ಭಾರತೀಯರ ’ರಾಮರಾಜ್ಯ’ ಕಲ್ಪನೆಯ ಕೇಂದ್ರವ್ಯಕ್ತಿಯಾದ ರಾಮ ಒಬ್ಬ ಕಳಂಕರಹಿತ, ಶುದ್ಧ, ಸರ್ವಗುಣಸಂಪನ್ನನಾದ, ತನ್ನ ಪ್ರಜೆಗಳ ಯೋಗಕ್ಷೇಮಕ್ಕೆ ಬದ್ಧನಾಗಿದ್ದ ದೊರೆ. ಯಾವುದೋ ಪ್ರತ್ಯೇಕ ಮತಶ್ರದ್ಧೆ ಇರದಿದ್ದ ರಾಮ ತನ್ನ ಸಮಸ್ತ ನಾಗರಿಕರನ್ನು ಸಮಾನವಾಗಿ ಕಾಣುತ್ತಿದ್ದ. ಆತನಿಗೆ ’ರಾಜಧರ್ಮ’ವೇ ಧರ್ಮವಾಗಿತ್ತು.
ಕೈಗಾರಿಕಾ ಕ್ರಾಂತಿ ಹಾಗೂ ತಂತ್ರಜ್ಞಾನದಲ್ಲಾದ ಪ್ರಗತಿ – ಇವು ವಿಶ್ವದ ಆಲೋಚನಾ ದಿಕ್ಕನ್ನೇ ಬದಲಿಸುವ? ಪ್ರಬಲವಾದ ಕ್ರಾಂತಿಯಾಗಿ ಹೊರಹೊಮ್ಮಿ, ಹೊಸ ಇತಿಹಾಸವನ್ನೇ ಸೃಷ್ಟಿಸಿದವು. ಕ್ರಮೇಣ ತಂತ್ರಜ್ಞಾನವನ್ನೇ ಹೆಚ್ಚುಹೆಚ್ಚು ಅವಲಂಬಿಸಿತೊಡಗಿದ ಪಶ್ಚಿಮದ ರಾಷ್ಟ್ರಗಳು ಮಾನವಸಮಾಜ ಎದುರಿಸುವ ಸಮಸ್ಯೆಗಳಿಗೆಲ್ಲ ಕೈಗಾರಿಕೀಕರಣದ ಮೂಲಕ ಸಾಧಿಸಬಹುದಾದ ಆರ್ಥಿಕ ಪ್ರಗತಿಯೇ ಉತ್ತರವೆಂದು ಭಾವಿಸಿದವು; ಈ ಆಲೋಚನೆಯನ್ನೇ ಸಾಮ್ರಾಜ್ಯ ಶಕ್ತಿಯ ಮೂಲಕ ಬಡರಾ?ಗಳ ಮೇಲೆ ಹೇರತೊಡಗಿದವು. ಕಾಲಕ್ರಮೇಣ ಇದಕ್ಕೆ ಜಿಡಿಪಿ ((Gross Domestic Product – ಸಗಟು ರಾಷ್ಟ್ರೋತ್ಪನ್ನ) ಎನ್ನುವ ಆರ್ಥಿಕ ಪ್ರಗತಿಯ ಮಾನದಂಡವು ಸೇರಿಕೊಂಡಿತು.
ಸಮಯ ಬದಲಾಗುತ್ತಿದ್ದಂತೆ ಕೈಗಾರಿಕೀಕರಣ ಮತ್ತು ಆರ್ಥಿಕ ಪ್ರಗತಿಯು ವಿಶ್ವವನ್ನು ಅನರ್ಥಕ್ಕೆ ತಳ್ಳುತ್ತಿರುವುದು, ಆರ್ಥಿಕಪ್ರಗತಿಯ ಮಾನದಂಡವಾದ ಜಿಡಿಪಿಯು ಒಂದು ರಾಷ್ಟ್ರದ ನಾಗರಿಕರು ಎಷ್ಟರಮಟ್ಟಿಗೆ ಸಂತೋ?ವಾಗಿದ್ದಾರೆ ಎನ್ನುವುದನ್ನು ಅಳೆಯುವಲ್ಲಿ ವಿಫಲವಾಗುತ್ತಿರುವುದು ಗಮನಕ್ಕೆ ಬರತೊಡಗಿದೆ. ಪರಿಣಾಮವಾಗಿ ಈಗ ಅನುಸರಿಸುತ್ತಿರುವ ’ಬೆಳವಣಿಗೆ ಸಿದ್ಧಾಂತ’ ಹಾಗೂ ’ಜಿಡಿಪಿ ಮಾದರಿ’ಯೇ ಪ್ರಶ್ನೆಗೊಳಗಾಗುತ್ತಿದ್ದು, ನಾಗರಿಕರ ಸಂತೋಷವನ್ನು ಗುರಿಯಾಗಿಟ್ಟುಕೊಂಡು ಅದನ್ನು ರಾ?ದ ನೀತಿಯಲ್ಲಿ ಅಳವಡಿಸಿಕೊಳ್ಳುವ ಕುರಿತಾದ ಚಿಂತನೆ ಬಲಿಯುತ್ತಿದೆ. ವಿಶ್ವಾದ್ಯಂತ ಆರ್ಥಿಕತಜ್ಞರು ಹಾಗೂ ರಾಜನೀತಿಜ್ಞರು ಕೂಡ ಇದನ್ನೇ ಸಮರ್ಥಿಸುತ್ತಿದ್ದಾರೆ.
