೆ ಹಾಕಲಾಗುವುದು. ಕಾಯ್ದೆ ಮೂಲಕ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಗದು ವ್ಯವಹಾರವನ್ನು ನಿಲ್ಲಿಸಲಾಗಿದೆ ಎಂದು ಜಯಂತ್ ಸಿನ್ಹಾ ತಿಳಿಸಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕಾಯ್ದೆಯಿಂದ ಬಹಳ? ಪ್ರಯೋಜನವನ್ನು ನಿರೀಕ್ಷಿಸಲಾಗಿದೆ. ಆದರೆ ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಕಾರಣ ಸಂಸತ್ತಿನ ಒಪ್ಪಿಗೆ ಪಡೆಯಲು ಸರ್ಕಾರಕ್ಕೆ ಕ?ವಾಗಿದೆ.

ಎನ್ಡಿಎ ಸರ್ಕಾರದ ಆರ್ಥಿಕ ಯಶಸ್ಸಿನಲ್ಲಿ ರಿಸವ್ಬ್ಯಾಂಕ್ ಗವರ್ನರ್, ಅಂತಾರಾಷ್ಟ್ರೀಯ ಮಟ್ಟದ ಆರ್ಥಿಕ ತಜ್ಞ ರಘುರಾಮ್ ರಾಜನ್ ಅವರ ಪಾಲು ಕೂಡಾ ಇದೆ. ೨೦೧೩ರ ಸೆಪ್ಟೆಂಬರ್ನಲ್ಲಿ ದೇಶದ ಆರ್ಥಿಕಸ್ಥಿತಿ ಸ್ವಲ್ಪಮಟ್ಟಿಗೆ ಕ?ದಲ್ಲೇ ಇದ್ದಾಗ ಅವರು ತಮ್ಮ ಪ್ರತಿಷ್ಠಿತ ಹುದ್ದೆಯನ್ನು ವಹಿಸಿಕೊಂಡರು. ದೇಶದ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರಲು ಅವರು ದಿಟ್ಟ ನಿರ್ಧಾರ ಕೈಗೊಂಡು ಅನು?ನಗೊಳಿಸಿದ ಕಾರಣ ಡಾಲರ್ ಎದುರು ರೂಪಾಯಿಯ ಸ್ಥಿತಿ ಸುಧಾರಿಸಿತು. ಹಣದುಬ್ಬರಕ್ಕೆ ಕಡಿವಾಣಹಾಕಿ ದೇಶದ ಅರ್ಥವ್ಯವಸ್ಥೆಯ ಬಗ್ಗೆ ವಿದೇಶೀ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿದರು. ಅದರಿಂದಾಗಿ ೧,೦೦೦ – ೧,೫೦೦ ಕೋಟಿ ಡಾಲರ್ಗಳ? ಹಣ ಹರಿದುಬಂತು. ಬ್ಯಾಂಕ್ ಬಡ್ಡಿದರವನ್ನು ತೀವ್ರವಾಗಿ ಕಡಿತಗೊಳಿಸಬೇಕೆಂದು ಕಾರ್ಪೊರೇಟ್ ಸಂಸ್ಥೆಗಳ ಒತ್ತಡ ಇದ್ದಾಗಲೂ ಅದಕ್ಕೆ ಮಣಿಯಲಿಲ್ಲ. ಏಕೆಂದರೆ ಅದರಿಂದ ಸ್ಥಿರ ಠೇವಣಿದಾರರ ಮತ್ತು ಸಣ್ಣ ಉಳಿತಾಯಗಾರರ ಆದಾಯಕ್ಕೆ ಖೋತಾ ಆಗುತ್ತದೆ. ಮೂರು ವ?ಗಳಲ್ಲಿ ರೆಪೋದರವನ್ನು ಶೇ. ೧.೫೦ರ? ಮಾತ್ರ ಇಳಿಸಿದರು. ಜಾಗತಿಕ ಅರ್ಥವ್ಯವಸ್ಥೆ ಅನಿಶ್ಚಿತ ಸ್ಥಿತಿಯಲ್ಲಿರುವ ಕಾರಣ ದೇಶದ ವ್ಯವಸ್ಥೆಯನ್ನು ರಕ್ಷಿಸಲು ಕಠಿಣ ಹಣಕಾಸು ನೀತಿ ಅನುಸರಿಸಲು ಸರ್ಕಾರದ ಮೇಲೆ ಒತ್ತಡ ತಂದರು. ಅದರಿಂದ ಸರ್ಕಾರೀ ವೆಚ್ಚಕ್ಕೆ ಕಡಿವಾಣ ಬಿತ್ತು. ಸಚಿವ ಜೇಟ್ಲಿ ರಾಜನ್ ಪರ ನಿಲವು ತಳೆದಿದ್ದು, ಕಳೆದ ಮುಂಗಡಪತ್ರದಲ್ಲಿ ಅದು ಕಾಣಿಸಿದೆ. ಬ್ಯಾಂಕಿಂಗ್ ಸುಧಾರಣೆ, ಉಳಿತಾಯ ಹೆಚ್ಚಳ, ಮುಕ್ತ ಮಾರುಕಟ್ಟೆ ಪರ ನೀತಿ ರಘುರಾಂ ರಾಜನ್ ಅವರ ಇತರ ಕೆಲವು ಸಾಧನೆಗಳು.
