ಕೈಗಾರಿಕೀಕೃತ, ಜಾಗತೀಕೃತ ಕೃಷಿಯು ಆತ್ಮಹತ್ಯಾಪರ ಆರ್ಥಿಕತೆಯಲ್ಲಿ ಪರ್ಯವಸಾನಗೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ; ಆಹಾರದ ಅಭಾವವುಂಟಾಗಿ ಬಡವರು ಆತ್ಮಹತ್ಯೆಯತ್ತ ಹೋಗುತ್ತಾರೆ; ಮತ್ತು ಕೊನೆಯದಾಗಿ ಬಿತ್ತನೆಬೀಜ, ಜೀವವೈವಿಧ್ಯ, ಮಣ್ಣು ಹಾಗೂ ನೀರಿಗೆ ಹಾನಿಯುಂಟಾಗಿ ಜೈವಿಕ ಅಸ್ತಿತ್ವವೇ ಅಪಾಯಕ್ಕೆ ಗುರಿಯಾಗುತ್ತದೆ.
ಭಾರತದಲ್ಲಿ ಪುನರ್ಜನ್ಮವು ಒಂದು ಸಾಮಾನ್ಯವಾದ ನಂಬಿಕೆ; ಇಲ್ಲಿ ಜೀವನದ ಬ್ಯಾಲೆನ್ಸ್ಶೀಟನ್ನು ಹಲವು ಜನ್ಮಗಳ ಆಧಾರದಲ್ಲಿ ಸಿದ್ಧಪಡಿಸಲಾಗುತ್ತದೆ. ಇಲ್ಲಿ ತಾಳ್ಮೆ ಮತ್ತು ಪುನಶ್ಚೇತನಗಳನ್ನು ’ಕಿಸಾನ್’ ಅಥವಾ ರೈತಜೀವನದ ಗುಣಲಕ್ಷಣವೆಂದು ಪರಿಗಣಿಸಲಾಗುತ್ತದೆ. ಇಂತಹ ಒಂದು ದೇಶದಲ್ಲೇ ರೈತರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾದರೂ ಏಕೆ? ೧೯೯೭ರಿಂದ ಈಚೆಗೆ ದೇಶದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ತಮ್ಮ ಜೀವನಯಾತ್ರೆಗೆ ಅಂತ್ಯ ತಂದುಕೊಂಡಿದ್ದಾರೆ. ರೈತರ ಆತ್ಮಹತ್ಯೆಗಳು ದೇಶದ ರೈತರು ಎದುರಿಸುತ್ತಿರುವ ಬಿಕ್ಕಟ್ಟಿನ ಅತ್ಯಂತ ಭೀಕರ ಮತ್ತು ನಾಟಕೀಯ ನಿದರ್ಶನವಾಗಿದೆ. ರೈತರ ಸಾಲದಲ್ಲಾದ ತೀವ್ರ ಏರಿಕೆ ಈ ಸಮಸ್ಯೆಯ ಮೂಲಕಾರಣ. ಸಾಲವು ನ?ಕಾರಕ ಆರ್ಥಿಕತೆಯನ್ನು
ಪ್ರತಿಬಿಂಬಿಸುತ್ತದೆ. ಮುಖ್ಯವಾಗಿ ಎರಡು ಅಂಶಗಳ ಕಾರಣದಿಂದ ಲಾಭದಾಯಕವಾಗಿದ್ದ ಕೃಷಿ ನ?ಕಾರಕ ಆರ್ಥಿಕತೆಯ ಕಡೆಗೆ ಸರಿದಿದೆ. ಅವುಗಳೆಂದರೆ ಒಂದೆಡೆ ಕೃಷಿಯ ವೆಚ್ಚ ಅಧಿಕವಾಗುತ್ತಿದ್ದರೆ ಇನ್ನೊಂದೆಡೆ ಕೃಷಿ-ಉತ್ಪನ್ನಗಳ ಬೆಲೆ ಕುಸಿಯುತ್ತಿರುವುದು. ಈ ಅಂಶಗಳ ಮೂಲವನ್ನು ವ್ಯಾಪಾರದ ಉದಾರೀಕರಣ ಮತ್ತು ಕಾರ್ಪೊರೇಟ್ (ಉದ್ಯಮಸಂಸ್ಥೆಗಳ ಕ್ಷೇತ್ರದ) ಜಾಗತೀಕರಣದಲ್ಲಿ ಗುರುತಿಸಬಹುದು.
