ಈಗ, ಮಾನವಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ, ಇಂಡಿಯನ್ ಕೌನ್ಸಿಲ್ ಆಫ಼್ ಹಿಸ್ಟಾರಿಕಲ್ ರೀಸರ್ಚ್ ಕೈಗೊಂಡಿರುವ ಸಮೀಕ್ಷೆಯಲ್ಲಿ, ಈ ಸೇತುವೆ ಮಾನವನಿರ್ಮಿತ ಎಂದು ಖಚಿತವಾಗಿ ತಿಳಿದುಬಂದಲ್ಲಿ, ಈ ಭೂಮಿಯ ಮೇಲೆ ರಾಜ್ಯವಾಳಿದ ಚಕ್ರವರ್ತಿ ರಾಮನಿಂದ ನಿರ್ಮಿತವಾದ ಈ ಸೇತುವೆ ೭೦೦೦ ವರ್ಷಗಳಷ್ಟು ಹಿಂದಿನ ಕಾಲಘಟ್ಟಕ್ಕೆ ಸೇರಿದ್ದೆಂದು ನಿರ್ಣಯಿಸಬಹುದು.
ಲಂಕೆಯಲ್ಲಿ ರಾಮ-ರಾವಣರ ನಡುವೆ ಮಹಾಯುದ್ಧ ನಡೆದು ವಿಜಯಿಯಾದ ರಾಮನು ಅಲ್ಲಿಂದ ಅಯೋಧ್ಯೆಗೆ ಪುಷ್ಪಕವಿಮಾನದಲ್ಲಿ ಪಯಣಿಸುವಾಗ ಕೆಳಗೆ ಕಂಡ ಸೇತುವೆಯನ್ನು ’ನಳಸೇತು’ ಎಂದು ಹೆಸರಿಸಿ, ಸೀತೆಗೆ ತೋರಿಸುತ್ತಾನೆ. ಮುಂದೆ ಇದು ’ರಾಮಸೇತು’ ಎಂದು ಪ್ರಖ್ಯಾತವಾಗಿ ನಮ್ಮ ಹಲವಾರು ಕಾವ್ಯೇತಿಹಾಸಿಕ ಗ್ರಂಥಗಳಲ್ಲಿ ಹಾಗೂ ಶಾಸನವೇ ಮೊದಲಾದ ಹಲವಾರು ಚಾರಿತ್ರಿಕ ಮಾಹಿತಿಗಳಲ್ಲಿ ಕಾಣಸಿಗುತ್ತದೆ. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ತಯಾರಿಸಿದ ಭೂಪಟಗಳಲ್ಲಿ ಹಾಗೂ ವರದಿಗಳಲ್ಲಿ ಈ ಸೇತುವೆಯನ್ನು ’ಆಡಮ್ಸ್ ಬ್ರಿಡ್ಜ್’ ಎಂದು ಗುರುತಿಸಿದ್ದಾರೆ.
“ರಾಮಸೇತು ಎಂದೂ ಕರೆಯುವ ಆಡಮ್ಸ್ ಬ್ರಿಡ್ಜ್, ಶ್ರೀಲಂಕೆಯ ವಾಯವ್ಯ ಭಾಗದ ಸಮೀಪವಿರುವ ಮನ್ನಾರ್ ದ್ವೀಪಗಳು ಮತ್ತು ಭಾರತದ ದಕ್ಷಿಣ ಕರಾವಳಿಯಲ್ಲಿರುವ ರಾಮೇಶ್ವರಂ ಮಧ್ಯೆ ಇರುವ ಲೈಮ್ ಶೋಲ್ಗಳ ಜೋಡಣೆಯಿಂದಾಗಿದೆ. ಈ ಸೇತುವೆಯು ೩೦ ಮೈಲಿ (೪೮ ಕಿ.ಮೀ.) ಉದ್ದವಿದ್ದು, ವಾಯವ್ಯದ ಪಾಲ್ಕ್ ಸ್ಟ್ರೇಟ್ ಇಂದ ನೈಋತ್ಯದಲ್ಲಿ ಮನ್ನಾರ್ ಕೊಲ್ಲಿಯನ್ನು ಪ್ರತ್ಯೇಕಿಸುತ್ತದೆ” ಎಂದು ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾದಲ್ಲಿರುವ ಬರಹ ಹೇಳುತ್ತದೆ. ೧೯೦೨ರಲ್ಲಿ ಕಾಣುವ ಸಿ.ಡಿ. ಮಕೆಲೀನ್ ವರದಿ ಹಾಗೂ ಪ್ರ.ಶ. ೧೪೮೦ರಲ್ಲಿ ಏಶಿಯಾಟಿಕ್ ಸೊಸೈಟಿಯಲ್ಲಿ ದಾಖಲಾಗಿರುವ ಸಂಗತಿಯಂತೆ, ಈ ಸೇತುವೆ ಮೂರು ಭಾಗವಾಗಿ ಮುರಿಯುವವರೆಗೂ ರಾಮೇಶ್ವರದಿಂದ ಶ್ರೀಲಂಕೆಗೆ ಹೋಗುವ ಕಾಲುನಡಿಗೆಯ ದಾರಿಯಾಗಿ ಉಪಯೋಗದಲ್ಲಿತ್ತು ಎನ್ನುವುದು ತಿಳಿಯುತ್ತದೆ.
ಪತ್ನಿ ಸೀತೆಯನ್ನು ಅಪಹರಿಸಿದ ರಾವಣನೊಂದಿಗೆ ಯುದ್ಧಮಾಡಲು ರಾಮೇಶ್ವರದಿಂದ ಲಂಕೆಗೆ ಹೊರಟ ರಾಮನ ವಾನರಸೈನ್ಯಕ್ಕೆ ಎದುರಾದ ಮಹಾಸಾಗರಕ್ಕೆ ಕಟ್ಟಿದ ಸೇತುವೆಯನ್ನು ಹೋದ ದಶಕದಲ್ಲಿ ತೋರಿಸಿದ ನಾಸಾದ (NASA) ಉಪಗ್ರಹ ಛಾಯಾಚಿತ್ರಗಳು ಭಾರತೀಯರಲ್ಲಿ ಸಂಚಲನವನ್ನು ಮೂಡಿಸಿತು. ಆದರೆ, ನಾಸಾ ತಜ್ಞರು ಉಪಗ್ರಹ ಚಿತ್ರಗಳಿಂದ ಆ ರಚನೆಯ ಕಾಲವನ್ನಾಗಲಿ, ಅದು ಮಾನವನಿರ್ಮಿತ ಎಂದಾಗಲೀ ಹೇಳಲಾಗುವುದಿಲ್ಲ ಎಂದರು. ಅವರು ತೆಗೆದ ಚಿತ್ರಗಳಲ್ಲಿ, ಕಾಲುನಡಿಗೆಯಲ್ಲಿ ಸಮುದ್ರವನ್ನು ದಾಟುವ ಮಾರ್ಗವಾಗಿ ಈ ಸೇತುವೆಯು ಸ್ಪಷ್ಟವಾಗಿ ಕಾಣುತ್ತದೆ. ಅಷ್ಟು ಅಲ್ಲದೆ, ವಿಶಿಷ್ಟ ರೀತಿಯಲ್ಲಿ ಬಾಗಿರುವುದರಿಂದಾಗಿ ಇದು ಮಾನವನಿರ್ಮಿತ ಎಂದು ತಿಳಿಯುತ್ತದೆ ಎಂದು ತಜ್ಞರು ಹೇಳುತ್ತಾರೆ.
ಈ ಸೇತುವೆಯು ವಿಶ್ವದ ಹಲವಾರು ಕ್ಷೇತ್ರಗಳ ವಿಜ್ಞಾನಿಗಳ ಗಮನ ಸೆಳೆದಿದೆ. “ಆಡಮ್ಸ್ ಬ್ರಿಡ್ಜ್ ಕಾಲುನಡಿಗೆಯ ಹಾದಿಯು ಮಹತ್ತರವಾದ ಇಂಜಿನಿಯರಿಂಗ್ ಸಾಧನೆ ಆಗಿರಬೇಕು, ಏಕೆಂದರೆ, ಉಪಗ್ರಹ ಛಾಯಾಚಿತ್ರಗಳಲ್ಲಿ ಇದರ ತೆಳುವಾದ ಕುರುಹು ಈಗಲೂ ಸ್ಪಷ್ಟವಾಗಿ ಕಾಣಿಸುತ್ತದೆ. ಇದು ಸಮುದ್ರದ ಅವ್ಯಾಹತ ಸವೆತವನ್ನು ತಡೆಯುತ್ತಾ ಬಂದಿದೆ. ಇದು ಪ್ರಾಚೀನ ಭಾರತೀಯರ ಉತ್ಕೃಷ್ಟ ಇಂಜಿನಿಯರಿಂಗ್ ನೈಪುಣ್ಯಕ್ಕೆ ಪ್ರಮಾಣ ಒದಗಿಸುತ್ತದೆ. ಇದು ಮಾನವರಿಗೆ ಅರಿವಿದ್ದ, ಅತ್ಯಂತ ಹಿಂದಿನ ಕಾರ್ಬನ್-ಫೈಬರ್ನಿಂದ ಬಲಪಡಿಸಲ್ಪಟ್ಟ ಸಿವಿಲ್ ಇಂಜಿನಿಯರಿಂಗ್ ರಚನೆ. ಇದು ವಿಶ್ವ ಪಾರಂಪರಿಕ ತಾಣವಾಗಿ ಸುರಕ್ಷಿತಗೊಳ್ಳಬೇಕು” ಎಂದು ಈ ಸೇತುವೆಯ ಅಧ್ಯಯನ ಮಾಡಿದ ಲಂಡನ್ ವಿಶ್ವವಿದ್ಯಾನಿಲಯದ ಪ್ರೊ|| ಮಾಲ್ಕಮ್ ಪಿ.ಆರ್. ರೈಟ್ರವರು ಹೇಳುವ ಮಾತುಗಳು.
ಆದರೆ, ರಾಮಸೇತು – ನಳಸೇತು (ಆಡಮ್ಸ್ ಬ್ರಿಡ್ಜ್) ಎಂದು ಕರೆಯುವ ಈ ಸೇತುವೆ ಮಾನವನಿರ್ಮಿತವಲ್ಲ. ಇದು ಸಾಗರದಲ್ಲಿ ಸ್ವಾಭಾವಿಕವಾಗಿ ನಿರ್ಮಾಣವಾಗಿರುವ ಲೈಮ್ಶೋಲ್ಗಳ ಜೋಡಣೆಯಷ್ಟೇ ಎನ್ನುತ್ತಾ ರಾಮನಿಗೂ ಈ ಸೇತುವೆಗೂ ಇರುವ ಸಂಬಂಧವನ್ನು ನಿರಾಕರಿಸಿ ಇದನ್ನು ಒಡೆಯುವ ಹುನ್ನಾರವೂ ನಡೆದಿದೆ. ಈ ಹಿನ್ನಲೆಯಲ್ಲಿ, ರಾಮನಿಂದ ನಿರ್ಮಾಣವಾದದ್ದು ಎಂದು ಪಾರಂಪರಿಕವಾಗಿ ನಂಬುವ ಈ ಸೇತುವೆಯ ತಥ್ಯಾಂಶವನ್ನು ಶೋಧಿಸುವ ಸಮರ್ಥವಾದ ಪ್ರಯತ್ನಗಳು ಇದುವರೆಗೆ ನಡೆದೇ ಇಲ್ಲ ಎನ್ನುವುದು ಅಚ್ಚರಿಯ ಸಂಗತಿ. ಈ ದಿಸೆಯಲ್ಲಿ ಈಗ, ಮಾನವಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ, ಇಂಡಿಯನ್ ಕೌನ್ಸಿಲ್ ಆಫ಼್ ಹಿಸ್ಟಾರಿಕಲ್ ರೀಸರ್ಚ್ ಈ ಸೇತುವೆಯ ಜಲಾಂತರ್ಗತ ಶೋಧವನ್ನು ಕೈಗೊಳ್ಳಲಿರುವುದು ಸಂತಸದ ಸಂಗತಿ.