ಭಾರತೀಯರು ಮೊದಲಿನಿಂದಲೂ ಒಂದು ಸುಖೀರಾಷ್ಟ್ರದ ಕಲ್ಪನೆಯನ್ನು ’ರಾಮರಾಜ್ಯ’ ಮಾದರಿಯಲ್ಲೇ ಕಂಡುಕೊಂಡಿದ್ದಾರೆ. ಈಗಲೂ ಅವರ ಆಸಕ್ತಿ ಇರುವುದು ರಾಮರಾಜ್ಯದಲ್ಲೇ. ಅವರ ಪಾಲಿಗೆ ಅವರ ಎಲ್ಲ ತೊಂದರೆಗಳಿಗೂ ರಾಮರಾಜ್ಯವೇ ’ರಾಮಬಾಣ. ಈಗ ನಾವು ಅನುಸರಿಸುತ್ತಿರುವ ರಾ?ಮಾದರಿಗೂ, ರಾಮರಾಜ್ಯ ಮಾದರಿಗೂ ಮೂಲಕಲ್ಪನೆಯಲ್ಲೇ ವ್ಯತ್ಯಾಸವಿದೆ. ಸಂವಿಧಾನದ ರಚನೆಯೊಡನೆ ರೂಪುಗೊಂಡ ಆಧುನಿಕ ರಾಷ್ಟ್ರದ ಕಲ್ಪನೆಯು ರಾಜಕೀಯ ನೇತಾರರಿಗಾಗಲಿ, ಅಧಿಕಾರಿವರ್ಗಕ್ಕಾಗಲಿ ಸದಾಚಾರದ ಯಾವುದೇ ಕಟ್ಟುಪಾಡನ್ನೂ ವಿಧಿಸುವುದಿಲ್ಲ. ತದ್ವಿರುದ್ಧವಾಗಿ ’ರಾಮರಾಜ್ಯ’ ಮಾದರಿಯಲ್ಲಿ ರಾ?ವನ್ನು ಮುನ್ನಡೆಸುವ ನೇತಾರರು ಸದಾಚಾರವನ್ನು ಪಾಲಿಸಬೇಕು, ಸದ್ಗುಣಿಗಳಾಗಿರಬೇಕು ಎನ್ನುವ ನಿಬಂಧನೆಯಿದೆ. ಬಳಿಕವೇ ಅಲ್ಲಿ ಮುಂದಿನ ಗುರಿಯ ಕುರಿತಾಗಿ ಯೋಚಿಸಲಾಗುತ್ತದೆ; ತನ್ಮೂಲಕ ಪ್ರಜೆಗಳ ಸೌಖ್ಯವನ್ನು ಕಂಡುಕೊಳ್ಳಲಾಗುತ್ತದೆ. ರಾಮರಾಜ್ಯ ಮಾದರಿಯನ್ನು ಅನುಸರಿಸದ ರಾಷ್ಟ್ರವೊಂದು ಸಂತೋ?ದ ಗುರಿ ಸಾಧನೆಯಲ್ಲಿ ವಿಫಲವಾಗುತ್ತದೆ ಎನ್ನುವುದಕ್ಕೆ ಇಂದಿನ ಜಾಗತಿಕ ವಿದ್ಯಮಾನಗಳೇ ಸಾಕ್ಷಿ.
ಜಿಡಿಪಿಯು ಸಂತೋಷದ ಅಳತೆಗೋಲಲ್ಲ
ಭಾರತವೂ ಸೇರಿದಂತೆ ವಿಶ್ವದ ಎಲ್ಲ ರಾ?ಗಳಲ್ಲೂ ಜಿಡಿಪಿಯು ಬೆಳವಣಿಗೆಯ ಸೂಚ್ಯಂಕದ ಮಾನದಂಡವಾಗಿ ಪರಿಗಣಿಸಲ್ಪಡುತ್ತಿದೆ. ಒಂದು ರಾ?ದ ನಾಗರಿಕರ ಆದಾಯ ಹಾಗೂ ವೆಚ್ಚದ ಮೇಲೆ ಪರಿಣಾಮ ಬೀರುವಂತಹ ಅಂಶಗಳಾದ ಶಿಕ್ಷಣ, ಆರೋಗ್ಯ, ಜನರ ಜೀವನಮಟ್ಟ ಇವೆಲ್ಲವುಗಳೂ ಆರ್ಥಿಕ ಪ್ರಗತಿಯೂ ಪರಸ್ಪರ ಸಂಬಂಧ ಹೊಂದಿವೆ. ಪ್ರಸ್ತುತ ದಿನಗಳಲ್ಲಿ ಯಾವ ರಾಷ್ಟ್ರವು ಯಾವ ರಾಷ್ಟ್ರವು ಗರಿಷ್ಠ ಜಿಡಿಪಿಯನ್ನು ಹೊಂದಿದ್ದು, ತನ್ನ ಎಲ್ಲ ನಾಗರಿಕರಿಗೆ ನೆರವನ್ನು ಒದಗಿಸುವ ಸ್ಥಿತಿಯಲ್ಲಿ ಇದೆಯೋ, ಆ ರಾಷ್ಟ್ರವನ್ನು ಶ್ರೀಮಂತರಾಷ್ಟ್ರವೆಂದು ಪರಿಗಣಿಸುವುದು ರೂಢಿ. ಈ ಬಗೆಯಲ್ಲಿ ಶ್ರೀಮಂತರಾಷ್ಟ್ರಗಳೆಂದು ಪರಿಗಣಿಸಲ್ಪಟ್ಟ ರಾಷ್ಟ್ರಗಳಲ್ಲೂ ಅಸಮಾನತೆಯನ್ನು ಹೋಗಲಾಡಿಸಲಾಗಿಲ್ಲವೆಂಬುದು ವಾಸ್ತವ ಸಂಗತಿ. ಜಿಡಿಪಿಯ ಮೂಲಸಮಸ್ಯೆ ಅದರ ಲೆಕ್ಕಾಚಾರದ ವಿಧಾನದಲ್ಲಿದ್ದು, ಅದು ಕೆಲವೇ ಕೆಲವಷ್ಟು ಮೂಲದ್ರವ್ಯಗಳನ್ನು ಪರಿಗಣಿಸುತ್ತದೆಯೇ ವಿನಾ ವ್ಯಕ್ತಿಗಳ ಮಟ್ಟದಲ್ಲಿ ಆತ ಹೊಂದಿರುವ ಸಮಸ್ತವನ್ನೂ ತನ್ನ ಲೆಕ್ಕಾಚಾರದೊಳಕ್ಕೆ ಸೇರಿಸುವುದಿಲ್ಲ.
