
ಒಂದು ಚಿಕ್ಕ ಗ್ರಾಮ. ಅಲ್ಲಿ ಒಬ್ಬ ಪೂಜಾರಿ ಇದ್ದ. ಅವನು ಸದಾ ದೇವರ ಧ್ಯಾನದಲ್ಲೇ ಜೀವನವನ್ನು ಕಳೆಯುತ್ತಿದ್ದ. ಆ ಪೂಜಾರಿಯ ಮಗಳು ಪಕ್ಕದ ಊರಿನಲ್ಲಿರುವ ಅವಳ ಗಂಡ ಮನೆಯಲ್ಲಿ ವಾಸಿಸುತ್ತಿದ್ದಳು. ಒಮ್ಮೆ ಪೂಜಾರಿಯನ್ನು ತನ್ನ ಗಂಡನ ಮನೆಗೆ ಬರುವಂತೆ ಮಗಳು ಕರೆದಳು. ‘ಆಯ್ತು’ ಎಂದು ಒಪ್ಪಿದ ಪೂಜಾರಿ ಪಕ್ಕದ ಊರಿನಲ್ಲಿರುವ ಮಗಳ ಮನೆಗೆ ಹೊರಟ. ಆಗ ದಾರಿಯಲ್ಲಿ ಸಿಕ್ಕ ಒಬ್ಬ ಇಸ್ತ್ರಿ ಮಾಡುವವ “ಅಯ್ಯೋ ಪೂಜಾರಿಯವರೇ ಈಗ ಸಮಯ ೮ ಗಂಟೆಯಾಗಿದೆ. ಮುಂದೆ ಒಂದು ದೊಡ್ಡದಾದ ಕಾಡು […]