ಇಂದು ಕಾರಜ್ಜನ ಮುಂದೆ ಹೊಲಿಯಲಿಕ್ಕೆ ನಾಕಾರು ಹೊಸ ಮೆಟ್ಟುಗಳಿಗೆ ಬೇಕಾದ ಸಾಮಗ್ರಿಗಳು ಇದ್ದರೂ, ಒಂದಿಬ್ಬರು ತಮ್ಮ ಕಿತ್ತೋದ ಚಪ್ಪಲಿಗಳನ್ನು ರಿಪೇರಿಗೆಂದು ಅದಾಗಲೆ ತಂದುಬಿಟ್ಟಿದ್ದರೂ ಕಾರಜ್ಜನ ಕೈ ಎಂದಿನಂತೆ ಅಷ್ಟು ವೇಗವಾಗಿ ಓಡುತ್ತಿರಲಿಲ್ಲ. ಅವನ ತಲೆಯಲ್ಲಿ ಆತಂಕದ ಬೇನೆಯೊಂದು ಹೊಕ್ಕಿದ್ದು ತನ್ನ ಜಂಘಾಬಲವನ್ನೆ ನಡುಗಿಸಿಹಾಕಿತ್ತು. ಹೆಬ್ಬಂಡೆಯಂತೆ ಕಾರಜ್ಜ ನಿಶ್ಚಲವಾಗಿ ಕೂತಿದ್ದ. ಕಾರಜ್ಜ ತನಗೆ ಗೊತ್ತಿದ್ದಂತೆ ತನ್ನ ಅಪ್ಪ ಬಸಜ್ಜನ ಕಾಲದಿಂದಲೂ ಇದೇ ಜಾಗದಲ್ಲಿ ನೆಲೆ ಊರಿದ್ದು, ಬಾಲ್ಯದಿಂದಲೂ ಇದೇ ಕಾಯಕ ಮಾಡಿಕೊಂಡು ಬಂದಿದ್ದ. ಸ್ಕೂಲ್ ಮೆಟ್ಟಿಲು ಹತ್ತದ ಕಾರಜ್ಜ […]
ಆಲದಮರ
Month : May-2020 Episode : Author : ಗುರುಪ್ರಸಾದ್ ಕಂಟಲಗೆರೆ