ಓರ್ವ ಸುಷ್ಮಾ ಅಭಿಮಾನಿ
’ಜಿ-೨೦’, ’ಸಾರ್ಕ್’, ’ಶಾಂಘೈ ಸಹಕಾರ ಸಂಘಟನೆ’ ಮುಂತಾದ ಹಲವು ಬಹುರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವು ಪ್ರಮುಖ ಸ್ಥಾನವನ್ನು ಗಳಿಸಿಕೊಂಡಿದೆ. ಭಾರತ- ಆಫ್ರಿಕಾ ಶೃಂಗಸಭೆಯನ್ನು ಸಂಘಟಿಸುವ ಮೂಲಕ ಆಫ್ರಿಕದ ದೇಶಗಳ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಕೆಲವು ಸಮಯದ ಹಿಂದೆ ಮಲೆಯಾಳಂನ ಒಂದು ಸುದ್ದಿಚಾನೆಲ್ನಲ್ಲಿ ಕುತೂಹಲಕರ ಘಟನೆಯೊಂದು ನಡೆಯಿತು. ಸುಷ್ಮಾ ಸ್ವರಾಜ್ ಅವರ ಅನಾರೋಗ್ಯದ ಬಗ್ಗೆ ಫೇಸ್ಬುಕ್ನಲ್ಲಿ ಒಂದು ಪೋಸ್ಟ್ ಹಾಕಲಾಗಿತ್ತು. ಹಲವರಿಂದ, ಮುಖ್ಯವಾಗಿ ಕೊಲ್ಲಿರಾ?ಗಳಲ್ಲಿರುವ ಭಾರತೀಯರಿಂದ ಅದಕ್ಕೆ ತುಂಬ ಪ್ರತಿಕ್ರಿಯೆಗಳು ಬಂದವು. ಅದರಲ್ಲಿ ಒಬ್ಬಾತ ತನ್ನ ಪ್ರಾಮಾಣಿಕ ಅನಿಸಿಕೆಯನ್ನು ಹೀಗೆ ತೋಡಿಕೊಂಡಿದ್ದರು: ನಮ್ಮ ಮಂತ್ರಿ ಸುಷ್ಮಾ ಅವರ ಸುದ್ದಿಯನ್ನು ಹೀಗೆ ಕೆರಳಿಸುವಂತೆ ಹಾಕಬೇಡಿ. ನನ್ನಂತೆ ವಿದೇಶಗಳಲ್ಲಿ ದುಡಿಯುವ ಅಸಹಾಯಕ ಅನಿವಾಸಿ ಭಾರತೀಯ (ಎನ್ಆರ್ಐ)ರಿಗೆ ಅವರು ಏಕೈಕ ಆಶ್ರಯವಾಗಿದ್ದಾರೆ. ರಾಜಕೀಯವಾಗಿ ಅವರು ಒಂದು ಧ್ರುವವಾದರೆ ನಾನು ಇನ್ನೊಂದು ಧ್ರುವ ಇರಬಹುದು. ಆದರೂ ಆಕೆ ನಮ್ಮ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ. ಕಾರಣ ಕರ್ತವ್ಯದ ಬಗೆಗಿನ ಅವರ ಬದ್ಧತೆ ಮತ್ತು ನಿ?. ಯುದ್ಧಪೀಡಿತ ದೇಶಗಳಲ್ಲಿರುವ ಭಾರತೀಯರ ಜೀವ ಉಳಿಸುವಲ್ಲಿ ವಿದೇಶಾಂಗ ಇಲಾಖೆ ಹಿಂದೆಂದೂ ಇಲ್ಲದ ಸಾಧನೆಯನ್ನು ಮಾಡಿದೆ. ನಾವಿಲ್ಲಿ ಸುರಕ್ಷಿತವಾಗಿ ಇದ್ದೇವೆ ಎಂದರೆ ಅದಕ್ಕೆ ಕಾರಣ ಮೋದಿ ಸರ್ಕಾರದ ವಿದೇಶಾಂಗ ನೀತಿ, ಕಾರ್ಯಶೈಲಿಗಳೇ. ಈ ಯಶಸ್ಸು, ಶ್ಲಾಘನೆಗಳಲ್ಲಿ ಸುಷ್ಮಾ ಅವರಂತೆಯೇ ರಾಜ್ಯಸಚಿವ ವಿ.ಕೆ ಸಿಂಗ್ ಮತ್ತು ಪ್ರಧಾನಿ ಅವರ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರ ಕೊಡುಗೆಯನ್ನು ಕೂಡ ನೆನಪಿಡಬೇಕು.