ಭಾರತದಲ್ಲಿ ರಾಜ್ಯವಾಳಿದ ಚಕ್ರವರ್ತಿ ರಾಮನ ಚಾರಿತ್ರಿಕ ಸತ್ಯ
ರಾಮಚಂದ್ರನು ಭೂಮಿಗಿಳಿದು ಬಂದ ಭಗವಂತ ಎಂದಾಗಲಿ ಅಥವಾ ತನ್ನ ದೈವೀಗುಣಗಳಿಂದ ದೇವತ್ವಕ್ಕೆ ಏರಿದ ಎಂದಾಗಲಿ ತಿಳಿದವರಿಗೆ, ಅವನು ಈ ಭೂಮಿಯ ಮೇಲೆ ನಡೆದಾಡಿದ ಸಂಗತಿ ಎಂದಿಗೂ ಒಂದು ಪ್ರಶ್ನೆಯಾಗಿ ಕಾಣುವುದಿಲ್ಲ. ವಿಶಾಲ ಭಾರತದ ಉದ್ದಗಲದಲ್ಲಿ ಹಾಗೂ ಶ್ರೀಲಂಕೆಯಲ್ಲಿ ರಾಮಾಯಣದ ಘಟನೆಗಳೊಂದಿಗೆ ಸೇರಿರುವ ಸ್ಥಳಗಳು ಹಾಗೂ ಶಾಸನ ಮುಂತಾದ ಐತಿಹಾಸಿಕ ಬರಹಗಳಲ್ಲಿ ಕಾಣುವ ಮಾಹಿತಿಗಳು ರಾಮಚಂದ್ರನ ಐತಿಹಾಸಿಕ ಸತ್ಯವನ್ನು ತೆರೆದು ತೋರುತ್ತಿವೆ. ಆದರೆ ಕೆಲವು ಇತಿಹಾಸತಜ್ಞರು, ಭಾರತೀಯ ಕೃತಿಗಳಲ್ಲಿ ಚಾರಿತ್ರಿಕ ಸತ್ಯಾಂಶವಿಲ್ಲವೆಂದು ಹೇಳುತ್ತಾ, ರಾಮಾಯಣವನ್ನು ಕಾಲ್ಪನಿಕ ಕಥಾನಕಗಳ ಚೌಕಟ್ಟಿನಲ್ಲಿ ಸೇರಿಸಿ, ರಾಮನನ್ನು ಇತಿಹಾಸದಿಂದ ಹೊರಗಿಟ್ಟದ್ದು ಕಾಣುತ್ತದೆ. ಈ ಪ್ರವೃತ್ತಿ ಪ್ರಾರಂಭವಾದದ್ದನ್ನು ೧೮೧೩ರಲ್ಲಿ ಬ್ರಿಟಿ?ರಿಂದ ಪ್ರಕಟವಾದ ಜೇಮ್ಸ್ ಮಿಲ್ ಮತ್ತು ಚಾರ್ಲ್ಸ್ ಗ್ರಾಂಟ್ ಎಂಬ ಲೇಖಕರು ಬರೆದ “ಹಿಸ್ಟರಿ ಆಫ಼್ ಇಂಡಿಯಾ” ಎಂಬ ಹೊತ್ತಿಗೆಯಲ್ಲಿ ಗುರುತಿಸಬಹುದು. ಭಾರತದ ಬಹುತೇಕ ಕೃತಿಗಳನ್ನು ’ಮಿಥಿಕಲ್’ ಅಂದರೆ, ’ಕಾಲ್ಪನಿಕ ಕಥಾನಕಗಳು’ ಎಂಬ ಪಟ್ಟಿಗೆ ಸೇರಿಸಿದ್ದ ಈ ಹೊತ್ತಿಗೆ, ಇಂಗ್ಲೆಂಡಿನ ಹೆಲಿಬರಿ ಕಾಲೇಜಿನಲ್ಲಿ ಅಧ್ಯಯನಮಾಡುತ್ತಿದ್ದ ಭಾರತಕ್ಕೆ ಬರುವ ಇಂಗ್ಲಿ? ಆಡಳಿತಗಾರರಿಗೆ ಪ್ರಮುಖ ಪಠ್ಯವಾಗಿತ್ತು. ಭಾರತದಲ್ಲಿ ರಚಿತವಾದ ಕೃತಿಗಳಲ್ಲಿ ’ಭೂಮಿಯು ಸೃಷ್ಟಿಯಾದ ದಿನಾಂಕಕ್ಕಿಂತಲೂ ಹಿಂದಿನ ವಿದ್ಯಮಾನಗಳು ಇವೆ’ ಎನ್ನುವುದು ಅದಕ್ಕೆ ಅವರು ಕೊಟ್ಟಿರುವ ಕಾರಣಗಳಲ್ಲಿ ಪ್ರಮುಖವಾದದ್ದು! ಅವರ ನಂಬಿಕೆಯಂತೆ, ಐರ್ಲ್ಯಾಂಡಿನ ಆರ್ಚ್ ಬಿ?ಪ್, ರೆವರೆಂಡ್ ಜೇಮ್ಸ್ ಉಶರ್ ಹೇಳಿದಂತೆ, ೪೦೦೪ ಬಿ.ಸಿ. ಅಕ್ಟೋಬರ್ ೨೩ನೇ ದಿನಾಂಕದಂದು ಬೆಳಿಗ್ಗೆ ೯ ಗಂಟೆಗೆ ಭೂಮಿಯ ಸೃಷ್ಟಿಯಾಯಿತು. ಹಾಗಾಗಿ, ಅದಕ್ಕಿಂತಲೂ ಹಿಂದಿನ ಕಾಲಘಟ್ಟದಲ್ಲಿ ಭಾರತದಲ್ಲಿದ್ದ ನಾಗರಿಕತೆಯನ್ನು ವರ್ಣಿಸುವ ಈ ಕೃತಿಗಳಲ್ಲಿ ಸತ್ಯಸಂಗತಿಗಳಿರಲು ಸಾಧ್ಯವಿಲ್ಲ. ಆದ್ದರಿಂದ ಅವು ಕೇವಲ ಕಾಲ್ಪನಿಕ ಎನ್ನುವುದು ಅವರ ವಾದ. ಇಂತಹ ಹುಂಬತನದ ವಾದದೊಂದಿಗೆ, ಅವರು ಸೃಷ್ಟಿಸಿದ ಆರ್ಯ-ದ್ರಾವಿಡ ಜನಾಂಗ ಎನ್ನುವ ಮಿಥ್ಯಾವಾದವೂ ಇಂದು ಆಧಾರವೇ ಇಲ್ಲದೆ ಕುಸಿದಿದೆ. ಆದರೆ, ಅಂತಹ ವಿಪರೀತ ನಿಲವನ್ನು ಹೊಂದಿರುವವರು ಈಗಲೂ ಅಲ್ಲಲ್ಲಿ ಕಾಣಿಸುತ್ತಾರೆ. ಅಂತಹವರಿಗೆ ಸತ್ಯವನ್ನು ತೆರೆದು ತೋರಿಸಲು ಇಂದು ನಮಗೆ ’ಆರ್ಕಿಯೋ ಅಸ್ಟ್ರಾನಮಿ’ ಎಂಬ ಪ್ಲಾನೆಟೇರಿಯಮ್ ತಂತ್ರಾಂಶದ ತಾಂತ್ರಿಕ ನೆರವು ದೊರೆತಿದೆ.
ವಾಲ್ಮೀಕಿ ರಾಮಾಯಣ ಒಂದು ಚಾರಿತ್ರಿಕ ಮಹಾಕಾವ್ಯ
ಪ್ರಸಕ್ತ ಶಕೆಯ ೫೦೦ರ ಸುಮಾರಿಗೆ ಲಿಖಿತರೂಪಕ್ಕೆ ಬಂದ ವಾಲ್ಮೀಕಿರಾಮಾಯಣವನ್ನು ನಮ್ಮ ಪರಂಪರೆ ಇತಿಹಾಸ ಎನ್ನುತ್ತದೆ. ಅದಕ್ಕೆ ಮೊದಲು ’ರಾಮಕಥೆ’ ಹಲವು ನೂರು ವರ್ಷಗಳಿಂದಲೂ ಪೀಳಿಗೆಯಿಂದ ಪೀಳಿಗೆಗೆ ಶ್ರವಣ ಪರಂಪರೆಯಿಂದ ಹರಿದುಬಂದಿದೆ ಎನ್ನುವುದು ಬಾಲಕಾಂಡದಲ್ಲಿಯೇ ಕಾಣುತ್ತದೆ. ಇತಿಹಾಸ ಎಂದರೆ, ’ಹೀಗೆ-ಇಲ್ಲಿ-ಇತ್ತು’ (ಇತಿ-ಹ- ಆಸ) ಎಂದು ಅರ್ಥೈಸಬಹುದು. ಮಹರ್ಷಿ ವಾಲ್ಮೀಕಿ ನಾರದರನ್ನು ಧರ್ಮಜ್ಞ, ಸತ್ಯವಾದಿ, ದೃಢವ್ರತ, ವಿದ್ವಾಂಸ, ಸರ್ವಜೀವಿಗಳ ಹಿತಾಸಕ್ತ, ವೀರ, ಸಮರ್ಥ… ಹೀಗೆ ಹದಿನಾರು ಆದರ್ಶಗುಣಗಳನ್ನು ಹೊಂದಿರುವ ಪುರು? ಈ ಲೋಕದಲ್ಲಿ ಇದ್ದಾನೆಯೇ ಎಂದು ಕೇಳುತ್ತಾರೆ. ಆಗ ನಾರದರು, ಇಕ್ಷ್ವಾಕುವಂಶದಲ್ಲಿ ಜನಿಸಿರುವ ರಾಮನೆಂಬ ರಾಜ ಅಂತಹ ಎಲ್ಲ ಆದರ್ಶಗುಣಗಳನ್ನೂ ಹೊಂದಿದ್ದಾನೆ ಎಂದು ಹೇಳಿ ರಾಮಾಯಣದ ಕಥೆಯನ್ನು ಸಂಕ್ಷೇಪವಾಗಿ ತಿಳಿಸುತ್ತಾರೆ. ರಾಮನು ಲಂಕೆಯಲ್ಲಿ ರಾವಣನನ್ನು ಸಂಹರಿಸಿ, ಸೀತಾ ಲಕ್ಷ್ಮಣರೊಡನೆ ಅಯೋಧ್ಯೆಗೆ ಬಂದು ಸುಖವಾಗಿ ರಾಜ್ಯವಾಳುತ್ತಿದ್ದಾನೆ ಎನ್ನುವಲ್ಲಿಗೆ ೯೦ ಶ್ಲೋಕಗಳಲ್ಲಿ ನಾರದರು ಹೇಳಿದ ಕಥೆ ಮುಗಿಯುತ್ತದೆ. ಇದನ್ನು ಮುಂದೆ ಮಹರ್ಷಿ ವಾಲ್ಮೀಕಿಗಳು ೨೪ ಸಾವಿರ ಶ್ಲೋಕಗಳಲ್ಲಿ ವಿಸ್ತಾರವಾಗಿ ಹೇಳಿ, ಮಹಾಕಾವ್ಯವಾಗಿಸಿದರು ಎನ್ನುವುದೂ ಅಲ್ಲಿಯೇ ಕಂಡುಬರುತ್ತದೆ. ಹೀಗೆ, ನಾರದರು ಹೇಳಿದ ರಾಮಕಥೆಯಲ್ಲಿಯೇ ಅದು ಒಬ್ಬ ಸಮಕಾಲೀನ ಚಕ್ರವರ್ತಿಯ ಜೀವನಚರಿತ್ರೆ ಎಂಬ ಸ್ಪ?ಚಿತ್ರಣ ಕಾಣಿಸುತ್ತದೆ. ಹಾಗಾಗಿ ರಾಮಾಯಣದಲ್ಲಿರುವುದೆಲ್ಲವೂ ಚಾರಿತ್ರಿಕ ಕಥನ ಎನ್ನುವ ಅಚಲ ನಂಬಿಕೆ ಇಲ್ಲಿನ ಧಾರ್ಮಿಕ ಪರಂಪರೆಯದು. ಈ ನಂಬಿಕೆಗೆ ಆಧಾರವಾಗಿ ರಾಮ ನಡೆದಾಡಿದ ಹಾಗೂ ರಾಮಾಯಣದಲ್ಲಿ ಹೇಳಿರುವ ಅನೇಕ ಘಟನಾಸ್ಥಳಗಳನ್ನು ಇಂದಿಗೂ ಕಾಣಬಹುದು. ಸ್ಥಳಪುರಾಣಗಳೊಂದಿಗೆ, ಅಲ್ಲಿನ ವರ್ಣನೆಗಳಲ್ಲಿ ಕಾಣುವ ಗ್ರಹ-ನಕ್ಷತ್ರಕೂಟಗಳನ್ನು, ಗ್ರಹಣಗಳನ್ನು ಹಾಗೂ ಚರಿತ್ರೆಯಲ್ಲಿ ದಾಖಲಾಗಿರುವ ವಿಚಾರಗಳನ್ನು ತಾಳೆಹಾಕಿ ನೋಡಬಹುದು.