ಜಿಡಿಪಿಯ ಪಿತಾಮಹನೆನಿಸಿದ, ಅದನ್ನು ಕಂಡುಹಿಡಿದ ಕುಝ್ನೆಟ್ಸ್ (Kuznets) ಆಲೋಚನೆಯ ಪ್ರಕಾರ ಜಿಡಿಪಿಯ ಲೆಕ್ಕಾಚಾರ ಈಗ ನಡೆಯುತ್ತಿಲ್ಲವೆನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ. ನಾಗರಿಕರ ಸೌಖ್ಯ, ಕ್ಷೇಮದ ಲೆಕ್ಕಾಚಾರ ಕುಝ್ನೆಟ್ಸ್ನ ಆಲೋಚನೆಯಲ್ಲಿತ್ತು. ಆತ ನಾಗರಿಕರ ಕ್ಷೇಮ, ಸೌಖ್ಯಕ್ಕೆ ಕೊಡುಗೆ ನೀಡುವ ಚಟುವಟಿಕೆಗಳನ್ನು ಮಾತ್ರ ಜಿಡಿಪಿಗೆ ಸೇರಿಸುವುದರ ಪರವಾಗಿದ್ದು, ಕಾನೂನುಬಾಹಿರ ಚಟುವಟಿಕೆಗಳು, ಹಾನಿಕಾರಕ ಕೈಗಾರಿಕೆಗಳು ಹಾಗೂ ಬಹಳಷ್ಟು ಸರ್ಕಾರೀ ವೆಚ್ಚಗಳನ್ನು ಜಿಡಿಪಿಯಿಂದ ಹೊರಗಿಟ್ಟಿದ್ದ. ಆದರೆ ವರ್ತಮಾನದಲ್ಲಿ ನಾವು ಅನುಸರಿಸುತ್ತಿರುವ ಜಿಡಿಪಿ ಲೆಕ್ಕಾಚಾರವು ಹಣದ ಮೂಲಕ ವ್ಯವಹರಿಸುವ ಎಲ್ಲ ವ್ಯವಹಾರಗಳನ್ನೂ ಅದರೊಳಗೆ ಸೇರಿಸುತ್ತದೆ; ಹೀಗಾಗಿಯೇ ಜಿಡಿಪಿಯು ರಾಷ್ಟ್ರದ ಪ್ರಜೆಗಳ ಕ್ಷೇಮದ ಸರಿಯಾದ ಅಳತೆಗೋಲಾಗಿದೆಯೆ ಎನ್ನುವ ಕುರಿತು ಸಂಶಯ ಮೂಡುತ್ತಿರುವುದು. ಇತ್ತೀಚಿನ ಬೆಳವಣಿಗೆಯಲ್ಲಿ ಬಹಳಷ್ಟು ಆರ್ಥಿಕತಜ್ಞರು ಹಾಗೂ ರಾಜನೀತಿಜ್ಞರು ಜಿಡಿಪಿ ಬೆಳವಣಿಗೆಯ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸುವುದಕ್ಕಿಂತಲೂ, ಒಂದು ರಾಷ್ಟ್ರದ ನಾಗರಿಕರ ಸೌಖ್ಯ ಕ್ಷೇಮದ ಗುರಿಯನ್ನು ರಾಷ್ಟ್ರದ ನೀತಿಯನ್ನಾಗಿಸಿಕೊಳ್ಳುವ ಕುರಿತು ಆಸಕ್ತಿ ತೋರುತ್ತಿದ್ದಾರೆ.
ಭೌತಿಕ ಪ್ರಗತಿ ಮತ್ತು ಸಂತೋಷ
ಸುಖ-ಸಂತೋಷದ ಕಲ್ಪನೆಯು ಅರ್ಥಶಾಸ್ತ್ರಕ್ಕೆ ಹೊಸದೇನಲ್ಲ. ಮಹಾನ್ ಬ್ರಿಟಿಷ್ ತತ್ತ್ವಶಾಸ್ತ್ರಜ್ಞ ಬೆಂಥಮ್ (Bentham) ಜನರನ್ನು ಸುಖಿಗಳನ್ನಾಗಿ, ಸಂತೋಷವಾಗಿ ಇರಿಸಲು ಏನು ಮಾಡಬೇಕು ಎಂಬುದರ ಕುರಿತಾಗಿ ಬರೆಯುವುದರಲ್ಲೇ ತನ್ನ ಬಹುತೇಕ ವೃತ್ತಿದಿನಗಳನ್ನು ಕಳೆದ. ಆತನ ತತ್ತ್ವಶಾಸ್ತ್ರದ ಮೂಲಭೂತ ಸಿದ್ಧಾಂತವು ’ಸರಿತಪ್ಪುಗಳ ನಡುವಿನ ಅಂತರವನ್ನು ಗುರುತಿಸುವುದರಲ್ಲೇ ಬಹುಜನರ ಹೆಚ್ಚಿನ ಸಂತೋಷ ಅಡಗಿದೆ’ ಎನ್ನುವುದಾಗಿತ್ತು. ಬೆಂಥಮ್ ಸಿದ್ಧಾಂತವಾದ ’ಯುಟಿಲಿಟೇರಿಯಾನಿಸಂ’ (Utilitarianism) ಪ್ರಕಾರ ಯಾವ ದೇಶ ಒಟ್ಟಾರೆ ಸಂತೋಷವನ್ನು ಹೆಚ್ಚಿಸುವ ಚಟುವಟಿಕೆಗಳನ್ನೇ ಅಧಿಕಪ್ರಮಾಣದಲ್ಲಿ ಕೈಗೊಳ್ಳುತ್ತದೆಯೋ, ಆ ದೇಶ ಸರಿಯಾದ ಮಾರ್ಗದಲ್ಲಿದೆ ಎಂದರ್ಥ. ಒಂದು ಸಮಾಜದ ಮುಂದೆ ಗರಿಷ್ಠ ಸಂತೋಷದ ಗುರಿ ಇರಬೇಕು ಎನ್ನುವುದು ಆತನ ವಾದವಾಗಿತ್ತು.
