ಕಂಪ್ಯೂಟರ್ನ ಸ್ಕ್ರೀನ್ನಲ್ಲಿ ಗೋಚರಿಸುತ್ತಿದ್ದ ಸಣ್ಣ ತಟ್ಟೆಯಾಕಾರದ ಬೆಳಕಿನ ವಸ್ತುವನ್ನು ಭೂಮಿಯತ್ತ ತಿರುಗಿಸಿದ. ಅದು ಎಷ್ಟೋ ಕಿಲೋಮೀಟರ್ ವೇಗದಲ್ಲಿ ಹಾರಿ ಭೂಮಿಗೆ ಅಪ್ಪಳಿಸಿತು. ಆ ರಭಸಕ್ಕೆ ಭೂಮಿಯನ್ನು ಗುದ್ದಿ ‘ಫಾಲ್ಟ್ ಜೋನ್’ನಲ್ಲಿ ನಡೆದ ಘರ್ಷಣೆಯಂತೆ ಭೂಮಿಯ ಪದರಗಳು ಜಾರಿ ಭೂಕಂಪದಂತೆ ಭೂಮಿಯು ನಾಲ್ಕೈದು ಕಿಲೋಮೀಟರ್ಗಳಷ್ಟು ವ್ಯಾಪ್ತಿಯಲ್ಲಿ ಕಂಪಿಸಿತು. ತತ್ಕ್ಷಣವೇ ವಿದ್ಯುತ್ ಪ್ರವಾಹ ನಿಂತಿತು. ಸುತ್ತಲೂ ಗಾಢಾಂಧಕಾರ ವ್ಯಾಪಿಸಿತು. ಚಾಲನೆಗೆ ಬರಬೇಕಿದ್ದ ಜನರೇಟರ್ ಸ್ತಬ್ಧವಾಯಿತು. ನೆಲಕ್ಕೆ ಇಳಿದಿದ್ದ ತಟ್ಟೆಯ ಮುಚ್ಚಳ ತೆರೆದು, ಇಲಿ ಮೂತಿಯ ಐದಾರು ಮನುಷ್ಯರು ಇಳಿದು ಸರಸರನೆ […]
ನಿಗೂಢರು
Month : July-2024 Episode : Author : ಅನು ಬೆಳ್ಳೆ