ಆಧುನಿಕ ತಂತ್ರಜ್ಞಾನದ ನೆರವಿನಿಂದ ರಾಮಾಯಣದ ಘಟನೆಗಳ ಕಾಲನಿರ್ಣಯ
ಸಾವಿರಾರು ವರುಷಗಳಿಂದಲೂ ನಾವು ಚೈತ್ರಮಾಸದ ಶುಕ್ಲಪಕ್ಷದ ನವಮಿಯಂದು ರಾಮನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ವಾಲ್ಮೀಕಿಗಳೇ ಹೇಳಿರುವ ಪಂಚಾಂಗದ ಈ ದಿನಾಂಕದ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ, ರಾಮನು ಈ ಭೂಮಿಯ ಮೇಲೆ ನಡೆದಾಡಿದ ಕಾಲಘಟ್ಟದ ಬಗ್ಗೆ ಇಂತಹ ನಿಖರವಾದ ಅಭಿಪ್ರಾಯ ಕಾಣುವುದಿಲ್ಲ. ಇದು ರಾಮನನ್ನು ಚಾರಿತ್ರಿಕವ್ಯಕ್ತಿಯೆಂದು ನಂಬುವವರನ್ನೂ ನಂಬದವರನ್ನೂ ಹಲವು ವ?ಗಳಿಂದಲೂ ಕಾಡುತ್ತಿರುವ ಪ್ರಶ್ನೆ. ಸಾವಿರಾರು ವ?ಗಳ ಹಿಂದೆಯೇ ಮಹರ್ಷಿ ವಾಲ್ಮೀಕಿ ತಮ್ಮ ಮಹಾಕಾವ್ಯದಲ್ಲಿ ಕೊಟ್ಟಿರುವ ಮಾಹಿತಿಗಳು ನಿರ್ದಿಷ್ಟ ದಿನಾಂಕಗಳಷ್ಟೇ ಅಲ್ಲದೆ ನಿರ್ದಿಷ್ಟ ಕಾಲಘಟ್ಟವನ್ನೂ ಸ್ಪಷ್ಟವಾಗಿಯೇ ತಿಳಿಸುತ್ತಿವೆ. ಆದರೆ, ಅಲ್ಲಿರುವ ಮಾಹಿತಿಗಳನ್ನು ನಮಗೆ ಅರ್ಥವಾಗುವ ರೀತಿಯಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಅನುವಾಗುವಂತಹ ಪ್ಲಾನೆಟೇರಿಯಮ್ ತಂತ್ರಾಂಶದ ನೆರವು ಈಗ ದೊರೆತಿದೆ.
ಆಕಾಶವೀಕ್ಷಣಾಸಾಧನ – ಖಗೋಲ ಪುರಾತತ್ತ್ವ ಸಂಶೋಧನೆ – ಆರ್ಕಿಯೊ ಅಸ್ಟ್ರಾನಮಿ
ಈ ಪ್ಲಾನೆಟೇರಿಯಮ್ ತಂತ್ರಾಂಶವನ್ನು ಅಂತರ್ಗ್ರಹಯಾನದಲ್ಲಿ ಕಾಲಮಾಪನ ಮಾಡುವುದಕ್ಕಾಗಿ ಖಗೋಲ-ಪುರಾತತ್ತ್ವ ಸಂಶೋಧನೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದರು. ಭೂಮಿಯಿಂದ ಹೊರಟ ಗಗನನೌಕೆ ದೂರದ ಗ್ರಹವೊಂದನ್ನು ತಲಪಲು ಹಲವಾರು ವರು?ಗಳು ಬೇಕಾಗುತ್ತವೆ. ಇಲ್ಲಿಂದ ಅದನ್ನು ನಿಯಂತ್ರಿಸುತ್ತಿರುವವರಿಗೆ, ಆ ನೌಕೆಯ ಚಲನೆ ಹಾಗೂ ಅದು ಪೂರ್ವನಿಶ್ಚಿತ ಗ್ರಹವೊಂದನ್ನು ತಲಪುವ ನಿಖರವಾದ ಕಾಲ ಅಗತ್ಯವಾಗುತ್ತದೆ. ಹಾಗಾಗಿ, ಗ್ರಹಗಳ ಚಲನೆಗೂ ಈಗಿನ ಕಾಲಮಾನಕ್ಕೂ ಸಂಪರ್ಕ ಏರ್ಪಡಿಸುವ ಸಾಧನವನ್ನಾಗಿ ನಿರ್ಮಿಸಿದ ಈ ತಂತ್ರಾಂಶ ನಮ್ಮ ಪಂಚಾಂಗ ಕೊಡುವ ಗ್ರಹಗಳ ಗತಿ ಅಥವಾ ಸ್ಥಾನಕ್ಕೂ ಸಂಪರ್ಕ ಕಲ್ಪಿಸಬಲ್ಲದು. ಅಂದರೆ, ನಮ್ಮ ಜಾತಕದಲ್ಲಿ ನಾವು ಹುಟ್ಟಿದಾಗ ದಾಖಲಾಗಿರುವ ಗ್ರಹಗಳ ಸ್ಥಿತಿಯನ್ನು ಈ ತಂತ್ರಾಂಶದಲ್ಲಿ ನಮೂದಿಸಿದಾಗ, ಅದು ಈಗ ವ್ಯಾಪಕವಾಗಿ ಉಪಯೋಗಿಸುವ ಗ್ರೆಗೋರಿಯನ್ ಕ್ಯಾಲೆಂಡರಿಗೆ ಅನ್ವಯಿಸುವ ಒಂದು ನಿಶ್ಚಿತವಾದ ದಿನಾಂಕವನ್ನು ಕೊಡುತ್ತದೆ. ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಹತ್ತು ವ?ಗಳ ಹಿಂದೆ ಖ್ಯಾತ ಸಂಶೋಧಕ ಪು?ರ್ ಭಟ್ನಾಗರ್ ವಾಲ್ಮೀಕಿರಾಮಾಯಣದಲ್ಲಿ ಪ್ರಸ್ತಾವಗೊಂಡಿರುವ ಖಗೋಲ ವಿದ್ಯಮಾನಗಳ ಮಾಹಿತಿಯನ್ನು ಪ್ಲಾನಿಟೇರಿಯಂ ತಂತ್ರಾಂಶಕ್ಕೆ ಕೊಟ್ಟು ರಾಮಾಯಣದ ಕೆಲವು ಘಟನೆಗಳಿಗೆ ನಿರ್ದಿ? ಕಾಲಮಾನವನ್ನು ಪಡೆಯುವಂತಹ ಮೂಲ ಶೋಧಕಾರ್ಯ ಕೈಗೊಂಡರು.
ತಮ್ಮ ಶೋಧಗಳನ್ನು “ಡೇಟಿಂಗ್ ದಿ ಎರಾ ಆಫ಼್ ಲಾರ್ಡ್ ರಾಮ್ – ರಾಜಾ ರಾಮನ ಕಾಲನಿರ್ಣಯ” ಎಂಬ ಪುಸ್ತಕದಲ್ಲಿ ಪ್ರಕಟಿಸಿರುವ ಪುಷ್ಕರ್ ಭಟ್ನಾಗರ್, “ಹಿಂದಿನ ಅಥವಾ ಮುಂದಿನ ಯಾವುದೇ ಒಂದು ನಿರ್ದಿಷ್ಟ ದಿನಾಂಕದ ಖಗೋಲ ನೋಟವನ್ನು ಡೆಸ್ಕ್ಟಾಪ್ನಲ್ಲಿ ತೆಗೆದು ಕೊಡುವ ಸಾಮರ್ಥ್ಯವನ್ನು ಹೊಂದಿರುವ ಈ ಪ್ಲಾನೆಟೇರಿಯಮ್ ತಂತ್ರಾಂಶವನ್ನು ಉಪಯೋಗಿಸಿ, ವಾಲ್ಮೀಕಿರಾಮಾಯಣದಲ್ಲಿ ದಾಖಲಾಗಿರುವ ಅನೇಕ ಖಗೋಲ ವಿದ್ಯಮಾನಗಳ ದಿನಾಂಕಗಳ ನಿರ್ಧಾರ ಮಾಡಿದ್ದೇನೆ” ಎನ್ನುತ್ತಾರೆ. ಅಷ್ಟೇ ಅಲ್ಲದೆ, ಅವರ ಶೋಧದಲ್ಲಿ ರಾಜಾ ರಾಮನ ಜೀವಿತಾವಧಿಯಲ್ಲಿ ನಡೆದ ಅನೇಕ ಘಟನೆಗಳ ನಿರ್ದಿಷ್ಟ ದಿನಾಂಕಗಳನ್ನೂ ಗೊತ್ತುಪಡಿಸಿದ್ದಾರೆ. ಅದರೊಂದಿಗೆ ಗ್ರಹ-ನಕ್ಷತ್ರ ಕೂಟವ? ಅಲ್ಲದೆ, ಅಲ್ಲಿನ ಹಲವಾರು ಘಟನೆಗಳೊಂದಿಗೆ ಮಿಳಿತವಾಗಿರುವ ಖಗೋಲವಿದ್ಯಮಾನಗಳು ತನ್ನಿಂದ ತಾನೇ ಒಂದಕ್ಕೊಂದು ಹೊಂದಿಕೊಂಡಿರುವುದು ಈ ತಂತ್ರಾಂಶದ ನಿಖರತೆಯನ್ನು ಸಿದ್ಧಪಡಿಸುತ್ತದೆ.
