ಶೇಷಗಿರಿರಾಯರು ಏನಿಲ್ಲವೆಂದರೂ ಮೂವತ್ತು ಸಾವಿರ ಪುಟಗಳಿಗೂ ಮೀರಿದ ಬರವಣಿಗೆಯನ್ನು ಮಾಡಿದ್ದಾರೆ. ಅವರ ಬರವಣಿಗೆ ಆರಂಭಿಸಿದ್ದು ಆಧುನಿಕ ಕನ್ನಡ ರೂಪಗೊಂಡ ದಿನಗಳಲ್ಲಿ. ಆಗ ಇನ್ನೂ ವಿಮರ್ಶೆಯ ಸ್ವರೂಪ ನಿಖರವಾಗಿರಲಿಲ್ಲ. ಸಾಹಿತ್ಯದ ಪರಿಚಯ ಆಗಿನ ತುರ್ತು ಅಗತ್ಯವಾಗಿತ್ತು. ಅದನ್ನು ಶೇಷಗಿರಿರಾಯರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹೀಗಿದ್ದರೂ ನವೋದಯದ ದಿಗ್ಗಜರ ಕುರಿತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಗಟ್ಟಿತನವೂ ಅವರಿಗೆ ಇತ್ತು ಎನ್ನುವುದನ್ನು ಗಮನಿಸಬೇಕು. ನವ್ಯ ಚಳವಳಿ ಏಕೆ ಕನ್ನಡದಲ್ಲಿ ವಿಫಲವಾಯಿತು ಎಂದು ಚರ್ಚಿಸಲು ಪ್ರಯತ್ನಿಸಿದವರಲ್ಲಿ ಶೇಷಗಿರಿರಾಯರೇ ಮೊದಲಿಗರು. ದಲಿತ, ಬಂಡಾಯ, ಮುಸ್ಲಿಂ ಸಾಹಿತ್ಯ, ಮಹಿಳಾ […]
ಕನ್ನಡದ ಹಿರಿಮೆಯನ್ನು ಹಿಗ್ಗಿಸಿದ ಲೇಖಕ: ಪ್ರೊ. ಎಲ್.ಎಸ್. ಶೇಷಗಿರಿರಾವ್
Month : December-2024 Episode : Author : ಎನ್.ಎಸ್. ಶ್ರೀಧರಮೂರ್ತಿ