
ಮದುವೆಯೆಂಬುದು ಪ್ರತಿಷ್ಠೆಗೆ ಮತ್ತು ಪ್ರದರ್ಶನಕ್ಕೆ ಸೀಮಿತವಾದ ದಕ್ಷಿಣ ಆಫ್ರಿಕದ ಮೇಲ್ವರ್ಗದ ಕುಟುಂಬಗಳಲ್ಲಿ ಸಿತಾರ್ನಂಥ ಮಧುರ ವಾದ್ಯದ ವಾದನವನ್ನು ಸಭಾಗೃಹದ ಸೌಂದರ್ಯಕ್ಕೆ ಬಳಸಿಕೊಳ್ಳಲಾಗುತ್ತದೆಯೇ ಹೊರತು ಸಂಗೀತವನ್ನು ಆಸ್ವಾದಿಸಲು ಖಂಡಿತ ಅಲ್ಲ. ಅಂಥ ಸಮಾರಂಭಗಳ ಇಂಥ ಆಹ್ವಾನಗಳನ್ನು ನಿರಾಕರಿಸುತ್ತ ನಮ್ಮ ಸಂಗೀತದ ಮಹತ್ತು ಮತ್ತು ಸ್ವಂತಿಕೆಯನ್ನು ಉಳಿಸಿಕೊಳ್ಳುತ್ತ ವಿದೇಶೀ ನೆಲದಲ್ಲಿ ಬದುಕುವುದು, ಹಾಗೆಯೇ ಭಾರತೀಯ ಸಂಗೀತದ ಮೌಲ್ಯವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಸರಿಯಾದ ಹೆಜ್ಜೆಗಳನ್ನಿಡುತ್ತ ಸಾಗುವುದು ಒಂದು ವಿಶಿಷ್ಟವಾದ ಅನುಭವ ಮತ್ತು ಮಾರ್ಗವೂ ಹೌದು. ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿ ದಕ್ಷಿಣ ಆಫ್ರಿಕದ […]