೧೯೯೮ರಲ್ಲಿ ವಿಶ್ವಬ್ಯಾಂಕಿನ ಸ್ವರೂಪಾತ್ಮಕ ಹೊಂದಾಣಿಕೆ ನೀತಿ (structural adjustment
policy) ಗಳಿಂದಾಗಿ ಭಾರತ ತನ್ನ ಬಿತ್ತನೆಬೀಜ ಕ್ಷೇತ್ರವನ್ನು ಕಾರ್ಗಿಲ್, ಮೊನ್ಸಾಂಟೊ, ಸಿಗೆಂಟಾದಂತಹ ಜಾಗತಿಕ ಉದ್ಯಮಸಂಸ್ಥೆಗಳಿಗೆ ಮುಕ್ತಗೊಳಿಸಬೇಕಾಯಿತು. ಜಾಗತಿಕ ಉದ್ಯಮಸಂಸ್ಥೆಗಳು ರಾತ್ರಿ ಬೆಳಗಾಗುವುದರೊಳಗೆ ಕೃಷಿಯ ವೆಚ್ಚದಲ್ಲಿ ಭಾರೀ ಬದಲಾವಣೆಯನ್ನು ಉಂಟುಮಾಡಿದವು. ರೈತರು ತಮ್ಮ ಬಳಿ ಹೊಂದಿದ್ದ ಬಿತ್ತನೆಬೀಜಗಳ ಸ್ಥಾನವನ್ನು ಕಾರ್ಪೊರೇಟ್ ಬಿತ್ತನೆಬೀಜಗಳು ಆಕ್ರಮಿಸಿದವು; ಅವುಗಳಿಗೆ ರಸಗೊಬ್ಬರಗಳು ಮತ್ತು ಕೀಟನಾಶಕಗಳು ಅನಿವಾರ್ಯ. ಬಹುರಾಷ್ಟ್ರೀಯ ಕಂಪೆನಿಗಳು ಪೇಟೆಂಟ್ ಮೂಲಕ ರೈತನು ಬಿತ್ತನೆಬೀಜ ಇರಿಸಿಕೊಳ್ಳುವುದನ್ನು ತಡೆಯುತ್ತವೆ; ಮತ್ತು ಬಿತ್ತನೆಬೀಜಗಳ ನವೀಕರಣ ಮಾಡಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಬಡರೈತರು ಪ್ರತಿಯೊಂದು ಬೆಳೆಗೂ ದುಬಾರಿಬೆಲೆ ತೆತ್ತು ಬಿತ್ತನೆಬೀಜವನ್ನು ಖರೀದಿಸಬೇಕಾಗುತ್ತದೆ; ಹಿಂದೆ ಬಿತ್ತನೆಬೀಜ ಬಹುತೇಕ ಉಚಿತವಾಗಿ ಲಭ್ಯವಾಗುತ್ತಿತ್ತು. ಬೆಳೆಯ ಒಂದು ಪುಟ್ಟಭಾಗವನ್ನು ಅದಕ್ಕಾಗಿ ತೆಗೆದಿರಿಸಲಾಗುತ್ತಿತ್ತು. ಈ ಹೊಸ ವೆಚ್ಚದಿಂದಾಗಿ ಬಡತನ ಮತ್ತು ರೈತರ ಸಾಲಗಳು ಹೆಚ್ಚುತ್ತಿವೆ.
ರೈತನು ಸ್ವಂತ ಬಿತ್ತನೆಬೀಜದ ಮೂಲಕ ಕೃಷಿ ಮಾಡುವುದನ್ನು ಬಿಟ್ಟು ಕಾರ್ಪೊರೇಟ್ ಏಕಸ್ವಾಮ್ಯದ ಬಿತ್ತನೆಬೀಜದ ಮೇಲೆ ಅವಲಂಬಿಸತೊಡಗಿದುದರಿಂದ ಜೀವವೈವಿಧ್ಯದಿಂದ (ಮಿಶ್ರಬೆಳೆ) ಏಕಬೆಳೆಗೆ ಪರಿವರ್ತನೆಗೊಂಡಂತಾಗಿದೆ. ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯಲ್ಲಿ ವೈವಿಧ್ಯಮಯವಾದ ಏಕದಳ- ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳನ್ನೆಲ್ಲ ಬೆಳೆಯುತ್ತಿದ್ದರು. ಈಗ ಹತ್ತಿಯ ಏಕಬೆಳೆ ಹೇರಿಕೆಯಿಂದಾಗಿ ರೈತರ ಬಿತ್ತನೆಬೀಜ ಸಂಪತ್ತು ಮತ್ತು ಪರಿಸರ ಸ್ವಾಸ್ಥ್ಯಗಳು ಹಾನಿಗೀಡಾಗಿವೆ.