ಭಾರತೀಯರಿಗೆ ಚಾರಿತ್ರಿಕ ದಾಖಲೆ ಇಡುವ ಪರಂಪರೆಯಿಲ್ಲ ಎನ್ನುವ ಆಪಾದನೆಯಿದೆ. ಆದರೆ, ರಾಮಾಯಣ ಮಹಾಭಾರತ ಮಹಾಕಾವ್ಯಗಳು ಅಂದಿನ ಕಾಲವನ್ನು ಖಗೋಲವಿದ್ಯಮಾನಗಳೊಂದಿಗೆ ನಿಖರವಾಗಿ ದಾಖಲಿಸುವ ವಿಶಿ? ಪರಂಪರೆಯನ್ನು ಹೊಂದಿವೆ ಎನ್ನುವುದನ್ನು ಜಗತ್ತಿಗೆ ತಿಳಿಸುವ ಕಾರ್ಯ ಇಂದು ಹಲವೆಡೆ ನಡೆದಿದೆ. ವಿಜ್ಞಾನ ಹಾಗೂ ತಂತ್ರಜ್ಞಾನಗಳ ಅಭಿವೃದ್ಧಿಯಿಂದಾಗಿ, ನಮ್ಮ ಚರಿತ್ರೆಯನ್ನು ನೋಡುವ ದೃಷ್ಟಿಯಲ್ಲಿ ಹೊಸ ಸಂಭಾವ್ಯತೆಗಳು ಹೆಚ್ಚಾಗಿವೆ. ಚರಿತ್ರೆಯನ್ನು ನಿರ್ಧರಿಸಲು ಇದುವರೆಗೂ ಪ್ರಮುಖ ಆಧಾರವಾಗಿದ್ದ ಪುರಾತತ್ತ್ವಶೋಧದಿಂದಾಚೆಗೆ ನಾವಿಂದು ಹೋಗಬಹುದು. ಪ್ರಾಚೀನ ಖಗೋಲ ವಿದ್ಯಮಾನಗಳು ಘಟಿಸಿದ ಕಾಲವನ್ನು ತಿಳಿಯುವುದಕ್ಕಾಗಿ ನಡೆಸುವ ಈ ಆಕಾಶಶೋಧನತಂತ್ರವು ಪುರಾತತ್ತ್ವಶೋಧನೆಗಾಗಿ ಭೂಮಿಯನ್ನು ಉತ್ಖನನ ಮಾಡುವ ರೀತಿಯಲ್ಲಿಯೇ ಕಾರ್ಯನಡೆಸುವುದು. ಈ ಕಾರ್ಯದ ಫಲವಾಗಿ, ರಾಮಾಯಣದಲ್ಲಿ ದಾಖಲಾಗಿರುವ ಅನೇಕ ಪ್ರಮುಖ ಘಟನೆಗಳ ದಿನಾಂಕಗಳು ಇಲ್ಲಿವೆ:
- ರಾಮನ ಜನ್ಮದಿನಾಂಕ – ಪ್ರಸಕ್ತ ಶಕೆಯ ಪೂರ್ವ ೫೧೧೪, ಜನವರಿ ೧೦ (ಬಾಲಕಾಂಡ ೧೮:.೮-೯)
- ಭರತನ ಜನ್ಮದಿನಾಂಕ – ಪ್ರ.ಶ.ಪೂ. ೫೧೧೪, ಜನವರಿ ೧೧ (ಬಾಲಕಾಂಡ ೧೮: ೧೪)
- ರಾಮಪಟ್ಟಾಭಿಷೇಕದ ಹಿಂದಿನ ದಿನ – ಪ್ರ.ಶ.ಪೂ. ೫೦೮೯, ಜನವರಿ ೪ (ಅಯೋಧ್ಯಾಕಾಂಡ ೪:೧೮) ೨೫ ವರ್ಷ
- ಖರದೂಷಣರೊಡನೆ ಕಾಳಗ – ಪ್ರ.ಶ.ಪೂ. ೫೦೭೭, ಅಕ್ಟೋಬರ್ ೭ (ಅರಣ್ಯಕಾಂಡ ೨೯:೨೩) ಸಂಪೂರ್ಣ ಸೂರ್ಯಗ್ರಹಣ
- ವಾಲಿವಧೆ – ಪ್ರ.ಶ.ಪೂ. ೫೦೭೬, ಏಪ್ರಿಲ್ ೩ (ಕಿಷ್ಕಿಂಧಾಕಾಂಡ ೧೫:೩) ಸೂರ್ಯಗ್ರಹಣ
- ಮಾರುತಿ ಲಂಕೆಗೆ ಹೋದ ದಿನ – ಪ್ರ.ಶ.ಪೂ. ೫೦೭೬, ಸೆಪ್ಟೆಂಬರ್ ೧೨ (ಸುಂದರಕಾಂಡ ೨: ೫೭- ೫೮)
- ಯುದ್ಧಕ್ಕೆ ಹೊರಟದ್ದು – ಪ್ರ.ಶ.ಪೂ. ೫೦೭೬, ಸೆಪ್ಟೆಂಬರ್ ೨೦ (ಯುದ್ಧಕಾಂಡ ೪: ೫೦-೫೩) (ಆಧಾರ: ಸಂಶೋಧಕ ಪು?ರ್ ಭಟ್ನಾಗರ್ರವರ ’ಡೇಟಿಂಗ್ ದಿ ಎರಾ ಆಫ಼್ ಲಾರ್ಡ್ ರಾಮ್’ ಹಾಗೂ ಭಾರತ್ ಜ್ಞಾನ್ ಸಂಸ್ಥೆಯ ಸಂಕಲನ)
ಹೀಗೆ, ರಾಮಾಯಣದ ವಿವಿಧ ಘಟನೆಗಳ ನಿಖರವಾದ ಕಾಲನಿರ್ಣಯ ಮಾಡಲು, ಮಹರ್ಷಿ ವಾಲ್ಮೀಕಿ ಕೊಟ್ಟಿರುವ ತತ್ಕಾಲಗ್ರಹಸಂಪತ್ತಿ ಅಂದರೆ ಆಯಾ ಸಂದರ್ಭದಲ್ಲಿದ್ದ ಗ್ರಹ-ತಾರೆಗಳ ಸ್ಥಿತಿ, ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣಗಳ ವಿವರಗಳೇ ಆಧಾರವಾಗಿವೆ. ಈ ಎಲ್ಲ ವಿವರಗಳು ರಾಮಾಯಣದಲ್ಲಿ ನಡೆಯುವ ಘಟನೆಗಳೊಂದಿಗೆ ಒಂದರೊಳಗೊಂದು ಸಂಪೂರ್ಣವಾಗಿ
ಹೊಂದಾಣಿಕೆಯಾಗಿರುವುದನ್ನು ಗಮನಿಸಿದಾಗ, ವಾಲ್ಮೀಕಿ ಬರೆದಿರುವುದು ತಮ್ಮ ಸಮಕಾಲೀನ ವ್ಯಕ್ತಿಯಾಗಿದ್ದ ರಾಮಚಂದ್ರನ ಜೀವನಚರಿತ್ರೆ ಎನ್ನುವುದು ಸ್ಪಷ್ಟವಾಗುತ್ತದೆ.
ಸ್ಥಳಪುರಾಣಗಳು – ನಾಸಿಕ
ಅಯೋಧ್ಯೆಯ ರಾಜನಾದ ದಶರಥನ ಮಗ ರಾಮಚಂದ್ರ ನಮ್ಮ ಊರಿನ ಮೂಲಕವೇ ಹಾದುಹೋದ ಎನ್ನುವ ಸಾವಿರಾರು ಊರುಗಳು ಇಲ್ಲಿವೆ. ಇಲ್ಲೇ ಸೀತೆ ಸ್ನಾನಮಾಡಿದಳು ಎಂದು ಹೇಳುವ ಸಾವಿರಾರು ಕೆರೆಗಳು-ನದೀತಟಗಳು ಜನಮಾನಸದಲ್ಲಿ ಸಾವಿರಾರು ಪೀಳಿಗೆಗಳಿಂದಲೂ ಉಳಿದುಬಂದಿವೆ. ಅದರಲ್ಲೂ ರಾಮ ನಡೆದಾಡಿದ್ದ ವಿವಿಧ ಸ್ಥಳಗಳ ಹೆಸರುಗಳಲ್ಲಿಯೂ ಅಂದಿನ ನೆನಪು ಇಂದಿಗೂ ಗಾಢವಾಗಿ ಉಳಿದುಬಂದಿದೆ. ಅವುಗಳಲ್ಲಿ ಪ್ರಮುಖವಾದದ್ದು ನಾಸಿಕ್. ಲಕ್ಷ್ಮಣ ಶೂರ್ಪಣಖೆಯ ಮೂಗನ್ನು ಕತ್ತರಿಸಿದ್ದು ಅಂದಿನ ಪಂಚವಟಿಯಲ್ಲಿ. ಸಂಸ್ಕೃತದಲ್ಲಿ ನಾಸಿಕಾ ಎಂದರೆ ಮೂಗು. ಹಾಗಾಗಿ ಅಂದಿನ ಪಂಚವಟಿ ಆ ಘಟನೆಯ ನೆನಪಿನಲ್ಲಿ ’ನಾಸಿಕ್’ ಎಂದು ಪ್ರಸಿದ್ಧವಾಗಿದೆ.
ಖರ-ದೂಷಣರೊಡನೆ ನಡೆದ ಕಾಳಗದಂದು ಕಂಡ ಗ್ರಹಣ
ಶೂರ್ಪಣಖೆ ಅಲ್ಲಿಯೇ ಇದ್ದ ತನ್ನ ಅಣ್ಣಂದಿರಾದ ಖರ-ದೂ?ಣರ ಬಳಿಗೆ ಹೋಗಿ ತನ್ನ ಮೂಗು ಕತ್ತರಿಸಿದ ರಾಮ ಲಕ್ಷ್ಮಣರ ವಿರುದ್ಧ ಯುದ್ಧಹೂಡಲು ಪ್ರೇರೇಪಿಸುತ್ತಾಳೆ. ಅಂತೆಯೇ ಹೋದ ಖರ-ದೂಷಣರು ತಮ್ಮ ಪರಾಕ್ರಮವನ್ನು ಹೇಳುತ್ತಾ ರಾಮನನ್ನು ಯುದ್ಧಕ್ಕೆ ಆಹ್ವಾನಿಸುತ್ತಾರೆ. ಯುದ್ಧಕ್ಕೆ ಮೊದಲು ನಡೆಯುವ ಮಾತಿನ ಚಕಮಕಿಯಲ್ಲಿ, ಇಳಿ ಮಧ್ಯಾಹ್ನದ ವೇಳೆ ಕಾಣಿಸುತ್ತಿದ್ದ ನಕ್ಷತ್ರಗಳ ಬಗ್ಗೆ ಇರುವ ವಿವರದಿಂದಾಗಿ ಅಲ್ಲಿ ಒಂದು ಗ್ರಹಣ ಘಟಿಸಿದ್ದು ತಿಳಿಯುತ್ತದೆ. ಪ್ಲಾನೆಟೇರಿಯಂ ತಂತ್ರಾಂಶದ ಕೊಡುಗೆಯಿಂದಾಗಿ, ಅಂದು ದಿನಾಂಕ ಪ್ರ.ಶ.ಪೂ. ೫೦೭೭ರ ಅಕ್ಟೋಬರ್ ೭ ಎಂದು ತಿಳಿದಿದೆ. ಮಹರ್ಷಿ ವಾಲ್ಮೀಕಿ ಹೇಳುವ ಕಾವ್ಯಮಯವಾದ ವಿವರಗಳಿಗೆ ಹೊಂದಿಕೆಯಾಗುವ ಸಂಪೂರ್ಣ ಸೂರ್ಯಗ್ರಹಣ ಅಲ್ಲಿ ಮಧ್ಯಾಹ್ನ ೩.೧೦ ಗಂಟೆಗೆ ನಡೆಯಿತೆಂದೂ ತಿಳಿದುಬರುತ್ತದೆ. ಇದನ್ನು ವಾಲ್ಮೀಕಿ ತಮ್ಮ ಕಾವ್ಯಭಾ?ಯಲ್ಲಿ ಹೀಗೆ ಹೇಳುತ್ತಾರೆ – “ಸಂಧ್ಯಾಕಾಲದ ಕೆಂಪುವರ್ಣವು ಎಲ್ಲೆಡೆ ಹರಡುತ್ತಲಿತ್ತು. ಕೆಂಪುವರ್ಣದ ಮೂಲೆಗಳಿದ್ದ ಕಪ್ಪುವರ್ಣದ ಚಕ್ರದಿಂದ ಸೂರ್ಯ ಮರೆಯಾಗಿದ್ದ. ಹಗಲಿನ ಸಮಯವಾಗಿದ್ದರೂ, ಸಂಧ್ಯಾಕಾಲದಂತೆ ತೋರತೊಡಗಿತು. ಸೂರ್ಯನು ರಾಹುಗ್ರಸ್ತನಾಗಿದ್ದರಿಂದ ತನ್ನ ಬೆಳಕನ್ನೂ ಹಾಗೂ ಪ್ರಖರತೆಯನ್ನೂ ಕಳೆದುಕೊಂಡಿದ್ದ. ಹಲವಾರು ಪಶು-ಪಕ್ಷಿಗಳು ರಾತ್ರಿಯಾದಂತೆ ಶಬ್ದ ಮಾಡುತ್ತಿದ್ದವು” (ರಾಮಾಯಣ: ೩.೨೩.೧, ೩.೨೩.೩, ೩.೨೩.೯, ೩.೨೩.೧೨, ೩.೨೯.೨೩). ವಾಲ್ಮೀಕಿ ಮುಂದುವರಿದು – “ಖರನು ತನ್ನ ಸೈನ್ಯದ ಮಧ್ಯದಲ್ಲಿ ಆಕಾಶದಲ್ಲಿ ಗ್ರಹಗಳ ಮಧ್ಯೆ ಮಂಗಳನಂತೆ ಕಾಣಿಸುತ್ತಿದ್ದ” ಎನ್ನುತ್ತಾರೆ. ಇದೂ ಕೂಡ ಆಗ ಅಲ್ಲಿದ್ದ ಗ್ರಹಗಳ ಯಥಾಸ್ಥಿತಿಯನ್ನು ತಿಳಿಸುತ್ತಿದೆ.