ಎರಡು ವರ್ಷಗಳ ಹಿಂದೆ ವೀಸಾವನ್ನೇ ನಿರಾಕರಿಸಿದ್ದ ಅಮೆರಿಕಾ ಇಂದು ಮೋದಿ ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದು ನಮ್ಮ ಕಣ್ಣಮುಂದಿದೆ. ಅಮೆರಿಕದ ಸಂಸತ್ (ಕಾಂಗ್ರೆಸ್)ನಲ್ಲಿ ಇವರ ಭಾ?ಣ ದಾಖಲೆಯನ್ನೇ ನಿರ್ಮಿಸಿದೆ. ಅಮೆರಿಕ ಸೇರಿದಂತೆ ಹಲವು ಪ್ರಭಾವಿ ದೇಶಗಳಿಗೆ ಸಮೀಪವಾಗುವ ಮೂಲಕ ಮೋದಿ ನಮ್ಮ ಮಗ್ಗುಲಮುಳ್ಳು ಚೀನಾಕ್ಕೆ ಉತ್ತರ ನೀಡುತ್ತಿದ್ದಾರೆ ಎನ್ನಬಹುದು. ಮೋದಿ ಅವರ ತಂತ್ರಗಾರಿಕೆಯ ಮುಂದೆ ಜಾಗ್ರತೆಯಿಂದ ವ್ಯವಹರಿಸಬೇಕೆನ್ನುವ ಎಚ್ಚರ ಚೀನಾದ ಪ್ರಮುಖರಲ್ಲಿ ಬಂದಿರಲಿಕ್ಕೆ ಸಾಕು. ಇರಾನಿನಲ್ಲಿ ಚೌಬಾಹರ್ ಬಂದರು ನಿರ್ಮಾಣದ ಬಗ್ಗೆ ಈಚೆಗೆ ಮಾಡಿಕೊಂಡ ಒಪ್ಪಂದ ಅದಕ್ಕೆ ಉತ್ತಮ ಉದಾಹರಣೆಯಾಗಿದೆ. ಪಾಕಿಸ್ತಾನದ ನೆಲವನ್ನು ಬಳಸಿಕೊಳ್ಳದೆ ಆಫಘನಿಸ್ತಾನ ಮತ್ತು ಯೂರೋಪಿನೊಂದಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗುವ ಈ ಬಂದರು ಒಂದೇ ಕಲ್ಲಿಗೆ ಎರಡಕ್ಕಿಂತ ಹೆಚ್ಚು ಹಕ್ಕಿಗಳನ್ನು ಹೊಡೆಯುವಂತಿದೆ. ಈ ಯೋಜನೆಯ ಅಂದಾಜು ವೆಚ್ಚ ೩,೩೭೦ ಕೋಟಿ ರೂ. ಪಾಕಿಸ್ತಾನವು ಚೀನಾದ ನೆರವಿನಿಂದ ನಿರ್ಮಿಸುತ್ತಿರುವ ಗ್ವಾದಾರ್ ಬಂದರಿಗೆ ಇದು ಸಡ್ಡುಹೊಡೆಯುವಂತಿದ್ದು, ರಾಜತಾಂತ್ರಿಕ ಮತ್ತು ಆರ್ಥಿಕ ಹತೋಟಿ ಸಾಧಿಸಲು, ಹಾಗೆಯೇ ಹಿಂದೂಮಹಾಸಾಗರಕ್ಕೆ ನೌಕಾಪಡೆ ಕಳುಹಿಸಲು ಅನುಕೂಲಕರವಾಗಿದೆ. ಇದು ಹಿಂದೆಯೇ ಭಾರತದ ಯೋಜನೆಯಲ್ಲಿ ಇತ್ತಾದರೂ ಅದು ಸಾಧಿಸಲು ಮೋದಿ ಅವರು ಬರಬೇಕಾಯಿತು. ಈಗ ಭಾರತ ವಿಶ್ವದ ಪ್ರತಿ?ಯ ಕ್ಷಿಪಣಿಕೂಟಕ್ಕೆ ಸೇರುವ ಪ್ರಯತ್ನದಲ್ಲಿದೆ. ಬಾಂಗ್ಲಾ ಗಡಿವಿವಾದವನ್ನು ಪರಿಹರಿಸಿದ್ದು, ಅಕ್ರಮಪ್ರವೇಶ ತಡೆಯನ್ನು ನಿರೀಕ್ಷಿಸಲಾಗಿದೆ.
