
ಅಬ್ಬಾ ತಾಯಿ ಹೃದಯವೇ! ನಾಕಾರು ನಿಮಿಷಗಳ ಕೆಳಗೆ ಅಲ್ಲೋಲಕಲ್ಲೋಲ ಅನ್ನುವಂತೆ ಮಾತಾಡಿ , ಈಗ ಎಷ್ಟು ಸಡನ್ನಾಗಿ ಮೆತ್ತಗಾದರಲ್ಲ ಅಂತ ನನಗೇ ಅಚ್ಚರಿಯಾಯಿತು. ಫೋನು ಮಾಡಿದಾಗ, ಎದೆಯ ಬೇಗುದಿ ಹೇಳಿಕೊಳ್ಳಬೇಕು ಅನಿಸಿದಾಗ ಮುಲಾಜಿಲ್ಲದೇ, “ಈಗ ಸ್ವಲ್ಪ ಬಿಜಿ ಇದೀನಿ, ನಾನೇ ಬಿಡುವಾದಾಗ ಮಾತಾಡ್ತೀನಿ, ಏನೂ ಅನ್ಕೋಬೇಡಿ” ಅನ್ನುತ್ತ, ತುಂಬಿಕೊಂಡಿರುತ್ತಿದ್ದ ನನ್ನ ಕಣ್ಣೀರು ಕಪಾಳಕ್ಕೆ ಇಳಿಯುವ ಹಾಗೆ ಮಾತಾಡಿಬಿಡುತ್ತಿದ್ದವರ ವರಸೆ ನೆನಪಾಗಿ, ನಾನೂ ಸೊಕ್ಕು ತುಂಬಿಕೊಂಡು, “ಅದೂ. ಇವತ್ತ ತುಂಬ ಕೆಲ್ಸ ಇದೆ, ಆಮೇಲೆ ಮಾತಾಡ್ತೀನ್ರೀ” ಅಂದು ಔಪಚಾರಿಕ […]