ಏಕಬೆಳೆ (ಮಾನೋಕಲ್ಚರ್) ಮತ್ತು ಏಕರೂಪದ ಕೃಷಿಯ ಪರಿಣಾಮವಾಗಿ ಬೆಳೆವೈಫಲ್ಯಗಳು ಹೆಚ್ಚುತ್ತಿವೆ; ಬೇರೆಯದೇ ಆದ ಪರಿಸರ ವ್ಯವಸ್ಥೆಗೆ ಅನುಗುಣವಾಗಿದ್ದ ವಿಭಿನ್ನ ಬಿತ್ತನೆಬೀಜಗಳನ್ನು ಕೃಷಿಗೆ ಬಳಸುವುದು ಮತ್ತು ಬಹಳ? ಸಂದರ್ಭಗಳಲ್ಲಿ ಪರೀಕ್ಷೆಗೊಳಪಡಿಸದಿರುವ ಯಾವುದೋ ಏಕಬೆಳೆಯ ಬಿತ್ತನೆಬೀಜವನ್ನು ಬಳಸುವುದು ಅದಕ್ಕೆ ಕಾರಣ. ೨೦೦೨ರಲ್ಲಿ ಮೊನ್ಸಾಂಟೋ ಕಂಪೆನಿಯು ಮೊದಲಬಾರಿಗೆ ಬಿ.ಟಿ. ಹತ್ತಿಯನ್ನು ಕೃಷಿಯಲ್ಲಿ ತೊಡಗಿಸಿದಾಗ ಬೆಳೆ ಕೈಕೊಟ್ಟು ರೈತರಿಗೆ
ಸುಮಾರು ೧೦೦ ಕೋಟಿ ರೂ.ನ? ನ? ಉಂಟಾಯಿತು. ಕಂಪೆನಿಯು ಎಕ್ರೆಗೆ ೧೫,೦೦೦ ಕಿಲೋ ಹತ್ತಿ ಬೆಳೆಯಬಹುದೆಂದು ಭರವಸೆ ನೀಡಿತ್ತು. ಆದರೆ ಬೆಳೆದದ್ದು ಎಕ್ರೆಗೆ ಕೇವಲ ೨೦೦ ಕೆ.ಜಿ.; ಎಕ್ರೆಗೆ ೧೦ ಸಾವಿರ ರೂ. ಆದಾಯ ಬರುವ ಬದಲು ೬,೪೦೦ ರೂ. ನ?ವೇ ಆಯಿತು. ಬಿಹಾರದಲ್ಲಿ ರೈತರು ಸ್ವಂತ ಬಿತ್ತನೆಬೀಜಕ್ಕೆ ಬದಲಾಗಿ ಮೊನ್ಸಾಂಟೋದ ಬಿತ್ತನೆಬೀಜವನ್ನು ಬಳಸಿದ ಕಾರಣ ಬೆಳೆ ಪೂರ್ತಿ ವಿಫಲವಾಗಿ ಸುಮಾರು ೪೦೦ ಕೋಟಿ ರೂ. ನ? ಉಂಟಾಯಿತು. ಅದರಿಂದ ಮೊದಲೇ ಬಡವರಾಗಿದ್ದ ರೈತರು ಮತ್ತ? ಬಡವರಾದರು. ದಕ್ಷಿಣಭಾರತದ ಬಡರೈತರಿಗೆ ಬಿತ್ತನೆಬೀಜದ ಏಕಸ್ವಾಮ್ಯ ಕಂಪೆನಿಗಳ ಜೊತೆ ಏಗಲು ಸಾಧ್ಯವಾಗಲಿಲ್ಲ. ಜಾಗತಿಕ ಕೃಷಿಸಂಸ್ಥೆಗಳ ಬಿತ್ತನೆಬೀಜ ಏಕಸ್ವಾಮ್ಯದ ಎದುರು ಸಣ್ಣರೈತರು ಬದುಕುವುದು ಎ? ಕ? ಎಂಬುದಕ್ಕೆ ರೈತರ ಆತ್ಮಹತ್ಯೆಯ ಬಿಕ್ಕಟ್ಟು ಪ್ರಬಲ ಸಾಕ್ಷಿಯಾಗಿದೆ.