’ಲಂಡನ್ ಸ್ಕೂಲ್ ಆಫ್ ಇಕಾನಾಮಿಕ್ಸ್’ನ ಪೀಟರ್ ರಿಚರ್ಡ್ ಗ್ರೆನ್ವಿಲ್ ಲಾಯರ್ಡ್ (Peter Richard Grenville Layard) ಎಂಬಾತ ಬೆಂಥಮ್ನ ಶಿಷ್ಯನಾಗಿದ್ದ. ಗರಿಷ್ಠ ಸಂತೋಷವು ಕಾಳಜಿ ಹಾಗೂ ಪ್ರಗತಿಪರ ಸಮಾಜಕ್ಕೆ ಉತ್ತೇಜನ ನೀಡುತ್ತದೆ. ಆದರೆ ಈಗಾಗಲೇ ಸುಖಸಂತೋಷದಲ್ಲಿರುವವರಿಗೆ ಇನ್ನಷ್ಟು ಒದಗಿಸುವುದಕ್ಕಿಂತ, ಯಾರು ಅಸಂತೋಷವಾಗಿದ್ದಾರೋ ಅವರನ್ನು ಆ ಸ್ಥಿತಿಯಿಂದ ಹೊರತರುವುದಕ್ಕೆ ಆದ್ಯತೆ ಒದಗಬೇಕು. ಸರ್ಕಾರವು ತನ್ನ ಪ್ರಜೆಗಳ ಗರಿಷ್ಠ ಸಂತೋಷಕ್ಕೆ ಕ್ರಮಕೈಗೊಳ್ಳಬೇಕೇ ಹೊರತು ಬೆಳವಣಿಗೆಯೊಂದೇ ಉದ್ದೇಶವಾಗಬಾರದು. ಸಂತೋಷದ ಕಲ್ಪನೆಯು ವಾಸ್ತವದ ನೋವು ನಲಿವನ್ನು ಆಧರಿಸಿದೆಯೇ ವಿನಾ ಕಾಲ್ಪನಿಕ ಸಂಗತಿಯಾದ ಸರಿ-ತಪ್ಪು, ಒಳ್ಳೆಯದು ಕೆಟ್ಟದ್ದರ ಮೇಲಲ್ಲ – ಎನ್ನುವುದು ಆತನ ವಾದವಾಗಿತ್ತು.
ಆದ್ದರಿಂದ ಸಂತೋಷ-ಸೌಖ್ಯದ ಕಲ್ಪನೆಯು ಭೌತಿಕ ಪ್ರಗತಿಯನ್ನು ಆಧರಿಸಿದೆ ಎನ್ನುವುದು ಸ್ಪಷ್ಟ. ವಿಶ್ವಾದ್ಯಂತ ಎಲ್ಲ ರಾಷ್ಟ್ರಗಳೂ ತಮ್ಮ ಪ್ರಜೆಗಳ ಜೀವನಮಟ್ಟದಲ್ಲಿ ಸುಧಾರಣೆ ತರುವುದರತ್ತ ಗಮನ ಹರಿಸಿ ಆ ದಿಕ್ಕಿನಲ್ಲೇ ನೀತಿಯನ್ನು ರೂಪಿಸುತ್ತಿವೆ.
ಸೌಖ್ಯದ ಮಾನದಂಡ
೨೦೦೮ರಲ್ಲಿ ವಿಶ್ವಮಟ್ಟದಲ್ಲಿ ಒಂದು ಗಮನಾರ್ಹ ಬೆಳವಣಿಗೆಯಾಯಿತು. ಕೇವಲ ೮ ಲಕ್ಷ ಜನಸಂಖ್ಯೆ ಇರುವ ಚಿಕ್ಕ ಪರ್ವತರಾಷ್ಟವಾದ ಭೂತಾನ್ ’ಒಟ್ಟಾರೆ ರಾಷ್ಟ್ರೀಯ ಸಂತೋಷ’ (Gross National Happiness) ನೀತಿಯನ್ನು ಅಳವಡಿಸಿಕೊಂಡ ವಿಶ್ವಮಟ್ಟದ ಮೊದಲ ರಾಷ್ಟ್ರವಾಯಿತು. ಹಾಗೆ ನೋಡಿದರೆ ಭಾರತ ಪ್ರಾಚೀನಕಾಲದಿಂದಲೇ ತನ್ನ ನಾಗರಿಕರ ಸಂತೋಷ ಸೌಖ್ಯ ಕ್ಷೇಮವನ್ನೇ ಆಡಳಿತದ ಚಿಂತನೆಯನ್ನಾಗಿರಿಸಿಕೊಂಡ ರಾಷ್ಟ್ರ. ಭೂತಾನಿನ ಮುಂದೆ ಸುಖೀಸಮಾಜವನ್ನು ಸ್ಥಾಪಿಸುವ ಗುರಿ ಇತ್ತು. ಭೂತಾನಿನ ಸಂತೋಷದ ಕಲ್ಪನೆಯು ಬೌದ್ಧಚಿಂತನೆ ಆಧಾರಿತವಾಗಿದ್ದು, ಮನೋವೈಜ್ಞಾನಿಕ ಯೋಗಕ್ಷೇಮ, ಆರೋಗ್ಯ, ಸಮಯದ ಸದುಪಯೋಗ, ಶಿಕ್ಷಣ, ಸಾಂಸ್ಕೃತಿಕ ವೈವಿಧ್ಯ, ಉತ್ತಮ ಆಡಳಿತ, ಸಮುದಾಯದ ಉತ್ಸಾಹ, ಪ್ರಾಕೃತಿಕ ವೈವಿಧ್ಯ, ಜೀವನಮಟ್ಟ – ಎನ್ನುವ ಒಂಬತ್ತು ವಿಭಾಗಗಳಲ್ಲಿ ಅದನ್ನು ವಿಂಗಡಿಸಲಾಗಿದೆ.