ರಾಮಸೇತು – ನಳಸೇತು – ಆಡಮ್ಸ್ ಬ್ರಿಡ್ಜ್
ರಾಮೇಶ್ವರದ ಬಳಿ ಇರುವ ಪಾಂಬನ್ ದ್ವೀಪದಿಂದ ಶ್ರೀಲಂಕಾದ ಮನ್ನಾರ್ ದ್ವೀಪದವರೆಗೆ ವಿಸ್ತರಿಸಿರುವ ೩೦ ಕಿಲೋಮೀಟರ್ ಸೇತುವೆ ಆ ಪ್ರದೇಶದಲ್ಲಿ ವಾಯುಮಾರ್ಗದಲ್ಲಿ ಹೋಗುವವರಿಗೆ ಸುಲಭವಾಗಿ ಕಾಣುವಂತಹುದು. ಕಾಲಾನುಕ್ರಮದಲ್ಲಿ ’ರಾಮಸೇತು’ ಎಂದು ಕರೆಯುವ ಈ ಸೇತುವೆಯ ಉಲ್ಲೇಖಗಳು ನಮ್ಮ ಕಾವ್ಯೇತಿಹಾಸಗಳಲ್ಲಿ ಹಾಗೂ ವಿವಿಧ ಕಾಲಘಟ್ಟಗಳಲ್ಲಿ ದಾಖಲಾಗಿರುವ ಶಾಸನಗಳು, ನಾಣ್ಯಗಳು, ಭೂಪಟಗಳು, ಗೆಜೆಟಿಯರ್, ವಿಶ್ವಕೋಶ ಹಾಗೂ ಪ್ರವಾಸಕಥನಗಳಲ್ಲಿ ಕಾಣುತ್ತವೆ. ಸುಮಾರು ೭೧೦೦ ವ?ಗಳ? ಹಿಂದೆ ನಿರ್ಮಾಣವಾದ ಈ ಸೇತುವೆಯ ಮೂಲಕ ಕಾಲುನಡಿಗೆಯಲ್ಲಿ ಒಂದು ದಡದಿಂದ ಇನ್ನೊಂದು ದಡವನ್ನು ಸೇರುತ್ತಿದ್ದ ಜನರು ಇದನ್ನು ’ಸೇತುಬಂಧ’ ಎಂದೂ ಕರೆದರು. ಬ್ರಿಟಿ?ರಿಂದ ’ಆಡಮ್ಸ್ ಬ್ರಿಡ್ಜ್’ ಎಂಬ ಹೆಸರಲ್ಲಿ ಜನಪ್ರಿಯವಾದ ಇದನ್ನು ಅವರಿಗಿಂತ ಮೊದಲು ’ಆಧಾಮ್’ನೊಂದಿಗೆ ಸೇರಿಸಿದವರು ಶ್ರೀಲಂಕೆಯ ಇಸ್ಲಾಮ್ ಮತಸ್ಥರು. ಅವರ ಪ್ರಥಮ ಧಾರ್ಮಿಕಗುರು ’ಆಧಾಮ್’ ಭಾರತದಿಂದ ಲಂಕೆಗೆ ಕಾಲುನಡಿಗೆಯಲ್ಲಿ ಹಾದು ಹೋಗಿದ್ದರಿಂದಾಗಿ ಈ ಸೇತುವೆಯೊಂದಿಗೆ ಅವರಿಗೆ ಪವಿತ್ರ ಸಂಬಂಧವಿದೆ. ಯೂರೋಪಿಯನ್ನರು ಶ್ರೀಲಂಕೆಯನ್ನು ಜಯಿಸಿದಾಗ ’ಆಧಾಮ್’ ಎನ್ನುವ ಹೆಸರನ್ನು ತಮ್ಮ ಧಾರ್ಮಿಕ ನಂಬಿಕೆಯಂತೆ ಆದಿ ಮಾನವನಾದ ’ಆಡಮ್’ನಿಗೆ ಜೋಡಿಸಿದರು. ಹಾಗಾಗಿ ಇದು ಸುಲಭವಾಗಿ ’ಆಡಮ್ಸ್ ಬ್ರಿಡ್ಜ್’ ಎನ್ನುವ ಹೆಸರಿನಿಂದ ಜನಪ್ರಿಯವಾಯಿತು.
ತಮಿಳುನಾಡಿನ ತಂಜಾವೂರಿನಲ್ಲಿರುವ ಪ್ರಮುಖ ಗ್ರಂಥಾಲಯ – ’ಸರಸ್ವತಿಮಹಲ್ ಗ್ರಂಥಾಲಯ’ದಲ್ಲಿ, ಕೊಲೋನಿಯಲ್ ಕಾಲದ (೧೮೦೩) ಮಾಹಿತಿ, “ಮೊಹಮ್ಮಡನರು, ಸ್ವರ್ಗದಿಂದ ಹೊರದೂಡಲ್ಪಟ್ಟು ಇಲ್ಲಿಗೆ ಬಂದು, ಆನಂತರ ಈ ಸೇತುವೆಯನ್ನು ದಾಟಿ ಸಿಲೋನಿಗೆ ಹೋದ ಆದಮ್ ಹೆಸರಿನಲ್ಲಿ ಈ ಸೇತುವೆಯನ್ನು ಕರೆಯುತ್ತಾರೆ” ಎಂದು ಹೇಳುತ್ತದೆ.
ನಮಗೀಗ ಸೇತುವೆ ಇರುವ ತಾಣ ಹೇಗೆ ಕಾಣುತ್ತದೆ?
ರಾಮಸೇತು ಇರುವ ಸಮುದ್ರ ತಾಣದಲ್ಲಿ, ಭಾರತ ಹಾಗೂ ಶ್ರೀಲಂಕೆಗಳ ಭೂಭಾಗಗಳನ್ನು ಸೇರಿಸಿರುವ, ಉಬ್ಬು ತಗ್ಗುಗಳಿರುವ ಸಮುದ್ರತಳದಿಂದ ಮೇಲೆ ಎದ್ದಿರುವ ಕೋಡುಗಲ್ಲುಗಳು ಕಾಣುತ್ತವೆ. ಈ ಸ್ವಾಭಾವಿಕ ರಚನೆಗಳು ಒಳ್ಳೆಯ ತಳಪಾಯದಂತಾಗಿ, ಅದರ ಮೇಲೆ ವಾನರರು ಸಮುದ್ರಮಾರ್ಗದಲ್ಲಿ ಸೇತುವೆಯನ್ನು ನಿರ್ಮಿಸಿರುವ ಸಾಧ್ಯತೆ ಇದೆ.
ರಾಮಾಯಣದಲ್ಲಿ, ರಾಮಸೇತು(ನಳಸೇತು)ವಿನ ನಿರ್ಮಾಣವನ್ನು ವಾಲ್ಮೀಕಿ ಹಂತ ಹಂತವಾಗಿ ವಿವರಿಸುತ್ತಾರೆ. “ಮೊದಲು ವಾನರರು ಮರಗಳನ್ನು ಕಿತ್ತು ಮುರಿದು ಸಮುದ್ರದ ಕಡೆಗೆ ಸಾಗಿಸುತ್ತಾರೆ. ಬಲಾಢ್ಯರಾದ ಆ ವಾನರರು ಆನೆಯ ಗಾತ್ರದ ದೊಡ್ಡ ದೊಡ್ಡ ಬಂಡೆಗಳನ್ನೂ ಬೆಟ್ಟಗಳನ್ನೂ ಹೊತ್ತು ತಂದು ಸಮುದ್ರದಲ್ಲಿ ಎಸೆದಾಗ, ಅಲ್ಲಿ ಅಲ್ಲೋಲಕಲ್ಲೋಲ ಉಂಟಾಯಿತು. ಹಾಗಾಗಿ, ಸೇತುವೆಯು ನಿರೀಕ್ಷಿತ ಅಳತೆಯಲ್ಲಿ ನಿರ್ಮಾಣವಾಗಲು ಕೆಲವು ಕಪಿಶ್ರೇ?ರು ದಾರಗಳನ್ನು ಹಿಡಿದು ನೂರು ಯೋಜನಗಳವರೆಗೆ ಸೇತುವೆ ನೇರವಾಗಿರುವಂತೆ ಪರೀಕ್ಷಿಸುತ್ತಿದ್ದರು. ಶಿಲ್ಪಿ ನಳ ಆ ಮಹಾಸಾಗರದಲ್ಲಿ ಹತ್ತು ಯೋಜನ ಅಗಲವೂ ನೂರು ಯೋಜನ ಉದ್ದವೂ ಇರುವ ಮಹಾಸೇತುವೆಯನ್ನು ನಿರ್ಮಾಣಮಾಡುವ ವೇಳೆ ಅಲ್ಲಿ, ಅಳತೆ ಕೋಲುಗಳನ್ನು ಹಿಡಿದು ನಿಂತ ವಾನರರು ಸೇತುವೆಯ ಏರುಪೇರುಗಳನ್ನು ಪರೀಕ್ಷಿಸಿ ಮೇಲ್ಭಾಗವು ಸಮತಟ್ಟಾಗಿರುವಂತೆ ಮಾಡುತ್ತಿದ್ದರು. ವಿಶಾಲವಾಗಿಯೂ, ದೃಢವಾಗಿಯೂ, ಸಮತಳವಾಗಿಯೂ, ಬಿರುಕುಗಳಿಲ್ಲದೆಯೂ ಇದ್ದ ನಳಸೇತು ಐದುದಿನಗಳಲ್ಲಿ ಪೂರ್ಣವಾದದ್ದು ಅಲ್ಲಿ ಕಾಣುತ್ತದೆ” (ಯುದ್ಧಕಾಂಡ ಸ:೨೨:೫೪-೮೦). ಹೀಗೆ ನಿರ್ಮಿತವಾದ ಸೇತುವೆಯನ್ನು ವಾಲ್ಮೀಕಿ ಸುಸಮಾಹಿತ ಎಂದು ವರ್ಣಿಸುವುದು ವಾಸ್ತವಸತ್ಯವನ್ನೇ ಹೇಳುತ್ತಿದೆ. ಅಲ್ಲಿ ಅವರು ಹೇಳಿರುವಂತೆ ದಾರಗಳನ್ನು ಹಿಡಿದು ನೇರವಾಗಿ ನಿರ್ಮಾಣವಾಗಿರುವ ಸೇತುವೆ ಈಗಲೂ ಹಾಗೆ ಇರುವುದನ್ನು ಸುಲಭವಾಗಿ ಗಮನಿಸಬಹುದು.
ಸೇತುವೆಯ ಉದ್ದಳತೆಯಲ್ಲಿ ಇಂದಿಗೂ ಸರಿಹೊಂದುವ ರಾಮಾಯಣದ ಮಾಹಿತಿ
ರಾಮಸೇತುವೆಯ ಒಟ್ಟು ಉದ್ದ ೧೦೦ ಯೋಜನಗಳು ಹಾಗೂ ಅಗಲ ೧೦ ಯೋಜನಗಳು ಎಂದು ರಾಮಾಯಣ ಹೇಳುವುದರಿಂದ ಅದರ ಅನುಪಾತ ೧೦:೧ ಆಗುತ್ತದೆ. ಈಗ, ಭಾರತದ ಧನು?ಟಿಯಿಂದ ಶ್ರೀಲಂಕೆಯ ತಲೈಮನ್ನಾರ್ವರೆಗೆ ಇರುವ ಆಡಮ್ ಸೇತು ಸುಮಾರು ೩೫ ಕಿ.ಮೀ. ಉದ್ದ ಹಾಗೂ ೩.೫ ಕಿ.ಮೀ. ಅಗಲವಾಗಿರುವುದು ಕಾಣುತ್ತದೆ. ಇಲ್ಲಿಯೂ ರಾಮಾಯಣದ ವರ್ಣನೆಯಂತೆಯೇ ೧೦:೧ರ ಅನುಪಾತ ಕಾಣುತ್ತದೆ. ಈ ಅದ್ಭುತವಾದ ಸಾಮ್ಯತೆಯು, ರಾಮಾಯಣದಲ್ಲಿ ವರ್ಣಿಸಿರುವುದು ಈ ಸೇತುವೆಯನ್ನೇ ಎನ್ನುವುದಕ್ಕೆ ಪ್ರಮುಖ ಅಂಶವಾಗುತ್ತದೆ.
ಕಾವ್ಯೇತಿಹಾಸ, ಶಾಸನ, ನಾಣ್ಯಗಳು, ಭೂಪಟಗಳು, ಪ್ರವಾಸಕಥನಗಳು ಕೊಡುವ ಮಾಹಿತಿಗಳು
ಇತಿಹಾಸದುದ್ದಕ್ಕೂ, ಈ ಸೇತುವೆಯ ಹಾಗೂ ಐತಿಹಾಸಿಕ ವ್ಯಕ್ತಿಯಾಗಿ ರಾಮನ ಉಲ್ಲೇಖಗಳು ಹಲವಾರು ರೀತಿಯಲ್ಲಿ ಹಲವಾರು ಸ್ಥಳಗಳಲ್ಲಿ ಕಂಡುಬರುತ್ತವೆ. ಹೀಗೆ ಅವ್ಯಾಹತವಾಗಿ ಕಾಣುವ ಉಲ್ಲೇಖಗಳಿಂದಾಗಿ, ರಾಮನ ಐತಿಹಾಸಿಕ ಸತ್ಯ, ಸೇತುವೆಯ ಅಸ್ತಿತ್ವ ಹಾಗೂ ಈ ಸೇತುವೆ ಬಹುಕಾಲದಿಂದಲೂ ಜನರ ಉಪಯೋಗದಲ್ಲಿ ಇದ್ದ ವಾಸ್ತವ ಸಂಗತಿಗಳಿಗೆ ಪ್ರಮಾಣ ಒದಗಿಸುತ್ತವೆ.