ತಾವು ಪ್ರಧಾನಮಂತ್ರಿಯಲ್ಲ, ದೇಶದ ಜನತೆಯ ’ಪ್ರಧಾನ ಸೇವಕ’ ಎಂದು ಹೇಳಿಕೊಳ್ಳುವ ಮೋದಿ ಟ್ವಿಟರ್, ಫೇಸ್ಬುಕ್ಗಳ ಮೂಲಕ ಜನಸಾಮಾನ್ಯರ ಸಂಪರ್ಕ, ನೆರವುಗಳಿಗೂ ಸದಾ ಲಭ್ಯವಿದ್ದಾರೆ. ಅದರಲ್ಲಿ ಸು? ಸ್ವರಾಜ್ ಅವರಂತೆಯೇ ಜನರಿಗೆ ಸಮೀಪವಾದ ಇನ್ನೊಬ್ಬರು ರೇಲ್ವೇ ಸಚಿವ ಸುರೇಶ್ ಪ್ರಭು. ಹಿಂದೆ ಅಸಂಭವವೆಂದು ಕಂಡಿದ್ದ ರೈಲು ನಿಲ್ದಾಣಗಳು ಶುಚಿ ಆದುದನ್ನು ವಿರೋಧಿಗಳೇ ಹೊಗಳಿದ್ದಾರೆ. ಸೇವೆಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ರೂಪಿಸಲಾದ ಜಂಟಿ ನಿರ್ವಹಣೆ (ಜಾಯಿಂಟ್ ವೆಂಚರ್) ವಿಧಾನಕ್ಕೆ ೧೬ ರಾಜ್ಯಗಳು ಒಪ್ಪಿಕೊಂಡಿವೆ. ಆ ಮೂಲಕ ಮುಂದಿನ ನಾಲ್ಕು ವ?ಗಳಲ್ಲಿ ಹಿಂದಿನ ಬಜೆಟ್ ಯೋಜನೆಗಳಿಗಿಂತ ಬಹುದೊಡ್ಡ ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಹೊಸ ಯೋಜನೆ ಘೋಷಿಸುವುದಕ್ಕಿಂತ ಬಾಕಿ ಉಳಿದ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಹಿಂದೆ ದಿನಕ್ಕೆ ಸರಾಸರಿ ೪ ಕಿ.ಮೀ. ರೈಲುಮಾರ್ಗ ನಿರ್ಮಾಣ ಆಗುತ್ತಿದ್ದರೆ ಈಗ ಅದು ೭.೮ ಕಿ.ಮೀ.ಗೇರಿದೆ. ರೇಲ್ವೇ ಬಗ್ಗೆ ಕೇಂದ್ರಸರ್ಕಾರ ನಮಗೆ ನ್ಯಾಯ ಒದಗಿಸುತ್ತಿದೆ ಎಂಬ ಮಾತು ಪಕ್ಷಭೇದವಿಲ್ಲದೆ ಮುಖ್ಯಮಂತ್ರಿಗಳಿಂದ ಬರುತ್ತಿದೆ. ಏನು ಮಾಡಬಹುದು, ಯಾವುದು ಆಗುವುದಿಲ್ಲ ಎಂದು ಸ್ಪ?