ಬೆಳಕು ಹರಿದು ಸುಮಾರು ಹೊತ್ತಾಗಿತ್ತು. ನೇರವಾಗಿ ಬೆಳಕಿನ ಕಿರಣಗಳು ಕೋಣೆ ಪ್ರವೇಶಿಸದಂತೆ ಕಿಟಕಿ, ಬಾಗಿಲುಗಳನ್ನು ಭದ್ರಪಡಿಸಿಕೊಂಡು ಮಲಗಿದ್ದ ಕಿರಣ. ಅವನು ಮುಚ್ಚಿದ ಕಣ್ಣಗಳನ್ನು ತೆರೆದರೂ ಸಾಕಿತ್ತು, ಕೋಣೆಯೊಳಗೆ ಬೆಳಕಿನ ಅನುಭವವಾಗುವಂತಹ ವಾತಾವರಣ ನೆಲೆಯೂರಿತ್ತು. ಮುಂಜಾನೆಯ ಬೆಳಗೆಂದರೆ ಕಪ್ಪನೆಯ ಶಿಲೆಯ ಮೇಲೆರೆವ ಬಿಳಿಹಾಲಿನ ನೊರೆಯೆಂದು ಭಾವಿಸಿ ಅದು ಕಾಣುವ ಪ್ರತಿಕ್ಷಣವು ಪುಳಕಿತನಾಗುತ್ತಿದ್ದ ಕಿರಣ, ಇಂದು ಅದರ ಮೇಲೇ ಆಸಕ್ತಿ ಕಳೆದುಕೊಂಡಿದ್ದ. ಅವನ ಬೆಳಗಿನ ವಾಯುವಿಹಾರ, ವ್ಯಾಯಾಮಗಳೆಲ್ಲವು ತಾತ್ಕಾಲಿಕವಾಗಿ ಬಂದ್ ಆಗಿದ್ದವು. ಕೋಣೆಯನ್ನು ಬಿಟ್ಟು ಕದಲದೆ ಕುಳಿತಲ್ಲೆ ಮನಸ್ಸನ್ನು ಮುತ್ತುತ್ತಿದ್ದ […]
ವರದಿಗಾರ
Month : April-2020 Episode : Author : ಆರ್. ಪವನ್ ಕುಮಾರ್