ರಾಮಾಯಣದ ಮುಂದಿನ ಕಾಲಘಟ್ಟದಲ್ಲಿ ರಚಿತವಾಗಿರುವ ಮತ್ತೊಂದು ಐತಿಹಾಸಿಕ ಮಹಾಕಾವ್ಯವಾದ ಮಹಾಭಾರತದಲ್ಲಿ ನಳಸೇತುವೆಯು ಸುರಕ್ಷಿತ ಸ್ಮಾರಕ ಎಂಬ ವಿವರ ಕಾಣುತ್ತದೆ: “ಭೂಮಿಯ ಮೇಲೆ ನಳಸೇತು ಎಂದು ಇಂದಿಗೂ ಪ್ರಸಿದ್ಧವಾದ ಸೇತುವೆ ರಾಮನ ಆಜ್ಞೆಯಂತೆ ಗಿರಿಸನ್ನಿಭದಲ್ಲಿ ಸುರಕ್ಷಿತವಾಗಿದೆ” (ಮಹಾಭಾರತ: ೩.೨೬೭.೪೫). ಮಹಾಭಾರತದ ಮತ್ತೊಂದು ಭಾಗದಲ್ಲಿ, ಪಾಂಡವರು ತಮ್ಮ ವನವಾಸದಲ್ಲಿ ಮಹರ್ಷಿ ಮಾರ್ಕಂಡೇಯರ ಆಶ್ರಮಕ್ಕೆ ಹೋಗುತ್ತಾರೆ. ಅಲ್ಲಿ, ಮಹರ್ಷಿಗಳು ಅವರಿಗೆ ಅವರ ದೇಶದ ಅನೇಕ ವೃತ್ತಾಂತಗಳನ್ನು ಹೇಳುತ್ತಾರೆ. ಅದರಲ್ಲಿ ನಳಸೇತುವಿನ ಕಥಾನಕವೂ ಸೇರಿದೆ. ಇದರೊಂದಿಗೆ ಅನೇಕ ಕಾವ್ಯೇತಿಹಾಸಿಕ ಕೃತಿಗಳಲ್ಲಿ ಕಾಣುವ ರಾಮಸೇತುವಿನ ಉಲ್ಲೇಖಗಳೊಂದಿಗೆ ’ಆಸೇತು ಹಿಮಾಚಲಂ’ ಎಂದು ಉತ್ತರ – ದಕ್ಷಿಣ ಎಲ್ಲೆಗಳನ್ನು ಸೂಚಿಸುವ ಮಾತು ಪ್ರಸಿದ್ಧವಾದುದು.
ಇಂದಿಗೆ ಸುಮಾರು ೬೦೦ ವರ್ಷಗಳ ಹಿಂದಿನವರೆಗೂ ಕಾಲುನಡಿಗೆಯ ಹಾದಿಯಾಗಿ ಬಳಕೆಯಲ್ಲಿದ್ದ ರಾಮಸೇತು
ಸುಮಾರು ೭೧೦೦ ವರ್ಷಗಳ ಹಿಂದೆ ನಿರ್ಮಾಣವಾದ ಈ ರಾಮಸೇತು ಅಂದಿನಿಂದ ೬೪೦೦ ವರ್ಷಗಳವರೆಗೆ ಸುಸ್ಥಿತಿಯಲ್ಲಿತ್ತು ಎನ್ನುವುದು ಹಾಗೂ ಪ್ರ.ಶ. ೧೪೮೦ರಲ್ಲಿ, ಬೀಸಿದ ಬೃಹತ್ ಬಿರುಗಾಳಿಯಿಂದಾಗಿ ಅಥವಾ ಸುನಾಮಿಯಂತಹ ಪ್ರಕೃತಿವಿಕೋಪದಿಂದಾಗಿ, ಇದರ ಕೆಲವು ಭಾಗಗಳು ಸಮುದ್ರದಲ್ಲಿ ಮುಳುಗಿಹೋದವು ಎನ್ನುವುದಕ್ಕೆ ಹಲವಾರು ಐತಿಹಾಸಿಕ ಪ್ರಮಾಣಗಳು ದೊರಕುತ್ತವೆ. ಹಾಗಾಗಿ, ಮುರಿದುಹೋದ ಸ್ಥಿತಿಯಲ್ಲಿ ಉಳಿದ ಸೇತುವೆ ಉಪಯೋಗವಿಲ್ಲದಂತಾಯಿತು. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ, ಸಿ.ಡಿ. ಮಾಕ್ಲೀನ್ ತಾನು ಸಿದ್ಧಪಡಿಸಿದ್ದ ಕೈಪಿಡಿ(ಪ್ರ.ಶ. ೧೪೮೦)ಯಲ್ಲಿ ಭಯಂಕರ ಬಿರುಗಾಳಿಯಿಂದಾಗಿ ನಾಶವಾಗುವವರೆಗೆ ಈ ಸೇತುವೆ ಶ್ರೀಲಂಕೆಗೆ ಹೋಗಲು ಕಾಲುನಡಿಗೆಯ ದಾರಿಯಾಗಿ ಉಪಯೋಗದಲ್ಲಿತ್ತು ಎಂದು ಹೇಳುತ್ತಾ, ಆನಂತರ ಸಂಚಾರಕ್ಕಾಗಿ ಈ ಸೇತುವೆಯ ಉಪಯೋಗ ನಿಂತುಹೋಯಿತು ಎಂದು ಸ್ಪಷ್ಟವಾಗಿ ನಮೂದಿಸಿದ್ದಾನೆ. ಅವರು ಬಂಗಾಲದಲ್ಲಿ ಸ್ಥಾಪಿಸಿದ್ದ ಏಶಿಯಾಟಿಕ್ ಸೊಸೈಟಿಯ (೧೭೯೯) ಸಂಶೋಧನಾ ಉಲ್ಲೇಖನವೊಂದು, ’ಜನರು ಇದನ್ನು ಸೇತುವೆ ಎನ್ನುತ್ತಾರೆ; ಇದರ ಮೇಲೆ ಮರ ಬೆಳೆದಿರುವಂತೆ ಕಾಣುತ್ತದೆ. ಇದರ ಮೇಲೆ ಜನರು ಓಡಾಡಿದ್ದೂ ಕಾಣುತ್ತದೆ’ ಎನ್ನುತ್ತದೆ. ಹಾಗೆಯೇ ಈ ಸೇತುಬಂಧ ಎನ್ನುವ ಸೇತುವೆಯು ಮೂರು ಭಾಗಗಳಾಗಿ ಮುರಿದಿದೆ ಎನ್ನುವುದೂ ಅಲ್ಲಿ ದಾಖಲಾಗಿದೆ. ಬ್ರಿಟಿಷರಿಂದ ಸಿದ್ಧವಾದ “ಇಂಪೀರಿಯಲ್ ಗೆಜೆಟ್”ನಲ್ಲಿರುವ ಆಡಮ್ಸ್ ಬ್ರಿಡ್ಜ್ನ ವಿವರದಲ್ಲಿ, ಆ ಸಮಯಕ್ಕಾಗಲೇ ಮುರಿದುಹೋಗಿದ್ದ ಸೇತುವೆಯ ಮೇಲೆ ಸಿಲೋನ್ವರೆಗೂ ರೈಲುಮಾರ್ಗವನ್ನು ಹಾಕುವ ಬ್ರಿಟಿ?ರ ಯೋಜನೆಯ ಬಗ್ಗೆ ಮಾಹಿತಿ ಸಿಗುತ್ತದೆ.
ಪೂರಕ ಮಾಹಿತಿಗಳು
ರಾಮನ ಜನ್ಮದಿನಾಂಕ – ಪೂ.ಪ್ರ.ಶ. ೫೧೧೪, ಜನವರಿ ೧೦.
ಇಂದಿನ ಹಾಗೂ ಹಿಂದಿನ ಜನ್ಮದಿನಾಂಕಗಳಲ್ಲಿ ಕಾಣುವ ವ್ಯತ್ಯಯ
ಈ ಪ್ಲಾನೆಟೇರಿಯಂ ತಂತ್ರಾಂಶದ ದತ್ತಾಂಶಗಳು ಒಂದು ಸಮಸ್ಯೆಯನ್ನು ನಮ್ಮ ಮುಂದೆ ಇಡುತ್ತವೆ. ನಾವು ಈಗ ರಾಮನ ಜನ್ಮದಿನ ಎಂದು ಆಚರಿಸುತ್ತಿರುವ ಚೈತ್ರಮಾಸದ ನವಮಿ ತಿಥಿ ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಬರುತ್ತದಲ್ಲವೇ? ಆದರೆ ಪ್ಲಾನೆಟೇರಿಯಂ ತಂತ್ರಾಂಶದಂತೆ, ಇದು ಜನವರಿ ೧೦ರಂದು ಬರಬೇಕಿತ್ತಲ್ಲವೇ? ಈ ದಿಸೆಯಲ್ಲಿ ಚೆನ್ನೈ ಮೂಲದ, ಭಾರತ್ ಜ್ಞಾನ್ ಸಂಸ್ಥೆ ನಡೆಸಿರುವ ಶೋಧಕಾರ್ಯ, ವರಾಹಮಿಹಿರನ ಬೃಹತ್ಸಂಹಿತೆಯಲ್ಲಿರುವ ಒಂದು ಸೂಚನೆಯಲ್ಲಿ ಈ ಸಮಸ್ಯೆಗೆ ಪರಿಹಾರ ತೋರಿಸುತ್ತದೆ. ಪ್ರ.ಶಕೆಯ ೬ನೇ ಶತಮಾನದಲ್ಲಿದ್ದ ಪ್ರಸಿದ್ಧ ಗಣಿತಜ್ಞ ಹಾಗೂ ಜ್ಯೋತಿಷಿ ವರಾಹಮಿಹಿರ ಹೇಳುವಂತೆ (ಮೇ?ಯನದ ವಕ್ರಗತಿ, ವಸಂತ ಸಂಪತ್), ಪ್ರತಿ ೭೨ ವ?ಗಳಿಗೆ ಒಮ್ಮೆ ಶೇ. ೧ರಷ್ಟು ಗ್ರಹಗತಿಗಳು ಬದಲಾಗುವುದರಿಂದ ಒಂದು ದಿನದ ಕಾಲಮಾನವನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಅಂದರೆ, ೭೨ ವ?ಗಳಿಗೆ ೧ ದಿನದಂತೆ, ಪ್ರತಿ ೫೦೦ ವ?ಗಳಿಗೊಂದು ಬಾರಿ ಮಾಡುವ ಈ ಪ್ರಕ್ರಿಯೆಯಿಂದಾಗಿ ಜನವರಿ ಹಾಗೂ ಏಪ್ರಿಲ್ ತಿಂಗಳ ನಡುವಿನ ಕಾಲ ಸರಿಹೊಂದುತ್ತದೆ.
ವಾಯುಪುರಾಣದನ್ವಯ ಯುಗಚಕ್ರ – ೩೨.೫೮-೬೪
ನಮ್ಮ ಪಾರಂಪರಿಕ ನಂಬಿಕೆಯಂತೆ, ರಾಮಾವತಾರ ಆದದ್ದು ತ್ರೇತಾಯುಗದಲ್ಲಿ. ಇದು ಜನಪ್ರಿಯ ನಂಬಿಕೆಯಂತೆ ೪,೩೨,೦೦೦ಗಳ ಯುಗಚಕ್ರ ಕಾಣುತ್ತದೆ. ಇದರೊಂದಿಗೆ, ೧೦೦೦೦ ವ?ಗಳ ಯುಗಚಕ್ರ ಹೊಂದಿರುವ ವಾಯುಪುರಾಣದ ಮಾಹಿತಿಯು ಇಲ್ಲಿದೆ:
- ಕೃತಯುಗ ೪೦೦೦ ವರ್ಷಗಳು
- ತ್ರೇತಾಯುಗ ೩೦೦೦ ವರ್ಷಗಳು
- ದ್ವಾಪರಯುಗ ೨೦೦೦ ವರ್ಷಗಳು
- ಕಲಿಯುಗ ೧೦೦೦ ವರ್ಷಗಳು
ಮೇಲಿನ ಪಟ್ಟಿಯಲ್ಲಿ ತೋರಿಸಿರುವಂತೆ, ೧೨೦೦೦ ವರ್ಷಗಳ ಪೂರ್ಣ ಚಕ್ರವನ್ನು ತೆಗೆದುಕೊಂಡು, ಇದು ನಿರ್ದಿಷ್ಟವಾದ ಸಂಧಿಕಾಲಗಳನ್ನೂ ಸೂಚಿಸುತ್ತದೆ. ವಾಯುಪುರಾಣದಲ್ಲಿ, ತ್ರೇತಾಯುಗ ಹಾಗೂ ದ್ವಾಪರಯುಗಗಳ ಅಂತಿಮಘಟ್ಟಗಳ ನಡುವೆ ಗತಿಸಿದ ೨೦೦೦ ವರ್ಷಗಳ ಮಾಹಿತಿಯೂ ಸಿಗುತ್ತದೆ. ತ್ರೇತಾಯುಗದ ಕೊನೆಯಲ್ಲಿ ರಾಮ ಜನಿಸಿದ ಎನ್ನುವ ನಂಬಿಕೆಯು ಸಾಮಾನ್ಯವಾಗಿ ಕಾಣುತ್ತದೆ.