ವಾಗಿ ಹೇಳುವ ರೇಲ್ವೇಮಂತ್ರಿಯನ್ನು ಮೊದಲಬಾರಿಗೆ ನೋಡಿದೆ ಎಂದು ಕೇರಳ ಮುಖ್ಯಮಂತ್ರಿ (ಈಗ ಮಾಜಿ) ಊಮ್ಮನ್ ಚಾಂಡಿ ಅವರೇ ಹೇಳಿದ್ದಿದೆ. ’ಒಟ್ಟು ಸೇರಿ ಹಣ ಸಂಗ್ರಹಿಸುವ ಕೆಲಸ ಮಾಡೋಣ’ ಎಂದು ಪ್ರಭು ಅವರು ಹೇಳುತ್ತಿದ್ದು ಇದರಿಂದ ಪ್ರಚಂಡ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ. ಪ್ರಯಾಣಿಕರ ಭದ್ರತೆ ಮತ್ತು ಸೌಕರ್ಯಗಳಿಗೆ ಸಚಿವರು ಸ್ವತಃ ಗಮನ ಕೊಟ್ಟು ದೂರುಗಳಿಗೆ ಸ್ಪಂದಿಸುತ್ತಿದ್ದಾರೆ.
ಸೇನೆಯ ಆಧುನಿಕೀಕರಣ
ಇನ್ನು ಮನೋಹರ್ ಪರಿಕ್ಕರ್ ಅವರು ರಕ್ಷಣಾ ಇಲಾಖೆಯಲ್ಲಿ ಭ್ರ?ಚಾರವನ್ನು ಪೂರ್ತಿ ಹೊರಗಿಟ್ಟು ಹಲವು ಹೊಸತುಗಳನ್ನು ಸಾಧಿಸುವ ಪ್ರಯತ್ನದಲ್ಲಿದ್ದಾರೆ. ಹಣದ ಹೊರೆ ಇಲ್ಲದೆ ಭೂಸೇನೆ ಮತ್ತು ವಾಯುಪಡೆಗಳ ಆಧುನಿಕೀಕರಣ ಸಾಧ್ಯ ಎಂಬುದು ಅವರ ಮಾತು. ಕಳೆದ ವ? ಯತ್ನಿಸದ ಹೆಚ್ಚಿನದನ್ನು ಸಾಧಿಸಿದ್ದೇವೆ. ಆದರೆ ಮನು? ತಾನು ಮಾಡಿದ್ದರಿಂದ ತೃಪ್ತಿ ಹೊಂದಬಾರದು; ಇನ್ನ? ಸಾಧಿಸಬೇಕು ಎಂದವರು ಹೇಳುತ್ತಾರೆ. ಇಲಾಖೆಯಲ್ಲಿ ಬಹುದೊಡ್ಡ ಸವಾಲೆಂದರೆ ಹಿಂದಿನ ಸಚಿವರು (ಎ.ಕೆ. ಆಂಟನಿ) ಸೃಷ್ಟಿಸಿದ ಮುಚ್ಚಿದ ಮಾನಸಿಕತೆ. ಅವರು ಯಾವುದೇ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ. ಸಿಬ್ಬಂದಿ ಕೊರತೆಯಿದ್ದು ಈಗ ನೇಮಕಾತಿಗೆ ಚಾಲನೆ ನೀಡಲಾಗಿದೆ. ಖರೀದಿಗಳಲ್ಲಿ ಇಲಾಖೆಗೆ ಹಣ ಉಳಿಸಲು ಪ್ರಯತ್ನಿಸಲಾಗುತ್ತಿದೆ ಎನ್ನುವ ಪರಿಕ್ಕರ್ ಒಂದು ಉದಾಹರಣೆಯಾಗಿ (ಈಗ ಹಗರಣವಾಗಿರುವ) ಆಗಸ್ಟಾ ವೆಸ್ಟಲ್ಯಾಂಡ್ ಹೆಲಿಕಾಪ್ಟರಿಗೆ ೨೦೧೦ರ ದರದ ಪ್ರಕಾರ ತಲಾ ೧೬೦-೧೭೦ ಕೋಟಿ ರೂ. ಕೊಡಬೇಕಿತ್ತು. ಆದರೆ ರೂ. ೩೦೦ ಕೋಟಿಗೂ ಅಧಿಕ ಮೊತ್ತವನ್ನು ನೀಡಲಾಗಿದೆ ಎಂದು ಬೆಳಕಿಗೊಡ್ಡುತ್ತಾರೆ.