ಜುಲೈ ೨೦೧೧ರಲ್ಲಿ ವಿಶ್ವಸಂಸ್ಥೆಯು ಸೌಖ್ಯಕ್ಷೇಮದ ಕುರಿತಾಗಿ ಸಂಕಲ್ಪವೊಂದನ್ನು ಅಂಗೀಕರಿಸಿ ತನ್ನ ಸದಸ್ಯರಾಷ್ಟ್ರಗಳಿಗೆ ತಮ್ಮತಮ್ಮ ಪ್ರಜೆಗಳ ಸೌಖ್ಯ-ಸಂತೋಷದ ಮಾಪನ ಕೈಗೊಳ್ಳುವಂತೆ ಆದೇಶಿಸಿತು. ಈ ಕುರಿತಾಗಿ ಸಾರ್ವಜನಿಕ ನೀತಿಯನ್ನು ನಿರ್ದೇಶಿಸುವ ಅಂಕಿ-ಸಂಖ್ಯೆ ಮಾಹಿತಿಯನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿತು. ಆ ಆದೇಶದ ಪ್ರಕಾರ ’ಗ್ಯಾಲಪ್ ವರ್ಲ್ಡ್ ಪೋಲ್’ನ್ನು (Gallap World Poll) ಪ್ರಾಥಮಿಕವಾಗಿ ಬಳಸಿಕೊಂಡು ತಯಾರಿಸಿದ ಮೊದಲ ಜಾಗತಿಕ ಸೌಖ್ಯದ ವರದಿಯು ಏಪ್ರಿಲ್ ೨೦೧೨ರಲ್ಲಿ ಪ್ರಕಟಗೊಂಡಿತು.
ಈ ಅಭಿಮತ ಸಂಗ್ರಹವು ತನ್ನ ಪ್ರಶ್ನಾವಳಿಗಳಲ್ಲಿ ಹದಿನಾಲ್ಕು ವಿಭಾಗಗಳನ್ನು ಪ್ರಮುಖವಾಗಿ ಆಯ್ಕೆ ಮಾಡಿಕೊಂಡಿತ್ತು. ಅವುಗಳು:
೧. ಉದ್ದಿಮೆ ಹಾಗೂ ಆರ್ಥಿಕತೆ, ೨. ನಾಗರಿಕರನ್ನು ತೊಡಗಿಸಿಕೊಳ್ಳುವಿಕೆ, ೩. ಸಂವಹನ ಹಾಗೂ ತಂತ್ರಜ್ಞಾನ, ೪. ವೈವಿಧ್ಯ (ಸಾಮಾಜಿಕ ಸಮಸ್ಯೆ), ೫. ಶಿಕ್ಷಣ ಮತ್ತು ಕುಟುಂಬ, ೬. ಭಾವನಾತ್ಮಕತೆ, ೭. ಪರಿಸರ ಮತ್ತು ಇಂಧನ, ೮. ಆಹಾರ ಮತ್ತು ವಸತಿ, ೯. ಸರ್ಕಾರ ಮತ್ತು ರಾಜಕೀಯ, ೧೦. ಕಾನೂನು ಮತ್ತು ಸುವ್ಯವಸ್ಥೆ, ೧೧. ಆರೋಗ್ಯ, ೧೨. ಧರ್ಮ ಮತ್ತು ನೈತಿಕತೆ, ೧೩. ಸಾರಿಗೆ, ೧೪. ಕೆಲಸ. ಜನರಿಂದ ಸಂಗ್ರಹಿಸಿದ ಅಭಿಪ್ರಾಯಗಳನ್ನು ಆಧರಿಸಿದ ಈ ವರದಿಯು ಸೌಖ್ಯಕ್ಷೇಮದ ಗುರಿಯನ್ನು ನಿರ್ಧರಿಸುವಲ್ಲಿ ಮಹತ್ತ್ವದ ಪಾತ್ರ ವಹಿಸುತ್ತಿದೆ.