ಕೃಷಿ-ಉತ್ಪನ್ನಗಳ ಬೆಲೆಯು ನಾಟಕೀಯವಾದ ರೀತಿಯಲ್ಲಿ ಕುಸಿಯುತ್ತಿರುವುದು ಭಾರತದ ರೈತರ ಮೇಲೆ ಎರಡನೇ ಬಗೆಯ ಒತ್ತಡವನ್ನು ಉಂಟುಮಾಡುತ್ತಿದೆ. ವಿಶ್ವವ್ಯಾಪಾರ ಸಂಸ್ಥೆ(ಡಬ್ಲ್ಯುಟಿಓ)ಯ ಮುಕ್ತ ವ್ಯಾಪಾರ ನೀತಿಗಳು ಅದಕ್ಕೆ ಮುಖ್ಯ ಕಾರಣ. ಕೃಷಿ-ಉತ್ಪನ್ನಗಳ ವ್ಯಾಪಾರದಲ್ಲಿ ಡಬ್ಲ್ಯುಟಿಓ ನಿಯಮಗಳೆಂದರೆ (ಮಾರುಕಟ್ಟೆಯಲ್ಲಿ) ರಾಶಿಹಾಕುವುದು (ಜumಠಿiಟಿg) ಎಂದರ್ಥ. ಶ್ರೀಮಂತ ದೇಶಗಳು ಕೃಷಿ ವ್ಯವಹಾರದ ಸಬ್ಸಿಡಿ(ಸಹಾಯಧನ) ಯನ್ನು ಹೆಚ್ಚಿಸುವುದಕ್ಕೆ ಅವಕಾಶ ನೀಡುವ ಅವು ಇತರ ದೇಶಗಳು ತಮ್ಮ ರೈತರಿಗೆ ರಕ್ಷಣೆ ನೀಡದಂತೆ ತಡೆಯುತ್ತವೆ; ಸಬ್ಸಿಡಿಯ ಲಾಭ ಪಡೆದು ಶ್ರೀಮಂತ ದೇಶಗಳ ಕೃಷಿ ಉತ್ಪನ್ನಗಳು ಇತರ ದೇಶಗಳ ಮಾರುಕಟ್ಟೆಯಲ್ಲಿ ರಾಶಿ ಬೀಳುತ್ತವೆ; ಆಮದಾದ ಈ ಉತ್ಪನ್ನಗಳು ಅಗ್ಗಬೆಲೆಯಲ್ಲಿ ಸಿಗುತ್ತವೆ. ೪೦ ಸಾವಿರ ಕೋಟಿ ಡಾಲರ್ ಸಬ್ಸಿಡಿ ಮತ್ತು ಒತ್ತಡ ತಂದು ಆಮದು ಸುಂಕ ಇಳಿಸಿರುವ ಸಂದರ್ಭದಲ್ಲಿ ದೇಶದ ರೈತರಿಗೆ ಆತ್ಮಹತ್ಯೆಯಲ್ಲದೆ ಬೇರೆ ಯಾವ ದಾರಿ ಇರಲು ಸಾಧ್ಯ? ೧೯೯೫ರಲ್ಲಿ ಟನ್ನಿಗೆ ೨೧೬ ಡಾಲರ್ ಇದ್ದ ಗೋಧಿಯ ಬೆಲೆ ೨೦೦೧ರಲ್ಲಿ ೧೩೩ ಡಾಲರ್ ಆಗಿತ್ತು. ಅದೇ ಅವಧಿಯಲ್ಲಿ ಟನ್ನಿಗೆ ೯೮.೨ ಡಾಲರ್ ಇದ್ದ ಹತ್ತಿಯ ಬೆಲೆ ೪೯.೧ ಡಾಲರಿಗೆ ಇಳಿದಿತ್ತು; ಮತ್ತು ಸೋಯಾಬೀನ್ನ ಬೆಲೆ ಟನ್ನಿಗೆ ೨೭೩ ಡಾಲರ್ ಇದ್ದುದು ೧೭೮ ಡಾಲರಿಗೆ ಕುಸಿದಿತ್ತು. ಈ ರೀತಿ ಜಾಗತಿಕ ಬೆಲೆ ಕುಸಿಯಲು ಉತ್ಪಾದಕತೆಯಲ್ಲಿ ಆದ ಏರಿಕೆ ಕಾರಣವಲ್ಲ. ಬದಲಾಗಿ ಸಂಬಂಧಪಟ್ಟ ದೇಶಗಳು ಹೆಚ್ಚು ಹೆಚ್ಚು ಸಬ್ಸಿಡಿ ನೀಡಿದ್ದು ಮತ್ತು ಕೃಷಿ ವ್ಯಾಪಾರಕ್ಷೇತ್ರದಲ್ಲಿ ಬಹುರಾಷ್ಟ್ರೀಯ ಕೃಷಿ ಕಂಪೆನಿಗಳು ತಮ್ಮ ಹಿಡಿತವನ್ನು ಬಿಗಿಗೊಳಿಸಿದ್ದುದೇ ಕಾರಣ.