ವಿದ್ಯುತ್ ಉತ್ಪಾದನೆ, ನಿರ್ವಹಣೆಯಲ್ಲಿ ಪೀಯೂ? ಗೋಯಲ್ ಉತ್ತಮ ಸಾಧನೆ ತೋರಿದ್ದಾರೆ. ಇಂಧನ ಕ್ಷೇತ್ರದ ಬಿಕ್ಕಟ್ಟನ್ನೊಂದು ಸವಾಲಾಗಿ ಸ್ವೀಕರಿಸಿದ ಎನ್ಡಿಎ ಸರ್ಕಾರ ದೇಶದ ಇಂಧನದ ಪ್ರಮುಖ ಮೂಲವಾದ ಕಲ್ಲಿದ್ದಲಿನ ವಿತರಣೆಯನ್ನು ಕ್ರಮಬದ್ಧಗೊಳಿಸಿತು. (ಹಿಂದಿನ ಕಾಂಗ್ರೆಸ್ ಸರ್ಕಾರದ್ದು ಅದೇ ಒಂದು ಹಗರಣವಾಗಿತ್ತು.) ಕಳೆದ ಎರಡು ವ?ಗಳಲ್ಲಿ ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ದೇಶದ ಅನಿಲ- ಆಧಾರಿತ ವಿದ್ಯುತ್ ಸ್ಥಾವರಗಳು ಎಲ್ಪಿಜಿ ಕೊರತೆಯಿಂದ ಬಹುತೇಕ ಸ್ಥಗಿತಗೊಂಡಿದ್ದವು. ಕಳೆದ ಮಾರ್ಚ್ ಕೊನೆಗೆ ಅಂತ್ಯವಾದ ವ?ದಲ್ಲಿ ಅವುಗಳ ಉತ್ಪಾದನೆಯಲ್ಲಿ ಶೇ. ೪೪ರ? ಏರಿಕೆ ಕಂಡುಬಂತು. ವಿದ್ಯುತ್ ಉಳಿತಾಯದ ಅಂಗವಾಗಿ ಸರ್ಕಾರೀ ಸಂಸ್ಥೆಗಳ ಮೂಲಕ ಕಳೆದ ಒಂದು ವ?ದಲ್ಲಿ ೯ ಕೋಟಿಗೂ ಅಧಿಕ ಎಲ್ಇಡಿ ಬಲ್ಬ್ಗಳನ್ನು ವಿತರಿಸಲಾಯಿತು. ಕೃಷಿಕ್ಷೇತ್ರದಲ್ಲಿ ಒಂದು ವ?ದಲ್ಲಿ ೩೧,೪೭೨ ಸೋಲಾರ್ ಪಂಪುಗಳನ್ನು ಕಾರ್ಯಾರಂಭಗೊಳಿಸಲಾಗಿದೆ; ಅಸಾಂಪ್ರದಾಯಿಕ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ.