ಸಮಾಜವನ್ನು ವಿಫಲತೆಗೆ ನೂಕಿದ ಆಧುನಿಕರಾಷ್ಟ್ರ
ಒಂದು ರಾಷ್ಟ್ರದ ಮೂಲಭೂತ ನೀತಿ ಹಾಗೂ ಅನುಸರಿಸುತ್ತಿರುವ ಪ್ರಗತಿಯ ಮಾದರಿಯನ್ನು ಬದಲಾಯಿಸುವುದು ಸಂತೋಷದ ಗುರಿಯ ಉದ್ದೇಶವಲ್ಲ; ಬದಲಾಗಿ ಅದರ ಉದ್ದೇಶ ಈ ನೀತಿಗಳ ಪರಿಣಾಮಗಳ ಪರಿಶೀಲನೆ ಮತ್ತು ಒಂದು ರಾಷ್ಟ್ರ ಅನುಸರಿಸುವ ನೀತಿಗಳು ಅಲ್ಲಿನ ನಾಗರಿಕರ ಸಂತೋಷ-ಸೌಖ್ಯಕ್ಕೆ ನೆರವಾಗುತ್ತಿದೆಯೇ ಎನ್ನುವುದರ ಅವಲೋಕನ ಮಾತ್ರ. ಮಾನವಸಮಾಜದ ವಿಫಲತೆಗೆ ಜಿಡಿಪಿಯ ಮೂಲಮಾದರಿ ಅಥವಾ ಆರ್ಥಿಕ ಬೆಳವಣಿಗೆಯ ಮಾದರಿಯು ಕಾರಣವಲ್ಲ; ಬದಲಾಗಿ ಆಧುನಿಕ ರಾಷ್ಟ್ರ, ಅದರ ಸಂವಿಧಾನ ಸಂಯೋಜನೆ, ಆಡಳಿತ ವ್ಯವಸ್ಥೆ ಇವು ಮಾನವಸಮಾಜವನ್ನು ವಿಫಲತೆಗೆ ತಳ್ಳುತ್ತಿವೆ. ರಾಜಪ್ರಭುತ್ವವಿದ್ದ ಕಾಲದಲ್ಲೂ ಸಹ ಶ್ರೇಷ್ಠ ದೊರೆಗಳು ತಮ್ಮ ಉತ್ತಮ ನೀತಿಗಳಿಂದ ಜನಸಾಮಾನ್ಯರ ಜೀವನದಲ್ಲಿ ಬದಲಾವಣೆ ತಂದು ಜೀವನದ ಶಾಂತಿ, ನೆಮ್ಮದಿ, ಸಂತೋಷದ ಸ್ಥಿತಿಗೆ ಕಾರಣರಾದದ್ದಿದೆ. ರಾಮ ಅಂತಹ ಒಬ್ಬ ದೊರೆ. ಆಧುನಿಕ ರಾಷ್ಟ್ರಮಾದರಿಯಾದ ಪ್ರಜಾಪ್ರಭುತ್ವವಿರಲಿ ಅಥವಾ ಇನ್ನಾವುದೇ ಪ್ರಭುತ್ವವಿರಲಿ, ಅದು ಆಧುನಿಕ ತಂತ್ರಜ್ಞಾನಗಳೊಡಗೂಡಿ ಎಲ್ಲ ಬಗೆಯ ಸಾಧನಗಳೂ ಭ್ರಷ್ಟಾಚಾರದಿಂದ ಕಳಂಕಿತವಾಗಿ ನೀತಿಗಳೆಲ್ಲ ಗೊಂದಲಕ್ಕೆ ಒಳಗಾಗಿವೆ. ಪರಿಣಾಮವಾಗಿ ಅಪರಾಧಗಳೂ, ಶೋಷಣೆಗಳೂ ಹೆಚ್ಚಿವೆಯಲ್ಲದೆ, ಅಸಮಾನತೆಯು ಸಮಾಜದ ಎಲ್ಲ ಸ್ತರಗಳಲ್ಲೂ ತಾಂಡವವಾಡುತ್ತಿದೆ. ನೈಸರ್ಗಿಕ ಸಂಪತ್ತಿನ ನಾಶ, ಪರಿಸರದ ಹಾನಿಗೆ ಇನ್ನಷ್ಟು ಸೇರ್ಪಡೆಯೆಂಬಂತೆ ಎಲ್ಲ ರಾಷ್ಟ್ರಗಳೂ ಯುದ್ಧದ ಸಿದ್ಧತೆಯಲ್ಲೇ ತೊಡಗಿರುತ್ತವೆ. ಸಂಪನ್ಮೂಲಗಳ ನಾಶದೊಂದಿಗೆ ಸಮಾಜದೊಳಗಿನ ಪರಸ್ಪರ ಕಲಹಗಳೂ ಸೇರಿ ಮಾನವ ಸಮಾಜವನ್ನು ವಿಪತ್ತಿನಂಚಿಗೆ ತಂದು ನಿಲ್ಲಿಸಿದೆ.
ಯಾವೊಂದು ರಾಷ್ಟ್ರದಲ್ಲಿ ರಾಷ್ಟ್ರೀಯ ಬದ್ಧತೆ ಇಲ್ಲದ ನಾಯಕನೊಬ್ಬ ಲಾಬಿ ಮಾಡುವ ಜನರಿಂದಲೇ ಸುತ್ತುವರಿಯಲ್ಪಟ್ಟು, ಭ್ರಷ್ಟಾಚಾರದಲ್ಲಿ ತೊಡಗಿ ವಿಫಲನಾಗುತ್ತಾನೋ ಅಂತಹ ರಾಷ್ಟ್ರವು ಸೌಖ್ಯವನ್ನು ಸಾಧಿಸುವುದು ಅಸಾಧ್ಯ.
’ರಾಮರಾಜ್ಯ’ದ ವ್ಯಾಖ್ಯಾನ
ರಾಷ್ಟ್ರವೊಂದಕ್ಕೆ ಸಂತೋಷದ ಗುರಿಯನ್ನು ನಿಗದಿಪಡಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ದೊರಕುವುದೆಂಬುದು ಬರಿಯ ಭ್ರಮೆ; ಆಧುನಿಕ ರಾಷ್ಟ್ರದ ಗುಣಲಕ್ಷಣಗಳಲ್ಲಿ, ಅದರ ಸಾಧನಗಳಲ್ಲಿ ಪರಿವರ್ತನೆಯಾಗಬೇಕು. ವಾಸ್ತವದಲ್ಲಿ ಒಂದೇ ರಚನೆ, ಮಾದರಿ ಎಲ್ಲರಿಗೂ ಹೊಂದಿಕೆಯಾಗುವುದಿಲ್ಲ. ಆಯಾ ದೇಶದ ನಾಗರಿಕರಿಗೆ ಹೊಂದಿಕೊಳ್ಳುವ ಮಾದರಿಯು ಸ್ವೀಕೃತವಾಗಬೇಕು. ರಾಷ್ಟ್ರದ ಮಾದರಿಯು ಅಲ್ಲಿನ ನಾಗರಿಕರು, ಭೌಗೋಳಿಕತೆ, ಹವಾಮಾನ, ಸಂಸ್ಕೃತಿಗೆ ಒಪ್ಪುವಂತಿರಬೇಕು.