ದ್ವಾಪರಯುಗದ ಕೊನೆ ಹಾಗೂ ಕಲಿಯುಗದ ಆರಂಭಗಳು ಪೂರ್ವ ಪ್ರ.ಶ. ೩೧೦೨ ಎಂದು ಪರಿಗಣಿಸಿದಾಗ, ರಾಮ ಹಾಗೂ ರಾಮಾಯಣಗಳ ಕಾಲವನ್ನು ಪೂ.ಪ್ರ.ಶ. ೫೧೧೪ ಅಥವಾ ೭೦೦೦ ವರ್ಷಗಳ ಹಿಂದೆ ಎಂಬ ನಿರ್ಣಯವು ವಾಯುಪುರಾಣದ ಅಳತೆಯಂತೆ ಅದು, ತ್ರೇತಾಯುಗದ ಸಮಯ ಎಂಬುದಕ್ಕೂ ಸರಿಹೊಂದುತ್ತದೆ. ಅಷ್ಟೇ ಅಲ್ಲದೆ, ಇದು ಈ ಲೇಖನದಲ್ಲಿ ನೋಡಿರುವ ಹಲವು ಕ್ಷೇತ್ರಗಳಲ್ಲಿ ದೃಢೀಕರಿಸಿರುವ ಮಾಹಿತಿಗಳೊಂದಿಗೆ ತಾಳೆಯಾಗುತ್ತದೆ.
ಶಾಸನಗಳು-ನಾಣ್ಯಗಳು-ಪ್ರವಾಸಕಥನಗಳು
ತಂಜಾವೂರಿನಲ್ಲಿ ಪ್ರ.ಶ. ೧೦೧೮-೧೦೪೮ರವರೆಗೆ ರಾಜ್ಯಭಾರ ಮಾಡಿದ ೧ನೇ ರಾಜೇಂದ್ರಚೋಳ ತನ್ನ ಸಾಧನೆಗಳನ್ನು ದಾಖಲಿಸುವಲ್ಲಿ “ರಾಮನು ಸಮುದ್ರದ ಮೇಲೆ ಕಟ್ಟಿದ ಸೇತುವೆ”ಯನ್ನು ಉಲ್ಲೇಖಿಸಿದ್ದಾನೆ (’ತಿರುವಲಂಗಡು ತಾಮ್ರಫಲಕ’ ೮೦ನೇ ಶ್ಲೋಕ). ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ರಾಜ ಕೃ?ದೇವರಾಯನ ಶಾಸನವೊಂದು ಅವನ ಕೀರ್ತಿಯು ’ಮೇರುಪರ್ವತದಿಂದ ರಾಮಸೇತುವಿನವರೆಗೂ ವಿಸ್ತರಿಸಿದೆ’ ಎಂದು ಹೇಳುತ್ತದೆ (ಎಪಿಗ್ರಾಫಿಯಾ ಇಂಡಿಕಾ, ಸಂಪುಟ ೧, ೧೮೯೨, ಪುಟ ೩೬೩-೩೬೬).
ದಕ್ಷಿಣಭಾರತದ ಹಾಗೂ ಶ್ರೀಲಂಕೆಯ ನಾಣ್ಯಗಳು ಈ ಸೇತುವೆಯನ್ನು ಒಂದು ಹೆಗ್ಗುರುತಾಗಿ ಹಾಗೂ ಜನಪ್ರಿಯ ಚಿಹ್ನೆಯಾಗಿ ಪದೇ ಪದೇ ಉಲ್ಲೇಖಿಸುತ್ತವೆ. ರಾಮಸೇತುವಿರುವ ರಾಮನಾಥಪುರಂನ ರಾಜರೆಲ್ಲರನ್ನೂ ’ಸೇತುಪತಿ’ ಅಂದರೆ “ಸೇತುರಕ್ಷಕ”ರೆಂದು ನಮ್ಮ ಪರಂಪರೆ ಗುರುತಿಸುತ್ತದೆ. ಈ ರಾಜರೆಲ್ಲರೂ ಒಂದು ಪಾರ್ಶ್ವದಲ್ಲಿ ’ಸೇತು’ ಎಂದು ನಮೂದಿಸಿರುವ ನಾಣ್ಯಗಳನ್ನು ನಿಯಮಿತವಾಗಿ ಟಂಕಿಸುತ್ತಿದ್ದರು. ಅನೇಕ ರಾಜರು ವಿವಿಧ ಕಾಲಘಟ್ಟಗಳಲ್ಲಿ ಟಂಕಿಸಿರುವ ನಾಣ್ಯಗಳಲ್ಲಿ ಅವರು ಸಾಧಿಸಿದ ವಿಜಯಗಳು ಹಾಗೂ ಅವರ ವರ್ಚಸ್ಸನ್ನು ಬಣ್ಣಿಸುವ ಬರಹಗಳು ತಮಿಳು, ಕನ್ನಡ, ಗ್ರಂಥಲಿಪಿ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಕಾಣಿಸುತ್ತವೆ.
ಕಳೆದ ಸಾವಿರ ವ?ಗಳಿಂದಲೂ ಸೇತುವನ್ನು ಕಂಡ ಹಾಗೂ ಸೇತುವೆಯ ಮೂಲಕ ಒಂದು ದಡದಿಂದ ಇನ್ನೊಂದಕ್ಕೆ ಹೋದ ಹಲವಾರು ಪ್ರವಾಸಿಗಳು ಅದರ ವಿವರವಾದ ದಾಖಲೆ ಮಾಡಿದ್ದಾರೆ. ಸೇತುವೆಯ ಪ್ರಾಚೀನತೆ, ಉಗಮ, ನಿರ್ಮಾಣ ಹಾಗೂ ಅದರ ಉಪಯೋಗಗಳನ್ನು ಕುರಿತಾದ ವಿವರ ಅವರ ಕಥನಗಳಲ್ಲಿ ದೊರೆಯುತ್ತದೆ. ಅಲ್-ಬರೂನಿ (ಪ್ರ.ಶ. ೧೦೩೦), ಮಾರ್ಕೋ ಪೋಲೋ (ಪ್ರ.ಶ. ೧೨೭೧), ಲುಡೋವಿಕೋ ಡಿ ವರ್ತೇಮ (ಪ್ರ.ಶ. ೧೪೭೦), ಕ್ಲೆಮೆಂಟ್ಸ್ ರಾಬರ್ಟ್ (ಪ್ರ.ಶ. ೧೮೬೨) ಮುಂತಾದ ಪ್ರವಾಸಿಗಳು ತಮ್ಮ ಬರಹಗಳಲ್ಲಿ ರಾಮಸೇತುವಿನ ಉಲ್ಲೇಖ ಮಾಡಿದ್ದಾರೆ. ವಿಶೇ?ವಾಗಿ ಚೀನಾ, ಆಗ್ನೇಯ ಏಶಿಯಾಗಳಲ್ಲಿ ಹೆಚ್ಚು ಪ್ರವಾಸಮಾಡಿ, ಕೊನೆಯಲ್ಲಿ ರಾಮಸೇತುವನ್ನು ದಾಟಿ, ಮಲಬಾರ್ ಕರಾವಳಿಯನ್ನು ತಲಪಿದ್ದನ್ನು ತನ್ನ ಪ್ರವಾಸಕಥನದಲ್ಲಿ ವರ್ಣಿಸಿರುವ ಮಾರ್ಕೋ ಪೋಲೋನ ಬರಹ ಈ ದಿಸೆಯಲ್ಲಿ ಪ್ರಮುಖ ದಾಖಲೆಯಾಗುತ್ತದೆ.
ಸಾಗರಗರ್ಭಶಾಸ್ತ್ರಜ್ಞರ ಅಭಿಪ್ರಾಯ
ಸಾಗರಗರ್ಭಶಾಸ್ತ್ರ ಕ್ಷೇತ್ರದಲ್ಲಿ (ಮೆರೀನ್ ಆರ್ಕಿಯಾಲಜಿ) ಭಾರತದಲ್ಲಿ ಅಗ್ರಗಣ್ಯರಾದ ಡಾ|| ಎಸ್. ಆರ್. ರಾವ್ ಅವರ ಅಭಿಪ್ರಾಯದಂತೆ, ಸಮುದ್ರದ ಮೇಲೆ ಮಾನವನಿರ್ಮಿತ ಸೇತುವೆಯ ಸಾಧ್ಯತೆ ಇದೆ. ಏಕೆಂದರೆ, “ಸಮುದ್ರಮಟ್ಟದ ಏರುವಿಕೆಯಿಂದಾಗಿ, ೪೦೦೦ ವ? ಅಥವಾ ಅದಕ್ಕೂ ಹಿಂದಿನ ಕಾಲದಲ್ಲಿ, ರಾಮೇಶ್ವರವನ್ನು ಮನ್ನಾರ್ ದ್ವೀಪದೊಂದಿಗೆ ಸಂಪರ್ಕಿಸಿದ್ದ ಈ ಸ್ವಾಭಾವಿಕ ಬಂಡೆಯು ಈಗ ಸಮುದ್ರದಲ್ಲಿ ಮುಳುಗಿದೆ. ಆದರೆ, ರಾಮನ ಕಡೆಯವರು ಲಂಕೆಯನ್ನು ತಲಪಲು, ಭರತಗಳ ಅಂತರದಲ್ಲಿ ಕಲ್ಲುಮಣ್ಣುಗಳನ್ನು ಹಾಕಿ ಅದನ್ನು ಮತ್ತಷ್ಟು ಎತ್ತರಿಸಿರಬಹುದಾದ ಸಂಭವವಿದೆ.
“ದ್ವಾರಕೆಯಲ್ಲಿ ನಾವು, ೫೦೦೦ ವ?ಗಳ ಹಿಂದೆಯೇ, ಹಡಗುಗಳನ್ನು ಲಂಗರುಹಾಕಿ ನಿಲ್ಲಿಸಲು ಸ್ವಾಭಾವಿಕವಾದ ಬಂಡೆಯನ್ನು ಬಂದರುಕಟ್ಟೆಯಂತೆ ಸಿದ್ಧಗೊಳಿಸಿ ಉಪಯೋಗಿಸಿರುವುದನ್ನು ನೋಡಿದ್ದೇವೆ. ಅದೇ ರೀತಿಯಲ್ಲಿ, ವಾನರರು ಲಂಕೆಗೆ ಹಾದುಹೋಗಲು ಅದರ ಮೇಲೆ ಕಲ್ಲುಮಣ್ಣುಗಳನ್ನು ಕೈಯಲ್ಲಿ ಹಾಕಿ ಮನ್ನಾರ್ ಮತ್ತು ರಾಮೇಶ್ವರಂಗಳ ಮಧ್ಯೆ ಸಂಪರ್ಕ ಏರ್ಪಡಿಸಿರಬಹುದು.
“ಕ್ರಿ.ಪೂ. ೨೩೦೦ರಲ್ಲಿಯೇ ಲೋಥಲ್ನಲ್ಲಿ ಬಂದರುಕಟ್ಟೆ ನಿರ್ಮಿಸಲು ಶಕ್ತರಾದ ಹಾಗೂ ದ್ವಾರಕೆಯಲ್ಲಿ ಸಾಗರದಿಬ್ಬವನ್ನು ಮಾರ್ಪಡಿಸಿ ಹಡಗುಗಳಿಗೆ ಲಂಗರಿನಂತೆ ಉಪಯೋಗಿಸಲು ಸಮರ್ಥರಾದ ಪ್ರಾಚೀನ ಸಾಗರತಜ್ಞ ಇಂಜಿನಿಯರ್ಗಳಿಗೆ ಆಡಮ್ಸ್ ಬ್ರಿಡ್ಜ್ ಎಂದು ಕರೆಯುವ ರಾಮಸೇತುವೆಗೆ ಬಂಡೆಗಳನ್ನು ಪೇರಿಸಿ ಸೇನೆಯೊಂದು ಲಂಕೆಗೆ ಸಾಗಿಹೋಗುವುದು ಸುಲಭಸಾಧ್ಯವಾದ ಕಾರ್ಯವಾಗಿತ್ತು.”
ವಾಲ್ಮೀಕಿರಾಮಾಯಣದಲ್ಲಿ ಹೇಳಿರುವ ವಿವರಗಳು ಈಗ ರಾಮಸೇತುವಿನ ತಾಣದಲ್ಲಿ ಕಾಣಬಹುದೇ?