ಇನ್ನು ಪ್ರಕಾಶ್ ಜಾವಡೇಕರ್ ಅವರ ಪರಿಸರ ಇಲಾಖೆಯದ್ದು ಒಂದುರೀತಿಯಿಂದ ಸಾಧನೆ ಎಂದರೆ ಇನ್ನೊಂದು ರೀತಿಯಿಂದ ಹಾನಿ ಎನಿಸುತ್ತದೆ. ಹೊಸ ಕೈಗಾರಿಕೆಗಳಿಗೆ ಪರಿಸರಸಂಬಂಧಿ ಮಂಜೂರಾತಿ ನೀಡುವುದು ವಿಳಂಬ ಆಗಬಾರದು; ಆದ್ದರಿಂದ ಬೇಗ ನೀಡುತ್ತಿದ್ದೇವೆ ಎಂದು ಹೇಳಿದರೆ ನ? ಯಾರಿಗೆ? ಆದ್ದರಿಂದ ಯಾವುದೋ ಅರಣ್ಯದ ಮಧ್ಯದಲ್ಲಿ ಸ್ಥಾಪನೆಗೊಳ್ಳುವ ಒಂದು ಬೃಹತ್ ಕಾರ್ಖಾನೆ ಪರಿಸರಕ್ಕೆ ಭಾರೀ ಅನಾಹುತವನ್ನೇ ಎಸಗಬಹುದು. ಪರಿಸರಸಂಬಂಧಿ ಕಾನೂನುಗಳು ಬಹಳ? ಹೋರಾಟದ ಫಲವಾಗಿ ರೂಪುಗೊಂಡಂಥವು. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅವಶ್ಯ. ಪರಿಸರ ಪರಿಣಾಮ ಸಮೀಕ್ಷೆ(ಇಐಎ)ಗಳಲ್ಲಿ ಅವಸರ ಅಥವಾ ರಾಜಿ ಸಲ್ಲದು. ಇದೇ ರೀತಿ ಆರೋಗ್ಯ ಇಲಾಖೆಯಲ್ಲಿ ಕೂಡ ಬಂಡವಾಳ ಹೂಡಿಕೆಯ ಆಕ?ಣೆಯಿಂದ ಕೆಲವು ಪ್ರಮಾದಗಳಾಗುವ ಸಾಧ್ಯತೆಯಿದೆ. ಬಹುರಾಷ್ಟ್ರೀಯ ಔ?ಧಕಂಪೆನಿಗಳು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಗಳಿಸಲು ಇನ್ನಿಲ್ಲದ ಆಟ ಆಡುತ್ತವೆ; ಒತ್ತಡ ತರುತ್ತವೆ. ನಾವು ಒಪ್ಪಿರುವ ಜಾಗತೀಕರಣವು ಸರ್ಕಾರದ ಕೈಗಳನ್ನು ಬಹಳ? ಕಟ್ಟಿದೆಯಾದರೂ ರೋಗಪೀಡಿತ ಜನರ, ಅದರಲ್ಲೂ ಬಡಜನತೆಯ ಹಿತಕ್ಕೆ ಆದ್ಯತೆ ಸಲ್ಲಲೇಬೇಕು.

ಏನಿದ್ದರೂ ಒಂದು ಆಶಾವಾದವೆಂದರೆ ಮೋದಿ ಅವರ ಸರ್ಕಾರ ಸ್ಪಂದನೆ ಇಲ್ಲದ ಸರ್ಕಾರವಲ್ಲ. ಜನರ ಕೂಗು ಸರ್ಕಾರಕ್ಕೆ ಬಹುಬೇಗ ಕೇಳಿಸುತ್ತದೆ. ಭವಿ?ನಿಧಿಗೆ ಸಂಬಂಧಿಸಿ ಜನರ ಒತ್ತಾಯ, ಪ್ರತಿಭಟನೆಗೆ ಬೆಲೆಕೊಟ್ಟು ಸರ್ಕಾರ ತಡವಿಲ್ಲದೇ ತಿದ್ದಿಕೊಂಡುದನ್ನು ಇಲ್ಲಿ ಉದಾಹರಿಸಬಹುದು. ಅದೇ ರೀತಿ ಆವಶ್ಯಕ ವಸ್ತುಗಳ ಬೆಲೆಯೇರಿಕೆಯ ವಿ?ಯದಲ್ಲಿ ಕೂಡ ಸರ್ಕಾರ ತಡವಿಲ್ಲದೆ ಸ್ಪಂದಿಸುತ್ತದೆ ಎನ್ನಬಹುದು. ಯುಪಿಎ ಸರ್ಕಾರದ ಶರದ್ ಪವಾರ್ ಅವರು ಈ ವಿ?ಯಕ್ಕೆ ಹೇಗೆ ಸ್ಪಂದಿಸುತ್ತಿದ್ದರು ಎಂಬುದನ್ನು ನೆನಪಿಸಿಕೊಂಡರೆ ವ್ಯತ್ಯಾಸ ತಿಳಿಯುತ್ತದೆ. ಮೋದಿ ಅವರ ಸಂಪುಟದಲ್ಲಿ ರತ್ನಸದೃಶರಾದ ಕೆಲವು ಮಂತ್ರಿಗಳಿದ್ದಾರೆ. ಎಲ್ಲರೂ ಅಂಥದೇ ಸಾಧನೆ ತೋರಿಸಲಿ ಎಂಬುದು ಹಾರೈಕೆ.