ಭಾರತೀಯರ ’ರಾಮರಾಜ್ಯ’ ಕಲ್ಪನೆಯ ಕೇಂದ್ರವ್ಯಕ್ತಿಯಾದ ರಾಮ ಒಬ್ಬ ಕಳಂಕರಹಿತ, ಶುದ್ಧ, ಸರ್ವಗುಣಸಂಪನ್ನನಾದ, ತನ್ನ ಪ್ರಜೆಗಳ ಯೋಗಕ್ಷೇಮಕ್ಕೆ ಬದ್ಧನಾಗಿದ್ದ ದೊರೆ. ಯಾವುದೋ ಪ್ರತ್ಯೇಕ ಮತಶ್ರದ್ಧೆ ಇರದಿದ್ದ ರಾಮ ತನ್ನ ಸಮಸ್ತ ನಾಗರಿಕರನ್ನು ಸಮಾನವಾಗಿ ಕಾಣುತ್ತಿದ್ದ. ಆತನಿಗೆ ’ರಾಜಧರ್ಮ’ವೇ ಧರ್ಮವಾಗಿತ್ತು. ರಾಮರಾಜ್ಯದ ಮೂಲಸಿದ್ಧಾಂತದ ಪ್ರಕಾರ ಸಮಾಜ ಮತ್ತು ಅದರ ಭಾಗಗಳಾದ ವ್ಯಕ್ತಿಗಳು ಮತ್ತು ಕುಟುಂಬ, ಪಶುಪ್ರಾಣಿಗಳು ಹಾಗೂ ಇನ್ನುಳಿದ ಜೀವಿಗಳು, ಪ್ರಕೃತಿಯನ್ನೊಳಗೊಂಡು ಎಲ್ಲವೂ ಸಹಬಾಳ್ವೆಯ ಧರ್ಮವನ್ನು ಪಾಲಿಸಬೇಕು. ಸ್ಥಳೀಯವಾಗಿ ಸ್ವಯಂಪೂರ್ಣತೆ, ಸ್ವಾವಲಂಬನೆಯನ್ನು ಸಾಧಿಸಬೇಕು. ಇದು ’ರಾಮರಾಜ್ಯ’ದ ಮಾದರಿಯ ರಾಷ್ಟ್ರದ ಕಲ್ಪನೆ. ಇಂತಹ ರಾಷ್ಟ್ರವು ಸುಖವಾಗಿದ್ದು ಸಮಾಜವೂ ಸಹ ಸಂತೋಷವಾಗಿರುತ್ತದೆ.
ಸರ್ವರ ಯೋಗಕ್ಷೇಮದ ಭರವಸೆ
ಸರ್ವರ ಯೋಗಕ್ಷೇಮದ ಭರವಸೆಯನ್ನು ನಿಶ್ಚಿತವಾಗಿಸುವ ರಾಮರಾಜ್ಯ ಮಾದರಿಯ ಲಕ್ಷಣಗಳು ಸಹ ವಿಭಿನ್ನವೇ. ಮೊದಲನೆಯದಾಗಿ, ರಾಮರಾಜ್ಯ ಮಾದರಿಯು ನೇತಾರರಿಗೂ, ನಾಗರಿಕರಿಗೂ ನ್ಯಾಯಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುತ್ತದೆ. ಈಗಿನ ಪ್ರಜಾಪ್ರತಿನಿಧಿಗಳ ಆಯ್ಕೆಯ ಚುನಾವಣಾ ಪದ್ಧತಿಯಲ್ಲಿ ಹಣ ಹಾಗೂ ತೋಳ್ಬಲವನ್ನು ಬಳಸಿ, ಕುಟಿಲತೆಯಿಂದ ಅಧಿಕಾರವನ್ನು ಸುಲಭವಾಗಿ ಗಿಟ್ಟಿಸಿಕೊಳ್ಳಬಹುದಾಗಿದೆ. ಇದನ್ನು ರಾಜಾಡಳಿತದ ಅನುಮೋದಿತ ಮಾರ್ಗವೆನ್ನಬಹುದು. ಇದೆಲ್ಲವನ್ನೂ ಅವಲೋಕಿಸಿದರೆ ಚುನಾವಣೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ಅಭ್ಯರ್ಥಿಯ ಸದಾಚಾರದ ಕುರಿತು ಮತದಾರರನ್ನು ಜಾಗೃತಗೊಳಿಸುವ, ಕ್ಷೇತ್ರವನ್ನು ಪುನರ್ವಿರಚಿಸುವಂತಹ ಸುಧಾರಣೆಯ ಕಾಲ ಸನ್ನಿಹಿತವಾಗಿರುವುದು ಸ್ಪಷ್ಟ.
ಎರಡನೆಯದಾಗಿ, ರಾಮರಾಜ್ಯ ಮಾದರಿಯಲ್ಲಿ ನಾಗರಿಕರಿಗೂ ಕೂಡ ಸದಾಚಾರ, ಸದ್ಗುಣಗಳನ್ನು ಪಾಲಿಸಿ ಉತ್ತಮ ಪ್ರಜೆಗಳಾಗಲು ಅಗತ್ಯ ಸಂಸ್ಕಾರವನ್ನು ಒದಗಿಸುವ ಕಲ್ಪನೆಯಿದೆ.