ರಾಮಸೇತುವಿನ ತಾಣದಲ್ಲಿ ವಾನರರು ಅಂದು ಹಾಕಿದ ಮರಗಳ ಹಾಗೂ ಬಂಡೆಗಳ ಭಾಗಗಳು ಕಾಣುವ ಸಾಧ್ಯತೆ ಇದೆಯೇ ಎನ್ನುವುದು ಈಗ ನಮ್ಮ ಮುಂದೆ ಇರುವ ಪ್ರಶ್ನೆ. ಅಲ್ಲಿರುವ ಮರಳುದಿಬ್ಬಗಳ ವಿವಿಧ ಪದರಗಳನ್ನು ತೆಗೆದು, ವೈಜ್ಞಾನಿಕವಾಗಿ ಪರಿಶೋಧನೆ ನಡೆಸಿದಲ್ಲಿ ಈ ಕೆಳಕಂಡ ಸಂಗತಿಗಳು ಗೋಚರಿಸುವುದೇ ಎಂದು ನೋಡಬೇಕಾಗುತ್ತದೆ:
- ಸಮುದ್ರತಳದ ಮೇಲಿರುವ ಸ್ವಾಭಾವಿಕ ಕೋಡುಗಲ್ಲುಗಳು,
- ಸ್ವಾಭಾವಿಕ ಕೋಡುಗಲ್ಲುಗಳ ಮೇಲೆ ರಾಮಾಯಣದಲ್ಲಿ ವರ್ಣಿಸಿರುವಂತಹ ಮರದ ದಿಮ್ಮಿಗಳ ಉಳಿದಿರುವ ಭಾಗಗಳು,
- ಮರದ ದಿಮ್ಮಿಗಳ ಮೇಲೆ ಹಾಕಿರುವ ದೊಡ್ಡ ಬಂಡೆಗಳು,
- ದೊಡ್ಡ ಬಂಡೆಗಳ ಮೇಲಿನ ಚಿಕ್ಕ ಕಲ್ಲುಗಳು,
- ಚಿಕ್ಕ ಕಲ್ಲುಗಳ ಮೇಲಿನ ಮರಳು.
ಒಂದೊಮ್ಮೆ ಈ ಎಲ್ಲಾ ಸಂಗತಿಗಳು ಅಲ್ಲಿ ಕಂಡಲ್ಲಿ ಅದರಿಂದಾಗಿ, ರಾಮಾಯಣಗ್ರಂಥದ ಮಾಹಿತಿಗಳು ಅಲ್ಲಿನ ರಚನೆಯ ಸ್ಥಿತಿಗತಿಗಳೊಂದಿಗೆ ತಾಳೆಯಾಗುವುದೆಂದು ಪ್ರಮಾಣಿತವಾಗುತ್ತದೆ. ಹಾಗಾದಲ್ಲಿ, ಗ್ರಾಂಥಿಕ ವರ್ಣನೆಯಂತೆ, “ಇದು, ಸ್ವಾಭಾವಿಕವಾದ ಸಮುದ್ರದಡಿಯಲ್ಲಿ ಮುಳುಗಿರುವ ಬೆಟ್ಟಗಳ ಮೇಲ್ಭಾಗದ ದಿಣ್ಣೆಗಳ ಮೇಲೆ ಮಾನವನಿರ್ಮಿತ ರಚನೆ” ಎಂಬುದನ್ನು ಪ್ರಕಟಪಡಿಸುತ್ತದೆ. ಆಗ ಇದು ಮಾನವನಿರ್ಮಿತ ಎನ್ನುವುದು ಪ್ರಮಾಣಿತವಾಗುತ್ತದೆ.
ಈ ಸೇತುವೆಯ ನಿರ್ಮಾಣದಲ್ಲಿ ಬಳಕೆಯಾಗಿರುವ ಹವಳವೂ ಈ ಶೋಧದಲ್ಲಿ ಪ್ರಮುಖವಾಗುತ್ತದೆ. ಈ ವಿಚಾರದಲ್ಲಿ, ರಾಮಸೇತುವಿನ ವ್ಯಾಪಕವಾದ ಭೂಗರ್ಭಸಂಶೋಧನೆ ನಡೆಸಿರುವ ಭೂಗರ್ಭಶಾಸ್ತ್ರಜ್ಞ ಡಾ|| ಎಸ್. ಬದ್ರಿನಾರಾಯಣ್ ಹೇಳುವ ಈ ಮಾತು ಮನನೀಯ: “ಭೂಗರ್ಭಶಾಸ್ತ್ರ ಹಾಗೂ ಭೂ-ಭೌತಶಾಸ್ತ್ರಗಳ ದೃಷ್ಟಿಯಿಂದ ಮಾಡಿರುವ ರಾಮಸೇತುವಿನ ಅಧ್ಯಯನವು ಅಲ್ಲಿರುವ ಹವಳದ ಪದರದ ಕೆಳಗೆ ಸಡಿಲ ಸಮುದ್ರಮರಳು ಇರುವುದನ್ನೂ ಹಾಗೂ ಅಲ್ಲಿ ಬಂಡೆಯಲ್ಲಿ ಕಾಣುವ ಹವಳದ ಪದರವು ಯಾರಿಂದಲೋ ಅಲ್ಲಿಗೆ ತಂದು ಹಾಕಿರುವುದೇ ಹೊರತು, ತನ್ನಿಂದ ತಾನೇ ಸ್ವಾಭಾವಿಕವಾಗಿ ಅಲ್ಲಿ ಸೃಷ್ಟಿಯಾಗಿರುವುದಲ್ಲ ಎನ್ನುವ ವಾಸ್ತವಸಂಗತಿಯನ್ನೂ ತೋರಿಸುತ್ತದೆ. ಹಾಗಾಗಿ, ರಾಮಸೇತುವೆಯು ಪುರಾತನಕಾಲದಲ್ಲಿ ಆಗಿರುವ ಮಾನವನಿರ್ಮಿತ ರಚನೆ ಎನ್ನುವುದನ್ನು ಸ್ಪ?ವಾಗಿ ನಿರೂಪಿಸುತ್ತದೆ.”
ಹವಳಗಳು ಸಾಮಾನ್ಯವಾಗಿ ಗಟ್ಟಿಬಂಡೆಯ ಮೇಲೆ, ಸಮುದ್ರ ಮೇಲ್ಭಾಗಕ್ಕೆ ಹತ್ತಿರದಲ್ಲಿ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಬೆಳೆಯುತ್ತವೆ. ರಾಮಸೇತುವಿನ ತಾಣದಲ್ಲಿ ಹವಳಗಳ ಕೆಳಗೆ ಸಡಿಲ ಮರಳು ಕಾಣುವುದನ್ನು ಗಮನಿಸಬೇಕಾಗುತ್ತದೆ. ಹಾಗಾಗಿ, ಈ ಹವಳಗಳನ್ನು ಬೇರೆ ಎಲ್ಲಿಂದಲೋ ತಂದು ಅಲ್ಲಿಟ್ಟಿದ್ದಾಗಿದೆಯೇ ಹೊರತು, ಆ ಸೇತುವೆಯಡಿಯಲ್ಲಿಯೇ ಬೆಳೆದದ್ದಲ್ಲ.
ಸಮುದ್ರದಲ್ಲಿರುವ ಸ್ವಾಭಾವಿಕ ರಚನೆಗಳ ಮೇಲೆ ಮಾನವನಿರ್ಮಿತ ಕಾಲುನಡಿಗೆಯ ಹಾದಿ ಇದಾಗಿರಬಹುದೇ? – ಎನ್ನುವ ಪ್ರಶ್ನೆಯನ್ನು ಹಾಕಿಕೊಂಡು, ಅನೇಕರು ಅವರ ಕೃತಿಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ದಿಸೆಯಲ್ಲಿ, ಬಾಲ್ಡೇಯಿಸ್ರ ’ದಿ ಮಾಸಸ್ ಆಫ್ ರಾಕ್’, ಬೆಕರ್ ಅವರ ’ದಿ ರೋಸ್ ಆಫ್ ಕ್ಲಿಫ್ಸ್’ ಹಾಗೂ ’ದಿ ಗ್ರೇಟ್ ಡಾಮ್ ಮಾಡ್ರನ್ ಚಾರ್ಟ್ಸ್’ ಡಾ. ಹರಿ ಮತ್ತು ಹೇಮಾರ ‘ಹಿಸ್ಟಾರಿಕಲ್ ರಾಮ’ ಮುಂತಾದ ಕೃತಿಗಳನ್ನು ಹೆಸರಿಸಬಹುದು. ಹೀಗೆ, ಇಂದಿನವರೆಗೆ ಮಾಡಲಾಗಿರುವ ಕೆಲವು ಸಮೀಕ್ಷೆಗಳ ವಿವರವಾದ ವರದಿಗಳು ಈ ಸೇತುವೆಯು ಸ್ವಾಭಾವಿಕವಾದ ಸಮುದ್ರದಿಬ್ಬಗಳ ಮೇಲೆ ಮಾನವಪ್ರಯತ್ನದಿಂದ ಮತ್ತ? ವಸ್ತುಗಳನ್ನು ಹಾಕಿ ನಿರ್ಮಿಸಿರುವ ರಚನೆ ಎನ್ನುವುದನ್ನು ತೋರಿಸುತ್ತದೆ.
ಈಗ, ಮಾನವಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ, ಇಂಡಿಯನ್ ಕೌನ್ಸಿಲ್ ಆಫ಼್ ಹಿಸ್ಟಾರಿಕಲ್ ರೀಸರ್ಚ್ ಕೈಗೊಂಡಿರುವ ಸಮೀಕ್ಷೆಯಲ್ಲಿ, ಈ ಸೇತುವೆ ಮಾನವನಿರ್ಮಿತ ಎಂದು ಖಚಿತವಾಗಿ ತಿಳಿದುಬಂದಲ್ಲಿ, ಈ ಭೂಮಿಯ ಮೇಲೆ ರಾಜ್ಯವಾಳಿದ ಚಕ್ರವರ್ತಿ ರಾಮನಿಂದ ನಿರ್ಮಿತವಾದ ಈ ಸೇತುವೆ ೭೦೦೦ ವ?ಗಳ? ಹಿಂದಿನ ಕಾಲಘಟ್ಟಕ್ಕೆ ಸೇರಿದ್ದೆಂದು ನಿರ್ಣಯಿಸಬಹುದು. ಭಾರತದಲ್ಲಿ ರಾಮಾಯಣದ ಘಟನೆಗಳೊಂದಿಗೆ ಸಂಬಂಧವನ್ನು ಹೊಂದಿರುವ ೫೦೦ಕ್ಕೂ ಮೇಲ್ಪಟ್ಟ ಹಾಗೂ ಶ್ರೀಲಂಕೆಯಲ್ಲಿ ಸುಮಾರು ೫೦ ಸ್ಥಳಗಳೊಂದಿಗೆ ಮಾನವಜನಾಂಗದ ಅದ್ಭುತ ಸಾಧನೆಯಾದ ಈ ಸೇತುವೆ ಪ್ರಪಂಚದ ಅತ್ಯಂತ ಹಿಂದಿನ ಸ್ಮಾರಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುತ್ತದೆ.
ಆದರೆ, ಯಾವುದೇ ಭೌತಿಕ ಆಧಾರ ದೊರೆತಿಲ್ಲವೆಂದೋ ಅಥವಾ ಇರುವ ಆಧಾರವು ಸಾಲದೆಂದೋ ಹೇಳುತ್ತಾ ಈ ಭೂಮಿಯ ಮೇಲೆ ರಘುಕುಲ ಚಕ್ರವರ್ತಿ ರಾಮ ನಡೆದಾಡಿದ್ದನ್ನು ನಂಬುವುದಿಲ್ಲ ಎನ್ನುವುದಾದರೆ, ರಾಮನಿದ್ದ ಕಾಲಘಟ್ಟದಿಂದ ಐದುಸಾವಿರ ವ?ಗಳ ನಂತರ ಇಲ್ಲಿ ಹುಟ್ಟಿದ ಎನ್ನುವ ದೇವಮಾನವ ಯೇಸುಕ್ರಿಸ್ತನ ಅಸ್ತಿತ್ವಕ್ಕೂ ಯಾವುದೇ ಭೌತಿಕ ಆಧಾರ ಇದುವರೆಗೂ ದೊರೆತಿಲ್ಲ ಎನ್ನುವ ಸತ್ಯವನ್ನೂ ಮನಗಾಣಬೇಕಾಗುತ್ತದೆ. ಇಂದಿನ ಇತಿಹಾಸತಜ್ಞರು ಏನೇ ಹೇಳಿದರೂ, ಇಂತಹ ವಿಚಾರಗಳು ವಿಶ್ವದೆಲ್ಲೆಡೆ, ಕೇವಲ ಭಾವನಾತ್ಮಕವಾಗಿ ಮಾತ್ರವಲ್ಲದೆ, ಸಾವಿರಾರು ವರು?ಗಳಿಂದಲೂ ಪೀಳಿಗೆಯಿಂದ ಪೀಳಿಗೆಗೆ ಹರಿದುಬಂದಿರುವ ನಂಬಿಕೆಗಳ ಆಧಾರದಲ್ಲಿ ನಿತ್ಯಸತ್ಯ ಸಂಗತಿಗಳಾಗಿ ನಿಲ್ಲುತ್ತವೆ.