ಭಾರತದಲ್ಲಿ ಒಂದು ಅವಧಿಯಲ್ಲಿ ಅತಿಹೆಚ್ಚು ರೈತರ ಆತ್ಮಹತ್ಯೆಗಳು ನಡೆದದ್ದು ಮಹಾರಾ?ದ ವಿದರ್ಭ ಪ್ರದೇಶದಲ್ಲಿ – ವ?ಕ್ಕೆ ಸುಮಾರು ೪,೦೦೦; ಅಂದರೆ ಪ್ರತಿದಿನ ಹತ್ತಕ್ಕಿಂತಲೂ ಹೆಚ್ಚು. ಮೊನ್ಸಾಂಟೋ ಕಂಪೆನಿಯ ಜಿಎಂಓ ಬಿ.ಟಿ. ಹತ್ತಿಯ ಅತಿಹೆಚ್ಚು ಕೃಷಿ ನಡೆದದ್ದೂ ಅಲ್ಲೇ. ಹತ್ತಿಯ ಬಿತ್ತನೆಬೀಜವು ಅದಾಗಿಯೇ ನವೀಕರಣ ಆಗುವಂಥದನ್ನು ಮೊನ್ಸಾಂಟೋ ಬಿತ್ತನೆಬೀಜವು ಬದಲಾಯಿಸಿ ಬಿಡುತ್ತದೆ. ಪರಿಣಾಮವಾಗಿ ರೈತನು ಪ್ರತಿವ? ದುಬಾರಿ ಬೆಲೆ ತೆತ್ತು ಬಿತ್ತನೆಬೀಜವನ್ನು ಖರೀದಿಸಬೇಕು. ಹಿಂದೆ ರೈತರಿಗೆ ಒಂದು ಕೆ.ಜಿ. ಬಿತ್ತನೆಬೀಜಕ್ಕೆ ಏಳು ರೂ. ತಗಲುತ್ತಿದ್ದರೆ ಮೊನ್ಸಾಂಟೋ ಕಂಪೆನಿಯ ಬಿ.ಟಿ. ಬಿತ್ತನೆಬೀಜ ಒಂದು ಕೆ.ಜಿ.ಗೆ ೧೭ ಸಾವಿರ ರೂ. ಸ್ವದೇಶೀ ಬಿತ್ತನೆಬೀಜದ
ಹತ್ತಿಯನ್ನು ಇತರ ಬೆಳೆಗಳ ಜೊತೆಗೆ ಒಂದು ಮಿಶ್ರಬೆಳೆಯಾಗಿ ಬೆಳೆಸಬಹುದು. ಬಿ.ಟಿ. ಹತ್ತಿಯನ್ನು ಹಾಗೆ ಬೆಳೆಸಲು ಅಸಾಧ್ಯ; ಅದೊಂದನ್ನೇ ಬೆಳೆಸಬೇಕು. ದೇಶೀ ಹತ್ತಿ ಮಳೆನೀರಿನಿಂದಲೂ ಬೆಳೆದುಕೊಳ್ಳುತ್ತದೆ. ಬಿ.ಟಿ. ಹತ್ತಿ ಬೆಳೆಗೆ ನೀರಾವರಿಯೇ ಆಗಬೇಕು. ದೇಶೀ ಹತ್ತಿ ತಳಿಗಳಲ್ಲಿ ಕೀಟನಿರೋಧಕ ಗುಣವಿದೆ. ಆದರೆ ಬಿ.ಟಿ. ಹತ್ತಿಬೆಳೆಗೆ ಹಿಂದೆ ಹತ್ತಿಬೆಳೆಗೆ ಬಳಸುತಿದ್ದ ಕೀಟನಾಶಕದ ೧೩ ಪಾಲು ಹೆಚ್ಚು ಕೀಟನಾಶಕವನ್ನು ಬಳಸಬೇಕಾಗಿದೆ; ಬಿ.ಟಿ. ಹತ್ತಿ ಒಂದು ಬಗೆಯ ಕೀಟಗಳಿಗೆ ಹೆದರುವುದಿಲ್ಲ; ಆದರೆ ಹೊಸ ಹತ್ತಾರು ಬಗೆಯ ಕೀಟಗಳು ಹುಟ್ಟಿಕೊಂಡಿವೆ.
ಇನ್ನು ಮೊನ್ಸಾಂಟೋ ತನ್ನ ಜಿಎಂಓ ಹತ್ತಿಬೀಜದಿಂದ ವ?ಕ್ಕೆ ೧೫೦೦ ಕೆ.ಜಿ. ಬೆಳೆ ಬರುತ್ತದೆಂದು ಹೇಳಿಕೊಳ್ಳುತ್ತದೆ. ಆದರೆ ಬರುವ ಇಳುವರಿ ವ?ಕ್ಕೆ ಸರಾಸರಿ ೩೦೦-೪೦೦ ಕೆ.ಜಿ. ಮಾತ್ರ. ಕೃಷಿಗೆ ಮಾಡುವ ದುಬಾರಿ ವೆಚ್ಚ ಮತ್ತು ಅನಿಶ್ಚಿತ ಆದಾಯದಿಂದಾಗಿ ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ; ಇದೇ ಅವರನ್ನು ಆತ್ಮಹತ್ಯೆಯತ್ತ ತಳ್ಳುತ್ತಿದೆ. ಒಂದೆಡೆ ಮೊನ್ಸಾಂಟೋದಿಂದಾಗಿ ರೈತರು ಕೃಷಿಗೆ ಮಾಡುವ ವೆಚ್ಚ ಅಧಿಕವಾಗುತ್ತ ಹೋದರೆ ಇನ್ನೊಂದೆಡೆ ಶ್ರೀಮಂತ ದೇಶಗಳು ತಮ್ಮ ರೈತರಿಗೆ ನೀಡುವ ಸಬ್ಸಿಡಿಯಿಂದಾಗಿ ಅವರ ಉತ್ಪನ್ನಗಳು ಅಗ್ಗಬೆಲೆಗೆ ಬಂದು ನಮ್ಮ ಮಾರುಕಟ್ಟೆಯಲ್ಲಿ ಬೀಳುತ್ತವೆ.