ಮೂರನೆಯದಾಗಿ, ರಾಮರಾಜ್ಯ ಮಾದರಿಯು ಸ್ವದೇಶೀ ಕಲ್ಪನೆಯಡಿ ಸ್ಥಳೀಯ ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ. ಚೈತನ್ಯದಾಯಿ ಸ್ವದೇಶೀ ಮಾದರಿಯು ಜನರಲ್ಲಿ ಆತ್ಮವಿಶ್ವಾಸವನ್ನೂ, ಸ್ವ-ಸಾಮರ್ಥ್ಯದಲ್ಲಿ ನಂಬಿಕೆಯನ್ನೂ ಮೂಡಿಸುವುದಲ್ಲದೆ, ಸ್ಥಳೀಯ ರಾಮನಂತಹ ದೊರೆಯ ಆಡಳಿತದಲ್ಲಿ ಭಾಗೀದಾರರಾದವರೂ, ಅಂತಹ ರಾಷ್ಟ್ರವನ್ನು ಪ್ರತಿನಿಧಿಸುವ ನಾಗರಿಕರೂ ಸಹಬಾಳ್ವೆಯ, ಸ್ವದೇಶೀಯ ಹಾಗೂ ಸ್ವಾವಲಂಬಿ ನೀತಿಯನ್ನೇ ಅನುಸರಿಸಬೇಕು. ಇಂತಹ ನಿಯಮ ನಿಬಂಧನೆಗಳು ಆಡಳಿತದ ನಿಯಮಕ್ಕೆ ಸೇರಿಕೊಂಡಾಗ ಸಮಾಜವು ತನ್ನಿಂತಾನೇ ಸೌಖ್ಯದ ಗುರಿಯನ್ನು ತಲಪುವುದು ನಿಶ್ಚಿತ. ಸಂಪನ್ಮೂಲವನ್ನು ಬಳಸಿ ಅದನ್ನು ತಮ್ಮ ಸುಖಜೀವನಕ್ಕೆ ತಕ್ಕಂತೆ ಮಾರ್ಪಾಟು ಮಾಡಿಕೊಳ್ಳುವಂತೆ ನಾಗರಿಕರನ್ನು ಪ್ರೇರೇಪಿಸುತ್ತದೆ. ಸಮಾಜವು ಸ್ವಾವಲಂಬನೆ ಸಾಧಿಸಿದಾಗ ಸ್ಥಳೀಯವಾಗಿ ದೊರಕುವ ಸಂಪನ್ಮೂಲದಲ್ಲೇ ತೃಪ್ತಿ ಸಂತೋಷವನ್ನು ಕಂಡುಕೊಳ್ಳುತ್ತದೆ.
ನಾಲ್ಕನೆಯದಾಗಿ, ರಾಮರಾಜ್ಯವು ಸದಾಚಾರವುಳ್ಳವರಿಂದಲೇ ನಡೆಸಲ್ಪಡುತ್ತದೆ. ಬುದ್ಧಿವಂತ ಸದಾಚಾರವುಳ್ಳ (ಯೂನಿವರ್ಸಿಟಿ ಡಿಗ್ರಿ ಸರ್ಟಿಫಿಕೇಟ್ ಸಂಪಾದಿಸಿ ಅಥವಾ ಲಾಬಿ ಬಳಸಿ ತಜ್ಞರೆನಿಸಿದವರಲ್ಲ) ವ್ಯಕ್ತಿಗಳಿಂದಲೇ ಸಲಹೆ ಪಡೆಯಲಾಗುತ್ತದೆ. ಆಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಹಾಗೂ ಪ್ರಯೋಗದಿಂದ ಪರಿಣತಿಯನ್ನೂ ಜ್ಞಾನವನ್ನೂ ಸಂಪಾದಿಸಿದವರು ಮಾತ್ರ್ರ ಬುದ್ಧಿವಂತರು, ಸದಾಚಾರಿಗಳೆನಿಸಿಕೊಳ್ಳುತ್ತಾರೆ.
ಐದನೆಯದಾಗಿ, ರಾಮರಾಜ್ಯ ಮಾದರಿಯು ವಿಕೇಂದ್ರೀಕರಣ ಹಾಗೂ ಮಾನವಪ್ರಗತಿಯ ಜೊತೆಜೊತೆಗೆ ನಿಸರ್ಗ ಪರಿಸರ ಸಂರಕ್ಷಣೆಯಲ್ಲಿ ನೆರವಾಗುವ ಸಮತೋಲಿತ ಪ್ರಗತಿಯಲ್ಲಿ ನಂಬಿಕೆಯಿಟ್ಟಿದೆ.
ತದ್ವಿರುದ್ಧವಾಗಿ ಯಾವೊಂದು ರಾಷ್ಟ್ರದಲ್ಲಿ ರಾಷ್ಟ್ರೀಯ ಬದ್ಧತೆ ಇಲ್ಲದ ನಾಯಕನೊಬ್ಬ ಲಾಬಿ ಮಾಡುವ ಜನರಿಂದಲೇ ಸುತ್ತುವರಿಯಲ್ಪಟ್ಟು, ಭ್ರಷ್ಟಾಚಾರದಲ್ಲಿ ತೊಡಗಿ ವಿಫಲನಾಗುತ್ತಾನೋ, ಅಂತಹ ರಾಷ್ಟ್ರವು ಸೌಖ್ಯವನ್ನು ಸಾಧಿಸುವುದು ಅಸಾಧ್ಯ.
ರಾಮನಂತಹ ದೊರೆಯ ಆಡಳಿತದಲ್ಲಿ ಭಾಗೀದಾರರಾದವರೂ, ಅಂತಹ ರಾಷ್ಟ್ರವನ್ನು ಪ್ರತಿನಿಧಿಸುವ ನಾಗರಿಕರೂ ಸಹಬಾಳ್ವೆಯ, ಸ್ವದೇಶೀಯ ಹಾಗೂ ಸ್ವಾವಲಂಬಿ ನೀತಿಯನ್ನೇ ಅನುಸರಿಸಬೇಕು. ಇಂತಹ ನಿಯಮ ನಿಬಂಧನೆಗಳು ಆಡಳಿತದ ನಿಯಮಕ್ಕೆ ಸೇರಿಕೊಂಡಾಗ ಸಮಾಜವು ತನ್ನಿಂತಾನೇ ಸೌಖ್ಯದ ಗುರಿಯನ್ನು ತಲಪುವುದು ನಿಶ್ಚಿತ.
ಲೇಖಕರು ಸ್ವದೇಶೀ ಆಂದೋಲನದ ಕಾರ್ಯಕರ್ತರು