ಅಮೆರಿಕದಲ್ಲಿ ಹತ್ತಿ ಬೆಳೆಗಾರರಿಗೆ ಪ್ರತಿವ? ೪೦೦ ಕೋಟಿ ಡಾಲರ್ ಸಬ್ಸಿಡಿಯನ್ನು ನೀಡಲಾಗುತ್ತದೆ. ಇದರಿಂದ ಅಮೆರಿಕದ ಹತ್ತಿಯ ಬೆಲೆ ಕೃತಕವಾಗಿ ಕುಸಿದು, ಅಮೆರಿಕಕ್ಕೆ ಜಾಗತಿಕ ಮಾರುಕಟ್ಟೆಯನ್ನು ಆಕ್ರಮಿಸಲು ಅನುಕೂಲವಾಗುತ್ತದೆ. ಹಿಂದೆ ಬುರ್ಕಿನಾ ಫಾಸೋ, ಬೆನಿನ್, ಮಾಲಿಯಂತಹ ಆಫ್ರಿಕದ ದೇಶಗಳು ಆ ಮಾರುಕಟ್ಟೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದವು. ಅಮೆರಿಕದಲ್ಲಿ ಹತ್ತಿಬೆಳೆಗೆ ಎಕ್ರೆಗೆ ಸುಮಾರು ೨೩೦ ಡಾಲರ್ ಸಬ್ಸಿಡಿ ನೀಡುತ್ತಿದ್ದು ಅದನ್ನು ಎದುರಿಸಿ ನಿಲ್ಲಲು ಆಫ್ರಿಕದ ರೈತರಿಗೆ ಅಸಾಧ್ಯ. ಆಫ್ರಿಕದ ಹತ್ತಿ ಬೆಳೆಗಾರರಿಗೆ ಪ್ರತಿವ? ೨೫ ಕೋಟಿ ಡಾಲರ್ ನ?ವಾಗುತ್ತಿದೆ. ಅದೇ ಕಾರಣದಿಂದ ಆಫ್ರಿಕದ ಸಣ್ಣ ದೇಶಗಳು ಕಾನ್ಕುನ್ ಮಾತುಕತೆಯಲ್ಲಿ ಸಭಾತ್ಯಾಗ ಮಾಡಿದವು; ಪರಿಣಾಮವಾಗಿ ಡಬ್ಲ್ಯುಟಿಓ ಸಚಿವಮಟ್ಟದ ಮಾತುಕತೆ ಕುಸಿದುಬಿತ್ತು.
ಜಾಗತಿಕವಾಗಿ ಮಾರಾಟವಾಗುವ ಕೃಷಿ- ಉತ್ಪನ್ನಗಳ ಬೆಲೆಯನ್ನು ಈ ರೀತಿ ಕೃತಕವಾಗಿ ಇಳಿಸುವ ಕಾರಣ ಮುಖ್ಯವಾಗಿ ಅಭಿವೃದ್ಧಿಶೀಲ ದೇಶಗಳ ರೈತರು ಕ?ಕ್ಕೊಳಗಾಗುತ್ತಿದ್ದಾರೆ. ಕೃಷಿ ಉತ್ಪನ್ನಗಳ ಬೆಲೆಕುಸಿತದ ಕಾರಣದಿಂದಾಗಿ ಭಾರತದ ರೈತರಿಗೆ ಪ್ರತಿವ? ಸುಮಾರು ೨೬೦೦ ಕೋಟಿ ಡಾಲರ್ನ? ನ?ವಾಗುತ್ತಿದೆ ಎಂದು ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಸಂಶೋಧನ ಪ್ರತಿ?ನವು (ಆರ್ಎಫ್ಟಿಇ) ನಡೆಸಿದ ಒಂದು ಅಧ್ಯಯನವು ತಿಳಿಸಿದೆ. ಮೊದಲೇ ಬಡತನದಲ್ಲಿರುವ ಅವರಿಗೆ ಈ ಹೊರೆಯನ್ನು ಹೊರಲು ಸಾಧ್ಯವಾಗುವುದಿಲ್ಲ. ಕೃಷಿ-ಉತ್ಪನ್ನಗಳಿಂದ ಬರುವ ಆದಾಯದಿಂದ ಸಾಲವನ್ನು ತೀರಿಸಲು ಸಾಧ್ಯವಾಗುವುದಿಲ್ಲ; ಆಗ ರೈತ ತನ್ನ ಮೂತ್ರಪಿಂಡ(ಕಿಡ್ನಿ) ವನ್ನು ಮಾರುತ್ತಾನೆ ಅಥವಾ ಆತ್ಮಹತ್ಯೆಯಂಥ ಸುಲಭದ ದಾರಿಯನ್ನು ಕಂಡುಕೊಳ್ಳುತ್ತಾನೆ. ಬಿತ್ತನೆಬೀಜವಾದರೂ ತನ್ನ ಬಳಿ ಇದ್ದರೆ ರೈತನಿಗೆ ಎ? ಆಧಾರವಾಗುತ್ತದೆ, ಬಹುರಾಷ್ಟ್ರೀಯ ಕಂಪೆನಿ(ಎಂಎನ್ಸಿ) ಏಕಸ್ವಾಮ್ಯದ ಫಲವಾಗಿ ಬಿತ್ತನೆಬೀಜ ಕೂಡ ಅವನ ಬಳಿ ಇಲ್ಲವೆಂದಾದರೆ ಬದುಕುವ ದಾರಿ ಬಹುತೇಕ ಇಲ್ಲದಂತಾಗುತ್ತದೆ.
ಕೆಲವು ತಿಂಗಳ ಹಿಂದೆ ಛತ್ತೀಸ್ಗಢದ ರೈತರ ಆತ್ಮಹತ್ಯೆ ದೊಡ್ಡ ಸುದ್ದಿಯಾಗಿತ್ತು. ೨೦೦೭ರಲ್ಲಿ ಆ ರಾಜ್ಯದಲ್ಲಿ ೧,೫೯೩ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಶ್ಚರ್ಯವೆಂದರೆ ೨೦೦೦ಕ್ಕೆ ಮುನ್ನ ಛತ್ತೀಸ್ಗಢದಲ್ಲಿ ರೈತರ ಆತ್ಮಹತ್ಯೆ ಎಂಬುದೊಂದು ಅಪರಿಚಿತ ವಿ?ಯವಾಗಿತ್ತು.
ಛತ್ತೀಸ್ಗಢ ರಾಜ್ಯವು ಭತ್ತದ ತಳಿ ವೈವಿಧ್ಯದ ಕೇಂದ್ರವೆನಿಸಿದೆ. ನಮ್ಮ ದೇಶದಲ್ಲಿ ಹಿಂದೆ ಎರಡು ಲಕ್ಷಕ್ಕೂ ಅಧಿಕ ಭತ್ತದ ತಳಿಗಳಿದ್ದವು. ಪ್ರಸಿದ್ಧ ಭತ್ತದ ಕೃಷಿವಿಜ್ಞಾನಿ ಡಾ| ರಿಚಾರಿಯಾ ಅವರು ಅಲ್ಲಿ ಭತ್ತದ ತಳಿಗಳನ್ನು ಸಂಗ್ರಹಿಸಿದ್ದರು ಮತ್ತು ಬುಡಕಟ್ಟು ಜನರು ಬೆಳೆಯುವ ಹಲವು ಭತ್ತದ ತಳಿಗಳು ಹಸಿರುಕ್ರಾಂತಿಯ ಭತ್ತದ ತಳಿಗಳಿಗಿಂತಲೂ ಹೆಚ್ಚಿನ ಇಳುವರಿ ನೀಡುತ್ತವೆಂದು ತೋರಿಸಿಕೊಟ್ಟಿದ್ದರು.
ಛತ್ತೀಸ್ಗಢದ ಭತ್ತದ ಕೃಷಿ ಈಗ ಹಾನಿಗೀಡಾಗಿದೆ. ದೇಶೀಯ ಭತ್ತದ ತಳಿಗೆ ಬದಲಾಗಿ ಹಸಿರುಕ್ರಾಂತಿಯ ತಳಿ ಬಂದಾಗ ನೀರಾವರಿ ಅನಿವಾರ್ಯವಾಗುತ್ತದೆ. ಜಾಗತೀಕರಣದ ಒತ್ತಡದ ಈ ದಿನಗಳಲ್ಲಿ ತರಕಾರಿ ಬೆಳೆಯೇ ಆಕ?ಕವೆನಿಸಿ ಭತ್ತದ ಬೆಳೆಯ ಆದ್ಯತೆ ಕೆಳಗೆ ಸರಿದಿದೆ. ರೈತರಿಗೆ ಹೈಬ್ರಿಡ್ ಮತ್ತು ಕೀಟನಾಶಕಗಳು ಆಗಾಗ ಕೈಕೊಡುವುದು ಮಾಮೂಲು. ಪರಿಣಾಮ ರೈತನಿಗೆ ಸಾಲದ ಶೂಲ ಮತ್ತು ಅಂತಿಮವಾಗಿ ಆತ್ಮಹತ್ಯೆ.
ಜೈವಿಕ ಇಂಧನ (ಪೆಟ್ರೋಲ್) ಉತ್ಪಾದಿಸುವ ಜತ್ರೋಫಾ ಬೆಳೆಗೆ ಕೂಡ ಛತ್ತೀಸ್ಗಢವನ್ನು ಮುಖ್ಯವಾಗಿ ಗುರುತಿಸಲಾಗಿದೆ. ಅದಕ್ಕಾಗಿ ಬುಡಕಟ್ಟು ಜನರ ಜಮೀನನ್ನು ಬಲಾತ್ಕಾರವಾಗಿ ಕಿತ್ತುಕೊಳ್ಳಲಾಗುತ್ತಿದೆ. ಪರಿಣಾಮವಾಗಿ ಈ ರಾಜ್ಯದಲ್ಲಿ ಆಹಾರ ಮತ್ತು ಜೀವನಾಧಾರದ ಬಿಕ್ಕಟ್ಟು ಉಂಟಾಗುತ್ತಿದೆ. ಅಂದರೆ ಇಲ್ಲಿ ಬಡವರ ಆಹಾರದ ಅಗತ್ಯಕ್ಕಿಂತ ವಾಹನ-ಉದ್ಯಮಕ್ಕೆ ಬೇಕಾದ ಡೀಸೆಲ್ಗೆ ಹೆಚ್ಚಿನ ಪ್ರಾಧಾನ್ಯವನ್ನು ನೀಡಲಾಗುತ್ತಿದೆ.
ಹೀಗೆ ಕೈಗಾರಿಕೀಕೃತ, ಜಾಗತೀಕೃತ ಕೃಷಿಯು ಆತ್ಮಹತ್ಯಾಪರ ಆರ್ಥಿಕತೆಯಲ್ಲಿ ಪರ್ಯವಸಾನಗೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ; ಆಹಾರದ ಅಭಾವವುಂಟಾಗಿ ಬಡವರು ಆತ್ಮಹತ್ಯೆಯತ್ತ ಹೋಗುತ್ತಾರೆ; ಮತ್ತು ಕೊನೆಯದಾಗಿ ಬಿತ್ತನೆಬೀಜ, ಜೀವವೈವಿದ್ಯ, ಮಣ್ಣು ಹಾಗೂ ನೀರಿಗೆ ಹಾನಿಯುಂಟಾಗಿ ಜೈವಿಕ ಅಸ್ತಿತ್ವವೇ ಅಪಾಯಕ್ಕೆ ಗುರಿಯಾಗುತ್ತದೆ.
ಆದರೆ ಆತ್ಮಹತ್ಯಾ ಆರ್ಥಿಕತೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ರೈತರ ಆತ್ಮಹತ್ಯೆಗಳನ್ನು ತಡೆಯುವ ಉದ್ದೇಶದಿಂದ ’ನವಧಾನ್ಯ’ ಸಂಸ್ಥೆಯ ವತಿಯಿಂದ ಸೀಡ್ಸ್ ಆಫ್ ಹೋಪ್ (ಭರವಸೆಯ ಬೀಜಗಳು) ಎನ್ನುವ ಆಂದೋಲನವನ್ನು ಆರಂಭಿಸಲಾಗಿದೆ. ಸೀಡ್ಸ್ ಆಫ್ ಸೂಯಿಸೈಡ್(ಆತ್ಮಹತ್ಯೆಯ ಬೀಜ-ಕಾರಣ)ನಿಂದ ನಾವು ಸೀಡ್ಸ್ ಆಫ್ ಹೋಪ್ನತ್ತ ಸಾಗಬೇಕಾಗಿದೆ; ಪ್ರಸ್ತುತ ಆಂದೋಲನವು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ:
- ಜಿಎಂಓ (ತಳಿಶಾಸ್ತ್ರ ಪ್ರಚೋದಿತ) ಮತ್ತು ನವೀಕರಣವಾಗದ ಬಿತ್ತನೆಬೀಜದ ವ್ಯವಸ್ಥೆಯಿಂದ ಸಾವಯವ, ಮುಕ್ತ ಬಿತ್ತನೆಬೀಜ ವೈವಿಧ್ಯದತ್ತ ಹೋಗಬೇಕು; ಆ ಬಿತ್ತನೆಬೀಜಗಳನ್ನು ರೈತರು ತಮ್ಮ ಬಳಿ ಇರಿಸಿಕೊಳ್ಳಬಹುದು ಮತ್ತು ಪರಸ್ಪರ ಹಂಚಿಕೊಳ್ಳಬಹುದು.
- ರಾಸಾಯನಿಕ ಕೃಷಿಗೆ ಬದಲಾಗಿ ಸಾವಯವ ಕೃಷಿಯನ್ನು ರೂಢಿಸಬೇಕು.
- ಕೃಷಿ-ಉತ್ಪನ್ನಗಳಿಗೆ ನ್ಯಾಯಸಮ್ಮತ ಬೆಲೆ ಸಿಗಬೇಕು; ಹುಸಿ ಬೆಲೆಗಳ ಮೂಲಕ ಅನ್ಯಾಯದ ವ್ಯಾಪಾರ ಸಲ್ಲದು.
- ರೈತರು ಈ ಬದಲಾವಣೆಯನ್ನು ತಂದುಕೊಂಡಲ್ಲಿ ಮೊನ್ಸಾಂಟೋದ ಬಿ.ಟಿ. ಹತ್ತಿ ಬೆಳೆಯುವ ರೈತರಿಗಿಂತ ಹತ್ತುಪಟ್ಟು ಅಧಿಕ ಆದಾಯವನ್ನು ಗಳಿಸಲು ಸಾಧ್ಯ.
(ಸೌಜನ್ಯ: ’ಸ್ವದೇಶೀ ಪತ್ರಿಕಾ’ ಅನು: ಎಚ್. ಮಂಜುನಾಥ ಭಟ್)